• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿದೇಶ

ಬೀದಿ ಬದಿಯಲ್ಲಿ ಆಹಾರ ಮಾರುವ ಸ್ಥಿತಿಗೆ ತಲುಪಿದ ನಿರೂಪಕ : ಅಫ್ಘನ್‌ ದುಸ್ಥಿತಿ ಹೇಳುವ ಚಿತ್ರ ಇದು!

Any Mind by Any Mind
June 17, 2022
in ವಿದೇಶ
0
ಬೀದಿ ಬದಿಯಲ್ಲಿ ಆಹಾರ ಮಾರುವ ಸ್ಥಿತಿಗೆ ತಲುಪಿದ ನಿರೂಪಕ : ಅಫ್ಘನ್‌ ದುಸ್ಥಿತಿ ಹೇಳುವ ಚಿತ್ರ ಇದು!
Share on WhatsAppShare on FacebookShare on Telegram

ಅಫ್ಘಾನಿಸ್ತಾನವನ್ನು ತಾಲಿಬಾನ್‌ ವಶ ಪಡಿಸಿಕೊಂಡಾಗಿನಿಂದ ಅಲ್ಲಿನ ಪರಿಸ್ಥಿತಿ ಹೇಳತೀರದಾಗಿದೆ. ಸರ್ಕಾರ ನಡೆಸುವ ಯಾವ ಅನುಭವವೂ ಇಲ್ಲದ ತಾಲಿಬಾನ್‌ ಸರ್ಕಾರವು ಅಫ್ಘಾನಿಸ್ತಾನದ ಆರ್ಥಿಕತೆಯನ್ನು ಸಂಪೂರ್ಣ ಹಳ್ಳಹಿಡಿಸಿದೆ. ಹಿಂದಿನ ಸರ್ಕಾರದಲ್ಲಿದ್ದ ಅಧಿಕಾರಿಗಳು ತಾಲಿಬಾನ್‌ ಆಡಳಿತಕ್ಕೆ ಬೆದರಿ ಸೇವೆಯಲ್ಲಿ ಮುಂದುವರಿಯಲು ಹಿಂಜರಿದಿದ್ದು ಸರ್ಕಾರವನ್ನು ಸರಾಗವಾಗಿ ಮುನ್ನೆಡಸಲು ಅನುಭವದ ಕೊರತೆಯನ್ನು ತಾಲಿಬಾನ್‌ ಎದುರಿಸುವಂತಾಗಿದೆ.

ADVERTISEMENT

ಅಫ್ಘನ್‌ ಜನರು ಉದ್ಯೋಗಗಳಿಲ್ಲದೆ ಪರದಾಡುತ್ತಿದ್ದಾರೆ ಎಂದು ವರದಿಯಾಗುತ್ತಿದೆ. ಈ ನಡುವೆ, ಅಫ್ಗಾನಿಸ್ತಾನದ ಮಾಜಿ ಟಿವಿ ನಿರೂಪಕ ಮೂಸಾ ಮೊಹಮ್ಮದಿ ರಸ್ತೆ ಬದಿಯಲ್ಲಿ ಆಹಾರ ಪದಾರ್ಥ ಮಾರಾಟ ಮಾಡುತ್ತಿರುವ ಚಿತ್ರಗಳನ್ನು ಅಫ್ಘಾನಿಸ್ತಾನದ ಹಿಂದಿನ ಹಮೀದ್ ಕರ್ಜಾಯ್ ಸರ್ಕಾರದೊಂದಿಗೆ ಕೆಲಸ ಮಾಡಿದ್ದ ಮಾಜಿ ಅಧಿಕಾರಿ, ಪತ್ರಕರ್ತ ಕಬೀರ್ ಹಕ್ಮಲ್ ಅವರು ಟ್ವಿಟರ್‌ನಲ್ಲಿ ಬುಧವಾರ ಹಂಚಿಕೊಂಡಿದ್ದಾರೆ. ಈ ಟ್ವಿಟರ್ ಪೋಸ್ಟ್, ಅಫ್ಘಾನಿಸ್ತಾನದಲ್ಲಿ ವೃತ್ತಿಪರರು, ಜನಸಾಮಾನ್ಯರು ಎಂತಹಾ ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ ಎಂಬುದನ್ನು ತೋರಿಸುತ್ತದೆ.

ಹಕ್ಮಲ್ ಅವರು ಅಫ್ಘಾನ್ ಪತ್ರಕರ್ತ ಮೂಸಾ ಮೊಹಮ್ಮದಿ ಅವರ ಫೋಟೋವನ್ನು ಹಂಚಿಕೊಂಡಿದ್ದು, ʼಮೊಹಮ್ಮದಿ ವರ್ಷಗಳ ಕಾಲ ಮಾಧ್ಯಮ ಕ್ಷೇತ್ರದ ಭಾಗವಾಗಿದ್ದರು, ಆದಾಗ್ಯೂ, ಅಫ್ಘಾನಿಸ್ತಾನದಲ್ಲಿ ಇಂತಹ ಭೀಕರ ಆರ್ಥಿಕ ಪರಿಸ್ಥಿತಿಯ ನಡುವೆ, ಅವರು ಈಗ ತಮ್ಮ ಜೀವನವನ್ನು ಪೂರೈಸಲು ಆಹಾರವನ್ನು ಮಾರಾಟ ಮಾಡುತ್ತಿದ್ದಾರೆʼ ಎಂದು ಅವರು ಬರೆದಿದ್ದಾರೆ.

“ಮೂಸಾ ಮೊಹಮ್ಮದಿ ಅವರು ವಿವಿಧ ಟಿವಿ ಚಾನೆಲ್‌ಗಳಲ್ಲಿ ಆಂಕರ್ ಮತ್ತು ವರದಿಗಾರರಾಗಿ ವರ್ಷಗಳ ಕಾಲ ಕೆಲಸ ಮಾಡಿದ್ದರು. ಅದಾಗ್ಯೂ, ಈಗ ಅವರ ಕುಟುಂಬವನ್ನು ಪೋಷಿಸಲು ಅವರಿಗೆ ಯಾವುದೇ ಆದಾಯವಿಲ್ಲ. ಹಾಗಾಗಿ, ಹಣವನ್ನು ಗಳಿಸಲು ಬೀದಿ ಬದಿಯಲ್ಲಿ ಆಹಾರವನ್ನು ಮಾರಾಟ ಮಾಡುತ್ತಾರೆ. ಗಣರಾಜ್ಯದ ಪತನದ ನಂತರ ಆಫ್ಘನ್ನರು ಭೀಕರ ಬಡತನವನ್ನು ಅನುಭವಿಸುತ್ತಾರೆ, ” ಎಂದು ಅವರು ಹೇಳಿದ್ದಾರೆ.

ಈ ಟ್ವೀಟ್‌ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು, ಇದು ರಾಷ್ಟ್ರೀಯ ರೇಡಿಯೋ ಮತ್ತು ದೂರದರ್ಶನದ ಮಹಾನಿರ್ದೇಶಕ ಅಹ್ಮದುಲ್ಲಾ ವಾಸಿಕ್ ಅವರ ಗಮನಕ್ಕೆ ಬಂದಿದೆ. ಮೊಹಮ್ಮದಿ ಅವರನ್ನು ತಮ್ಮ ಇಲಾಖೆಗೆ ನೇಮಿಸುವುದಾಗಿ ವಾಸಿಕ್ ತಿಳಿಸಿದ್ದಾರೆ.

Journalists life in #Afghanistan under the #Taliban. Musa Mohammadi worked for years as anchor & reporter in different TV channels, now has no income to fed his family. & sells street food to earn some money. #Afghans suffer unprecedented poverty after the fall of republic. pic.twitter.com/nCTTIbfZN3

— Kabir Haqmal🇦🇫 (@Haqmal) June 15, 2022
Tags: BJPCongress PartyCovid 19ಅಫ್ಘನ್‌ಕೋವಿಡ್-19ನರೇಂದ್ರ ಮೋದಿಬಿಜೆಪಿಬೀದಿ ಬದಿ
Previous Post

ಸೋನಿಯಾ ಗಾಂಧಿಗೆ ಶಿಲೀಂಧ್ರ ಸೋಂಕು : ಮುಂದುವರೆದ ಚಿಕಿತ್ಸೆ!

Next Post

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 12,847 ಹೊಸ ಕೋವಿಡ್ ಪ್ರಕರಣಗಳು ದಾಖಲು, 14 ಸಾವು!

Related Posts

ಹೊರ್ಮುಜ್‌ನಲ್ಲಿ ಹಡಗುಗಳ ಸಂಚಾರ ನಿರ್ಬಂಧ : ಟೆಹ್ರಾನ್‌ ಮೇಲೆ ಇಸ್ರೇಲ್‌ – ಅಮೆರಿಕದ ದಾಳಿಯಲ್ಲಿ ನಷ್ಟವಾಗಿದ್ದೆಷ್ಟು..?
Top Story

ಹೊರ್ಮುಜ್‌ನಲ್ಲಿ ಹಡಗುಗಳ ಸಂಚಾರ ನಿರ್ಬಂಧ : ಟೆಹ್ರಾನ್‌ ಮೇಲೆ ಇಸ್ರೇಲ್‌ – ಅಮೆರಿಕದ ದಾಳಿಯಲ್ಲಿ ನಷ್ಟವಾಗಿದ್ದೆಷ್ಟು..?

by ಪ್ರತಿಧ್ವನಿ
April 13, 2026
0

ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್-ಇಸ್ರೇಲ್‌ ಹಾಗೂ ಅಮೆರಿಕ ನಡುವಿನ ಯುದ್ಧವೂ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಲೇ ಇದೆ. ಈಗಾಗಲೇ ವಾಯು ಹಾಗೂ ಕ್ಷಿಪಣಿಗಳ ದಾಳಿಯನ್ನು ನಿಲ್ಲಿಸಿ, ಜಗತ್ತಿನಲ್ಲಿ...

Read moreDetails
ಭಾರತ ಸಮುದ್ರ ಮಾರ್ಗಗಳಿಗೆ ತೆರಿಗೆ ವಿಧಿಸಲು ಸಾಧ್ಯವೇ? UNCLOS ನಿಯಮಗಳು ಏನು ಹೇಳುತ್ತವೆ?

ಭಾರತ ಸಮುದ್ರ ಮಾರ್ಗಗಳಿಗೆ ತೆರಿಗೆ ವಿಧಿಸಲು ಸಾಧ್ಯವೇ? UNCLOS ನಿಯಮಗಳು ಏನು ಹೇಳುತ್ತವೆ?

April 12, 2026
ಆಕ್ರಮಣಕಾರಿ ಆಳ್ವಿಕೆಯತ್ತ ಟ್ರಂಪ್ 2.0

ಭಾರತ-ಪಾಕಿಸ್ತಾನ ಯುದ್ಧ ತಡೆದದ್ದು ನನ್ನಿಂದಲೇ: ಟ್ರಂಪ್ ಪುನಃ ಹೇಳಿದ್ದೇನು ?

April 7, 2026
ಅಕ್ರಮ ವಲಸಿಗರಿಗೆ ಉಚಿತ ವಿಮಾನ ಟಿಕೆಟ್ ನೀಡಿ ಗಡಿಪಾರು ಮಾಡಲು ಆರಂಬಿಸಿದ ಟ್ರಂಪ್..

ಇರಾನ್‌ಗೆ ಟ್ರಂಪ್ ಕಠಿಣ ಎಚ್ಚರಿಕೆ: “ಒಪ್ಪಂದವಿಲ್ಲದಿದ್ದರೆ ಈಡೀ ದೇಶವೇ ನಾಶ”

April 6, 2026
ಇರಾನ್–ಇಸ್ರೇಲ್ ಉದ್ವಿಗ್ನತೆ: ಹಾರ್ಮುಜ್ ಜಲಸಂಧಿಯಲ್ಲಿ ಭಾರತಕ್ಕೆ ನಷ್ಟ, ಶಾಂತಿಗೆ ಒತ್ತಾಯ

ಇರಾನ್–ಇಸ್ರೇಲ್ ಉದ್ವಿಗ್ನತೆ: ಹಾರ್ಮುಜ್ ಜಲಸಂಧಿಯಲ್ಲಿ ಭಾರತಕ್ಕೆ ನಷ್ಟ, ಶಾಂತಿಗೆ ಒತ್ತಾಯ

April 4, 2026
Next Post
ಕೊರೋನಾ ನಾಲ್ಕನೇ ಅಲೆ‌ ಭೀತಿ : TAC ಜೊತೆ ಸಭೆ ನಡೆಸಿದ ಆರೋಗ್ಯ ಇಲಾಖೆ.!

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 12,847 ಹೊಸ ಕೋವಿಡ್ ಪ್ರಕರಣಗಳು ದಾಖಲು, 14 ಸಾವು!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada