ಕರೋನ ವೈರಾಣುವನ್ನು ತಡೆಯಲು ಮಾಸ್ಕ್ ಒಂದು ಪ್ರಮುಕ ಅಸ್ತ್ರವಾಗಿದ್ದು, ಇನ್ನು ಒಂದು ವರ್ಷಗಳ ಕಾಲ ಕಡ್ಡಾಯ ಮಾಸ್ಕ್ ದರಿಸಲೇ ಬೇಕು ಎಂದು ನೀತಿ ಆಯೋಗ (ಆರೋಗ್ಯ) ಡಾ. ವಿ.ಕೆ ಪೌಲ್ ತಿಳಿಸಿದ್ದಾರೆ.
ಈಗಾಗಲೇ ಕರೋನ ದಿದ ತಲ್ಲಣಗೊಂಡ ಜನರು ಮಾಸ್ಕ್ ಇಲ್ಲದೆ ಮನೆಯಿಂದ ಹೊರಗೆ ಹೋಗುವ ಆಗಿಲ್ಲ. ಆದ್ದರಿಂದ ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಲೇಬೇಕೆಂದು ಜನರಿಗೂ ತಿಳಿದಿದೆ. ಮತ್ತು ದೇಶವಾಸಿಗಳು ಈ ಮಾಸ್ಕ್ ನಿಂದ ಮುಕ್ತಿ ಪಡೆಯಲು ಇನ್ನೂ ಒಂದೂವರೆ ವರ್ಷ ಕಾಲ ಅಂದರೆ ಡಿಸೆಂಬರ್ 2022ರವರೆಗೆ ಕಾಯಬೇಕು ಎಂದು ನೀತಿ ಆಯೋಗದ ಸದಸ್ಯ ಡಾ ವಿ.ಕೆ ಪೌಲ್ ಅವರು ಪ್ರತಿಪಾದಿಸಿದ್ದಾರೆ. ಸಂಪೂರ್ಣ ಲಸಿಕೆ ವಿತರಣೆ, ಕೊರೊನಾಗೆ ಪರಿಣಾಮಕಾರಿ ಔಷಧಗಳು, ಸಾರ್ವಜನಿಕರ ಶಿಸ್ತುಬದ್ಧ ವರ್ತನೆ ಎಲ್ಲವೂ ಸೇರಿದರಷ್ಟೇ ಕೋವಿಡ್ ವಿರುದ್ಧ ಹೋರಾಟ ಯಶಸ್ವಿಯಾಗಲು ಸಾದ್ಯ ಹೀಗಾಗಿ ಕನಿಷ್ಠ ಪಕ್ಷ ಮುಂದಿನ ವರ್ಷದ ಡಿಸೆಂಬರ್ವರೆಗಾದರೂ ಎಲ್ಲರೂ ಮಾಸ್ಕ್ ಧರಿಸಲೇಬೇಕಾಗುತ್ತದೆ. ಅದು ಬಿಟ್ಟು ಬೇರೆ ದಾರಿಯೇ ಇಲ್ಲ ಎಂದು ಪೌಲ್ ಹೇಳಿದ್ದಾರೆ.
ಕರೋನ ವೈರಸ್ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ, ಕರೋನ ವೈರಸ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಇತ್ತೀಚಿನ ಮಾಹಿತಿ ನಿರಾಶಾದಾಯಕವಾಗಿದೆ. ಕರೋನವನ್ನು ಈಗಲೂ ಸಾಂಕ್ರಾಮಿಕವೆಂದೇ ಪರಿಗಣಿಸಲಾಗುವುದೆಂದು WHO ತಿಳಿಸಿದೆ. ಏಕೆಂದರೆ ಕರೋನ ವೈರಸ್ ಅಪಾಯಕಾರಿಗಿದ್ದು ಅದರ ಪ್ರಮಣ ಇನ್ನೂ ಕಡಿಮೆಯಾಗಿಲ್ಲ. ಸೋಂಕು ಮತ್ತು ಅದರ ಹೊಸ ರೂಪಾಂತರಿಗಳು ಅಪಾಯವನ್ನು ಹೆಚ್ಚಿಸುತ್ತಿರುವುದರಿಂದ ಜನರು ಎಚ್ಚರದಿಂದ ಮುನ್ನೆಚ್ಚರಿಕಾ ಕ್ರಮವನ್ನು ಪಾಲಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿಕೆಯನ್ನು ಸ್ಪಷ್ಟವಾಗಿ ನೀಡಿದೆ. ಕರೋನ ವೈರಸ್ ವಿರುದ್ಧದ ಹೋರಾಟದಲ್ಲಿ ವಿಶ್ವದಾದ್ಯಂತ ಜನರು ಹೆಚ್ಚು ಹೆಚ್ಚು ಲಸಿಕೆ ಪಡೆದುಕೊಂಡಾಗ, ರೋಗನಿರೋಧಕ ಶಕ್ತಿಯನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಬಹುದು, ಕರೋನದಿಂದ ಸಾವಿನ ಸಂಖ್ಯೆಯು ಸಹ ಕಡಿಮೆಯಾಗುತ್ತದೆ ಎಂದು WHO ಹೇಳಿದೆ. ಈ ಸ್ಥಿತಿಯನ್ನು ತಲುಪಲು ಜನರು ಕಡ್ಡಾಯವಾಗಿ ಮಾಸ್ಕ್ ಅನ್ನು ಧರಿಸಲೇಬೇಕು ಮತ್ತು ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮವನ್ನು ಪಾಲಿಸಬೇಕು ಎಂದು WHO ಹೇಳಿದೆ.






