ಕನ್ನಡ ಚಿತ್ರರಂಗದ ಹೆಸರಾಂತ ಪೋಷಕ ನಟ ಮೋಹನ್ ಜುನೇಜಾ (54) ನಿಧನರಾಗಿದ್ದಾರೆ
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಮ್ಯಾನರಿಸಂ ಮೂಲಕ ಖ್ಯಾತಿ ಪಡೆದಿದ್ದ ಮೋಹನ್ ಜುನೇಜಾ ಕೆಜಿಎಫ್ ಎರಡೂ ಭಾಗಗಳಲ್ಲಿ ಅಭಿನಯಿಸಿ ಜನ ಮನ ಸೆಳೆದಿದ್ದರು. ಅವರ ಗ್ಯಾಂಗ್ ಸ್ಟರ್ ಅಲ್ಲ ಮಾನ್ ಸ್ಟರ್ ಡೈಲಾಗ್ ವೈರಲ್ ಆಗಿತ್ತು. ಅಲ್ಲದೇ ಹಿಟ್ಲರ್ ಕಲ್ಯಾಣ ಸೇರಿದಂತೆ ಹಲವು ಜನಪ್ರಿಯ ಕಿರುತೆರೆ ಧಾರವಾಹಿಗಳಲ್ಲಿ ನಟಿಸಿದ್ದರು.







