ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಐಸ್ ಕ್ರೀಂ ತಿಂದ 50ಕ್ಕೂ ಹೆಚ್ಚು ಮಂದಿ ಅಸ್ತಸ್ಥಗೊಂಡಿದ್ದಾರೆ. ಚನ್ನಪಟ್ಟಣದ ಸಾತನೂರು ಸರ್ಕಲ್ ಬಳಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಘಟನೆ ನಡೆದಿದ.

ಮುಸ್ಲಿಂ ಸಮುದಾಯದ ಮದುವೆ ಸಮಾರಂಭದಲ್ಲಿ ಬಿರಿಯಾನಿ ಸೇವಿಸಿದ ಬಳಿಕ ಐಸ್‌ಕ್ರೀಂ ತಿಂದವರ ಆರೋಗ್ಯದಲ್ಲಿ ಏರುಪೇರಾಗಿ ವಾಂತಿ-ಭೇದಿ ಆಗಿದೆ. ಕೇವಲ ಅರ್ಧ ಗಂಟೆಯಲ್ಲಿ ಆರೋಗ್ಯ ಕೆಟ್ಟಿದೆ.
ಚನ್ನಪಟ್ಟಣದ ಯಾರಬ್ ನಗರ ಹಾಗೂ ಕೋಟೆ ನಿವಾಸಿಗಳು ಐಸ್ ಕ್ರೀಂ ಸೇವನೆ ಮಾಡಿ ಅಸ್ವಸ್ಥಗೊಂಡಿದ್ದು, ಮಂಡ್ಯ ಮತ್ತು ರಾಮನಗರ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಅವಧಿ ಮುಗಿದಿದ್ದ ಐಸ್ ಕ್ರೀಂ ಸರಬರಾಜು ಆಗಿದ್ದೇ ಅವಾಂತರಕ್ಕೆ ಕಾರಣ ಎನ್ನಲಾಗ್ತಿದೆ.

ಬೇಸಿಗೆಯ ತಾಪ ಹೆಚ್ಚಾಗಿದ್ದು, ಜನರು ಬಿರು ಬೇಸಿಗೆಯಲ್ಲಿ ಐಸ್ ಕ್ರೀಂ, ಕೂಲ್ ಡ್ರಿಂಕ್ಸ್ ಸೇರಿದಂತೆ ಯಾವುದೇ ತಂಪು ಪಾನಿಯಗಳನ್ನು ಸೇವಿಸಬಾರದು ರಾಮನಗರ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಡಾ.ರಾಜು ಮನವಿ ಮಾಡಿದ್ದಾರೆ.