ಗಾಂಧಿನಗರ:(Gandhinagar) ಗುಜರಾತ್‌ನ Gujarat)ಅಮ್ರೇಲಿಯಲ್ಲಿ ದಾರುಣ ಘಟನೆಯೊಂದು ಸಂಭವಿಸಿದೆ. ಕೆಲವು ಕಾರ್ಮಿಕರು godown ಗೋಡೌನ್‌ನಲ್ಲಿ ಗೋದಿಯ ಮೂಟೆಗಳನ್ನು bags ಇಳಿಸುತ್ತಿದ್ದಾಗ (While unloading)ಈ ಅವಘಡ ಸಂಭವಿಸಿದೆ ಗೋದಿಯ ಮೂಟೆಗಳನ್ನು ಇಳಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಮೂಟೆಗಳು ಕಾರ್ಮಿಕರ ಮೇಲೆ ಬಿದ್ದಿವು.
ಗೋಣಿ ಚೀಲಗಳು ಕುಸಿದು ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, (One worker died)ನಾಲ್ವರು ಗಂಭೀರವಾಗಿ ಗಾಯಗೊಂಡಿರುವ (Four people were seriously injured)ಘಟನೆ ನಡೆದಿದೆ.
ಗೋಡೌನ್‌ನಲ್ಲಿ ಗೋಧಿಯ ಮೂಟೆಗಳನ್ನು ಇಳಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಮೂಟೆಗಳು ಕಾರ್ಮಿಕರ ಮೇಲೆ ಬಿದ್ದ ವಿಡಿಯೋ ಒಂದು ತುಂಬಾನೇ ವೈರಲ್ ಆಗುತ್ತಿದೆ.ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಅರ್ಚನಾ ಪುಷ್ಪೇಂದ್ರ ಎಂಬ ಹೆಸರಿನ ಬಳಕೆದಾರರು ಗೋಡೌನ್ ಒಂದರಲ್ಲಿ ನಡೆದಿರುವ ಅವಘಡದ 15 ಸೆಕೆಂಡ್‌ಗಳ ವಿಡಿಯೋ ಹಂಚಿಕೊಂಡಿದ್ದಾರೆ.
ವರದಿಗಳ ಪ್ರಕಾರ, ಮೂಟೆಗಳ ಅಡಿಯಲ್ಲಿ ಸಿಲುಕಿದ್ದ ಕಾರ್ಮಿಕರನ್ನು ರಕ್ಷಿಸಲು ತಕ್ಷಣವೇ ಧಾವಿಸಿದರು, ಆದರೆ ಅವರನ್ನು ಹೊರತೆಗೆಯುವ ವೇಳೆಗೆ ಒಬ್ಬ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದನು. ಗಾಯಾಳುಗಳನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
गेहूं की बोरियां उतारते समय हुआ हादसा
— Archana Pushpendra (@archanapsp) September 9, 2024
पांच मज़दूर दबे
एक की मौत चार घायल#Amreli pic.twitter.com/D6CZ7nsyeu
ಆರಂಭಿಕ ಪೊಲೀಸ್ ತನಿಖೆಯ ಪ್ರಕಾರ, ಗೋಧಿ ಚೀಲಗಳ ಅಸಮರ್ಪಕ ನಿರ್ವಹಣೆ ಮತ್ತು ಗೋಡೌನ್‌ನಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳ ಕೊರತೆಯಿಂದಾಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ವೇಳೆ ಐವರು ಕಾರ್ಮಿಕರು ಇದ್ದರು, ಚೀಲವನ್ನು ಇಳಿಸಲು ಯತ್ನಿಸಿದಾಗ ಕೆಳಭಾಗದಲ್ಲಿ ಒಬ್ಬರು ಜಾರಿಬಿದ್ದು ಕುಸಿತಕ್ಕೆ ಕಾರಣವಾಗಿದೆ. ಪೊಲೀಸರು ಮೃತ ಕಾರ್ಮಿಕನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.