• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನಟ ಪ್ರಕಾಶ್ ರಾಜ್ ನಾಸ್ತಿಕನಾದರೂ ತಾಯಿ ಅಂತ್ಯಸಂಸ್ಕಾರ  ಕ್ರೈಸ್ತರಂತೆ ಮಾಡಲು ಕಾರಣವೇನು ? ಇಲ್ಲಿದೆ ಉತ್ತರ 

ಪ್ರತಿಧ್ವನಿ by ಪ್ರತಿಧ್ವನಿ
April 2, 2026
in Top Story
0
ನಟ ಪ್ರಕಾಶ್ ರಾಜ್ ನಾಸ್ತಿಕನಾದರೂ ತಾಯಿ ಅಂತ್ಯಸಂಸ್ಕಾರ  ಕ್ರೈಸ್ತರಂತೆ ಮಾಡಲು ಕಾರಣವೇನು ? ಇಲ್ಲಿದೆ ಉತ್ತರ 
Share on WhatsAppShare on FacebookShare on Telegram

ಬೆಂಗಳೂರು:

ADVERTISEMENT

ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ (85) ವಯೋಸಹಜ ಕಾಯಿಲೆಯಿಂದ ಹೈದರಾಬಾದ್‌ನ ನಿವಾಸದಲ್ಲಿ ನಿಧನರಾದರು. ಮರುದಿನ ಅವರ ಪಾರ್ಥೀವ ಶರೀರವನ್ನು ಬೆಂಗಳೂರಿಗೆ ತರಲಾಗಿದ್ದು, ಶಾಂತಿನಗರದ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಬಳಿಕ ಆಡುಗೋಡಿ ಸಮೀಪದ ರುದ್ರಭೂಮಿಯಲ್ಲಿ ಕ್ರೈಸ್ತ ಪದ್ಧತಿಯಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

DavanagereSouth ByElection : ತಹಸಿಲ್ದಾರ್‌ಗೆ ಲಂಚ ಕೊಟ್ಟು ಕೊಟ್ಟು ರೈತರು ಸಾಕಾಗಿದಾರೆ.! #siddaramaiah

ತಾಯಿ ನಿಧನಕ್ಕೆ ಸಂಬಂಧಿಸಿದಂತೆ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್, “ನಿಮ್ಮ ದಯೆ ಮತ್ತು ಚಿಂತನಶೀಲ ಮಾತುಗಳಿಗೆ ಎಲ್ಲರಿಗೂ ಧನ್ಯವಾದಗಳು. ಈ ದುಃಖದ ಕ್ಷಣಗಳಲ್ಲಿ ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ತುಂಬಾ ಅರ್ಥಪೂರ್ಣವಾಗಿದೆ. ಎಲ್ಲದಕ್ಕೂ ಧನ್ಯವಾದಗಳು ಅಮ್ಮ.. ನಿನ್ನನ್ನು ಪ್ರೀತಿಸುತ್ತೇನೆ.. ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ” ಎಂದು ಟ್ವೀಟ್ ಮಾಡಿದರು.

DavanagereSouth ByElection | ದಾವಣಗೆರೆಯಲ್ಲಿ ಮುಸ್ಲಿಂ ಸಮುದಾಯ ಸಮರ್ಥ್‌ಗೆ ವೋಟ್‌ ಹಾಕ್ತೀವಿ..!

ಇದಕ್ಕೂ ಮುನ್ನ ಸಂದರ್ಶನವೊಂದರಲ್ಲಿ ಪ್ರಕಾಶ್ ರಾಜ್, “ನಾನು ನಾಸ್ತಿಕ. ದೇವರನ್ನು ನಂಬುವುದಿಲ್ಲ. ಅಷ್ಟು ಸಮಯ ನನ್ನ ಬಳಿ ಇಲ್ಲ. ಯಾರಾದರೂ ಕೇಳಿದರೆ ನನಗೆ ಸಮಯ ಇಲ್ಲ ಅಂತೀನಿ” ಎಂದು ಹೇಳಿಕೊಂಡಿದ್ದರು. “ನಾನು ಸನಾತನ ಧರ್ಮದಲ್ಲಿ ಹುಟ್ಟಿಲ್ಲ, ನಾನು ನನ್ನ ಅಪ್ಪ-ಅಮ್ಮನಿಗೆ ಹುಟ್ಟಿದ್ದೇನೆ” ಎಂದೂ ಅವರು ಅಭಿಪ್ರಾಯಪಟ್ಟಿದ್ದರು.ಈ ಹಿನ್ನೆಲೆಯಲ್ಲಿ, ದೇವರಲ್ಲಿ ನಂಬಿಕೆ ಇಲ್ಲದವರು ಕ್ರೈಸ್ತ ಪದ್ಧತಿಯಂತೆ ತಾಯಿಯ ಅಂತ್ಯಸಂಸ್ಕಾರ ನಡೆಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಗಳು ಎದುರಾಗಿದೆ. ಒಬ್ಬ ನೆಟ್ಟಿಗರ ಕಾಮೆಂಟ್‌ಗೆ ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್, “ಹೌದು, ನಾನು ದೇವರನ್ನು ನಂಬುವುದಿಲ್ಲ. ಆದರೆ ನನ್ನ ತಾಯಿ ತನ್ನ ದೇವರನ್ನು ನಂಬಿದ್ದಳು. ಅವಳ ನಂಬಿಕೆಯ ಪ್ರಕಾರ ಅಂತ್ಯಸಂಸ್ಕಾರ ಮಾಡುವ ಹಕ್ಕನ್ನು ನಿರಾಕರಿಸಲು ನಾನು ಯಾರು? ಇದು ನಾವು ಒಬ್ಬರಿಗೊಬ್ಬರು ನೀಡುವ ಮೂಲಭೂತ ಗೌರವ. ದ್ವೇಷಿಸುವವರು ಇದನ್ನು ಅರ್ಥಮಾಡಿಕೊಳ್ಳುತ್ತೀರಾ?” ಎಂದು ಪ್ರಶ್ನಿಸಿದ್ದಾರೆ.

Davangere By Election: ಸಾಲರಾಮಯ್ಯ, ಸಿಟ್ಟುರಾಮಯ್ಯ ಅಂತಾ ಬಾಯಿಗೆ ಬಂದಂಗೆ  ಮಾತಾಡ್ತಾರೆ ?  #pratidhvani

ಈ ಟ್ವೀಟ್‌ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಕೆಲವರು “ನಿಮ್ಮ ತಾಯಿ ನಂಬಿಕೆಯನ್ನು ಒಪ್ಪಿಕೊಂಡಂತೆ ಎಲ್ಲರ ನಂಬಿಕೆಯನ್ನು ಗೌರವಿಸಿ” ಎಂದು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು “ಪ್ರತಿಯೊಬ್ಬರಿಗೂ ತಮ್ಮ ಧರ್ಮ ಮತ್ತು ನಂಬಿಕೆ ಇದೆ. ನೀವು ಅದನ್ನು ಗೌರವಿಸಬೇಕು” ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು “ಇಬ್ಬಗೆ ನೀತಿ ಬೇಡ” ಎಂದು ಟೀಕಿಸಿದ್ದಾರೆ.ಅಂತಿಮ ವಿಧಿವಿಧಾನಗಳ ವೇಳೆ ಪ್ರಕಾಶ್ ರಾಜ್ ಕುಟುಂಬಸ್ಥರು ಹಾಗೂ ಆಪ್ತರು ಹಾಜರಿದ್ದರು. ಈ ವೇಳೆ ಅವರ ಮಗಳು ತಮ್ಮ ಅಜ್ಜಿಗೆ ನುಡಿ ನಮನ ಸಲ್ಲಿಸಿದ್ದು, ಅಜ್ಜಿ ಅಗಲಿಕೆಗೆ ಭಾವುಕರಾಗಿದ್ದ ಮಗನನ್ನು ಪ್ರಕಾಶ್ ರಾಜ್ ಸಮಾಧಾನಪಡಿಸಿದ ದೃಶ್ಯ ಗಮನಸೆಳೆಯಿತು.

Tags: ActorNewsBengaluruNewsCelebrityNewsFuneralNewsHyderabadNewsIndianActorObituaryPrakashRajpratidavaniSocialMediaDebateSwarnalatha
Previous Post

ಮುಂಬೈ ವಿಮಾನ ನಿಲ್ದಾಣದಲ್ಲಿ ‘ಬಾಂಬ್ ಬೆದರಿಕೆ’: ನಂತರ ಆದದ್ದೇನು ಗೊತ್ತೆ ! 

Next Post

ರಾಘವ್ ಚಡ್ಡಾಗೆ ಆಪ್ ಶಾಕ್: ರಾಜ್ಯಸಭಾ ಉಪನಾಯಕ ಸ್ಥಾನದಿಂದ ತೆರವು, ಮಾತನಾಡುವ ಅವಕಾಶಕ್ಕೂ ಕಡಿತ

Related Posts

₹10,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ‘ಒಂದು ಗಂಟೆ’ ವಿಳಂಬ? ವಂಚನೆ ತಡೆಗೆ RBI ಹೊಸ ಯೋಜನೆ
Top Story

ಪ್ಲೂಟೋಗೆ ಮತ್ತೆ ಗ್ರಹ ಸ್ಥಾನಮಾನ? ಬಾಲಕಿಯ ಪತ್ರದಿಂದ ವಿಜ್ಞಾನ ಲೋಕದಲ್ಲಿ ಚರ್ಚೆ

by ಪ್ರತಿಧ್ವನಿ
April 10, 2026
0

ಬಾಹ್ಯಾಕಾಶ ಪ್ರಿಯರಿಗೆ ಸಂತಸದ ಸುದ್ದಿ ಕೇಳಿಬಂದಿದ್ದು, ಒಮ್ಮೆ ಸೌರಮಂಡಲದ ಒಂಬತ್ತನೇ ಗ್ರಹವೆಂದು ಪರಿಗಣಿಸಲ್ಪಟ್ಟಿದ್ದ Pluto ಮತ್ತೆ ಗ್ರಹ ಸ್ಥಾನಮಾನ ಪಡೆಯುವ ಸಾಧ್ಯತೆ ಕುರಿತು ಹೊಸ ಚರ್ಚೆಗಳು ಆರಂಭವಾಗಿವೆ.ಈ...

Read moreDetails
ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

ಐಟಿ ದಾಳಿ ವೇಳೆ ಸಿಜೆ ರಾಯ್ ಆತ್ಮಹತ್ಯೆ: ಎಸ್‌ಐಟಿ ತನಿಖೆಯಲ್ಲಿ ಕಾರಣ ಬಹಿರಂಗ

April 10, 2026
ಐಪಿಎಲ್ ಸಂಧರ್ಭದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ರಶೀದ್ ಖಾನ್ ವಿದಾಯ ಘೋಷಣೆ

ತಾಯಿಯಿಲ್ಲದ ನೋವಿನ ನಡುವೆ ಅಪ್ರತಿಮ ಸಾಧನೆ: ರಾಜ್ಯಕ್ಕೆ ಪ್ರಥಮ ಬಂದ ದಿಶಾ!

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

April 9, 2026
Next Post
ನಟ ಪ್ರಕಾಶ್ ರಾಜ್ ನಾಸ್ತಿಕನಾದರೂ ತಾಯಿ ಅಂತ್ಯಸಂಸ್ಕಾರ  ಕ್ರೈಸ್ತರಂತೆ ಮಾಡಲು ಕಾರಣವೇನು ? ಇಲ್ಲಿದೆ ಉತ್ತರ 

ರಾಘವ್ ಚಡ್ಡಾಗೆ ಆಪ್ ಶಾಕ್: ರಾಜ್ಯಸಭಾ ಉಪನಾಯಕ ಸ್ಥಾನದಿಂದ ತೆರವು, ಮಾತನಾಡುವ ಅವಕಾಶಕ್ಕೂ ಕಡಿತ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada