• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 19, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪ್ರಜ್ವಲ್​ ಕೇಸ್​ನಲ್ಲಿ ಕೇಂದ್ರದ ಮೇಲೆ ಸಿಎಂ(CM) ಒತ್ತಡ ತಂತ್ರ..! ಮತ್ತೊಂದು ಪತ್ರ

Krishna Mani by Krishna Mani
May 23, 2024
in Top Story, ರಾಜಕೀಯ, ವಿದೇಶ, ಶೋಧ
0
ಪ್ರಜ್ವಲ್​ ಕೇಸ್​ನಲ್ಲಿ ಕೇಂದ್ರದ ಮೇಲೆ ಸಿಎಂ(CM) ಒತ್ತಡ ತಂತ್ರ..! ಮತ್ತೊಂದು ಪತ್ರ
Share on WhatsAppShare on FacebookShare on Telegram

ಪ್ರಜ್ವಲ್​ ರೇವಣ್ಣ(Prajwal Revanna) ವಿಡಿಯೋ ಕೇಸ್​ನಲ್ಲಿ ರಾಜ್ಯ ಸರ್ಕಾರ(State Government) ತನಿಖೆ ನಡೆಸುತ್ತಿದ್ದು, ಇಲ್ಲೀವರೆಗೂ ಪ್ರಜ್ವಲ್​ ರೇವಣ್ಣ ವಿಚಾರಣೆ ಸಾಧ್ಯವಾಗಿಲ್ಲ. ಎಸ್​ಐಟಿ ರಚನೆ ಆಗುವ ಮುನ್ನವೇ ದೇಶ ಬಿಟ್ಟು ತೆರಳಿರುವ ಸಂಸದ ಪ್ರಜ್ವಲ್​ ರೇವಣ್ಣ, SIT ರಚನೆ ಆದ ಬಳಿಕ ದೇಶಕ್ಕೆ ವಾಪಸ್​ ಆಗುವ ಮನಸ್ಸು ಮಾಡಿಲ್ಲ. ಡಿಪ್ಲೊಮ್ಯಾಟಿಕ್​ ಪಾಸ್​ಪೋರ್ಟ್ ಬಳಸಿ ಸಂಚಾರ ಮಾಡುತ್ತಿರುವ ಕಾರಣಕ್ಕೆ ಪ್ರಜ್ವಲ್​ ರೇವಣ್ಣ ಅವರನ್ನು ತಡೆಯುವುದಕ್ಕೆ ಹಾಗು ಬಂಧಿಸುವುದಕ್ಕೆ ತಡೆ ಆಗ್ತಿದೆ ಅನ್ನೋದು ರಾಜ್ಯ ಸರ್ಕಾರದ ಆರೋಪ. ಇದೇ ಕಾರಣಕ್ಕೆ ಪ್ರಜ್ವಲ್​ ರೇವಣ್ಣ ಬಳಸುತ್ತಿರುವ ಡಿಪ್ಲೊಮ್ಯಾಟಿಕ್​ ಪಾಸ್​ಪೋರ್ಟ್​(Diplomatic Passport) ರದ್ದು ಮಾಡುವಂತೆ ಕೇಂದ್ರದ(Center) ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತಿದೆ.

ADVERTISEMENT

ಪ್ರಧಾನಿ ನರೇಂದ್ರ ಮೋದಿಗೆ(Narendra Modi) ಈಗಾಗಲೇ ಒಮ್ಮೆ ಪತ್ರವೊಂದನ್ನು ಬರೆದಿದ್ದ ಸಿಎಂ ಸಿದ್ದರಾಮಯ್ಯ, ಇದೀಗ ಮತ್ತೊಮ್ಮೆ ಕೇಂದ್ರ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ(CM Siddaramaiah) ನರೇಂದ್ರ ಮೋದಿಗೆ ಮತ್ತೊಂದು ಪತ್ರ ಬರೆದಿದ್ದು, ಕೂಡಲೇ ಸಂಸದ ಪ್ರಜ್ವಲ್ ರೇವಣ್ಣ(Prajwal Revanna) ಬಳಸುತ್ತಿರುವ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದು ಮಾಡುವಂತೆ ಆಗ್ರಹ ಮಾಡಲಾಗಿದೆ. ಪೆನ್​ಡ್ರೈವ್​ ಕೇಸ್​ ಬಳಿಕ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಪ್ರಜ್ವಲ್​ ರೇವಣ್ಣನನ್ನು ವಾಪಸ್​ ಕರೆತರುವ ನಮ್ಮ ಪ್ರಯತ್ನಕ್ಕೆ ಸಮಸ್ಯೆ ಆಗಿದೆ. ಕೂಡಲೇ ಡಿಪ್ಲೊಮ್ಯಾಟಿಕ್​ ಪಾಸ್​ಪೋರ್ಟ್​ ರದ್ದು(Diplomatic Passport) ಮಾಡಿ ಎಂದು ಆಗ್ರಹ ಮಾಡಿದ್ದಾರೆ.

ಈಗಾಗಲೇ ಪೆನ್​ಡ್ರೈವ್ ಪ್ರಕರಣದ ಬಗ್ಗೆ ತನಿಖೆ(Investigation) ನಡೆಯುತ್ತಿದೆ. ಆರೋಪಿಯನ್ನು ವಿಚಾರಣೆ ಮಾಡಬೇಕಿದೆ. ನ್ಯಾಯಸಮ್ಮತ(Legitimate) ವಿಚಾರಣೆಗೆ ಆರೋಪಿ ಹಾಜರಿ ಮುಖ್ಯವಾಗಿದೆ. ನಾನು ಈಗಾಗಲೇ ಒಮ್ಮೆ ಈ ವಿಚಾರದಲ್ಲಿ ಪತ್ರ ಬರೆದು ಮನವಿ ಮಾಡಿದ್ದೆ. ಇದೀಗ ಮತ್ತೊಮ್ಮೆ ಪತ್ರ ಬರೆದು ಗಮನ ಸೆಳೆಯುವ ಕೆಲಸ ಮಾಡುತ್ತಿದ್ದೇನೆ. ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿ(Accused) ಪ್ರಜ್ವಲ್ ರೇವಣ್ಣನನ್ನು ವಾಪಸ್​ ಕರೆತರಲು ಕೇಂದ್ರದ ಸಂಸ್ಥೆಗಳ ಸಹಾಯ ಅಗತ್ಯವಿದೆ. ಡಿಪ್ಲೊಮ್ಯಾಟಿಕ್​ ಪಾರ್ಸ್​ಪೋರ್ಟ್​ ಬಳಸುತ್ತಿರುವುದು ಆರೋಪಿಯನ್ನು ಕರೆತರಲು ಸಾಧ್ಯವಾಗಿಲ್ಲ ಎಂದಿದ್ದಾರೆ.

ತನಿಖೆ ನಡೆಸುತ್ತಿರುವ ಎಸ್​ಐಟಿ ಅಧಿಕಾರಿಗಳು(Officers) ಕೇಂದ್ರ ಸಂಸ್ಥೆಗಳಿಗೆ ಪತ್ರ ಬರೆದು ಅವಶ್ಯಕತೆ ಇರುವ ವಿಚಾರವನ್ನು(Idea) ಗಮನಕ್ಕೆ ತರುವುದು ಅಗತ್ಯ. ಇದನ್ನು ಈಗಾಗಲೇ ಎಸ್​ಐಟಿ ಅಧಿಕಾರಿಗಳೂ ಕೂಡ ಮಾಡಿದ್ದಾರೆ. ಆದರೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆಯುವ ಕೆಲಸ ಮಾಡುತ್ತಿರುವುದರಲ್ಲಿ ತಪ್ಪೇನು ಇಲ್ಲ ಎನಿಸುತ್ತದೆ. ತನಿಖೆಯ ಅಗತ್ಯತೆ ಬಗ್ಗೆ ಮನವರಿಕೆ ಮಾಡುವ ಕೆಲಸ ಮಾಡಿದ್ದಾರೆ. ಪ್ರಜ್ವಲ್​ ರೇವಣ್ಣ ಇಂದಲ್ಲ ನಾಳೆ ರಾಜ್ಯಕ್ಕೆ ಬಂದೇ ಬರುತ್ತಾರೆ. ವಿದೇಶದಲ್ಲೇ(Abroad) ಅಡಗಿ ಕೂರುವುದು ಸಾಧ್ಯವಿಲ್ಲ. ಆದರೆ ಆದಷ್ಟು ಬೇಗ ಕರೆತರಬೇಕು ಎನ್ನುವುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ. ಸಿದ್ದರಾಮಯ್ಯ ಪತ್ರಕ್ಕೆ(Letter) ಈ ಹಿಂದೆ ಪ್ರತ್ಯುತ್ತರ ನೀಡದ ಪ್ರಧಾನಿ ಮೋದಿ ಈ ಪತ್ರಕ್ಕೆ ಉತ್ತರ(Answer) ಕೊಡ್ತಾರಾ ಕಾದು ನೋಡ್ಬೇಕು.

ಕೃಷ್ಣಮಣಿ

Prajwal Reavanna
Siddramaiah
Narendra Modi
Cm Letter
SIT

Tags: #bhavanirevanna#Cmsiddaramaiah #Karnatakapolitics #Bjp #NarendramodiBJPCongress PartyHdKumaraswamyPrjwal Revannaಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಮಕ್ಕಳ ನೆರವೂ ಸಹ ಇಲ್ಲದ ಅಸಹಾಯಕ ಮಹಿಳೆಯೊಬ್ಬರು ಕರ್ನಾಟಕ ಸರ್ಕಾರದ ಗೃಹ ಲಕ್ಷ್ಮಿ ಯೋಜನೆಯಿಂದ…!

Next Post

ಪೋಲಿಸರ ವರ್ತನೆಗೆ ಕೇಸರಿ ನಾಯಕರು ಕಿಡಿ ! ವಿಚಾರಣೆಗೆ ಹಾಜರಾದ ಹರೀಶ್ ಪೂಂಜ !

Related Posts

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..
Top Story

​ಕನ್ನಡಿಗ ರಾಹುಲ್​ ಅಬ್ಬರಕ್ಕೆ ಮಣಿದ ಆರ್​ಸಿಬಿ ; ಡೆಲ್ಲಿಗೆ ರೋಚಕ ಜಯ..

by ಪ್ರತಿಧ್ವನಿ
April 18, 2026
0

ಬೆಂಗಳೂರು : ಐಪಿಎಲ್ 2026ರ 26ನೇ ಪಂದ್ಯ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ರೋಚಕ ಪಂದ್ಯದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್...

Read moreDetails
ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

ನವೀಕರಿಸಬಹುದಾದ ಇಂಧನದಲ್ಲಿ ಭಾರತದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರುವುದು ಹೆಮ್ಮೆಯ ಸಂಗತಿ : ಸಿಎಂ ಸಂತಸ..

April 18, 2026
ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

ಜಿಬಿಎ ಚುನಾವಣೆ ಗೊಂದಲ: ಅಂತಿಮ ಮತದಾರರ ಪಟ್ಟಿ ಪ್ರಕಟ

April 18, 2026
ಮಹಿಳಾ ಮೀಸಲಾತಿ ವಿವಾದ ತೀವ್ರ: ಮಸೂದೆ ಸೋಲಿಗೆ ಕಾರಣವೇನು? ಕಾಂಗ್ರೆಸ್-ಬಿಜೆಪಿ ತರ್ಕ

ಮಹಿಳಾ ಮೀಸಲಾತಿ ವಿವಾದ ತೀವ್ರ: ಮಸೂದೆ ಸೋಲಿಗೆ ಕಾರಣವೇನು? ಕಾಂಗ್ರೆಸ್-ಬಿಜೆಪಿ ತರ್ಕ

April 18, 2026
ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

ಕಾಂಗ್ರೆಸ್, ಡಿಎಂಕೆ ಮೈತ್ರಿಯು 40 ವರ್ಷಗಳ ಇತಿಹಾಸ ಹೊಂದಿದೆ : ದ್ರಾವಿಡ ನೆಲದಲ್ಲಿ ಮೋದಿ ವಿರುದ್ಧ ಗುಡುಗಿದ ಡಿಕೆಶಿ..

April 18, 2026
Next Post
ಪೋಲಿಸರ ವರ್ತನೆಗೆ ಕೇಸರಿ ನಾಯಕರು ಕಿಡಿ ! ವಿಚಾರಣೆಗೆ ಹಾಜರಾದ ಹರೀಶ್ ಪೂಂಜ !

ಪೋಲಿಸರ ವರ್ತನೆಗೆ ಕೇಸರಿ ನಾಯಕರು ಕಿಡಿ ! ವಿಚಾರಣೆಗೆ ಹಾಜರಾದ ಹರೀಶ್ ಪೂಂಜ !

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada