• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಪಾಕ್ ವಿರುದ್ಧ ಸೋಲು : ಶಮಿ ವಿರುದ್ಧ ದ್ವೇಷ – ಬೆನ್ನಿಗೆ ನಿಂತ ಸೆಹ್ವಾಗ್, ಪಠಾಣ್, ಹರ್ಭಜನ್

ಪ್ರತಿಧ್ವನಿ by ಪ್ರತಿಧ್ವನಿ
October 25, 2021
in ದೇಶ
0
ಪಾಕ್ ವಿರುದ್ಧ ಸೋಲು : ಶಮಿ ವಿರುದ್ಧ ದ್ವೇಷ – ಬೆನ್ನಿಗೆ ನಿಂತ ಸೆಹ್ವಾಗ್, ಪಠಾಣ್, ಹರ್ಭಜನ್
Share on WhatsAppShare on FacebookShare on Telegram

ಇಂಡಿಯಾ-ಪಾಕಿಸ್ತಾನ್‌ ಕ್ರಿಕೆಟ್‌ ಎಂದರೆ ಯುದ್ಧ ಎಂಬಂತ ಸನ್ನಿವೇಶ ಸೃಷ್ಟಿಯಾಗಿಬಿಡುತ್ತದೆ. ಇಲ್ಲಿನ ಬಹುತೇಕ ಟಿವಿ ಮಾಧ್ಯಮಗಳು ರಣತಂತ್ರ, ಇಂಡೋ-ಪಾಕ್‌ ಯುದ್ಧ ಎಂಬಂತೆ ಯುದ್ದೋನ್ಮಾದದ ರೀತಿಯಲ್ಲಿ ಕ್ರೀಡಾ ವರದಿಯನ್ನು ಬಿಂಬಿಸುತ್ತಿದೆ.

ADVERTISEMENT

ಅದಕ್ಕೆ ತಕ್ಕಂತೆ, ಇದೀಗ ಪಾಕ್‌ ಎದುರು ಸೋತ ಭಾರತ ತಂಡದ ವೇಗದ ಬೌಲರ್‌ ಮಹಮ್ಮದ್‌ ಶಮಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕ ಬರಹಗಳು ಹರಿದಾಡುತ್ತಿದೆ. ಶಮಿಯನ್ನು ಪಾಕ್‌ ಪ್ರೇಮಿ ಹಾಗೂ ಪಾಕ್‌ ಪರ ಒಲವುಳ್ಳವರು ಎಂದು ಧ್ವೇಷಪೂರಿತ ಕಮೆಂಟ್‌ ಹಾಕುತ್ತಿದ್ದಾರೆ.

ಶಮಿ ವಿರುದ್ಧ ಧರ್ಮಾದರಿತ ನಿಂದನೆಗಳು ವ್ಯಕ್ತವಾಗುತ್ತಿದ್ದಂತೆ ನಿಜವಾದ ಕ್ರೀಡಾಭಿಮಾನಿಗಳು ಶಮಿ ಬೆನ್ನಿಗೆ ನಿಂತಿದ್ದಾರೆ. ಶಮಿ ಎಂದಿಗೂ ಭಾರತೀಯ ಕ್ರಿಕೆಟ್‌ ಪ್ರೇಮಿಗಳ ಹೃದಯದಲ್ಲಿ ಅಜರಾಮರಾಗಿರುತ್ತಾರೆ ಎಂದು ಶಮಿ ಬೆಂಬಲಕ್ಕೆ ಬಂದಿದ್ದಾರೆ.

ಕ್ರೀಡಾಭಿಮಾನಿಗಳು ಮಾತ್ರವಲ್ಲದೆ, ಭಾರತ ತಂಡದ ಹಿರಿಯ ಆಟಗಾರರಾದ ವೀರೇಂದ್ರ ಸೆಹವಾಗ್‌, ಇರ್ಫಾನ್‌ ಪಠಾಣ್‌ ಹಾಗೂ ಹರ್ಭಜನ್‌ ಸಿಂಗ್‌ ಮೊದಲಾದವರು ಶಮಿ ಬೆಂಬಲಕ್ಕೆ ನಿಂತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಶಮಿ ವಿರುದ್ಧ ಟೀಕೆಗಳು ಕೇಳಿಬರುತ್ತಿರುವುದು ನಿಜಕ್ಕೂ ಆಘಾತವಾಗಿದೆ. ಮೊಹಮ್ಮದ್ ಶಮಿ ಚಾಂಪಿಯನ್ ಬೌಲರ್. ಭಾರತ ತಂಡದ ಕ್ಯಾಪ್ ಧರಿಸಿದ ಆಟಗಾರ, ಭಾರತವನ್ನು ಅತೀಯಾಗಿ ಪ್ರೀತಿಸುತ್ತಾನೆ ಸಾಮಾಜಿಕ ಜಾಲತಾಣದಲ್ಲಿನ ದಾಳಿಕೋರರಿಗಿಂತ ದೇಶದ ಮೇಲೆ ಹೆಚ್ಚು ಪ್ರೀತಿ ಟೀಂ ಇಂಡಿಯಾ ಆಟಗಾರನಿಗಿದೆ. ನಾವು ಶಮಿ ಪರ ಇದ್ದೇವೆ. ಮುಂದಿನ ಪಂದ್ಯದಲ್ಲಿ ಜಲ್ವಾ ತೋರಿಸಿ ಎಂದು ಶಮಿ ಪರ ವೀರೂ ಟ್ವೀಟ್ ಮಾಡಿದ್ದಾರೆ.

The online attack on Mohammad Shami is shocking and we stand by him. He is a champion and Anyone who wears the India cap has India in their hearts far more than any online mob. With you Shami. Agle match mein dikado jalwa.

— Virender Sehwag (@virendersehwag) October 25, 2021

ಇರ್ಫಾನ್‌ ಪಠಾಣ್‌ ಕೂಡಾ ಶಮಿ ಬೆಂಬಲಕ್ಕೆ ನಿಂತಿದ್ದು, ಆಟದಲ್ಲಿ ಸೋಲು ಗೆಲುವು ಇದ್ದಿದ್ದೆ. ನಾನು ಕೂಡ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಭಾಗವಾಗಿದ್ದೆ. ನಾವು ಸೋತಿದ್ದೇವೆ. ಆದರೆ ಪಾಕಿಸ್ತಾನಕ್ಕೆ ಹೋಗಲು ಹೇಳಿಲ್ಲ. ಈ ರೀತಿಯ ಟೀಕೆ ನಿಲ್ಲಬೇಕು ಎಂದು ಇರ್ಫಾನ್ ಟ್ವೀಟ್ ಮಾಡಿದ್ದಾರೆ.

Even I was part of #IndvsPak battles on the field where we have lost but never been told to go to Pakistan! I’m talking about 🇮🇳 of few years back. THIS CRAP NEEDS TO STOP. #Shami

— Irfan Pathan (@IrfanPathan) October 25, 2021

ಹರ್ಭಜನ್‌ ಸಿಂಗ್‌ ಕೂಡಾ ಶಮಿಗೆ ಪ್ರೀತಿ ವ್ಯಕ್ತಪಡಿಸಿದ್ದು, ನಾವು ನಿಮ್ಮನ್ನು ಪ್ರೀತಿಸುತ್ತೇವೆ ಶಮಿ ಎಂದು ಟ್ವೀಟ್‌ ಮಾಡಿದ್ದಾರೆ.

We love you @MdShami11 🇮🇳 #Shami

— Harbhajan Turbanator (@harbhajan_singh) October 25, 2021
https://twitter.com/Aestheticayush4/status/1452540561399767047
Tags: BJPCongress PartyCovid 19mohammed shamiನರೇಂದ್ರ ಮೋದಿಪಠಾಣ್ಬಿಜೆಪಿಸೆಹ್ವಾಗ್ಹರ್ಭಜನ್
Previous Post

ಎರಡು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲ್ಲುತ್ತೆ ಆದರೆ ಅಧಿಕಾರ ದುರುಪಯೋಗ ಆಗಬಾರದು: D.K Shivakumar

Next Post

ಹಾನಗಲ್ ಉಪಚುನಾವಣೆ : ಅಕ್ಕಿಆಲೂರಿನ ಪ್ರಚಾರದಲ್ಲಿ ಬಸವರಾಜ ಬೊಮ್ಮಾಯಿ

Related Posts

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ
ದೇಶ

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

by ಪ್ರತಿಧ್ವನಿ
April 10, 2026
0

ಪಟ್ನಾ, ಏ.10: ಪ್ರಧಾನಮಂತ್ರಿ  ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದ ಆರೋಪದಡಿ ಬಿಹಾರ ಪೊಲೀಸರು ಮೂವರು ಯುವಕರನ್ನು ಬಂಧಿಸಿದ್ದಾರೆ. ಈ ಘಟನೆ ದೇಶದಾದ್ಯಂತ ಆತಂಕ...

Read moreDetails
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ತಮಿಳುನಾಡು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್

April 9, 2026
ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

April 6, 2026
ಟೆರಿಟೋರಿಯಲ್ ಆರ್ಮಿಯಲ್ಲಿ ಉದ್ಯೋಗ:ಯುವಕರಿಗೆ ಸುವರ್ಣಾವಕಾಶ

 ಮೊಹಮ್ಮದ್ ಇಕ್ಬಾಲ್ ‘ಪಲಾಯನಗೈದ ಆರ್ಥಿಕ ಅಪರಾಧಿ’ ಎಂದು ನ್ಯಾಯಾಲಯ ಘೋಷಣೆ

April 1, 2026
Next Post
ಹಾನಗಲ್ ಉಪಚುನಾವಣೆ : ಅಕ್ಕಿಆಲೂರಿನ ಪ್ರಚಾರದಲ್ಲಿ ಬಸವರಾಜ ಬೊಮ್ಮಾಯಿ

ಹಾನಗಲ್ ಉಪಚುನಾವಣೆ : ಅಕ್ಕಿಆಲೂರಿನ ಪ್ರಚಾರದಲ್ಲಿ ಬಸವರಾಜ ಬೊಮ್ಮಾಯಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada