ಬೆಂಗಳೂರು: ಶೀಘ್ರದಲ್ಲೇ ಬೆಂಗಳೂರಿನಲ್ಲಿ ಶೋ ರೂಂ ತೆರೆಯುವುದಾಗಿ ವಿದ್ಯುತ್‌ಚಾಲಿತ ಕಾರು ತಯಾರಿಕಾ ಕಂಪನಿ ‘ಟೆಸ್ಲಾ’ ಮಾಹಿತಿ ಹಂಚಿಕೊಂಡಿದೆ.
ತನ್ನ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಟೆಸ್ಲಾ ಆಡಳಿತ ‘ಶೀಘ್ರದಲ್ಲೇ ನಮ್ಮ ಬೆಂಗಳೂರಿನಲ್ಲಿ ಕಾಣುತ್ತೇನೆ’ ಎಂದು ಬರೆದುಕೊಂಡಿದೆ
ಬೆಂಗಳೂರಲ್ಲಿ ಶೋರೂಂ ಪ್ರಾರಂಭದ ಮೂಲಕ ಟೆಸ್ಲಾ ಭಾರತದಲ್ಲಿ ನಾಲ್ಕನೇ ಶೋ ರೂಂ ತೆರೆಯಲಿದೆ. ಈಗಾಗಲೇ ದೆಹಲಿ, ಮುಂಬೈ ಹಾಗೂ ಗುರುಗ್ರಾಮದಲ್ಲಿ ಟೆಸ್ಲಾ ಶೋ ರೂಂಗಳಿವೆ.
ಅಮೇರಿಕನ್ EV ತಯಾರಕ ಕಂಪನಿಯು ಭಾರತದಲ್ಲಿ ತನ್ನ ಮೊದಲ ಚಾರ್ಜಿಂಗ್ ಸ್ಟೇಷನ್ ಪ್ರಾರಂಭಿಸಿದ ಕೆಲವೇ ವಾರಗಳ ನಂತರ ಈ ಘೋಷಣೆ ಬಂದಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ, ಗುರುಗ್ರಾಮ್‌ನಲ್ಲಿರುವ DLF ಹೊರೈಜನ್ ಕೇಂದ್ರದಲ್ಲಿ ಚಾರ್ಜಿಂಗ್ ಸೌಲಭ್ಯವನ್ನು ಸ್ಥಾಪಿಸಿರುವುದಾಗಿ ಟೆಸ್ಲಾ ಹೇಳಿಕೊಂಡಿತ್ತು. ಇದು ಭಾರತದಲ್ಲಿ ಚಾರ್ಜಿಂಗ್ ಮೂಲಸೌಕರ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ನಮ್ಮ ಬದ್ಧತೆಯನ್ನು ಸೂಚಿಸುತ್ತದೆ. ಇದು ಗ್ರಾಹಕರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿದೆ ಎಂದು ಟೆಸ್ಲಾ ಹೇಳಿಕೊಂಡಿತ್ತು.
ಭಾರತದಲ್ಲಿ ಟೆಸ್ಲಾ ತ್ವರಿತ ವಿಸ್ತರಣೆಯ ಮಧ್ಯೆ ಬೆಂಗಳೂರಿನ ಶೋರೂಂ ಘೋಷಣೆ ಬಂದಿದೆ. EV ತಯಾರಕ ಕಂಪನಿಯು ಇತ್ತೀಚೆಗೆ ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ (BKC) ಪಾದಾರ್ಪಣೆ ಮಾಡಿದ ವಾರಗಳ ನಂತರ ತನ್ನ ಎರಡನೇ ಶೋರೂಮ್ ನ್ನು ದೆಹಲಿಯ ಏರೋಸಿಟಿಯಲ್ಲಿರುವ ವರ್ಲ್ಡ್‌ಮಾರ್ಕ್ 3 ನಲ್ಲಿ 8,200 ಚದರ ಅಡಿ ಅನುಭವ ಕೇಂದ್ರವನ್ನು ಪ್ರಾರಂಭಿಸಿತ್ತು.
ಬೆಂಗಳೂರಿನಲ್ಲಿ ಟೆಸ್ಲಾ ಶೋರೂಂ ಓಪನ್ ಆಗುತ್ತಿರುವುದು ಕಾರ್ ಪ್ರಿಯರಲ್ಲಿ ಉತ್ಸಾಹ ಮೂಡಿಸಿದೆ












