ಕರೋನಾ ವೈರಸ್ ಕಳೆದ ವರ್ಷದಿಂದಲೂ ಜನರ ಜೀವ ಹಿಂಡುತ್ತಿದ್ದು, ಸಮಾಜದ ಪ್ರತೀ ಹಂತದಲ್ಲಿಯೂ ಕುಸಿತ ಕಾಣಲು ಕಾರಣವಾಗಿದೆ. ಆರ್ಥಿಕ ವ್ಯವಸ್ಥೆಯೇ ಹಾಳಾಗಿ ಹೋಗಿದ್ದು, ಜೀವನ ನಡೆಸಲು ಕಷ್ಟವಾಗಿದೆ. ಈ ವಿಷಯದಲ್ಲಿ ಚಿತ್ರರಂಗವೂ ಒಂದು ಎಂದು ನಟ ಶಿವರಾಜ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಇದೀಗ ಸ್ಯಾಂಡಲ್ ವುಡ್ ಹೆಸರಾಂತ ನಟರು ಚಿತ್ರರಂಗ ಪೂರ್ತಿ ಭರ್ತಿಗೆ ಅವಕಾಶ ನೀಡಬೇಕು ಅಂತ ಪಟ್ಟುಹಿಡಿದಿದ್ದಾರೆ. ಚಿತ್ರರಂಗವನ್ನೇ ನಂಬಿ ಜೀವನ ನಡೆಸುತ್ತಿರುವ ಅನೇಕ ಮಂದಿ ನಿರ್ಮಾಪಕರಿದ್ದಾರೆ. ಅದೆಷ್ಟೋ ಬಂಡವಾಳ ಹೂಡಿ ಒಂದು ಸಿನಿಮಾ ನಿರ್ಮಾಣ ಮಾಡುತ್ತಾರೆ. ಆದರೆ, ಸರಕಾರ ಪದೇ ಪದೇ ಚಿತ್ರರಂಗವನ್ನು ತುಳಿಯುತ್ತಿದೆ ಎಂದಿದ್ದಾರೆ.

ಮುಂದುವರೆದು, ಎಲ್ಲರಿಗೂ ಅವಕಾಶ ಕೊಟ್ಟು, ನಮಗಷ್ಟೇ ಯಾಕೆ ಈ ಅನ್ಯಾಯ, ನಮಗೆ ಯಾಕೆ ಫುಲ್ ಫ್ರೀಡಂ ಇಲ್ಲ. ಸಿನಿಮಾ ಹೌಸ್ ಫುಲ್ ಗೆ ಅವಕಾಶ ನೀಡದೇ ಇದ್ದದ್ದು ಬೇಸರ ತಂದಿದೆ ಎಂದು ಶಿವಣ್ಣ ಫುಲ್ ಗರಂ ಆಗಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಗೆ ಮನವಿ ಸಲ್ಲಿಸಲಿದ್ದೇವೆ. ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.






