• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, March 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ರಾಯಚೂರು-ಕೊಪ್ಪಳ MLC ಚುನಾವಣೆ: ಲಿಂಗಾಯತ ರೆಡ್ಡಿಗಳದ್ದೇ ಆಟ, ಈ ಸಲವೂ ಕಾಂಗ್ರೆಸ್ ಬಾವುಟ!

ಪಿಕೆ ಮಲ್ಲನಗೌಡರ್ by ಪಿಕೆ ಮಲ್ಲನಗೌಡರ್
November 19, 2021
in ಕರ್ನಾಟಕ, ರಾಜಕೀಯ
0
ರಾಯಚೂರು-ಕೊಪ್ಪಳ MLC ಚುನಾವಣೆ: ಲಿಂಗಾಯತ ರೆಡ್ಡಿಗಳದ್ದೇ ಆಟ, ಈ ಸಲವೂ ಕಾಂಗ್ರೆಸ್ ಬಾವುಟ!
Share on WhatsAppShare on FacebookShare on Telegram

ವಿಧಾನಸಭೆ,  ಅಂದರೆ MLA ಚುನಾವಣೆಯಲ್ಲಿ ಅವಿಭಜಿತ ರಾಯಚೂರು ಜಿಲ್ಲೆ  (ಈಗ ರಾಯಚೂರು ಮತ್ತು ಕೊಪ್ಪಳ)ಯಲ್ಲಿ ಹಲವು ಮೀಸಲು ಕ್ಷೇತ್ರಗಳಿವೆ. ಆದರೆ ಅದು ವಿಧಾನ ಪರಿಷತ್‌ಗೆ ಅನ್ವಯಿಸದು. ಹೀಗಾಗಿ ಇಲ್ಲಿ ಜಾತಿ ಮತ್ತು ಭೂ ಒಡೆತನದ ಪ್ರಾಬಲ್ಯವಿರುವ ಲಿಂಗಾಯತ ರೆಡ್ಡಿಗಳದ್ದೇ ಕಾರುಬಾರು.

ADVERTISEMENT

ಕಾಂಗ್ರೆಸ್‌ ಅಭ್ಯರ್ಥಿಯೂ ಅವರೇ, ಬಿಜೆಪಿ ಅಭ್ಯರ್ಥಿಯೂ ಅವರೇ!  (ಹಿಂದೆ ಬಿಜೆಪಿ ಸ್ಥಾನದಲ್ಲಿ ಜನತಾ ಪರಿವಾರ ಇತ್ತು) ಒಟ್ಟಿನಲ್ಲಿ ಗೆಲ್ಲೋದು ಲಿಂಗಾಯತ ರೆಡ್ಡಿಯೇ!

ಈ ಸಲವೂ ಪರಿಸ್ಥಿತಿ ಹಾಗೆಯೇ ಇದೆ. ಕಳೆದ ಬಾರಿ ಇಲ್ಲಿ ಕಾಂಗ್ರೆಸ್‌ನಿಂದ ಬಸವರಾಜ ಪಾಟೀಲ ಇಟಗಿ ಗೆದ್ದಿದ್ದರು. ಅವರ ಎದುರು ಬಿಜೆಪಿಯ ಟಿ.ವಿ. ಚಂದ್ರಶೇಖರ್‌ ಅಲ್ಪ ಅಂತರದಿಂದ ಸೋತಿದ್ದರು. ಇಬ್ಬರೂ ಲಿಂಗಾಯತ ರೆಡ್ಡಿಗಳೇ!

ಈ ಬಾರಿ ಬಸವರಾಜ ಪಾಟೀಲ ಇಟಗಿ ಮತ್ತು ಟಿ.ವಿ. ಚಂದ್ರಶೇಖರ್‌ ಇಬ್ಬರಿಗೂ ಚುನಾವಣೆಗೆ ಸ್ಪರ್ದಿಸುವುದು ಇಷ್ಟವಿಲ್ಲವಂತೆ.

ಬಿಜೆಪಿಯ ಚಂದ್ರಶೇಖರ್‌ ಅವರದ್ದು ಕೊಪ್ಪಳದಿಂದ ಮುಂದಿನ ಎಂಎಲ್‌ಎ ಆಗುವ ಕನಸು. ಕಳೆದ ಚುನಾವಣೆಯಲ್ಲಿ ಅವರಿಗೆ ಟಿಕೆಟ್‌ ಘೋಷಿಸಿ, ಕೊನೆ ಕ್ಷಣದಲ್ಲಿ ಕೊಪ್ಪಳ ಸಂಸದ ಕರಡಿ ಸಂಗಣ್ಣ ಪುತ್ರ ಅಮರೇಶ್‌ ಅವರಿಗೆ ಟಿಕೆಟ್‌ ನೀಡಲಾಗಿತ್ತು. ಅಮರೇಶ ಸೋತ ನಂತರ ಮುಂದಿನ ಚುನಾವಣೆ ಆಧಾರದಲ್ಲಿ ಚಂದ್ರಶೇಖರ್‌ ಎಂಎಲ್‌ಸಿ ಚುನಾವಣೆಗೆ ಸ್ಪರ್ಧಿಸಲು ಒಪ್ಪಿಲ್ಲ. ಅವರೀಗ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯ ಸದಸ್ಯರು.

ಇತ್ತ ಈಗ ಎಂಎಲ್‌ಸಿಯಾಗಿರುವ ಕಾಂಗ್ರೆಸ್‌ನ ಬಸವರಾಜ ಪಾಟೀಲ ಇಟಗಿ ಸ್ವ-ಇಚ್ಛೆಯಿಂದ ಹಿಂದಕ್ಕೆ ಸರಿಯುತ್ತಿದ್ದಾರೋ ಅಥವಾ ಅವರ ಮೇಲೆ ಕುಷ್ಟಗಿ ಶಾಸಕ ಕಾಂಗ್ರೆಸ್‌ನ ಅಮರೇಗೌಡ ಬಯ್ಯಾಪುರ ಅವರ ಒತ್ತಡವಿದೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಈ ಸಲ ಕಾಂಗ್ರೆಸ್‌ನಿಂದ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಅವರ ಅಣ್ಣನ ಮಗ ಶರಣೇಗೌಡ ಪಾಟೀಲ್‌ ಬಯ್ಯಾಪುರ ಅವರಿಗೆ ಟಿಕೆಟ್‌ ಗ್ಯಾರಂಟಿ ಎನ್ನಲಾಗಿದೆ.  ಮೂಲತಃ ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ  ಅಮರೇಗೌಡ ಬಯ್ಯಾಪುರ ಸತತವಾಗಿ ಲಿಂಗಸೂರಿನಿಂದ ಎಂಎಲ್‌ಎ ಆಗುತ್ತ ಬಂದಿದ್ದರು. ಕ್ಷೇತ್ರ ಪುನರ್‌ ವಿಂಗಡಣೆಯ ನಂತರ ಲಿಂಗಸೂರು ಮೀಸಲು ಕ್ಷೇತ್ರವಾಗಿತು. ಆಗ ಬಯ್ಯಾಪುರ ತಮ್ಮ ಕಾರ್ಯಕ್ಷೇತ್ರವನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿಗೆ ಬದಲಾಯಿಸಿದರು.

ಆದರೆ ಬಯ್ಯಾಪುರ ಕುಟುಂಬ ಲಿಂಗಸೂರು ಕ್ಷೇತ್ರದ ಮೇಲಿನ ತನ್ನ ರಾಜಕೀಯ ಹಿಡಿತವನ್ನು ಬಿಟ್ಟು ಕೊಡಲಿಲ್ಲ. ಇಳಕಲ್‌ನ

ಗ್ರಾನೈಟ್‌ ಉದ್ಯಮಿಯೊಬ್ಬರನ್ನು ಲಿಂಗಸೂರಿನಿಂದ ಗೆಲ್ಲಿಸಿಕೊಂಡಿತು. ಇದರಲ್ಲಿ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಅವರ ಅಣ್ಣನ ಪಾತ್ರ ದೊಡ್ಡದಿದೆ. ಈಗ ಇವರ ಮಗ ಶರಣೇಗೌಡರಿಗೆ ಟಿಕೆಟ್‌ ಸಿಗುವುದು ಬಹುತೇಕ ಗ್ಯಾರಂಟಿ. ಶಾಸಕ ಅಮರೇಗೌಡರಿಗೆ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್‌ ಇಬ್ಬರೂ ಆಪ್ತರು.

ಬಿಜೆಪಿ ಅಭ್ಯರ್ಥಿ ಯಾರು ಎಂಬ ಗೊಂದಲ ಇನ್ನೂ ಇದೆ. ಕಾಡಾ ಅಧ್ಯಕ್ಷ ಬಸನಗೌಡ ಬ್ಯಾಗೋಟ ಅವರಿಗೆ ಅವಕಾಶ ಸಿಗಬಹುದು. ಇವರೂ ಕೂಡ ಲಿಂಗಾಯತ ರೆಡ್ಡಿಯೇ!

ಸದ್ಯದ ಚಿತ್ರಣ ನೋಡಿದರೆ, ಕಾಂಗ್ರೆಸ್‌ಗೆ  ಮತ್ತೆ ಗೆಲುವು ಖಚಿತವಾದಂತಿದೆ. ಮತ್ತದೇ ಲಿಂಗಾಯತ ರೆಡ್ಡಿ! ಜಾತಿ, ಹಣ  ಮತ್ತು ಭೂ ಒಡೆತನ ಇರುವವರ ಕಾರುಬಾರು ಅವ್ಯಾಹತವಾಗಿ  ಮುಂದುವರಿಯಲಿದೆ.

ನಮ್ಮ ಪ್ರಜಾಪ್ರಭುತ್ವ, ನಮ್ಮ ಹೆಮ್ಮೆ  ಎನ್ನೋಣವೇ?

Tags: adjustment politicsBJPCongress Partyಬಿಜೆಪಿವಿಧಾನಪರಿಷತ್‌ ಚುನಾವಣೆ
Previous Post

ಮೂರು ಕಾನೂನು ವಾಪಸ್ ತಂದಿದ್ದು ಸ್ವಾಗತಾರ್ಹ, ಬೆಂಬಲ ಬೆಲೆ, ವಿದ್ಯುತ್ಚ್ಛಕ್ತಿ ಖಾಸಗೀಕರಣದ ಬಗ್ಗೆ ಮೌನವೇಕೆ?

Next Post

“ಮಾರ್ಕ್ ಮೈ ವರ್ಡ್ಸ್” : ಕೃಷಿ ಕಾನೂನುಗಳ ಕುರಿತು ರಾಹುಲ್ ಗಾಂಧಿ ಭವಿಷ್ಯ ನಿಜವಾಗಿದೆ – ವಿಡಿಯೋ ವೈರಲ್‌

Related Posts

ಮೀಸಲಾತಿ ಜಾರಿಯಲ್ಲಿ ಕಾಂಗ್ರೆಸ್ ಕಳ್ಳಾಟ: ರಾಜ್ಯಾದ್ಯಂತ ಜನಾಂದೋಲನಕ್ಕೆ ಬಿಜೆಪಿ ಎಚ್ಚರಿಕೆ
ಕರ್ನಾಟಕ

ಮೀಸಲಾತಿ ಜಾರಿಯಲ್ಲಿ ಕಾಂಗ್ರೆಸ್ ಕಳ್ಳಾಟ: ರಾಜ್ಯಾದ್ಯಂತ ಜನಾಂದೋಲನಕ್ಕೆ ಬಿಜೆಪಿ ಎಚ್ಚರಿಕೆ

by ಪ್ರತಿಧ್ವನಿ
March 5, 2026
0

ಬೆಂಗಳೂರು: ಮೀಸಲಾತಿ ಹಾಗೂ ಒಳಮೀಸಲಾತಿ ಜಾರಿಯಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಬದ್ಧತೆಯಿಲ್ಲದೆ ನಡೆದುಕೊಳ್ಳುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು. ಶೀಘ್ರದಲ್ಲೇ ರಾಜ್ಯಾದ್ಯಂತ ದೊಡ್ಡ...

Read moreDetails
ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ

ಡಿ.ಫಾರ್ಮ್ ವಾರ್ಷಿಕ ಪರೀಕ್ಷೆ: 100 ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ

March 4, 2026
ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

ನೀವೆಲ್ಲಾ ಸೇರಿ ಹಸು ಕಟ್ಟಿ ನನಗೆ ಹಾಲು ಮಾರೋ ಕೆಲಸ ನೀಡಿದ್ದೀರಿ : ಬಮೂಲ್‌ ಅಧ್ಯಕ್ಷ ಡಿ. ಕೆ. ಸುರೇಶ್

March 4, 2026
“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

“ಸಿಎಂ ಆಗಿ ದೊಡ್ಡ ಸ್ಥಾನಕ್ಕೆ ಹೋದವ್ರು ಇಲ್ಲಿ ಬುಡುಬುಡುಕೆ, ಬಣ್ಣ ಬಣ್ಣದ ಮಾತುಗಳನ್ನಾಡ್ತಾರೆ”

March 4, 2026
ಬೆಂಗಳೂರಿಗರೇ ಗಮನಿಸಿ: ಕೆಲ ಮಾರ್ಗಗಳಲ್ಲಿ ಸಂಚಾರ ವ್ಯತ್ಯಯ

ಬೆಂಗಳೂರಿಗರೇ ಗಮನಿಸಿ: ಕೆಲ ಮಾರ್ಗಗಳಲ್ಲಿ ಸಂಚಾರ ವ್ಯತ್ಯಯ

March 4, 2026
Next Post
“ಮಾರ್ಕ್ ಮೈ ವರ್ಡ್ಸ್” : ಕೃಷಿ ಕಾನೂನುಗಳ ಕುರಿತು ರಾಹುಲ್ ಗಾಂಧಿ ಭವಿಷ್ಯ ನಿಜವಾಗಿದೆ – ವಿಡಿಯೋ ವೈರಲ್‌

"ಮಾರ್ಕ್ ಮೈ ವರ್ಡ್ಸ್" : ಕೃಷಿ ಕಾನೂನುಗಳ ಕುರಿತು ರಾಹುಲ್ ಗಾಂಧಿ ಭವಿಷ್ಯ ನಿಜವಾಗಿದೆ – ವಿಡಿಯೋ ವೈರಲ್‌

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada