• Home
  • About Us
  • ಕರ್ನಾಟಕ
Monday, October 13, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಮುಖ್ಯಮಂತ್ರಿಗಳಿಂದ ಜನರನ್ನು ಎತ್ತಿಕಟ್ಟುವ ಆರೋಪ ; ಸಿಎಂಗೆ ತೀಕ್ಷ್ಣ ತಿರುಗೇಟು ಕೊಟ್ಟ HDK

Any Mind by Any Mind
June 6, 2023
in Top Story, ಇದೀಗ, ಕರ್ನಾಟಕ
0
ಮುಖ್ಯಮಂತ್ರಿಗಳಿಂದ ಜನರನ್ನು ಎತ್ತಿಕಟ್ಟುವ ಆರೋಪ ; ಸಿಎಂಗೆ ತೀಕ್ಷ್ಣ ತಿರುಗೇಟು ಕೊಟ್ಟ HDK
Share on WhatsAppShare on FacebookShare on Telegram

14ನೇ ಬಜೆಟ್ ಮಂಡಿಸಲು ಸಿದ್ಧವಾಗಿರುವ ಆರ್ಥಿಕ ಜ್ಞಾನಿಗಳಿಗೆ ಗ್ಯಾರಂಟಿ ಜಾರಿ ಹೇಗೆಂಬುದು ಗೊತ್ತಿಲ್ಲವೆ?

ADVERTISEMENT

ಬೆಂಗಳೂರು : ಉಚಿತ, ಖಚಿತ ಎಂದು (free and gurantee) ಸುಳ್ಳು ಹೇಳಿಕೊಂಡು ಓಡಾಡಿ ಅಧಿಕಾರಕ್ಕೆ ಬಂದವರು, ಇವತ್ತು ಜನರನ್ನು ವಿದ್ಯುತ್ ದುರ್ಬಳಕೆ ಮಾಡಿಕೊಳ್ಳಲು ಪ್ರತಿಪಕ್ಷಗಳು ಪ್ರಚೋದಿಸುತ್ತಿವೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD kumaraswamy) ಅವರು ರಾಜ್ಯ ಕಾಂಗ್ರೆಸ್ ಸರಕಾರದ (congress) ವಿರುದ್ಧ ಹರಿಹಾಯ್ದರು.

ಜೆಡಿಎಸ್ ಪಕ್ಷದ (jds office) ರಾಜ್ಯ ಕಚೇರಿಯಲ್ಲಿ ಜೆಪಿ ಭವನದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ (HD devegowda) ನೇತೃತ್ವದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯುತ್ ಬಳಕೆ ಬಗ್ಗೆ ವಿರೋಧ ಪಕ್ಷಗಳು ಜನರನ್ನು ದಿಕ್ಕು ತಪ್ಪಿಸುತ್ತಿವೆ ಎಂದು ಮುಖ್ಯಮಂತ್ರಿಗಳ ಹೇಳಿಕೆ ಗಮನಿಸಿದ್ದೇನೆ. ವಿರೋಧ ಪಕ್ಷಗಳು ಗ್ಯಾರಂಟಿ (congress gurantees) ಯೋಜನೆಗಳ ಬಗ್ಗೆ ಜನರನ್ನು ಎತ್ತಿಕಟ್ಟುತ್ತಿವೆ ಅಂತ ಅವರು ಹೇಳಿದ್ದಾರೆ. ಅಂಥ ಹೇಳಿಕೆ ಮುಖ್ಯಮಂತ್ರಿಗಳಿಗೆ ಶೋಭೆಯಲ್ಲ ಎಂದು ಅವರು ಕಿಡಿಕಾರಿದರು.

ಇದಕ್ಕೆಲ್ಲ ವೇದಿಕೆ ಸಿದ್ದ ಮಾಡಿಕೊಟ್ಟಿದ್ದೇ ನೀವು. ರಾಜ್ಯದ ಜನಕ್ಕೆ ಗ್ಯಾರಂಟಿ ಬಗ್ಗೆ ಸಹಿ ಮಾಡಿ ಕೊಟ್ಟಿದ್ದೀರಿ. ಸುಳ್ಳು ಹೇಳಿ ಮತ ಪಡೆದಿರಿ. ಈಗ ನಿಮಗೆ ಅದರ ಸಾಧಕ ಭಾದಕ ಅರ್ಥ ಆಗ್ತಾ ಇದೆ. ಮೊದಲೇ ಈ ಬಗ್ಗೆ ಯೋಚನೆ ಮಾಡಿರಲಿಲ್ಲವಾ? ಪರಿಜ್ಞಾನ ಇರಲಿಲ್ಲವಾ? ಈಗ ಷರತ್ತು ಎನ್ನುತ್ತಿದ್ದಾರೆ. ಇವರಿಗೆ ಆತ್ಮಸಾಕ್ಷಿ ಎನ್ನುವುದು ಇದೆಯಾ ಎಂದು ಮಾಜಿ ಮುಖ್ಯಮಂತ್ರಿ ಅವರು ಖಾರವಾಗಿ ಅವರು ಪ್ರಶ್ನಿಸಿದರು.

ಈಗಿನ ಮುಖ್ಯಮಂತ್ರಿಗಳು ಸರ್ವವನ್ನೂ ಬಲ್ಲವರು. ಈಗಾಗಲೇ 13 ಬಜೆಟ್ ಗಳನ್ನು ಮಂಡಿಸಿದ್ದಾರೆ. ಇನ್ನೇನು 14ನೇ ಬಜೆಟ್ ಅನ್ನೂ ಮಂಡಿಸಲಿದ್ದಾರೆ. ರಾಜ್ಯದ ಹಣಕಾಸು ಬಗ್ಗೆ, ಆರ್ಥಿಕತೆ ಬಗ್ಗೆ ಅವರಿಂತ ಬಲ್ಲ ಜ್ಞಾನಿಗಳು ಯಾರಿದ್ದಾರೆ? ಮುಂದೇನು ಮಾಡಬೇಕು ಎನ್ನುವುದು ಅವರಿಗೆ ಗೊತ್ತಿರಬೇಕು. ಅದು ಬಿಟ್ಟು ಜನರನ್ನು ಪ್ರತಿಪಕ್ಷಗಳು ಎತ್ತಿಕಟ್ಟುವ ಕೆಲಸ ಮಾಡುತ್ತಿವೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಅವರು ಹೇಳಿದರು.

ಈಗ ಬಾಡಿಗೆದಾರರ ಕಥೆ ಏನು?

ಎಲ್ಲರಿಗೂ ಉಚಿತ, ನಿಶ್ಚಿತ, ಖಚಿತ ಅಂದವರು ನೀವೇ ಅಲ್ಲವೇ? ನಾನು ಪ್ರತಿಪಕ್ಷದಲ್ಲಿ ಕೂತಿರುವುದು ಸರಕಾರ ಮಾಡುವ ಪ್ರತಿ ಜನವಿರೋಧಿ ಕೆಲಸಗಳಿಗೆ ಕೈ ಎತ್ತುವುದಕ್ಕಲ್ಲ. ಸರಕಾರದ ತಪ್ಪುಗಳನ್ನು ಎತ್ತಿ ತೋರಿಸಿ ಸಮರ ಸಾರುವುದಕ್ಕೆ. ನಮ್ಮದು ನುಡಿದಂತೆ ನಡೆಯುವ ಸರಕಾರ ಎಂದರು, ನುಡಿದಂತೆ ಎಲ್ಲಿ ನಡೆಯುತ್ತಿದೆ? ಈಗ ಉಚಿತ ವಿದ್ಯುತ್ ಅನ್ನು ಬಾಡಿಗೆದಾರರಿಗೆ ಕೊಡುವುದಿಲ್ಲ ಎನ್ನುತ್ತಿದೆ. ಹಾಗಾದರೆ ಅವರ ಪಾಡೇನು? ಎಂದರು ಮಾಜಿ ಮುಖ್ಯಮಂತ್ರಿಗಳು.

ಬೆಂಗಳೂರು ನಗರಾಭಿವೃದ್ಧಿ ಸಚಿವರು ಸ್ನೇಹಕ್ಕೂ ಸಿದ್ದ, ಯುದ್ದಕ್ಕೂ ಸಿದ್ದ ಅಂದಿದ್ದಾರೆ. ನಾವು ಇಲ್ಲಿ ಕೂತಿರೋದು ಸ್ನೇಹ ಮಾಡೋಕ್ಕಲ್ಲ. ಜನರಿಗೆ ಕಷ್ಟ ಬಂದರೆ ಯುದ್ಧ ಮಾಡುವುದಕ್ಕೆ ಹಿಂಜರಿಯುವುದಿಲ್ಲ. ನಾವು ಕೈಕಟ್ಟ ಕೂರಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದರು.

ವಿದ್ಯುತ್ ದರ ಏರಿಕೆಗೆ ಸಂಬಂಧಿಸಿ ಬಿಜೆಪಿ ನಾಯಕರು ಇಡೀ ರಾಜ್ಯದಲ್ಲಿ ಸೋಮವಾರ ಧರಣಿ ಮಾಡಿದ್ದಾರೆ. ಇವರು ಯಾವ ಕಾರಣಕ್ಕಾಗಿ ಧರಣಿ ಪ್ರತಿಭಟನೆ ಮಾಡಿದ್ದಾರೆ ಎನ್ನುವುದೇ ಸೋಜಿಗ. ಬಿಜೆಪಿ ಸರಕಾರದ ಕಾಲದಲ್ಲಿಯೇ ವಿದ್ಯುತ್ ದರ ಹೆಚ್ಚಳಕ್ಕೆ ಅಷ್ಟು ಎಂದಿದ್ದು. ಇವತ್ತು ನೋಡಿದರೆ ಪ್ರತಿಭಟನೆ ಅಂತ ಕಣ್ಣೊರೆಸುವ ನಾಟಕ ನಾಟಕ ಆಡುತ್ತಿದ್ದಾರೆ. ಜನರು ಎರಡೂ ರಾಷ್ಟ್ರೀಯ ಪಕ್ಷಗಳ ಈ ನಡವಳಿಕೆ ಗಮನಿಸಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ರಾಷ್ಟ್ರೀಯ ಪಕ್ಷಕ್ಕೆ ಮತ ಹಾಕಿದ ಪರಿಣಾಮ ಏನು ಎನ್ನುವುದು ಜನರಿಗೆ ಚೆನ್ನಾಗಿ ಅರ್ಥ ಆಗಿದೆ. ಎಲ್ಲದಕ್ಕೂ ದೆಹಲಿಗೆ ಅರ್ಜಿ ಹಿಡಿದುಕೊಂಡು ದೆಹಲಿಗೆ ಹೋಗಬೇಕಿದೆ ಎಂದು ಲೇವಡಿ ಮಾಡಿದ ಮಾಜಿ ಮುಖ್ಯಮಂತ್ರಿಗಳು, ಐದು ಗ್ಯಾರಂಟಿ ಗಳ ಬಗ್ಗೆ ನಾನು ಈಗಲೇ ಚರ್ಚೆ ಮಾಡಲ್ಲ. ನಾನು ಕಾಯುತ್ತೇನೆ. ಕಾಂಗ್ರೆಸ್ ನವರು ಗ್ಯಾರಂಟಿ ಕೊಟ್ಟಿದ್ದು ತಪ್ಪಲ್ಲ, ಆದರೆ ಈಡೇರಿಸಬೇಕು. ಅದು ಆಡಳಿತ ಪಕ್ಷದ ಹೊಣೆ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಈ ಸರಕಾರಕ್ಕೆ ನಮ್ಮ ಬೆಂಬಲ, ವಿರೋಧ ವಿಷಯಾಧಾರಿತ ಆಗಿರುತ್ತದೆ. ನೀರಾವರಿ ಯೋಜನೆಗಳನ್ನು ಎಲ್ಲವನ್ನೂ ಈಡೇರಿಸಬೇಕು. ನೀರಾವರಿಗೆ ಸಂಬಂಧಿಸಿದಂತೆ ಈ ಸರಕಾರ ಮುಂದಿನ ಐದು ವರ್ಷಗಳ ಕಾಲ ಯಾವ ರೀತಿ ಕೆಲಸ ಮಾಡುತ್ತೆದೆಯೋ ನೋಡೋಣ. ಮೇಕೆದಾಟು, ಮಹಾದಾಯಿ ಯೋಜನೆಗಳನ್ನು ಸಂಪೂರ್ಣ ಮಾಡುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ. ಇದಕ್ಕೆ ನಮ್ಮ ಬೆಂಬಲ ಇದೆ. ಇದನ್ನು ಬಿಟ್ಟು ಬರೀ ಹೇಳಿಕೆಗೆ ಸೀಮಿತವಾದರೆ ನಾವು ಮತ್ತೆ ಜನರನ್ನು ಜಾಗೃತ ಗೊಳಿಸುವ ಬಗ್ಗೆ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಮಾಜಿ ಸಂಸದ ಕುಪೇಂದ್ರ ರೆಡ್ಡಿ, ಪಕ್ಷದ ಹಿರಿಯ ನಾಯಕ, ಶಾಸಕ ವೆಂಕಟಶಿವಾರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಬಿಎಂ ಫಾರೂಖ್, ಟಿ.ಎ.ಶರವಣ, ಇಂಚರ ನಾರಾಯಣಸ್ವಾಮಿ, ಪಕ್ಷದ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ, ಶಾಸಕರಾದ ಮೇಲೂರು ರವಿ, ಸಮೃದ್ಧಿ ಮಂಜುನಾಥ್, ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ಶ್ರೀನಿವಾಸ ಮೂರ್ತಿ, ಹಿರಿಯ ಮುಖಂಡರಾದ ಜವರಾಯ ಗೌಡ, ಸಿಎಂಆರ್ ಶ್ರೀನಾಥ್, ಮುನೇಗೌಡ, ಬಂಗಾರಪೇಟೆ ಮಲ್ಲೇಶ್ ಮುಂತಾದವರು ಹಾಜರಿದ್ದರು.

