• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಶ್ರದ್ಧೆ ನಂಬಿಕೆ ಆಚರಣೆ ಮತ್ತು ಮೌಢ್ಯದ ಜಗತ್ತು

ನಾ ದಿವಾಕರ by ನಾ ದಿವಾಕರ
July 14, 2025
in Top Story, ಜೀವನದ ಶೈಲಿ, ವಿಶೇಷ
0
ಶ್ರದ್ಧೆ ನಂಬಿಕೆ ಆಚರಣೆ ಮತ್ತು ಮೌಢ್ಯದ ಜಗತ್ತು
Share on WhatsAppShare on FacebookShare on Telegram

ಶ್ರದ್ಧಾನಂಬಿಕೆಗಳು ವ್ಯಕ್ತಿನೆಲೆಯಂದಾಚೆ  ಸಾಂಸ್ಥೀಕರಣಗೊಂಡಾಗ ಆಚರಣೆ-ಮೌಢ್ಯ ಆಕ್ರಮಿಸುತ್ತದೆ

ADVERTISEMENT

ನಾ ದಿವಾಕರ

ಭಾಗ 1

ಯಾವುದೇ ನಾಗರಿಕತೆಯ ಅಥವಾ ಸಾಮಾಜಿಕ ಜಗತ್ತಿನ ಮಾನವ ಸಮಾಜದ ಅಭ್ಯುದಯದ ಹಾದಿಯನ್ನು ಗಮನಿಸಿದಾಗ, ಚಾರಿತ್ರಿಕವಾಗಿ-ಸಮಕಾಲೀನ ನೆಲೆಯಲ್ಲಿ,  ಕಾಣುವ ಸಮಾನ ಎಳೆ ಎಂದರೆ ಅದರೊಳಗಿನ ಸಮಾಜಗಳನ್ನು ಪ್ರತಿನಿಧಿಸುವ ವಿಭಿನ್ನ ಸಮುದಾಯಗಳು ತಮ್ಮದೇ ಆದ ಸಾಂಸ್ಕೃತಿಕ-ಸಾಮಾಜಿಕ ಹಾಗೂ ರಾಜಕೀಯ ಆಯಾಮಗಳ ನಡುವೆ ಬೆಳೆದಿರುವ ಒಂದು ವಿದ್ಯಮಾನ. ಪ್ರಪಂಚದಾದ್ಯಂತ ಮಾನವ ಸಮಾಜದ ಭಿನ್ನ ಪ್ರಾದೇಶಿಕ ನೆಲೆಗಳನ್ನು ಒಳಹೊಕ್ಕು ನೋಡಿದಾಗ ಇದು ಅತ್ಯಂತ ವೈವಿಧ್ಯಮಯವಾಗಿಯೂ, ವೈರುಧ್ಯಗಳಿಂದ ಕೂಡಿರುವುದಾಗಿಯೂ, ವಿರೋಧಾಭಾಸಗಳಿಂದ ಆವೃತವಾಗಿರುವುದನ್ನೂ ಗುರುತಿಸಬಹುದು. ವಿಶೇಷವಾಗಿ ಭಾರತದಂತಹ ಬಹುಸಾಂಸ್ಕೃತಿಕ ವೈವಿಧ್ಯಮಯ ದೇಶಗಳಲ್ಲಿ ಈ ಲಕ್ಷಣಗಳು ಇನ್ನೂ ಆಳವಾಗಿ ಬೇರೂರಿರುವುದೇ ಅಲ್ಲದೆ, ಅಷ್ಟೇ ವ್ಯಾಪಕವಾಗಿ ವಿಸ್ತರಣೆಯಾಗಿರುತ್ತವೆ.

ಆದರೆ ಪ್ರಾದೇಶಿಕ-ಭೌಗೋಳಿಕ ಭಿನ್ನತೆಗಳ ಹೊರತಾಗಿಯೂ, ಮಾನವ ಸಮಾಜದ ಒಂದು ಸಮಾನ ಲಕ್ಷಣವನ್ನು ವ್ಯಕ್ತಿಗತ ನೆಲೆಯಲ್ಲಿ, ಪ್ರತಿಯೊಂದು ಸಮಾಜದ ಸದಸ್ಯರ ವೈಯುಕ್ತಿಕ ಬದುಕಿನಲ್ಲಿ ಕಾಣಬಹುದು. ಅದು ಮನುಷ್ಯರ ನಂಬಿಕೆ, ಶ್ರದ್ಧೆ, ಆಚರಣೆ ಮತ್ತು ಅದರ ಸುತ್ತಲಿನ ಚಟುವಟಿಕೆಗಳು. ಈ ಶ್ರದ್ಧಾನಂಬಿಕೆಗಳು ಅತೀತ ಶಕ್ತಿಗಳಲ್ಲಿ, ಮಾನವ ಸಮಾಜದ ಗ್ರಹಿಕೆಗೆ ನಿಲುಕದ ಅಮೂರ್ತ ಶಕ್ತಿಗಳಲ್ಲಿ, ಲೌಕಿಕ ಜಗತ್ತಿನಿಂದಾಚೆಗಿನ ಕಲ್ಪಿತ ವಾತಾವರಣದಲ್ಲಿ ಹಾಗೂ ಧಾರ್ಮಿಕ ನೆಲೆಯಲ್ಲಿ ನೋಡಿದಾಗ ದೈವಗಳಲ್ಲಿ-ಪ್ರವಾದಿಗಳಲ್ಲಿ ಗುರುತಿಸಬಹುದು. ಇವೆಲ್ಲವನ್ನೂ ನಿರ್ದೇಶಿಸುವ ಅಥವಾ ನಿಯಂತ್ರಿಸುವ ಒಂದು ಆಧ್ಯಾತ್ಮಿಕತೆ ಮಾನವ ಸಮಾಜವನ್ನು ಬಹು ಆಯಾಮಗಳಿಂದ ಆವರಿಸಿರುತ್ತದೆ. ಈ ಆಧ್ಯಾತ್ಮಿಕತೆಯು ಅತೀಂದ್ರಿಯ ಸ್ವರೂಪದಲ್ಲಿ ಅಥವಾ ಲೌಕಿಕ ವಾಸ್ತವಿಕತೆಯ ನೆಲೆಯಲ್ಲಿ ವ್ಯಕ್ತವಾಗುತ್ತಾ, ವ್ಯಕ್ತಿಗಳ ಜೀವನವನ್ನು, ಜೀವನಶೈಲಿಯನ್ನು ಪ್ರಭಾವಿಸುವುದೂ ಸಹ ವಾಸ್ತವ.

soujanyacase ಕೊ***  ಪ್ರಕರಣ. ಚೇತನ್ ಹೇಳಿದ್ದೇನು ? #pratidhvani

ಭಾರತೀಯ ಸಮಾಜದ ವಿಶಿಷ್ಟತೆ

ನಿರ್ದಿಷ್ಟವಾಗಿ ಭಾರತೀಯ ಸಮಾಜವನ್ನು ಗಮನಿಸಿದರೆ ನಮಗೆ ಈ ಎಲ್ಲ ಲಕ್ಷಣಗಳೂ ಮೇಳೈಸಿರುವ ಒಂದು ಬಹು ಆಯಾಮದ ಜಗತ್ತನ್ನು ಕಾಣಲು ಸಾಧ್ಯ. ಮೂಲತಃ ಸಾಂಪ್ರದಾಯಿಕವಾದ ಭಾರತೀಯ ಸಮಾಜ, ಹಲವು ಮತ-ಧರ್ಮ, ಜಾತಿ-ಉಪಜಾತಿ-ಪಂಗಡ,  ನೂರಾರು ಭಾಷೆ  ಮತ್ತು ಸಂಸ್ಕೃತಿಗಳಿಂದ ಆವೃತವಾಗಿರುವುದು ಈ ನೆಲದ ವೈಶಿಷ್ಟ್ಯವೂ ಹೌದು, ವೈರುಧ್ಯವೂ ಹೌದು. ಭಾರತೀಯ ಸಮಾಜ ತಾನೇ ಸೃಷ್ಟಿಸಿಕೊಂಡಿರುವ ಧಾರ್ಮಿಕ-ಜಾತೀಯ ಭಿನ್ನ ಭೇದಗಳ ಅನುಸಾರವಾಗಿಯೇ ಈ ಸಾಂಸ್ಕೃತಿಕ ಭಿನ್ನತೆಗಳೂ ಸಮಾಜದ ಒಂದು ಅಂಶಿಕ ಭಾಗವಾಗಿ, ವ್ಯಕ್ತಿಗತ ಬದುಕಿನ, ಕೌಟುಂಬಿಕ ಚೌಕಟ್ಟಿನ, ಸಾಮುದಾಯಿಕ ವಲಯದ ಹಾಗೂ ಸಾಮಾಜಿಕ ಜಗತ್ತಿನ ನಡುವೆ ಬೇರೂರಿರುವುದನ್ನು ಗುರುತಿಸಬಹುದು. ಸಮಾಜಶಾಸ್ತ್ರೀಯ-ಮಾನವ ಶಾಸ್ತ್ರೀಯ (Sociological-Anthropological) ನೆಲೆಯಲ್ಲಿ ಈ ಸಮಾಜವನ್ನು ಛೇದಿಸಿ ನೋಡಿದಾಗ ನಮಗೆ, ಸಾಮಾನ್ಯ ಜನಜೀವನವನ್ನು ಪ್ರಭಾವಿಸುವ, ನಿರ್ದೇಶಿಸುವ ಮತ್ತು ಕೆಲವೊಮ್ಮೆ ನಿಯಂತ್ರಿಸುವ ನಂಬಿಕೆಗಳೂ ಕಾಣುತ್ತವೆ.

ಈ ಬಹುಆಯಾಮದ ಲಕ್ಷಣವೇ ಭಾರತವನ್ನು ಶತಮಾನಗಳಿಂದ ಒಂದು ಭೂಪ್ರದೇಶವಾಗಿ ಹಿಡಿದಿಟ್ಟಿದ್ದು, ಹಲವಾರು ವೈರುಧ್ಯ-ವಿರೋಧಾಸಗಳ ಹೊರತಾಗಿಯೂ, ಏಕೀಕೃತ ರಾಷ್ಟ್ರವಾಗಿ ಉಳಿಸಿಕೊಂಡು ಬಂದಿದೆ. ಈ ದೃಷ್ಟಿಯಿಂದಲೇ ಡಾ. ಬಿ.ಆರ್.‌ ಅಂಬೇಡ್ಕರ್‌ ಸಂವಿಧಾನದಲ್ಲಿ ವ್ಯಕ್ತಿ ಸ್ವಾತಂತ್ರ್ಯದೊಂದಿಗೇ, ಧಾರ್ಮಿಕ ಹಾಗೂ ಉಪಾಸನಾ ಸ್ವಾತಂತ್ರ್ಯವನ್ನೂ ಅಳವಡಿಸಿರುವುದನ್ನು ಗಮನಿಸಬಹುದು. ಇದು ಸ್ವಾತಂತ್ರ್ಯಪೂರ್ವ ಭಾರತದ ಸಾಮಾಜಿಕ-ಸಾಂಸ್ಕೃತಿಕ ಚಿಂತನಾಧಾರೆಯ ಒಂದು ಫಲ ಎಂದರೂ ಉತ್ಪ್ರೇಕ್ಷೆಯೇನಲ್ಲ. ಈ ಸ್ವಾತಂತ್ರ್ಯವೇ ಭಾರತೀಯ ಸಮಾಜದಲ್ಲಿ ಎಲ್ಲ ಧಾರ್ಮಿಕ ಆಚರಣೆಗಳು, ಸಾಂಸ್ಕೃತಿಕ ಸಂಪ್ರದಾಯಗಳು ಹಾಗೂ ಉಪಾಸನೆಯ ಬುನಾದಿಯಾಗುವ ಶ್ರದ್ಧಾನಂಬಿಕೆಗಳು ಇಂದಿಗೂ ಸಹ ಜೀವಂತಿಕೆಯಿಂದಿವೆ. ಆದರೆ ಸಂವಿಧಾನದಲ್ಲಿ ಗುರುತಿಸಬೇಕಾದ ಒಂದು ಮುನ್ನೆಚ್ಚರಿಕೆ (Caveat) ಎಂದರೆ ಸಾರ್ವಜನಿಕ ಜೀವನದಲ್ಲಿ ವೈಚಾರಿಕ ಪ್ರಜ್ಞೆ ಮತ್ತು ವೈಜ್ಞಾನಿಕ ಮನೋಭಾವದ ಅಗತ್ಯತೆ.

ಈ ಎರಡು ಔದಾತ್ಯಗಳನ್ನು ಪ್ರಧಾನವಾಗಿ ಅನುಕರಿಸುವ ಮುಖಾಂತರವೇ ಭಾರತೀಯ ಸಮಾಜ ಭವಿಷ್ಯದಲ್ಲಿ, ಉತ್ತಮ ಶಿಕ್ಷಣ-ವಿದ್ಯಾರ್ಜನೆಯನ್ನು ಸಂಪಾದಿಸಿ, ವೈಜ್ಞಾನಿಕ ಅವಿಷ್ಕಾರಗಳೊಂದಿಗೆ, ಒಂದು ಪ್ರಬುದ್ಧ ವೈಚಾರಿಕ ದೇಶವಾಗಿ-ವೈಜ್ಞಾನಿಕ ಮನಸ್ಥಿತಿಯ ಸಮಾಜವಾಗಿ,  ಹೊರಹೊಮ್ಮುತ್ತದೆ ಎನ್ನುವುದು ಸಂವಿಧಾನ ಕರ್ತೃಗಳ ಕನಸಾಗಿತ್ತು. 77 ವರ್ಷಗಳ ಸ್ವತಂತ್ರ ಆಳ್ವಿಕೆಯನ್ನು ಕಳೆದು ಭಾರತ ವೈಜ್ಞಾನಿಕವಾಗಿ ಅತ್ಯದ್ಭುತ ಸಾಧನೆಗಳನ್ನು ಮಾಡಿದೆ, ಚಂದ್ರಲೋಕ-ಮಂಗಳ ಗ್ರಹಕ್ಕೂ ತನ್ನ ಬಾಹ್ಯಾಕಾಶ ಪಯಣವನ್ನು ವಿಸ್ತರಿಸಿದೆ. ವೈಜ್ಞಾನಿಕ ಬೌದ್ಧಿಕ ಸಂಸ್ಥೆಗಳು, ಇಸ್ರೋದಂತಹ ಬಾಹ್ಯಾಕಾಶ ಸಂಸ್ಥೆಗಳು ಇಂದು ಅನ್ಯ ರಾಷ್ಟ್ರಗಳಿಗೆ ಮಾದರಿಯಾಗಿ ನಿಂತಿವೆ. ಆದರೆ ಈ ಸಾಂಸ್ಥಿಕ ನೆಲೆಗಳಿಂದಾಚೆಗೆ, ಸಮಾಜದತ್ತ ನೋಡಿದಾಗ, ನಾವು ಇನ್ನೂ ಯಾವ ಯುಗದಲ್ಲಿದ್ದೇವೆ ? ಎತ್ತ ಸಾಗುತ್ತಿದ್ದೇವೆ ? ಎಂಬ ಪ್ರಶ್ನೆಗಳು ಸಹಜವಾಗಿ ಹುಟ್ಟಿಕೊಳ್ಳುತ್ತವೆ .

ಸಾಂಪ್ರದಾಯಿಕ ಸಮಾಜದ ನಡುವೆ

ಭಾರತೀಯ ಸಮಾಜದ ಎಲ್ಲ ಸ್ತರಗಳಲ್ಲೂ, ಎಲ್ಲ ಜಾತಿ-ಧರ್ಮಗಳ ನೆಲೆಯಲ್ಲೂ ಕಾಣಬಹುದಾದ ಒಂದು ವ್ಯಕ್ತಿಗತ ಲಕ್ಷಣ ಎಂದರೆ ಅತೀತ ಶಕ್ತಿಗಳಲ್ಲಿನ ಶ್ರದ್ಧೆ ಮತ್ತು ನಂಬಿಕೆಗಳು. ಜನಪದೀಯ ಇತಿಹಾಸದಿಂದ ಆಧುನಿಕ ಯುಗದವರೆಗೂ ಅತೀತ ಅಥವಾ ಅತೀಂದ್ರಿಯ ಶಕ್ತಿಗಳಲ್ಲಿನ ಶ್ರದ್ಧಾ ನಂಬಿಕೆಗಳು ಜನಸಾಮಾನ್ಯರ ನಿತ್ಯ ಬದುಕಿನಲ್ಲಿ ಹಾಸು ಹೊಕ್ಕಾಗಿರುವುದನ್ನು ಗುರುತಿಸಬಹುದು. ಇವುಗಳನ್ನು ನಿರ್ದಿಷ್ಟ ಮತ-ಧರ್ಮ ಅಥವಾ ಜಾತಿಯ ನೆಲೆಯಲ್ಲಿ ವಿಂಗಡಿಸಿ ನೋಡಿದಾಗಲೂ, ತಾತ್ವಿಕವಾಗಿ ಅಷ್ಟೇನೂ ವ್ಯತ್ಯಾಸ ಕಾಣಲಾರದು. ಯಾವುದೋ ಒಂದು ಅಗೋಚರ ಶಕ್ತಿಯಲ್ಲಿ ಅಪಾರ ನಂಬಿಕೆ ಇದ್ದಾಗ ಅದು ವ್ಯಕ್ತಿಗತ ಬದುಕಿನ ಹಾದಿಯಲ್ಲಿ ಅನೇಕ ವ್ಯತ್ಯಯಗಳನ್ನು ಸೃಷ್ಟಿಸುತ್ತದೆ. ದೈವ ನಂಬಿಕೆಯೊಂದಿಗೆ ಕರ್ಮಸಿದ್ಧಾಂತವನ್ನು ಒಪ್ಪುವ ವ್ಯಕ್ತಿಗಳಲ್ಲಿ, ಎಲ್ಲ ಸುಖ ಸಮ್ಮಾನಗಳನ್ನು  ದೇವರ ಮಡಿಲಲ್ಲಿರಿಸಿ, ಕಷ್ಟ ದುಃಖ ದುಮ್ಮಾನಗಳಿಗೆ ಪೂರ್ವಜನ್ಮದ ಕರ್ಮಗಳಿಗೆ ಆರೋಪಿಸುವ ಒಂದು ಮಾದರಿಯನ್ನು ಸಾಮಾನ್ಯವಾಗಿ ಗುರುತಿಸಬಹುದು.

ಸಾಂಪ್ರದಾಯಿಕತೆ ಆಳವಾಗಿ ಬೇರೂರಿರುವ ಭಾರತದಂತಹ ಯಾವುದೇ ದೇಶದಲ್ಲಾದರೂ  ಸಾಮಾನ್ಯ ಜನಜೀವನದಲ್ಲಿ ಅತೀತ-ಅತೀಂದ್ರಿಯ ಶಕ್ತಿಗಳಲ್ಲಿನ ನಂಬಿಕೆ ಜೀವನಶೈಲಿಯ ಒಂದು ಭಾಗವಾಗಿರುತ್ತದೆ. ಬುಡಕಟ್ಟು ಸಮಾಜಗಳಲ್ಲಿ ಇದು ಉಚ್ಚ್ರಾಯ ಮಟ್ಟದಲ್ಲಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಜನಜೀವನವನ್ನು ನಿರ್ದೇಶಿಸುವ ಒಂದು ಸಾಧನವಾಗಿರುತ್ತದೆ. ಆಧುನಿಕ ಶಿಕ್ಷಣ ಪಡೆದ ಸಮಾಜದ ಸದಸ್ಯರಲ್ಲೂ ಈ ನಂಬಿಕೆಗಳು ಸುಲಭವಾಗಿ ಹೋಗುವುದಿಲ್ಲ. ಹಾಗಾಗಿಯೇ ಭಾರತೀಯ ಸಮಾಜದಲ್ಲಿ ವಿಜ್ಞಾನ ಶಿಕ್ಷಣ ಆಳವಾಗಿ ಬೇರೂರಿದ್ದರೂ, ವೈದ್ಯ-ವಿಜ್ಞಾನಿಗಳನ್ನೂ ಒಳಗೊಂಡಂತೆ, ವ್ಯಕ್ತಿಗತವಾಗಿ  ಈ ನಂಬಿಕೆಗಳು ಪ್ರಧಾನವಾಗಿರುತ್ತವೆ. ಒಂದು ನೆಲೆಯಲ್ಲಿ ಇದು ವೈಯ್ಯುಕ್ತಿಕ ಸಾಂತ್ವನದ ಸಾಧನವಾಗಿ ಪರಿಣಮಿಸಿದರೆ, ಮತ್ತೊಂದೆಡೆ ತಮ್ಮ ಹುಟ್ಟು-ಜಾತಿ-ಸಮುದಾಯ ಮತ್ತು ಅದರ ಶ್ರೇಷ್ಠತೆ-ಪಾವಿತ್ರ್ಯತೆಯನ್ನು ಕಾಪಾಡುವ ಒಂದು ವಿಧಾನವಾಗಿ ಕಂಡುಬರುತ್ತದೆ.

ಈ ಶ್ರೇಷ್ಠತೆ ಅಥವಾ ಪಾವಿತ್ರ್ಯತೆಯನ್ನು ಬಾಲ್ಯದಿಂದಲೇ ಮಕ್ಕಳಲ್ಲಿ ಬಿತ್ತುವ ಸಲುವಾಗಿಯೇ ಜಾತಿ-ಉಪಜಾತಿ ಅಥವಾ ಧರ್ಮವನ್ನು ಸಾಂಸ್ಥೀಕರಣಗೊಳಿಸಲಾಗುತ್ತದೆ. ಧಾರ್ಮಿಕ ಸಂಹಿತೆಗಳು, ವ್ಯಾಖ್ಯಾನಗಳು ಹಾಗೂ ಇವುಗಳಿಗೆ ಪೂರಕವಾಗಿ ಜೀವನ ದರ್ಶನಗಳನ್ನು ತಳಮಟ್ಟಕ್ಕೂ ಕೊಂಡೊಯ್ಯುವ ಬೌದ್ಧಿಕ ಪರಿಕರಗಳು ಈ ಸಾಂಸ್ಥಿಕ ನೆಲೆಯಲ್ಲೇ ಮನೆಮನೆಯನ್ನು, ಮನಮನವನ್ನು ತಲುಪುತ್ತವೆ. ಹುಟ್ಟಿದ ಮಗು ಅಸ್ತಿಕ-ನಾಸ್ತಿಕ-ಮೇಲು ಕೀಳುಗಳ ಸೋಂಕಿಲ್ಲದೆ ಇದ್ದರೂ, ಅಂಬೆಗಾಲಿಡುವ ಹಂತದಿಂದಲೆ ಸಾಂಸ್ಥೀಕರಣಗೊಂಡ ಸಂಪ್ರದಾಯ, ನಂಬಿಕೆಗಳನ್ನು ಮಕ್ಕಳಲ್ಲಿ ಬಿತ್ತುವ ಒಂದು ಪ್ರಕ್ರಿಯೆಯನ್ನು ಎಲ್ಲ ಧರ್ಮಗಳಲ್ಲೂ ಕಾಣಬಹುದು. ಮಕ್ಕಳು ದೇಹದ ಮೇಲೆ ಧರಿಸುವ ಚಿಹ್ನೆ-ಲಾಂಛನಗಳು, ಆಡುವ ನುಡಿ ಮತ್ತು ಕಲಿಯುವ ಜ್ಞಾನ ಸಾಧನಗಳು ಅವರಲ್ಲಿ, ಬೆಳೆಯುವ ಹಂತದಿಂದಲೇ ಅಸ್ಮಿತೆಗಳನ್ನು ಬೇರೂರಿಸುತ್ತವೆ. ಈ ಬಿತ್ತ ಬೀಜಗಳ ಫಸಲು ದೊರೆಯುವುದು ಆಚರಣೆಗಳಲ್ಲಿ.

ಸಾಮಾಜಿಕ ಜೀವನದ ಶ್ರದ್ಧಾ ನಂಬಿಕೆಗಳು

ಜಗತ್ತಿನ ಎಲ್ಲ ಸಮಾಜಗಳಲ್ಲೂ ಒಂದಲ್ಲಾ ಒಂದು ರೀತಿಯಲ್ಲಿ ಹಾಸುಹೊಕ್ಕಾಗಿರುವ ಧಾರ್ಮಿಕತೆ, ಆಧ್ಯಾತ್ಮಿಕತೆ ಮತ್ತು ತತ್ಸಂಬಂಧಿತ ಆಚರಣೆಗಳನ್ನು ಒಟ್ಟಾಗಿ ನೋಡಿದಾಗ ಅಲ್ಲಿ ನಮಗೆ ಕಾಣುವುದು ಅರ್ಧಸತ್ಯ ಮಾತ್ರ. ಮೂಲತಃ ಮನೋಭಾವಕ್ಕೆ ಸಂಬಂಧಿಸಿದ ಈ ವಿದ್ಯಮಾನಗಳನ್ನು ಬಿಡಿಸಿ ಅಥವಾ ಛೇದಿಸಿ ನೋಡಿದಾಗ ಅಲ್ಲಿ ಕುಟುಂಬ, ಸಮುದಾಯ, ಕುಲ-ಗೋತ್ರ, ಸಮಾಜ ಮತ್ತು ಸುತ್ತಲಿನ ಪರಿಸರದ ಪರಿಣಾಮಗಳನ್ನು ಕಾಣಲು ಸಾಧ್ಯ. ಮೌಢ್ಯ ಎಂಬ ಪರಿಕಲ್ಪನೆಯು ಯಾವ ವ್ಯಕ್ತಿ-ಸಮಾಜದಲ್ಲೂ ಏಕಾಏಕಿ ಉದ್ಭವಿಸುವುದಿಲ್ಲ. ನಂಬಿಕೆಯನ್ನು ಶ್ರದ್ಧೆಯಾಗಿಸಿ, ಅದನ್ನು ಅನುಕರಿಸುತ್ತಲೇ ತಾವು ನಂಬಿದ ಶಕ್ತಿಗಳನ್ನು ಆರಾಧಿಸುವ ಪ್ರಕ್ರಿಯೆಗೆ ಸಮಾಜ ಚಾಲನೆ ನೀಡುತ್ತದೆ. ಈ ಆರಾಧನಾ ಪ್ರಕ್ರಿಯೆಯಲ್ಲಿ ಅಂತರ್ಗತವಾಗುವ ಆಚರಣೆಗಳು ಮನುಷ್ಯ ಸಮಾಜದಲ್ಲಿ ಪ್ರತ್ಯೇಕತೆಯ ಬೇಲಿಗಳನ್ನು ನಿರ್ಮಿಸುತ್ತವೆ. ಈ ಬೇಲಿಗಳನ್ನು ದಾಟಿ ನೋಡಲಾಗದಂತೆ ಬೌದ್ಧಿಕ ವಾತಾವರಣವನ್ನು ಸೃಷ್ಟಿಸಲಾಗುತ್ತದೆ. ಈ ಕೋಶೀಕರಣಕ್ಕೊಳಗಾದ (Celluralised ), ತಾನು ಅನುಕರಿಸಿಕೊಂಡು ಬಂದ ಹಾದಿಯಲ್ಲೇ ವ್ಯಕ್ತಿ-ಕುಟುಂಬ-ಸಮುದಾಯಗಳಲ್ಲಿ ಮೌಢ್ಯಗಳನ್ನೂ ಸೃಷ್ಟಿಸುತ್ತದೆ. ಯಾವುದೇ ಸಮಾಜದ ಅಭ್ಯುದಯಕ್ಕೆ ಅಪಾಯಕಾರಿಯಾಗುವುದು ಈ ಮೌಢ್ಯ ಮತ್ತು ಅದನ್ನೇ ಒಂದು ಆಚರಣೆಯನ್ನಾಗಿ ಪರಿವರ್ತಿಸುವ ಪ್ರಕ್ರಿಯೆ.

Kumar Bangarappa : ತಮ್ಮನ ಕನ್ನಡದ ಬಗ್ಗೆ ಅಣ್ಣ ಹೇಳಿದ್ದೇನು..?  #pratidhvani

ಇಲ್ಲಿ ಮನುಷ್ಯರ ಮನಸ್ಥಿತಿಯನ್ನೇ ಛೇದಿಸಿ ನೋಡಿದಾಗ ನಂಬಿಕೆ, ಯಾವುದೇ ರೀತಿಯದ್ದಾದರೂ, ವ್ಯಕ್ತಿಗತ ನೆಲೆಯಲ್ಲಿ ಕಾಣುತ್ತದೆ. ತಾನು ಹುಟ್ಟಿದ ಪರಿಸರದಿಂದಲೇ ಮಾನವ ಜೀವಿಯು ರೂಢಿಸಿಕೊಳ್ಳುವ ಈ ನಂಬಿಕೆಗಳು ಜೀವನಶೈಲಿಯನ್ನು ಮತ್ತು ವೈಯುಕ್ತಿಕ ಗುಣಲಕ್ಷಣಗಳ ಮೇಲೆ, ಗ್ರಹೀತಗಳ ಮೇಲೆ ಗಾಢವಾದ ಪರಿಣಾಮ ಬೀರುವುದನ್ನು ಮಾನವ ಶಾಸ್ತ್ರೀಯ ಅಧ್ಯಯನಗಳು ಸಾಬೀತುಪಡಿಸಿವೆ. ಇದು ವ್ಯಕ್ತಿಗತ ಬೌದ್ಧಿಕ ವಿಕಾಸಕ್ಕೆ ತೊಡಕಾಗಬಹುದಾದರೂ, ಸಾಮಾನ್ಯವಾಗಿ ವಿಶಾಲ ಸಮಾಜಕ್ಕೆ ಹಾನಿಕಾರಕವಾಗುವುದಿಲ್ಲ. ಆದರೆ  ಈ ವ್ಯಕ್ತಿಗತ ನಂಬಿಕೆಗಳಿಗೆ ಒಂದು ಪೌರಾಣಿಕ-ಧಾರ್ಮಿಕ-ಆಧ್ಯಾತ್ಮಿಕ ತಳಹದಿಯನ್ನು ಒದಗಿಸುವ ಮೂಲಕ ಕುಟುಂಬಗಳ ಒಳಗೇ ಗತಕಾಲದ ನಡವಳಿಕೆಗಳನ್ನೋ, ಪ್ರಾಚೀನ ಸಮಾಜದ ಸಂಹಿತೆಗಳನ್ನೋ ಉದ್ಧರಿಸುವ ಮೂಲಕ ಮಕ್ಕಳಲ್ಲಿರುವ ನಂಬಿಕೆಯನ್ನು ಶ್ರದ್ದೆಯನ್ನಾಗಿ ಪರಿವರ್ತಿಸಲಾಗುತ್ತದೆ. ಇದು ಸಾಮಾಜೀಕರಣಕ್ಕೊಳಗಾಗಿ, ಸಾಂಸ್ಥಿಕ ನೆಲೆ ಕಂಡುಕೊಂಡಾಗ ವಿಶಾಲ ಸಮಾಜದಲ್ಲಿ ವೈಚಾರಿಕತೆಗೆ ಧಕ್ಕೆ ಉಂಟಾಗುತ್ತದೆ.

ಸಾಂಸ್ಥೀಕರಣಗೊಂಡ ಇಸ್ಲಾಂ, ಕ್ರೈಸ್ತ, ಯಹೂದ್ಯ, ಸಿಖ್‌ ಧರ್ಮಗಳಲ್ಲಿ ಈ ಆಚರಣಾ ವಿಧಾನಗಳನ್ನು ಸಮರ್ಥಿಸಲು ಪುರಾಣ-ಐತಿಹ್ಯ ಮತ್ತು ಪ್ರಾಚೀನ ಸಮಾಜದ ಗ್ರಾಂಥಿಕ ಸಂಹಿತೆಗಳನ್ನು, ತರ್ಕ-ದರ್ಶನಗಳನ್ನು ಸಾದೋಹರಣವಾಗಿ ಬಳಸಲಾಗುತ್ತದೆ. ಇನ್ನೂ ಪೂರ್ಣಪ್ರಮಾಣದಲ್ಲಿ ಸಾಂಸ್ಥೀಕರಣಗೊಳ್ಲದ  ಹಿಂದೂ ಧರ್ಮ ಅಥವಾ ಬೌದ್ಧ ಧಮ್ಮದಲ್ಲಿ ಈ ಆಚರಣೆಗಳು ಜೀವನ ಶೈಲಿಯ ಒಂದು ಭಾಗವಾಗಿ ರೂಪಿಸುವ ಪ್ರಯತ್ನಗಳು ನಡೆಯುತ್ತವೆ. ವ್ಯಕ್ತಿಗತ ನೆಲೆಯ ನಂಬಿಕೆಯನ್ನು ಕೌಟುಂಬಿಕ ಅಥವಾ ಸಹಜೀವನದ ಶ್ರದ್ಧೆಯಾಗಿ ಪರಿವರ್ತಿಸುವ ಕೈಂಕರ್ಯವನ್ನು ಸಾಂಸ್ಥಿಕ ಮತ್ತು ಗ್ರಾಂಥಿಕ ಧರ್ಮಗಳು ನಿರ್ವಹಿಸುತ್ತವೆ. ಈ ನಂಬಿಕೆಯನ್ನು ದಾಟಿ ಹೋಗುವುದೇ ಒಂದು ಅಪರಾಧ ಎನ್ನುವ ಭಾವನೆಯನ್ನು ಮಕ್ಕಳಲ್ಲಿ ಎಳೆವಯಸ್ಸಿನಲ್ಲೇ ಬೆಳೆಸಲಾಗುತ್ತದೆ. “ ಯಾವುದೇ ಕೆಲಸ ಮಾಡುವುದರಲ್ಲೂ ಶ್ರದ್ಧೆ ಇರಬೇಕು,,,,,” ಎಂಬ ಹಿರಿಯರ ಉಪದೇಶ ಈ ತಾತ್ವಿಕ ನೆಲೆಗಳಲ್ಲಿ ವ್ಯಕ್ತಿಗತ ನಂಬಿಕೆಗಳನ್ನು ಗಟ್ಟಿಗೊಳಿಸುವ ಬೌದ್ಧಿಕ ಕ್ರಿಯೆಯಾಗುತ್ತದೆ.

ಭಾರತದ ಸನಾತನ-ಸಾಂಪ್ರದಾಯಿಕ ಸಮಾಜದಲ್ಲಿ ಇದಕ್ಕೆ ಸಂಸ್ಕಾರ ಎಂಬ ವಿಶಾಲ ಪದವನ್ನೂ ಜೋಡಿಸುವ ಪರಿಪಾಠವನ್ನು ಗುರುತಿಸಬಹುದು. ಸಾಂಪ್ರದಾಯಿಕ ಸಮಾಜದಲ್ಲಿ ಸುಸಂಸ್ಕೃತರಾಗಿ ಬೆಳೆಯುವುದೆಂದರೆ, ಬಾಹ್ಯ ಸಮಾಜವನ್ನು  ಮುಕ್ತ ಮನಸ್ಸಿನಿಂದ, ತೆರೆದ ಹೃದಯದಿಂದ ಅಪ್ಪಿಕೊಳ್ಳುವುದು ಎಂದಾಗುವುದಿಲ್ಲ. ವ್ಯತಿರಿಕ್ತವಾಗಿ ತಮ್ಮ ಕುಟುಂಬ-ಸಮುದಾಯದ ನಾಲ್ಕು ಗೋಡೆಗಳ ನಡುವೆ ಅನುಸರಿಸಲಾಗುವ, ಅನುಕರಿಸಲಾಗುವ ನಂಬಿಕೆಗಳನ್ನು ಶ್ರದ್ಧಾಪೂರ್ವಕವಾಗಿ ಒಪ್ಪಿಕೊಂಡು ಜೀವನದ ಮಾರ್ಗವಾಗಿ ಅಳವಡಿಸಿಕೊಳ್ಳುವುದು ಎಂದಾಗುತ್ತದೆ. ಶ್ರೇಣೀಕೃತ ಜಾತಿ ವ್ಯವಸ್ಥೆಯಲ್ಲಿ ಇದಕ್ಕೆ ಶ್ರೇಣೀಕರಣ ಶ್ರೇಷ್ಠ-ಕನಿಷ್ಠ ಎಂಬ ವರ್ಗೀಕರಣವೂ ಆತುಕೊಳ್ಳುವುದನ್ನು ಚಾರಿತ್ರಿಕವಾಗಿ ಗುರುತಿಸಬಹುದು. ನಂಬಿಕೆ ಮತ್ತು ಶ್ರದ್ಧೆ ವ್ಯಕ್ತಿಗತ ಬೌದ್ಧಿಕ ವಿಕಾಸಕ್ಕೆ ಒಂದು ಹಾದಿಯಲ್ಲಿ, ಒಂದು ಹಂತದವರೆಗೆ ನೆರವಾಗುತ್ತದೆ, ಆದರೆ ಸಾಂಪ್ರದಾಯಿಕ ಸಮಾಜದ ಭಿನ್ನ ಭೇದಗಳ ಕಾರಣಗಳಿಂದ ಇದು ವ್ಯಕ್ತಿಗಳಲ್ಲಿ ಎಲ್ಲರನ್ನೂ ಒಳಗೊಳ್ಳುವ-ಒಪ್ಪುವ ಮತ್ತು ʼ ಅನ್ಯ ʼ ವನ್ನೂ ಸ್ವೀಕರಿಸುವ ಸಮಾಜಮುಖಿ ಮನೋಭಾವವನ್ನು ಬೆಳೆಸುವುದಿಲ್ಲ.

ಅಧ್ಯಾತ್ಮ ಮತ್ತು ಧಾರ್ಮಿಕ ನಂಬಿಕೆಗಳು

ಈ ಅಧ್ಯಾತ್‌ ಕೇಂದ್ರಗಳೇ ಮನುಷ್ಯ ಜೀವಿಯನ್ನು ಒಂದು ನಿರ್ದಿಷ್ಟ ಕೋಶದೊಳಗೆ ಬಂಧಿಸುವ ಮೂಲಕ, ನಿರ್ದಿಷ್ಟ ತಾತ್ವಿಕ ನೆಲೆಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತಾ, ಸಾಂಸ್ಥಿಕ ಹಿತಾಸಕ್ತಿಗಳಿಗೆ ಪೂರಕವಾಗಿ ಬೆಳೆಯುವಂತೆ ಮಾಡುತ್ತದೆ. ಭಾರತದ ಸಾಂಪ್ರದಾಯಿಕ ಸಮಾಜದಲ್ಲಿ, ಮೋಕ್ಷ ಸಾಧನೆಯೇ ಮನುಷ್ಯ ಜೀವಿಯ ಆತ್ಯಂತಿಕ ಗುರಿಯಾಗಿರುವುದರಿಂದ, ಈ ಶ್ರದ್ಧಾನಂಬಿಕೆಗಳನ್ನು ದಾಟಿ ಹೋಗುವುದು ಮೋಕ್ಷದ ಹಾದಿಗೆ ಅಡ್ಡಿಯಾಗುತ್ತದೆ ಎಂಬ ಭಾವನೆ ದಟ್ಟವಾಗಿ ಬೇರೂರುವಂತೆ ಮಾಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಲಿತವೂ, ಜನಪ್ರಿಯವೂ ಆಗುತ್ತಿರುವ ಅಧ್ಯಾತ್ಮ ಕೇಂದ್ರಗಳು, ಆಧ್ಯಾತ್ಮಿಕತೆಗಿಂತಲೂ ಈ ಮನಸ್ಥಿತಿಯನ್ನು ಮತ್ತಷ್ಟು ಆಳಕ್ಕಿಳಿಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿರುವುದು ಗಮನಾರ್ಹ. ಇಲ್ಲಿ ಜಾತಿಭೇದದ ಗೋಡೆಗಳನ್ನು ತೊಡೆದುಹಾಕಿ, ಎಲ್ಲ ಸಮುದಾಯಗಳನ್ನೂ ಒಳಗೊಳ್ಳುವುದರಿಂದ, ತಳಸಮಾಜದ, ತಳಸಮುದಾಯದ, ಹೊರಗಿಡಲ್ಪಟ್ಟ ಜನಸಮೂಹಗಳಿಗೂ ಸಮಾನ ನೆಲೆ ಒದಗಿಸಲಾಗುತ್ತದೆ. ಹಾಗಾಗಿ ಇದು ಶ್ರದ್ಧಾನಂಬಿಕೆಗಳನ್ನು ಸಾರ್ವತ್ರೀಕರಿಸುವ ಕೇಂದ್ರಗಳಾಗಿ ಪರಿಣಮಿಸುತ್ತವೆ.

ಸೈಂಟಾಗೇ ಗುಮ್ಮಿದ DK Suresh | DK Shivakumar vs Siddaramaiah #pratidhvani

ಈ ಶ್ರದ್ಧಾನಂಬಿಕೆಗಳನ್ನೇ ಆಧರಿಸಿ, ಜನ ಸಾಮಾನ್ಯರು ವಿಶ್ವಾಸವಿರಿಸುವ ಅತೀತ-ಅತೀಂದ್ರಿಯ ಶಕ್ತಿಗಳನ್ನು ಭೌತಿಕವಾಗಿ ಸಮಾಜದ ನಡುವೆ ಜೀವಂತಿಕೆಯಿಂದಿರಿಸುವ ಸಲುವಾಗಿಯೇ ʼ ಆರಾಧನೆ ʼ ವಿಭಿನ್ನ ಮಾರ್ಗಗಳನ್ನು ಸ್ಥಾಪಿತ ಜಾತಿ-ಧರ್ಮಗಳು ರೂಪಿಸುತ್ತವೆ. ಇದು ಜನಪದ ಸಂಸ್ಕೃತಿಯಲ್ಲಿ ಕಾಣುವಷ್ಟೇ ಪ್ರಧಾನವಾಗಿ ಆಧುನಿಕೀಕರಣಗೊಂಡ ಸಮಾಜದಲ್ಲೂ ಕಾಣುತ್ತದೆ. ದೇವರನ್ನು ಅಥವಾ ದೈವೀಕ ಶಕ್ತಿಗಳನ್ನು ಮೂರ್ತರೂಪದಲ್ಲಿ ಪರಿಭಾವಿಸಿಕೊಂಡು, ಪ್ರತಿಮೆಗಳ ಮೂಲಕ ಸಮಾಜದ ನಡುವೆ ಸ್ಥಾಪಿಸುವುದೇ ಅಲ್ಲದೆ, ಇವುಗಳನ್ನು ಓಲೈಸುವ, ತೃಪ್ತಿಪಡಿಸುವ, ಸಂತೈಸುವ ಮತ್ತು ಆಶ್ರಯಿಸುವ ಮನುಷ್ಯ ಸಮಾಜದ ವರ್ತನೆಯನ್ನು ಆರಾಧನಾ ಸಂಸ್ಕೃತಿಯಲ್ಲಿ ಗುರುತಿಸಬಹುದು. ಇದನ್ನು ಇತಿಹಾಸದಲ್ಲಿ ಮಾನವ ಸಮಾಜಕ್ಕೆ ಒಂದು ಸಾಂತ್ವನದ ನೆಲೆಯನ್ನು, ಸಾತ್ವಿಕತೆಯನ್ನು ಮತ್ತು ಜೀವನ ದರ್ಶನವನ್ನು ನೀಡಿ, ಇಲ್ಲವಾಗಿರುವ ಸಂತರು, ಋಷಿಮುನಿಗಳು, ಯತಿಗಳಿಗೂ ವಿಸ್ತರಿಸುವುದನ್ನು ಗಮನಿಸಬೇಕಿದೆ.

ಉದಾಹರಣೆಗೆ ಮಂತ್ರಾಲಯದ ರಾಘವೇಂದ್ರ ಗುರುಗಳು, ಸಿಖ್‌-ಕ್ರೈಸ್ತ ಧರ್ಮಗುರುಗಳ ಸುತ್ತ ಆರಾಧನಾ ಸಂಸ್ಕೃತಿಯನ್ನು ಗಮನಿಸಬಹುದು. ನಿತ್ಯ ಬದುಕಿನಲ್ಲಿ,ವ್ಯಕ್ತಿಗತ ಕುಟುಂಬಗಳಲ್ಲಿ ಪೂಜೆ ಎನಿಸಿಕೊಳ್ಳುವ ಭಕ್ತಿ ಭಾವಗಳ ಅಭಿವ್ಯಕ್ತಿಯನ್ನೇ ಸಾಮಾಜೀಕರಿಸಿ (Socialise), ಸಾರ್ವತ್ರೀಕರಿಸಿ (Universalise) ಸಮಾಜದ ಎಲ್ಲ ಸ್ತರಗಳಲ್ಲೂ ಹರಡುವ ಒಂದು ಸಾಂಸ್ಥಿಕ ಕ್ರಿಯೆಯನ್ನು ಈ ಬೆಳವಣಿಗೆಗಳಲ್ಲಿ ಗುರುತಿಸಬಹುದು. ಆಗ ನಾಲ್ಕು ಗೋಡೆಗಳ ನಡುವೆ ಇರುವ ಭಕ್ತಿ-ಭಾವಗಳು ಸಮಾಜದ ನಡುವೆ ಒಂದು ಧ್ವನಿ ಪಡೆದುಕೊಳ್ಳುತ್ತವೆ. ಈ ಪ್ರಕ್ರಿಯೆಯ ಅತಿರೇಕಗಳನ್ನೂ ಹಲವು ಸಂದರ್ಭಗಳಲ್ಲಿ ನೋಡಿದ್ದೇವೆ. ಆರಾಧನಾ ಸಂಸ್ಕೃತಿಯಲ್ಲಿ ಶ್ರದ್ಧಾನಂಬಿಕೆಯುಳ್ಳ ಜನರಿಗೆ ತಾವು ದೈವೀಕರಿಸಿದ ಶಕ್ತಿಗಳನ್ನು ಅಥವಾ ವ್ಯಕ್ತಿಗಳನ್ನು ಆವಾಹಿಸಿಕೊಳ್ಳುವ, ಹತ್ತಿರದಿಂದ ಪೂಜಿಸುವ ಮತ್ತು ಸಂತೃಪ್ತರಾಗುವ ಅವಕಾಶವನ್ನು ಕಲ್ಪಿಸಲಾಗುತ್ತದೆ. ಈ ಸಂದರ್ಭಗಳಲ್ಲಿ ಭಕ್ತಿಯ ಪರಾಕಾಷ್ಠೆ, ಭಾವಾವೇಷ ಮತ್ತು ಸಾಕ್ಷಾತ್ಕರಿಸಿಕೊಳ್ಳುವ ಪ್ರಕ್ರಿಯೆಯನ್ನು ಸಾಂಸ್ಥಿಕ ನೆಲೆಗಳಲ್ಲಿ ಕಾಣಬಹುದು. ಇದು ಸಾಮಾನ್ಯವಾಗಿ ನಿತ್ಯ ಬದುಕಿನ ನೋವು ಸಂಕಟಗಳಿಗೆ ಈಡಾಗಿರುವ ಅಸಹಾಯಕ ಸಮಾಜವನ್ನು ಆಕರ್ಷಿಸುತ್ತದೆ. ಏಕೆಂದರೆ ಈ ಜನತೆಗೆ ಸಾಂತ್ವನ ಬೇಕಿರುತ್ತದೆ.

ಮುಂದುವರೆಯುತ್ತದೆ,,,,,,,

Tags: A world of devotionFaithpractice
Previous Post

ಸಂತೋಷ್‌ ಲಾಡ್‌ ಫೌಂಡೇಶನ್‌ ವತಿಯಿಂದ ಬುದ್ಧ, ಬಸವ ಮತ್ತು ಅಂಬೇಡ್ಕರ್‌ ವಿಚಾರ ಸಂಕಿರಣ

Next Post

CM Siddaramaiah: 500ನೇ ಕೋಟಿ ಮಹಿಳೆಗೆ ಸಾಂಕೇತಿಕವಾಗಿ ಟಿಕೆಟ್ ವಿತರಿಸಿದ ಸಿಎಂ..

Related Posts

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್
Top Story

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

by ಪ್ರತಿಧ್ವನಿ
March 4, 2026
0

ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ನಂ.1 ಮಾಡುವುದು ಶಿವಕುಮಾರ್ ಅವರ ಕನಸು: ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್.. ಮಾಗಡಿ : "ಮಾಗಡಿ ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದರು. ಬೆಂಗಳೂರು ದಕ್ಷಿಣ ಜಿಲ್ಲೆಗೆ...

Read moreDetails
“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

March 4, 2026
ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡೆ ಏನು..?

March 4, 2026
ಬಜೆಟ್‌ ಸಿದ್ಧತೆ : ಸರಣಿ ಸಭೆ ನಡೆಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌…

ಬಜೆಟ್‌ ಸಿದ್ಧತೆ : ಸರಣಿ ಸಭೆ ನಡೆಸಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌…

March 4, 2026
ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!

ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!

March 4, 2026
Next Post

CM Siddaramaiah: 500ನೇ ಕೋಟಿ ಮಹಿಳೆಗೆ ಸಾಂಕೇತಿಕವಾಗಿ ಟಿಕೆಟ್ ವಿತರಿಸಿದ ಸಿಎಂ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada