ಪೆಗಾಸಸ್ ಹಗರಣದ ಬಗ್ಗೆ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದಿನ ಪ್ರತಿಪಕ್ಷ ಸಭೆಯನ್ನು ಕೈಬಿಟ್ಟು ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆಗಾಸಸ್ ವಿಷಯದ ಯುದ್ಧದಲ್ಲಿ ತಮ್ಮ ಪಕ್ಷವು ಮುಂಚೂಣಿಯಲ್ಲಿದೆ ಎಂದು ಸ್ಪಷ್ಟಪಡಿಸಿದರು. “ವಿರೋಧ ಪಕ್ಷವಾಗಿರುವ ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕು. ನಾವೆಲ್ಲರೂ ಒಟ್ಟಾಗಿ ಕುಳಿತು ಏನಾದರೂ ಕೆಲಸ ಮಾಡುತ್ತೇವೆ” ಎಂದು ಅವರು ಹೇಳಿದ್ದಾರೆ.
ವಿರೋಧ ಪಕ್ಷಗಳನ್ನು ಯಾರು ಮುನ್ನಡೆಸುತ್ತಾರೆ ಎಂದು ಕೇಳಿದಾಗ, “ನಾನು ಜ್ಯೋತಿಷಿ ಅಲ್ಲ … ಯಾರೋ ಹೊರಹೊಮ್ಮುತ್ತಾರೆ, ನಾನು ಬೆಂಬಲಿಸುತ್ತೇನೆ” ಎನ್ನು ಮೂಲಕ ಮತ್ತೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ನೀವು ವಿರೋಧ ಪಕ್ಷದ ಮುಖವಾಗಬಹುದೇ ಎಂದು ಕೇಳಿದಾಗ, “ನಾನು ಸರಳ ಕೆಲಸಗಾರ್ತಿ, ಕೆಲಸಗಾರ್ತಿಯಾಗಿ ಮುಂದುವರಿಯಲು ಬಯಸುತ್ತೇನೆ” ಎಂದು ಮಮತ ಬ್ಯಾನರ್ಜಿ ಹೇಳಿದ್ದಾರೆ.
“ಒಟ್ಟಿಗೆ ಕೆಲಸ ಮಾಡಲು ಒಂದು ಸಾಮಾನ್ಯ ವೇದಿಕೆ ಇರಬೇಕು” ಈ ಕುರಿತು ಸಂಸತ್ತಿನ ಅಧಿವೇಶನದ ನಂತರ ಮಾತುಕತೆ ನಡೆಯಲಿದೆ. ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಲಿದ್ದೆನೆ ಎಂದು ಎಂದು ಮಮತ ಬ್ಯಾನರ್ಜಿ ಹೇಳಿದ್ದಾರೆ.
“ನಾನು ನಿನ್ನೆ ಲಾಲು ಪ್ರಸಾದ್ ಯಾದವ್ ಅವರೊಂದಿಗೆ ಮಾತನಾಡಿದ್ದೇನೆ, ನಾವು ಎಲ್ಲಾ ಪಕ್ಷಗಳೊಂದಿಗೆ ಮಾತನಾಡುತ್ತೇವೆ” ಎಂದು ಮಮತ ಬ್ಯಾನರ್ಜಿ ಹೇಳಿದ್ದಾರೆ.

ಮಮತ ಬ್ಯಾನರ್ಜಿಯ ಸೋದರಳಿಯ, ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ದೂರವಾಣಿ ಸಂಖ್ಯೆ ಪೆಗಾಸಸ್ ಸ್ಪೈವೇರ್ ಗೆ ಗುರಿಯಾಗಿದೆ ಎಂದು ಈ ತಿಂಗಳ ಆರಂಭದಲ್ಲಿ ವಿಶ್ವದಾದ್ಯಂತ 17 ಸುದ್ದಿ ಸಂಸ್ಥೆಗಳ ಒಕ್ಕೂಟವು ವರದಿ ಮಾಡಿದ್ದವು.
ಮಮತ ಬ್ಯಾನರ್ಜಿ ಅವರ ಫೋನ್ ಸಹ ಹ್ಯಾಕ್ ಮಾಡಲಾಗಿದೆ ಮತ್ತು ಅವರು ಯಾರೊಂದಿಗೂ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದ್ದರು.
ಬಂಗಾಳ ಮುಖ್ಯಮಂತ್ರಿ ಇಂದು ತಮ್ಮ ಮಾತನ್ನು ಪುನರುಚ್ಚರಿಸಿ ಮಾತನಾಡಿದ ಅವರು: "ನಾನು ಪೆಗಾಸಸ್‌ನಲ್ಲಿಲ್ಲದಿದ್ದರೂ, ನಾನು ಅಭಿಷೇಕ್ ಬ್ಯಾನರ್ಜಿ, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರೊಂದಿಗೆ ಮಾತನಾಡಿದನ್ನು ಹ್ಯಾಕ್ ಮಾಡಲಾಗಿದೆ. ಒಂದು ಫೋನ್ ಹ್ಯಾಕ್ ಆಗಿದ್ದರೆ, ಎಲ್ಲವನ್ನು ಹ್ಯಾಕ್ ಮಾಡಿದಂತೆ ಎಂದು ದೂರಿದ್ದಾರೆ ".
ಪೆಗಾಸಸ್ ವಿಷಯದ ಬಗ್ಗೆ ಪ್ರತಿಪಕ್ಷಗಳು ಸರ್ಕಾರದಿಂದ ವಿವರಣೆಯನ್ನು ಕೋರಿವೆ, ಮಾರಾಟಗಾರ ಎನ್‌ಎಸ್‌ಒ ತನ್ನ ಗ್ರಾಹಕರು ಕೇವಲ "ಅಧಿಕಾರ" ಹೊಂದಿರುವ ಸರ್ಕಾರಗಳು ಎಂಬ ಹೇಳಿದೆ.
ಯಾವುದೇ ಅಕ್ರಮ ಕಣ್ಗಾವಲು ನಡೆಸಿಲ್ಲ ಎಂದು ಸರ್ಕಾರ ಇಲ್ಲಿಯವರೆಗೆ ಹೇಳಿದೆ – ಪ್ರತಿಪಕ್ಷಗಳು ಈ ಮಮಾಹಿತಿ ಸ್ಪಷ್ಟವಾಗಿಲ್ಲ ಎಂದು ಹೇಳುತ್ತಿವೆ. ಇಂದಿನ ವಿರೋಧ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ನ ರಾಹುಲ್ ಗಾಂಧಿ, "ಇಡೀ ಪ್ರತಿಪಕ್ಷ ಇಲ್ಲಿದೆ, ನಮ್ಮ ಧ್ವನಿಯನ್ನು ಸಂಸತ್ತಿನಲ್ಲಿ ಮೊಟಕುಗೊಳಿಸಲಾಗುತ್ತಿದೆ. ಪೆಗಾಸಸ್ ಸಾಫ್ಟ್‌ವೇರ್ ಖರೀದಿಸಲಾಗಿದೆಯೇ ಮತ್ತು ಅದು ಇಲ್ಲಿ ಇದೆಯೇ ಎಂದು ಮಾತ್ರ ನಾವು ಕೇಳುತ್ತಿದ್ದೇವೆ. ಭಾರತದಲ್ಲಿ ಕೆಲವು ವ್ಯಕ್ತಿಗಳ ವಿರುದ್ಧ ಇದನ್ನು ಬಳಸಲಾಗುತ್ತದೆ" ಎಂದಿದ್ದಾರೆ.