Tags: amithshahBJPbjpvscongresscmsiddaramiahCongress PartyDCM DK ShivakumarHD DevegowdaHD KumaraswamyHDKJDSJDS KarnatakakumaraswamylatestnewslatestnewstodayPMModipressmeetಬಿಜೆಪಿ
Previous Post

ಕಾಂಗ್ರೆಸ್​​ನವರ ಮದ ಇಳಿಯಲು ಹೆಚ್ಚು ದಿನ ಬೇಕಾಗಿಲ್ಲ : ಸಿ.ಟಿ ರವಿ

Next Post

ಬಿಜೆಪಿ ಜತೆ ಕೈ ಜೋಡಿಸದ ಪಕ್ಷ ಯಾವುದಿದೆ? : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಪ್ರಶ್ನೆ

Related Posts

Top Story

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

by ಪ್ರತಿಧ್ವನಿ
October 13, 2025
0

ಆರ್‌ಎಸ್‌ಎಸ್‌ ವಿರುದ್ಧ ತಮಿಳುನಾಡಿನಲ್ಲಿ ಯಾವ ರೀತಿ ಕ್ರಮ ಕೈಗೊಂಡಿದ್ದಾರೋ ಆ ರೀತಿ ಕ್ರಮವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚಿಸಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ...

Read moreDetails

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

October 13, 2025

Kantara Chapter-1: ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ‘ಕಾಂತಾರ ಚಾಪ್ಟರ್ 1’ .

October 13, 2025

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

October 13, 2025
ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

ನಾಗರಿಕ ಸಮಾಜ ಮತ್ತು ಸಾಮಾಜಿಕ ಪ್ರಜ್ಞೆ

October 13, 2025
Next Post
ಬಿಜೆಪಿ ಜತೆ ಕೈ ಜೋಡಿಸದ ಪಕ್ಷ ಯಾವುದಿದೆ? : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಪ್ರಶ್ನೆ

ಬಿಜೆಪಿ ಜತೆ ಕೈ ಜೋಡಿಸದ ಪಕ್ಷ ಯಾವುದಿದೆ? : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಪ್ರಶ್ನೆ

Please login to join discussion

Recent News

Top Story

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

by ಪ್ರತಿಧ್ವನಿ
October 13, 2025
Top Story

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

by ಪ್ರತಿಧ್ವನಿ
October 13, 2025
Top Story

Kantara Chapter-1: ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ‘ಕಾಂತಾರ ಚಾಪ್ಟರ್ 1’ .

by ಪ್ರತಿಧ್ವನಿ
October 13, 2025
Top Story

Siddaramaiah: ಊಟಕ್ಕೆ ಸೇರುವುದೇ ದೊಡ್ಡ ಅಪರಾಧವೇ: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನೆ

by ಪ್ರತಿಧ್ವನಿ
October 13, 2025
Top Story

Priyank Kharge: ಸರ್ಕಾರಿ ಮೈದಾನಗಳಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದು.

by ಪ್ರತಿಧ್ವನಿ
October 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

October 13, 2025

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

October 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada