• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 28, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿಡಿಯೋ

ಸಣ್ಣ ಪುಟ್ಟ ವ್ಯಾಪಾರಸ್ಥರ ಮೇಲೆ ಈತರ ದಬ್ಬಾಳಿಗೆ ಮಾಡಿದರೆ ಹೇಗೆ?- ಶಿವಮೊಗ್ಗ ಪೋಲಿಸರಿಗೆ ಸಚಿವ KS Eshwarappa ತರಾಟೆ

Any Mind by Any Mind
November 28, 2021
in ವಿಡಿಯೋ
0
Share on WhatsAppShare on FacebookShare on Telegram

ಶಿವಮೊಗ್ಗ ನಗರ ದೊಡ್ಡಪೇಟೆ ವ್ಯಾಪ್ತಿಯ ಅಂಗಡಿ ಹಾಗೂ ಗೂಡಂಗಡಿಗಳಲ್ಲಿ ಬಿಡಿ ತಂಬಾಕು ಉತ್ಪನ್ನಗಳನ್ನ ಮಾರಾಟ ಮಾಡುತ್ತಿದ್ದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಮಾರಾಟಗಾರರು ಜಿಲ್ಲಾ ಉಸ್ತುವಾರಿ ಸಚಿವ ಕೆಎಸ್‌ ಈಶ್ವರಪ್ಪ ಬಳಿ ಬಂದು ಅಳಲು ತೋಡಿಕೊಂಡಿದ್ದಾರೆ. ದೊಡ್ಡಪೇಟೆ ಪಿಐ ಹರೀಶ್‌ ಪಟೇಲ್‌ಗೆ ಫೋನ್‌ ಮಾಡಿದ ಈಶ್ವರಪ್ಪ ಬೇರೆ ಕಡೆ ಇಲ್ಲದ ಕಾನೂನು ಶಿವಮೊಗ್ಗಕ್ಕೇಕೆ..? ಪ್ರಕರಣ ದಾಖಲಿಸಬೇಡಿ ಎಂದು ಬಾಲಿಶವಾಗಿ ಮಾತಿನ ಚಕಮಕಿ ನಡೆಸಿದ್ದಾರೆ.

ADVERTISEMENT

ಪಿಐಗೆ ಕಾಲ್‌ ಮಾಡಿ ನಾಲ್ಕೈದು ಅಂಗಡಿಗಳಿಂದ ತಂಬಾಕು ಉತ್ಪನ್ನಗಳನ್ನ ವಶಪಡಿಸಿಕೊಂಡು ಹೋಗಿದ್ದೀರಂತಲ್ಲ ಏಕೆ ಎಂದು ಈಶ್ವರಪ್ಪ ಕೇಳಿದರು. ಅದಕ್ಕೆ ಪಿಐ ಬಿಡಿ ಉತ್ಪನ್ನ ಮಾರಾಟ ಕಾನೂನು ಬಾಹಿರ ಸಾರ್‌ ಎಂದರು. ಅದಕ್ಕೆ ಈಶ್ವರಪ್ಪ ಇದಕ್ಕೇನು ಪರಿಹಾರ ಎಂದು ಮರುಪ್ರಶ್ನೆ ಹಾಕಿದರು. ಅದಕ್ಕೆ ಪ್ರತ್ಯುತ್ತರವಾಗಿ ಪಿಐ ಸಾರ್‌ ಮಾರಾಟ ಮಾಡಬಾರದು ಬೇಕಿದ್ದರೆ ಪ್ಯಾಕ್‌ ಸಿಗರೇಟ್‌ ನೀಡಬಹುದು ಎಂದು ಹೇಳಿದರು.

ಈಶ್ವರಪ್ಪ ಪಿಐಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು. ನಾನೊಂದು ಪ್ಯಾಕ್‌ ಸಿಗರೇಟ್‌ ತರ್ತಿನಿ ಅದನ್ನ ರಸ್ತೆ ಮೇಲೆ ಹೊಡೀತ್ತೀನಿ ಆಗ ನೀವು ಪ್ರಕರಣ ದಾಖಲಿಸಿ, ಸಿಗರೇಟ್‌ ಸೇದೋವನಿಗೆ ಹಿಡ್ಕೊಂಡು ಒದೀರಿ. ಸಿಗರೇಟ್ ಮಾರೋದಕ್ಕೆ ಅನುಮತಿ ಇದೆ ತಾನೇ..? ಸಿಂಗಲ್‌ ಆಗಿ ಮಾರಬಾರದಾ..? ಇದು ಯಾವಾಗಿಂದ ಇರೋ ಕಾನೂನು..? ಇದ್ದಕ್ಕಿದ್ದಂತೆ ಈ ಕಾನೂನು ಯಾಕೆ ಅನುಷ್ಟಾನ ಮಾಡ್ತಾ ಇದ್ದೀರಾ..? ರಾಜ್ಯದಲ್ಲಿ ದೇಶದಲ್ಲಿ ಇಲ್ಲದ ಕಾನೂನು ಶಿವಮೊಗ್ಗಕ್ಕೆ ತಂದಿದ್ದೀರೇನೂ..? ಯಾರು ಸಿಗರೇಟ್‌ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್‌ ಸೇದುತ್ತಾರೋ ಅಂಥವರನ್ನ ಒದ್ದು ಲಾಕಪ್‌ಗೆ ಹಾಕಿ. ಅಂಗಡಿಯಲ್ಲಿ ಸಿಗರೇಟ್‌ ಮಾರಬೇಡಿ ಎಂಬುದು ಹುಚ್ಚು ಆದೇಶ ಅಲ್ವಾ ಎಂದು ಈಶ್ವರಪ್ಪ ಕಾನೂನನ್ನೇ ಪ್ರಶ್ನಿಸಿದರು.

ಪಿಐ ಹರೀಶ್‌ ಪಟೇಲ್‌ ಸಚಿವರಿಗೆ ತಿಳಿಸಿ ಹೇಳುವ ಪ್ರಯತ್ನ ಮಾಡಿದರು. ಸಾರ್‌ ಬಿಡಿ ಬಿಡಿಯಾಗಿ ಸಿಗರೇಟ್‌ ಮಾರುವುದೂ ಕೂಡ ಕಾನೂನಿನಲ್ಲಿ ಅಪರಾಧ. ಅದರ ಬಗ್ಗೆಯೂ ಅಂಗಡಿಗಳಿಗೆ ಅರಿವಿರಬೇಕು ಎಂದು ಹೇಳಿದರು.

ಈಶ್ವರಪ್ಪ ಮಾತ್ರ ಪೊಲೀಸ್‌ ಅಧಿಕಾರಿಯ ಮಾತಿನಿಂದ ತೃಪ್ತರಾಗಲಿಲ್ಲ. ಶಿವಮೊಗ್ಗ ಎಸ್‌ಪಿಗೆ ಈಗ ಎಚ್ಚರ ಆಯ್ತಾ..? ಅಂಗಡಿಯವರು ಜೀವನ ಹೇಗೆ ಮಾಡಬೇಕು. ಹೌದಪ್ಪ ಕಾಯ್ದೆ ೨೦೦೯ರಿಂದಲೇ ಇದೆ ಎಂದು ಈಗ ಹೇಳ್ತಾ ಇದ್ದೀಯಾ, ಇಷ್ಟು ದಿನ ಶಿವಮೊಗ್ಗದಲ್ಲಿ ಇಲ್ಲದ ಕಾಯ್ದೆ ಈಗೇಕೆ ತರ್ತಾ ಇದ್ದೀರಾ. ಪೊಲೀಸ್‌ ಅಧಿಕಾರಿಗಳು ನನ್ನನ್ನ ಸುಮ್ಮನೇ ಮೈ ಮೇಲೆ ಎಳೆದುಕೊಳ್ತೀರಾ ಎಂದು ಗದರಿದರು. ಅಂಗಡಿಯಲ್ಲಿ ಮಾರಬಾರದು ಅಂತ ಕಾನೂನಿದ್ಯಾ..? ಮೊದಲು ಜನರಿಗೆ ಅರಿವು ಮೂಡಿಸುವ ಕಾನೂನು ಮಾಡಿ. ನಂತರ ಅಂಗಡಿ ಮೇಲೆ ಕಾನೂನು ಚಲಾಯಿಸಿ. ಶಿವಮೊಗ್ಗ ಎಸ್‌ಪಿ ಈ ಕೆಲಸಕ್ಕೆ ಮುಂದಾಗುವಂತೆ ತಿಳಿ ಹೇಳಿ ಎಂದು ಪಿಐಗೆ ಉತ್ತರವೂ ನೀಡದಂತೆ ಏರು ದನಿಯಲ್ಲಿ ಮಾತನಾಡಿದ್ದಾರೆ.

Tags: Congress PartyCovid 19KS Eshwarappaಎಚ್ ಡಿ ಕುಮಾರಸ್ವಾಮಿಕರೋನಾಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

Modi ಬಂದ ಮೇಲೆ ಕಾಂಗ್ರೆಸ್ ಅಡ್ರೆಸ್‌ ಇಲ್ಲ, ಎಂಕ, ನಾಣಿ, ಸೀನ ಅಂತ ನಾಲವತ್ತೈದು ಜನ ಇದಾರೆ l B S Yediyurappa BJP

Next Post

ಮಂಟಪದಲ್ಲಿಯೇ ಸಂಪ್ರದಾಯ ಮುರಿದು ಸರಳ ಮದುವೆಯಾದ ವರ! : ನೆರೆದವರ ಮುಂದೆ ಮೈಕ್ ಹಿಡಿದು ಭಾಷಣ – ವೈರಲ್ ವಿಡಿಯೋ

Related Posts

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್
Top Story

ಮಂಡ್ಯ ರೈಲು ನಿಲ್ದಾಣ ಮೇಲ್ದರ್ಜೆಗೆ; ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ: ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
April 9, 2026
0

ಮಾರ್ಗದ ಉದ್ದಕ್ಕೂ ಜನರೊಂದಿಗೆ ಬೆರೆತ ಸಚಿವದ್ವಯರು; ಲೆವೆಲ್ ಕ್ರಾಸಿಂಗ್, ಅಂಡರ್ ಪಾಸ್, ಮೇಲು ಸೇತುವೆ ಬಗ್ಗೆ ಬೇಡಿಕೆಗಳ ಸುರಿಮಳೆ. ಇನ್ನಷ್ಟು ಡೆಮೋ ರೈಲು ಸಂಚಾರ ಮತ್ತು ಪ್ರಮುಖ...

Read moreDetails

RCB ಟಿಕೆಟ್ ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್..

March 27, 2026
ರಾಜ್ಯದಲ್ಲಿ ರೈತರ ಮೇಲೆ ಲಾಠಿ ಚಾರ್ಜ್ ಕೇಂದ್ರದಲ್ಲಿ ರೈತರನ್ನ ಸಾ**..!

ರಾಜ್ಯದಲ್ಲಿ ರೈತರ ಮೇಲೆ ಲಾಠಿ ಚಾರ್ಜ್ ಕೇಂದ್ರದಲ್ಲಿ ರೈತರನ್ನ ಸಾ**..!

March 14, 2026

ವಿಧಾನಸಭೆ ಬಜೆಟ್ ಅಧಿವೇಶನ ನೇರಪ್ರಸಾರ..!

March 12, 2026
ನನ್ನ ತಂದೆ ಕನಸು ಕಂಡಿದ್ರು, ನಾನು ನನಸು ಮಾಡಿದ್ದೇನೆ

ನನ್ನ ತಂದೆ ಕನಸು ಕಂಡಿದ್ರು, ನಾನು ನನಸು ಮಾಡಿದ್ದೇನೆ

March 8, 2026
Next Post
ಮಂಟಪದಲ್ಲಿಯೇ ಸಂಪ್ರದಾಯ ಮುರಿದು ಸರಳ ಮದುವೆಯಾದ ವರ! : ನೆರೆದವರ ಮುಂದೆ ಮೈಕ್ ಹಿಡಿದು ಭಾಷಣ – ವೈರಲ್ ವಿಡಿಯೋ

ಮಂಟಪದಲ್ಲಿಯೇ ಸಂಪ್ರದಾಯ ಮುರಿದು ಸರಳ ಮದುವೆಯಾದ ವರ! : ನೆರೆದವರ ಮುಂದೆ ಮೈಕ್ ಹಿಡಿದು ಭಾಷಣ - ವೈರಲ್ ವಿಡಿಯೋ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada