• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿಡಿಯೋ

ಮಲೆನಾಡಿನ ನಕ್ಸಲ್ ಚಳವಳಿಗೆ ಕೊನೆ ಮೊಳೆ, ತಿಥಿ ಮುಗಿದ ಮೇಲೆ ಪ್ರಭಾ ಪ್ರತ್ಯಕ್ಷ..!

Any Mind by Any Mind
December 21, 2021
in ವಿಡಿಯೋ
0
Share on WhatsAppShare on FacebookShare on Telegram

ನಕ್ಸಲ್‌‌‌‌‌‌‌ ಅಟ್ಟಹಾಸ ಮಲೆನಾಡಿನಲ್ಲಿ ಅದರಲ್ಲೂ ಪಶ್ಚಿಮ ಘಟ್ಟದಲ್ಲಿ ಬಹುತೇಖ ಮುಕ್ತಾಯ ಹಂತ ತಲುಪಿದೆ. ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಜನ್ಮತಳೆದ ನಕ್ಸಲ್‌ ಮುಖಂಡರು ಈಗಾಗಲೇ ಸಾಕಷ್ಟು ಜನ ಮುಖ್ಯವಾಹಿನಿಗೆ ಬಂದಿದ್ದರು. ಇನ್ನು ಕೆಲವರು ಕೇರಳ, ತಮಿಳುನಾಡಿನ ಕಾಡುಗಳಲ್ಲಿ ಅಲೆಯುತ್ತಿರು. ಅವರೆಲ್ಲಾ ಈಗ ಒಬ್ಬೊಬ್ಬರಾಗಿ ಸೆರೆ ಸಿಗುತ್ತಿದ್ದಾರೆ ಹಾಗೂ ಪೊಲೀಸರ ಮುಂದೆ ಹಾಜರಾಗುತ್ತಿದ್ದಾರೆ. ಕೇವಲ ಎರಡು ತಿಂಗಳ ಅವಧಿಯಲ್ಲಿ ಮಲೆನಾಡಿನ ಪ್ರಮುಖ ನಕ್ಸಲ್ ನಾಯಕರು ಪೊಲೀಸರ ಬಲೆಗೆ ಬಿದ್ದಿದ್ದರೆ.

ADVERTISEMENT

ಕಳೆದ ಹನ್ನೊಂದು ವರ್ಷದ ಹಿಂದೆ ಆಗುಂಬೆಯ ಹೊಸಗದ್ದೆಯ ಪ್ರಭಾ ಮೃತಪಟ್ಟಿದ್ದಾಳೆ ಎಂದು ಹೇಳಲಾಗಿತ್ತು. ಆದರೆ ಆಕೆ ಈಗ ತಮಿಳು ನಾಡು ಪೊಲೀಸರಿಗೆ ಶರಣಾಗಿದ್ದಾಳೆ. ಈ ಮೂಲಕ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಭಾಗದಲ್ಲಿ ನಕ್ಸಲ್ ಚಟುವಟಿಕೆಯ ಕಿಚ್ಚುಹಚ್ಚಿದ್ದ ಪ್ರಮುಖ ನಾಯಕರುಗಳು ಇದೀಗ ಪೊಲೀಸರ ವಶದಲ್ಲಿದ್ದಾರೆ. ಹೀಗಾಗಿ ಮಲೆನಾಡಿನ ನಕ್ಸಲ್ ಚಟುವಟಿಕೆಗೆ ಕೊನೆ ಮೊಳೆ ಬಿದ್ದಿದೆ ಎಂದೇ ಹೇಳಲಾಗುತ್ತಿದೆ. ಆದರೆ ವಿಕ್ರಂ ಗೌಡನನ್ನು ಮಾತ್ರ ಪೊಲೀಸರಿಗೆ ಇದುವರೆಗೆ ಬಂಧಿಸಲು ಸಾಧ್ಯವಾಗಿಲ್ಲ.

2002ರಿದಂಲೂ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಯ ಸಂಗಮದ ಸ್ಥಳಗಳಲ್ಲಿ ನಕ್ಸಲ್ ಚಟುವಟಿಕೆ ಎಲ್ಲೆ ಮೀರಿತ್ತು. ಪೊಲೀಸರ ಮೇಲೆಯೇ ನಕ್ಸಲರು ದಾಳಿ ನಡೆಸಲಾರಂಭಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಸಾಲು ಸಾಲು ಎನ್ ಕೌಂಟರ್ ನಡೆಸುವ ಮೂಲಕ ನಕ್ಸಲರನ್ನು ಸದೆಬಡಿಯುವ ಕೆಲಸ ಮಾಡಿದ್ದರು. ಆದರೆ ಇದೇ ವೇಳೆಗೆ ಇನ್ನಷ್ಟು ಉಗ್ರರಾದ ನಕ್ಸಲರು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರನ್ನು ಬಲಿಪಡೆದಿದ್ದರು. ಬಳಿಕ ಎಎನ್ ಎಸ್ ಹಾಗೂ ಎಎನ್ ಎಫ್ ಕಾರ್ಯಾಚರಣೆ ಆರಂಭಿಸಿದ ಬಳಿಕ ನಕ್ಸಲರು ಕರ್ನಾಟಕದ ಮಲೆನಾಡನ್ನು ತೊರೆದಿದ್ದರು. ಆದರೆ ಆಗಾಗ ನಕ್ಸಲ್ ಬ್ಯಾನರ್ ಗಳು ಮಾತ್ರ ಕಾಣಸಿಗುತ್ತಿದ್ದವು.

ಮೆಣಸಿನ ಹಾಡ್ಯದಲ್ಲಿ ಸಾಕೇತ್ ರಾಜನ್ ಶೂಟೌಟ್ ಆದ ಬಳಿಕ ಮಲೆನಾಡಿನ ನಕ್ಸಲ್ ಚಟುವಟಿಕೆಗಳು ಕುಂದಲಾರಂಭಿಸಿದವು. ಆದರೆ ಬಳಿಕ ಮನೋಹರ್ ಹಾಗೂ ನವೀನ್ ಎನ್ ಕೌಟಂರ್ ಬಳಿಕ ನಕ್ಸಲ್ ಚಟುವಟಿಕೆ ತಣ್ಣಗಾಗಿತ್ತು. ಆದರೆ ಬಿ.ಜಿ.ಕೃಷ್ಣಮೂರ್ತಿ ಹಾಗೂ ಹೊಸಗದ್ದೆ ಪ್ರಭಾ ತೆರೆಮರೆಯಲ್ಲಿದ್ದೇ ನಕ್ಸಲ್ ಚಟುವಟಿಕೆಯನ್ನು ಮುನ್ನಡೆಸುತ್ತಿದ್ದರಲ್ಲದೆ, ತಲ್ಲೂರಂಗಡಿಯಲ್ಲಿ ಬಸ್ಸಿಗೂ ಬೆಂಕಿ ಹಚ್ಚಿದ್ದರು. ಜೊತೆಗೆ ಸ್ಫೋಟಕವನ್ನಿಟ್ಟು ಫಾರೆಸ್ಟ್ ಚೆಕ್ ಪೋಸ್ಟನ್ನು ಧ್ವಂಸಗೊಳಿಸಿದ್ದರು. ಅಂದಿನಿಂದಲೂ ಈ ಇಬ್ಬರು ನಕ್ಸಲ್ ಮುಖಂಡರು ತೆರೆಮರೆಯಿಂದಲೇ ತಮ್ಮ ಕೆಲಸ ಮುಂದುವರಿಸಿದ್ದರು.

ಮಲೆನಾಡಿನಲ್ಲಿ ಪೊಲೀಸರ ಕಾರ್ಯಾಚರಣೆ ಹೆಚ್ಚಾದ ಹಿನ್ನೆಲೆಯಲ್ಲಿ ಈ ಇಬ್ಬರೂ ಮಲೆನಾಡನ್ನು ತೊರೆದು ಕೇರಳ ಸೇರಿದ್ದರು. ಆದರೆ ಕೇರಳದಲ್ಲಿಯೇ ನಕ್ಸಲ್ ನಾಯಕ ಎರಡು ತಿಂಗಳ ಹಿಂದೆ ಸೆರೆಸಿಕ್ಕಿದ್ದ, ಇದೀಗ ಕೃಷ್ಣಮೂರ್ತಿ ಪತ್ನಿ 2010ರಲ್ಲಿಯೇ ಮೃತಪಟ್ಟಿದ್ದಾಳೆ ಎನ್ನಲಾಗಿದ್ದ ಹೊಸಗದ್ದೆ ಪ್ರಭ ಇದೀಗ ತಮಿಳುನಾಡು ಪೊಲೀಸರ ಎದುರು ಶರಣಾಗಿದ್ದಾಳೆ. ಹೀಗಾಗಿ ನಕ್ಸಲ್ ಸಂಘಟನೆಯ ಮಲೆನಾಡಿನ ಪ್ರಮುಖ ಕೊಂಡಿಗಳು ಇದೀಗ ಕಟ್ ಆದಂತಾಗಿದೆ. ಆದರೆ ವಿಕ್ರಂ ಗೌಡ ಮಾತ್ರ ಇನ್ನು ಪೊಲೀಸರಿಗೆ ಸಿಕ್ಕಿಲ್ಲ. ಹೀಗಾಗಿ ಈತ ಮತ್ತೆ ಮಲೆನಾಡನಲ್ಲಿ ನಕ್ಸಲ್ ಸಂಘಟನೆ ಸಕ್ರಿಯಗೊಳಿಸುತ್ತಿದ್ದಾನೆಯೇ ಎಂಬ ಅನುಮಾನ ಎಲ್ಲರಲ್ಲಿಯೂ ಆರಂಭಗೊಂಡಿದೆ.

ಕೇರಳ, ತಮಿಳು ನಾಡು ಹಾಗೂ ಆಂಧ್ರದಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರ ಕಾರ್ಯಾಚರಣೆಯೂ ಹೆಚ್ಚಾಗಿದೆ. ಹೀಗಾಗಿ ನಕ್ಸಲರು ಈ ರಾಜ್ಯಗಳನ್ನು ಬಿಡಬೇಕು, ಇಲ್ಲವೇ ಪೊಲೀಸರಿಗೆ ಸಿಕ್ಕಿಬೀಳಬೇಕು ಅಥವಾ ಶರಣಾಗಬೇಕು ಎಂಬ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ವಿಕ್ರಂ ಗೌಡ ತನ್ನ ಹಿಂದಿನ ಆವಾಸ ಸ್ಥಾನವಾದ ಮಲೆನಾಡಿಗೆ ಮರಳಿದರೂ ಆಶ್ಚರ್ಯವಿಲ್ಲ ಎನ್ನುವ ಮಾತುಗಳು ಕೇಳಿಬರಲಾರಂಭಿಸಿವೆ. ಒಂದು ವೇಳೆ ವಿಕ್ರಂ ಗೌಡ ತನ್ನ ನೆಲೆಯನ್ನು ಮಲೆನಾಡಿಗೆ ಬದಲಿಸಿದರೂ ಇಲ್ಲಿ ಮತ್ತೆ ಅಧಿಪತ್ಯ ಸಾಧಿಸುವುದು ಅಷ್ಟು ಸುಲಭವಿಲ್ಲ. ಏಕೆಂದರೆ ಇನ್ನೂ ಎಎನ್ ಎಸ್ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ನಕ್ಸಲರ ಬಗ್ಗೆ ಒಲವು ಹೊಂದಿರುವವ ಸಂಖ್ಯೆಯೂ ಇದೀಗ ಗಣನೀಯವಾಗಿ ತಗ್ಗಿದೆ.

Tags: agumbeKaranatakaKeralaNAXALSShivamoggaTamilnaduvideo
Previous Post

MES ಸಂಘಟನೆಯನ್ನು ನಿಷೇಧಿಸುವಂತೆ ಆಗ್ರಹಿಸಿ ಜೈ ಭೀಮ ಯುವ ಸೇನೆ ಕಾರ್ಯಕರ್ತರಿಂದ ಪ್ರತಿಭಟನೆ

Next Post

`ಮನೆಯಲ್ಲಿ ಆಮ್ಲಜನಕ ತಯಾರಿಸುವುದು ಹೇಗೆ’? : 2021 ರಲ್ಲಿ ಭಾರತೀಯರ ಅಗ್ರ ಗೂಗಲ್ ಹುಡುಕಾಟ

Related Posts

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್
Top Story

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
April 9, 2026
0

ಮಾರ್ಗದ ಉದ್ದಕ್ಕೂ ಜನರೊಂದಿಗೆ ಬೆರೆತ ಸಚಿವದ್ವಯರು; ಲೆವೆಲ್ ಕ್ರಾಸಿಂಗ್, ಅಂಡರ್ ಪಾಸ್, ಮೇಲು ಸೇತುವೆ ಬಗ್ಗೆ ಬೇಡಿಕೆಗಳ ಸುರಿಮಳೆ. ಇನ್ನಷ್ಟು ಡೆಮೋ ರೈಲು ಸಂಚಾರ ಮತ್ತು ಪ್ರಮುಖ...

Read moreDetails

RCB ಟಿಕೆಟ್ ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್..

March 27, 2026
ರಾಜ್ಯದಲ್ಲಿ ರೈತರ ಮೇಲೆ ಲಾಠಿ ಚಾರ್ಜ್ ಕೇಂದ್ರದಲ್ಲಿ ರೈತರನ್ನ ಸಾ**..!

ರಾಜ್ಯದಲ್ಲಿ ರೈತರ ಮೇಲೆ ಲಾಠಿ ಚಾರ್ಜ್ ಕೇಂದ್ರದಲ್ಲಿ ರೈತರನ್ನ ಸಾ**..!

March 14, 2026

ವಿಧಾನಸಭೆ ಬಜೆಟ್ ಅಧಿವೇಶನ ನೇರಪ್ರಸಾರ..!

March 12, 2026
ನನ್ನ ತಂದೆ ಕನಸು ಕಂಡಿದ್ರು, ನಾನು ನನಸು ಮಾಡಿದ್ದೇನೆ

ನನ್ನ ತಂದೆ ಕನಸು ಕಂಡಿದ್ರು, ನಾನು ನನಸು ಮಾಡಿದ್ದೇನೆ

March 8, 2026
Next Post
`ಮನೆಯಲ್ಲಿ ಆಮ್ಲಜನಕ ತಯಾರಿಸುವುದು ಹೇಗೆ’? : 2021 ರಲ್ಲಿ ಭಾರತೀಯರ ಅಗ್ರ ಗೂಗಲ್ ಹುಡುಕಾಟ

`ಮನೆಯಲ್ಲಿ ಆಮ್ಲಜನಕ ತಯಾರಿಸುವುದು ಹೇಗೆ'? : 2021 ರಲ್ಲಿ ಭಾರತೀಯರ ಅಗ್ರ ಗೂಗಲ್ ಹುಡುಕಾಟ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada