• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಹಿಂದುತ್ವವಾದಿಗಳ ಕೆಂಗಣ್ಣಿಗೆ ಮತ್ತೆ ಗುರಿಯಾದ ಮಿ. ಪರ್ಫೆಕ್ಷನಿಸ್ಟ್:‌ ಅಮೀರ್‌ ಖಾನ್‌ ಗೆ ಜಾಹಿರಾತು ತಂದಿಟ್ಟ ಫಜೀತಿ

Any Mind by Any Mind
October 13, 2022
in ದೇಶ, ಸಿನಿಮಾ
0
ಹಿಂದುತ್ವವಾದಿಗಳ ಕೆಂಗಣ್ಣಿಗೆ ಮತ್ತೆ ಗುರಿಯಾದ ಮಿ. ಪರ್ಫೆಕ್ಷನಿಸ್ಟ್:‌ ಅಮೀರ್‌ ಖಾನ್‌ ಗೆ ಜಾಹಿರಾತು ತಂದಿಟ್ಟ ಫಜೀತಿ
500
VIEWS
Share on WhatsAppShare on FacebookShare on Telegram

ಬಾಲಿವುಡ್‌ ನಟ ಆಮಿರ್‌ ಖಾನ್‌ ಏನು ಮಾಡಿದರೂ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.  ಆಮೀರ್ ಖಾನ್ ಮತ್ತು ನಟಿ ಕಿಯಾರಾ ಅಡ್ವಾಣಿ ಅವರ ಅಭಿನಯದ ಬ್ಯಾಂಕ್ ಜಾಹೀರಾತು ಬಲಪಂಥೀಯರ ಆಕ್ರೋಶಕ್ಕೆ ಕಾರಣವಾಗಿದೆ.

AU Bank ad featuring Aamir Khan and Kiara Advani slammed on Social Media for ‘mocking’ Hindu culture and showing traditions in bad light !
😡😡
Why select only Hindu traditions for ads ? Why not ads on Nikah or Halala ?#AamirKhan_Insults_HinduDharma pic.twitter.com/KL6zFgmunY

— Kshama gupta (@kshamagupta12) October 12, 2022

#AamirKhan_Insults_HinduDharma ಎಂದು ಹಿಂದುತ್ವವಾದಿಗಳು ಟ್ವಿಟರಿನಲ್ಲಿ ಟ್ರೆಂಡಿಂಗ್‌ ಮಾಡುತ್ತಿದ್ದು, ಆಮಿರ್‌ ಖಾನ್‌ ಹಿಂದೂ ಧರ್ಮದ ಅವಹೇಳನ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಜಾಹಿರಾತಿನಲ್ಲಿ ಭಾರತೀಯ ಸಂಸ್ಕೃತಿಗಳನ್ನು ಅಗೌರವಿಸಲಾಗಿದೆ ಎಂದು ಜಾಹಿರಾತುದಾರ ಬ್ಯಾಂಕ್‌ ಹಾಗೂ ನಟ-ನಟಿಯರನ್ನು ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಲಾಗುತ್ತಿದೆ.

I just fail to understand since when AU Bank have become responsible for changing social & religious traditions⁉️

Why only Hinduism is selected for such advertisements,& if ad makers dare to make such ads considering Nikaah‼️#AamirKhan_Insults_HinduDharma pic.twitter.com/OhKt76NJfQ

— 🚩K K Sharma🙏 (@SanakkSharma2) October 12, 2022

ಬಲಪಂಥೀಯ ಚಿತ್ರ ನಿರ್ದೇಶಕ, ದಿ ಕಾಶ್ಮೀರ್‌ ಫೈಲ್ಸ್‌ ಖ್ಯಾತಿಯ ವಿವೇಕ್‌ ಅಗ್ನಿಹೋತ್ರಿ ಬ್ಯಾಂಕ್‌ ಜಾಹಿರಾತನ್ನು ವಿರೋಧಿಸಿದ್ದು, ಭ್ರಷ್ಟ ಬ್ಯಾಂಕ್‌ ವ್ಯವಸ್ಥೆಯನ್ನು ಬದಲಿಸಲಿ, ಸಂಪ್ರದಾಯ ಮತ್ತು ಸಂಸ್ಕೃತಿಯನ್ನಲ್ಲ ಎಂದು ಕಿಡಿಕಾರಿದ್ದಾರೆ.

The Kashmir Files director Vivek Agnihotri slams Aamir Khan & Kiara Advani’s latest AU Bank Ad

Suggests Bank to change the corrupt banking system instead of trying to change social & religious traditions#AamirKhan_Insults_HinduDharma pic.twitter.com/eOINmPW1O1

— Aravinda Baliga (@baliga_2012) October 12, 2022

ಜಾಹಿರಾತಿನಲ್ಲಿ ಆಮಿರ್ ಖಾನ್ ಮತ್ತು ಕಿಯಾರ ಅಡ್ವಾಣಿ ವಧು-ವರರಾಗಿ ಕಾಣಿಸಿಕೊಂಡಿದ್ದು, ತಮ್ಮ ಮದುವೆಯ ಬಳಿಕ ವಧುವಿನ ಮನೆಗೆ ಬರುವಂತೆ ತೋರಿಸಲಾಗಿದೆ. ಸಾಂಪ್ರದಾಯಿಕ ರೀತಿಗೆ ವಿರುದ್ಧವಾಗಿ ವಧುವಿನ ಮನೆಗೆ ತಲುಪುವುದನ್ನು ಮತ್ತು ವರ (ಆಮಿರ್‌ ಖಾನ್) ಮನೆಗೆ ಮೊದಲ ಹೆಜ್ಜೆ ಇಟ್ಟು ಪ್ರವೇಶಿಸುವಂತೆ ಜಾಹೀರಾತಿನಲ್ಲಿ ತೋರಿಸಲಾಗಿದೆ. ಇದು ಹಿಂದುತ್ವವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ನಡುವೆ, ಇದಕ್ಕೆ ಸಂಬಂಧಿಸಿದಂತೆ  ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಪ್ರತಿಕ್ರಿಯಿಸಿದ್ದು,  ಆಮೀರ್ ಖಾನ್ ಅವರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಜಾಹೀರಾತುಗಳಿಂದ ದೂರವಿರಬೇಕು ಎಂದು  ಹೇಳಿದ್ದಾರೆ.

YouTube player

ಸುದ್ದಿಗಾರರೊಂದಿಗೆ ಮಾತನಾಡಿದ ಮಿಶ್ರಾ, ಅಮೀರ್ ಖಾನ್ ಭಾರತೀಯ ಸಂಪ್ರದಾಯಗಳು ಮತ್ತು ಪದ್ಧತಿಗಳನ್ನು ಗಮನದಲ್ಲಿಟ್ಟುಕೊಂಡು ಇಂತಹ ಜಾಹೀರಾತುಗಳನ್ನು ಮಾಡಬೇಕು ಎಂದು ಹೇಳಿದರು.

Previous Post

ನೋಟು ರದ್ಧತಿಯ ಬಗೆಗಿನ ಕಡತಗಳನ್ನು ತಯಾರು ಮಾಡಿ: ವಿಚಾರಣೆಗೆ ಸಜ್ಜಾದ ಸುಪ್ರೀಂ ಕೋರ್ಟ್

Next Post

ಕೆಎಲ್‌ ರಾಹುಲ್‌ ಹೋರಾಟ ವ್ಯರ್ಥ: ಭಾರತಕ್ಕೆ 2ನೇ ಅಭ್ಯಾಸದಲ್ಲಿ ಸೋಲು

Next Post
ಟಿ-20 ತಂಡದಿಂದ ವಿರಾಟ್‌ ಕೊಹ್ಲಿಗೆ ಕೊಕ್‌, ಕೆಎಲ್‌ ರಾಹುಲ್‌ ಇನ್!‌

ಕೆಎಲ್‌ ರಾಹುಲ್‌ ಹೋರಾಟ ವ್ಯರ್ಥ: ಭಾರತಕ್ಕೆ 2ನೇ ಅಭ್ಯಾಸದಲ್ಲಿ ಸೋಲು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2026 JNews - Premium WordPress news & magazine theme by Jegtheme.

No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2026 JNews - Premium WordPress news & magazine theme by Jegtheme.

error: Content is protected !!