ಸಾಮಾನ್ಯವಾಗಿ ಮನುಷ್ಯರು ಕಾಣೆಯಾದರೆ ಪೊಲೀಸ್ ಠಾಣೆಗೆ ತೆರಳಿ ಕೇಸು ದಾಖಲು ಮಾಡುವುದು ಮಾಮೂಲಿ. ಆದರೆ ಇಲ್ಲೊಂದು ಕಡೆ ಬೆಕ್ಕು ಕಳ್ಳತನವಾಗಿದೆ ಎಂದು ಎಫ್‌ಐಆರ್ ದಾಖಲಾಗಿದೆ. ತಿಲಕ್ ನಗರ ಠಾಣೆಯಲ್ಲಿ ಬೆಕ್ಕು ಕಳ್ಳತನದ ಬಗ್ಗೆ ಕೇಸ್ ದಾಖಲಾಗಿದ್ದು, ಜಯನಗರದ ರಾಜಣ್ಣ ಲೇಔಟ್ ನಿವಾಸಿ ಮಿಸ್ಬಾ ಶರೀಫ್ ಎಂಬುವರಿಂದ ದೂರು ನೀಡಿದ್ದಾರೆ. ದುಬಾರಿ ಬೆಲೆಯ ಬೆಕ್ಕು ಜನವರಿ 15 ರಂದು ಕಣ್ಮರೆಯಾಗಿದೆ. ದುಷ್ಕರ್ಮಿಗಳು ಮೇಲ್ಚಾವಣಿಯಿಂದ ಬಂದು ಬೆಕ್ಕನ್ನು ಕಳ್ಳತನ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ ಬೆಕ್ಕು ಹುಡುಕಿ ಕೊಟ್ಟವರಿಗೆ ಬಹುಮಾನ ಘೋಷಿಸಿ, 35 ಸಾವಿರ ಬಹುಮಾನ ಕೊಡುವುದಾಗಿಯೂ ಮಾಲಿಕ ತಿಳಿಸಿದ್ದಾರೆ.
ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ
ಮಾರ್ಗದ ಉದ್ದಕ್ಕೂ ಜನರೊಂದಿಗೆ ಬೆರೆತ ಸಚಿವದ್ವಯರು; ಲೆವೆಲ್ ಕ್ರಾಸಿಂಗ್, ಅಂಡರ್ ಪಾಸ್, ಮೇಲು ಸೇತುವೆ ಬಗ್ಗೆ ಬೇಡಿಕೆಗಳ ಸುರಿಮಳೆ. ಇನ್ನಷ್ಟು ಡೆಮೋ ರೈಲು ಸಂಚಾರ ಮತ್ತು ಪ್ರಮುಖ...
Read moreDetails



