ಶನಿವಾರವಷ್ಟೇ ಭಾರತೀಯ ಚುನಾವಣಾ ಆಯೋಗವು ಹೆಚ್ಚುತ್ತಿರುವ ಸೋಂಕಿನ ನಡುವೆಯೂ ಪಂಚರಾಜ್ಯ ಚುನಾವಣೆಗಳ ದಿನಾಂಕವನ್ನ ಘೋಷಿಸಿತ್ತು. ಅಧಿಸೂಚನೆ ಹೊರಬೀಳುತ್ತಿದ್ದಂತೆ ರಾಷ್ಟೀಯ ಹಾಗೂ ಪ್ರಾದೇಶಿಕ ಪಕ್ಷಗಳು ತಮ್ಮದೇ ಆದ ತಂತ್ರಗಾರಿಕೆ ಹೆಣೆಯುವುದರಲ್ಲಿ ತೊಡಗಿವೆ.
ಈ ಮಧ್ಯೆ ದ್ವೇಷವನ್ನು ಸೋಲಿಸಲು 2022ರ ಪಂಚರಾಜ್ಯ ಚುನಾವಣೆ ಸೂಕ್ತ ಸಮಯ ಎಂದು ಕಾಂಗ್ರೆಸ್ ನಾಯಕ ಟ್ವೀಟ್ ಮಾಡಿದ್ದಾರೆ. ಉತ್ತರಪ್ರದೇಶ ಸೇರಿದಂತೆ ಐದು ರಾಜ್ಯಗಳಿಗೆ ಫೆಬ್ರವರಿ 10ರಿಂದ-ಮಾರ್ಚ್07ರವರೆಗೆ ಏಳು ಹಂತಗಳಲ್ಲಿ ನಡೆಯಲಿದೆ. ಮಾರ್ಚ್ 10ರಂದು ಪಲಿತಾಂಶ ಹೊರಬೀಳಲಿದೆ.
ಉತ್ತರಪ್ರದೇಶ, ಉತ್ತರಾಖಂಡ್, ಪಂಜಾಬ್, ಗೋವಾ ಹಾಗೂ ಮಣಿಪುರ ರಾಜ್ಯಗಳ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ.






