ನವದೆಹಲಿ: ಆಪ್ ಪಕ್ಷದ ಸಚಿವ ಯುವತಿಗೆ ವಿಡಿಯೋ ಕಾಲ್ ನಲ್ಲಿ ಖಾಸಗಿ ಅಂಗ ತೋರಿಸಿದ್ದಾರೆಂಬ ಆರೋಪವೊಂದು ಕೇಳಿ ಬಂದಿದೆ.
![](https://pratidhvani.com/wp-content/uploads/2024/05/GOlCLLDWIAAaJRV.jpg)
ಸಚಿವ ಬಾಲ್ಕರ್ ಸಿಂಗ್ (Balkar Singh) 21 ವರ್ಷದ ಯುವತಿಯೊಬ್ಬಳಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ನೀಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿಯ ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾ ಈ ಆರೋಪ ಮಾಡಿದ್ದಾರೆ.
![](https://pratidhvani.com/wp-content/uploads/2024/05/balkar-singh-1024x576.webp)
ವಿಡಿಯೋ ಕರೆಯಲ್ಲಿ ಬಾಲ್ಕರ್ ಸಿಂಗ್ ಮಹಿಳೆಯ ಬಳಿ ಬಟ್ಟೆ ಬಿಚ್ಚಲು ಒತ್ತಾಯಿಸಿದ್ದಾರೆ. ಅಲ್ಲದೆ, ಆಕೆಗೆ ತಮ್ಮ ಖಾಸಗಿ ಅಂಗಗಳನ್ನು ತೋರಿಸಿದ್ದಾರೆ ಎಂದು ಬಿಜೆಪಿ ನಾಯಕ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಕುರಿತು ತನಿಖೆ ನಡೆಸಿ ವರದಿ ನೀಡಬೇಕೆಂದು ರಾಷ್ಟ್ರೀಯ ಮಹಿಳಾ ಆಯೋಗ (ಎನ್ಸಿಡಬ್ಲ್ಯು) ಪೊಲೀಸರಿಗೆ ಸೂಚಿಸಿದೆ.
ಆದರೆ, ಈ ಆರೋಪಗಳಿಗೆ ಸಚಿವ ಬಾಲ್ಕರ್ ಸಿಂಗ್ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ಈ ಕುರಿತು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.