• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿದೇಶ

ಮಯನ್ಮಾರ್‌ನಲ್ಲಿ ಆಡಳಿತವನ್ನು ವಶಪಡಿಸಿಕೊಂಡ ಮಿಲಿಟರಿ: ಕಳವಳ ವ್ಯಕ್ತಪಡಿಸಿದ ಭಾರತ

by
April 15, 2021
in ವಿದೇಶ
0
ಮಯನ್ಮಾರ್‌ನಲ್ಲಿ ಆಡಳಿತವನ್ನು ವಶಪಡಿಸಿಕೊಂಡ ಮಿಲಿಟರಿ: ಕಳವಳ ವ್ಯಕ್ತಪಡಿಸಿದ ಭಾರತ
Share on WhatsAppShare on FacebookShare on Telegram

ಮಯನ್ಮಾರಿನಲ್ಲಿ ನಡೆದ ನಾಟಕೀಯ ಬೆಳವಣಿಗೆಗೆ ಭಾರತ ಕಳವಳ ವ್ಯಕ್ತಪಡಿಸಿದೆ. ಚುನಾಯಿತ ಪ್ರತಿನಿಧಿಗಳನ್ನು ರಾತ್ರೋರಾತ್ರಿ ಬಂಧಿಸಿ ಮಿಲಿಟರಿಯು ದೇಶದ ಆಡಳಿತವನ್ನು ಕೈಗೆ ತೆಗೆದುಕೊಂಡಿರುವ ಬಗ್ಗೆ ಭಾರತದ ವಿದೇಶ ಸಚಿವಾಲಯವು ಪ್ರತಿಕ್ರಿಯಿಸುತ್ತಾ ” ಮಯನ್ಮಾರಿನಲ್ಲಿ ನಡೆಯುತ್ತಿರುವ ಘಟನೆಗಳನ್ನು ಭಾರತವು ಗಮನಿಸುತ್ತಿದೆ” ಎಂದು ಹೇಳಿಕೆ ನೀಡಿದೆ.

ADVERTISEMENT

“ಭಾರತವು ಸದಾ ಮಯನ್ಮಾರಿನ ಪ್ರಜಾಸತ್ತಾತ್ಮಕ ಪರಿವರ್ತನೆಯನ್ನು ಅಚಲವಾಗಿ ಬೆಂಬಲಿಸುತ್ತಾ ಬಂದಿದೆ. ಪ್ರಜಾ ಪ್ರಭುತ್ವದ ಮತ್ತು ಕಾನೂನಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯಲಾಗುತ್ತದೆ ಎಂದು ನಾವು ನಂಬುತ್ತೇವೆ” ಎಂಬ ಹೇಳಿಕೆ ಬಿಡುಗಡೆ ಮಾಡಿದೆ.

ಮಯನ್ಮಾರ್ ಭಾರತದ ನೆರೆಯ ರಾಷ್ಟವಾಗಿದ್ದು ಭಾರತ ಈಶಾನ್ಯವನ್ನು ಆಗ್ನೇಯ ಏಷ್ಯಾದೊಂದಿಗೆ ಬೆಸೆಯುವ ಕೊಂಡಿಯಾಗಿದೆ. ಭಾರತವು ಹಲವು ಅಭಿವೃದ್ಧಿ ನೆರವು ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದು ಭಾರತದ ಮಿಜೋರಾಂ ರಾಜ್ಯದಿಂದ ಮಯನ್ಮಾರಿನ ಸಿಟ್ವೆ ಬಂದರಿಗೆ ಸಂಪರ್ಕ‌ ಕಲ್ಪಿಸುವ ಕಲಾಡನ್ (kaladan) ಯೋಜನೆಯನ್ನೂ ಕೈಗೆತ್ತಿಕೊಂಡಿದೆ. ಭಾರತವು ಮಯನ್ಮಾರಿನೊಂದಿಗೆ ಅತಿ ಉದ್ದದ ಪರ್ವತ ಗಡಿಯನ್ನು ಹೊಂದಿದ್ದು ಭದ್ರತಾ ಕ್ಷೇತ್ರದಲ್ಲೂ ಪರಸ್ಪರ ಸಹಕಾರ ಬೆಸೆದಿದೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ರೋಹಿಂಗ್ಯಾಗಳು ಬಾಂಗ್ಲಾದೇಶಕ್ಕೆ ಸಾಮೂಹಿಕ ವಲಸೆ ಕೈಗೊಂಡಾಗ ಮಯನ್ಮಾರ್ ಅಂತರರಾಷ್ಟ್ರೀಯ ಟೀಕೆಗಳನ್ನು ಎದುರಿಸಿತ್ತು. ಆಗಲೂ ಬಹುಪಕ್ಷೀಯ ವೇದಿಕೆಗಳಲ್ಲಿ ಸರ್ಕಾರದ ಪರವಾಗಿ ಹೆಚ್ಚು ಬೆಂಬಲ ಹೇಳಿಕೆಗಳನ್ನು ನೀಡಿದ ಕೆಲವೇ ಕೆಲವು ದೇಶಗಳಲ್ಲಿ ಭಾರತವೂ ಒಂದು.

ಮಿಲಿಟರಿ ಒಡೆತನದ ಟೆಲಿವಿಷನ್ “ಮಯನ್ಮಾರಿನ ಮಿಲಿಟರಿ ಒಂದು ವರ್ಷದ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ ಮತ್ತು ಮಿಲಿಟರಿ ಮುಖ್ಯಸ್ಥ ಮಿನ್ ಆಂಗ್ ಹ್ಲೇಂಗ್‌ಗೆ ಅಧಿಕಾರವನ್ನು ಹಸ್ತಾಂತರಿಸಿಲಾಗಿದೆ. ಕಳೆದ ನವೆಂಬರ್‌ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಆಂಗ್ ಸಾನ್ ಸೂಕಿ ಅವರ ನ್ಯಾಷನಲ್ ಲೀಗ್ ಆಫ್ ಡೆಮಾಕ್ರಸಿಯು ಸಾಧಿಸಿದ್ದ ವಿಜಯವನ್ನು ಮಿಲಿಟರಿಯು ಅಸಮ್ಮತಿ ಸೂಚಿಸಿದೆ” ಎಂದು ಪ್ರಕಟಿಸಿದೆ.

ಕಳೆದ ವರ್ಷ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ, ಭಾರತದ ಪ್ರಧಾನಿ ನರೇಂದ್ರ ಮೋದಿ ಸೂಕಿ ಅವರ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದರು. ಅವರು “ಮತದಾನದ ಯಶಸ್ವಿ ನಿರ್ವಹಣೆಯು ಮಯನ್ಮಾರಿನ ಪ್ರಜಾಪ್ರಭುತ್ವದ ಪರಿವರ್ತನೆಯ ಕಡೆಗಿನ ದಿಟ್ಟ ಹೆಜ್ಜೆ” ಎಂದು ಬಣ್ಣಿಸಿದ್ದರು.

Previous Post

2021-22 ರ ಕೇಂದ್ರ ಬಜೆಟ್‌ ಮುಖ್ಯಾಂಶಗಳು

Next Post

ಬಜೆಟ್‌ 2021; ಪೆಟ್ರೋಲ್, ಡಿಸೇಲ್ ಮೇಲೆ ಹೊಸ ತೆರಿಗೆ; ಚುನಾವಣಾ ರಾಜ್ಯಗಳಿಗೆ ಭಾರಿ ಯೋಜನೆಗಳ ಘೋಷಣೆ

Related Posts

ಟ್ರಂಪ್ ಮೇಲೆ ಹತ್ಯೆ ಯತ್ನ: ಆರೋಪಿ ಬಂಧನ : ಯಾರಾತ ?  ಕೋಲೆ ಯತ್ನಕ್ಕೆ ಏನು ಕಾರಣ ?
ವಿದೇಶ

ಅಮೆರಿಕದ ಹೊಸ ಮಸೂದೆಯಿಂದ ಭಾರತೀಯರಿಗೆ ಆತಂಕ ಹೆಚ್ಚಳ

by ಪ್ರತಿಧ್ವನಿ
April 27, 2026
0

 ಅಮೆರಿಕದಲ್ಲಿ H-1B ವೀಸಾ ನೀತಿಯನ್ನು ಕಠಿಣಗೊಳಿಸುವ ನಿಟ್ಟಿನಲ್ಲಿ ರಿಪಬ್ಲಿಕನ್ ಶಾಸಕರ ಗುಂಪೊಂದು ಹೊಸ ಮಸೂದೆಯನ್ನು ಮಂಡಿಸಿದ್ದು, ಇದು ವಿದೇಶಿ ಉದ್ಯೋಗಿಗಳ, ವಿಶೇಷವಾಗಿ ಭಾರತೀಯರ ನಡುವೆ ಆತಂಕವನ್ನು ಹೆಚ್ಚಿಸಿದೆ.ಅರಿಜೋನಾ...

Read moreDetails
ಮಾಲಿಯಲ್ಲಿ ಭೀಕರ ಉಗ್ರ ದಾಳಿ: ಭಾರತೀಯರಿಗೆ ಕಟ್ಟೆಚ್ಚರ”

ಮಾಲಿಯಲ್ಲಿ ಭೀಕರ ಉಗ್ರ ದಾಳಿ: ಭಾರತೀಯರಿಗೆ ಕಟ್ಟೆಚ್ಚರ”

April 27, 2026
ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಆರಂಭಿಕ ಹಂತದ ಕ್ಯಾನ್ಸರ್!

ಇಸ್ರೇಲ್ ಪ್ರಧಾನಿ ನೆತನ್ಯಾಹುಗೆ ಆರಂಭಿಕ ಹಂತದ ಕ್ಯಾನ್ಸರ್!

April 25, 2026
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶಾಕ್: ಮೂರನೇ ಪರೀಕ್ಷೆ ರದ್ದು

ಭಾರತ-ಚೀನಾವನ್ನು ಅವಹೇಳನ ಮಾಡಿದ ಪೋಸ್ಟ್ ರೀಶೇರ್: ಟ್ರಂಪ್ ವಿರುದ್ಧ ಹೊಸ ವಿವಾದ

April 23, 2026
ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

April 19, 2026
Next Post
ಬಜೆಟ್‌ 2021; ಪೆಟ್ರೋಲ್, ಡಿಸೇಲ್ ಮೇಲೆ ಹೊಸ ತೆರಿಗೆ; ಚುನಾವಣಾ ರಾಜ್ಯಗಳಿಗೆ ಭಾರಿ ಯೋಜನೆಗಳ ಘೋಷಣೆ

ಬಜೆಟ್‌ 2021; ಪೆಟ್ರೋಲ್, ಡಿಸೇಲ್ ಮೇಲೆ ಹೊಸ ತೆರಿಗೆ; ಚುನಾವಣಾ ರಾಜ್ಯಗಳಿಗೆ ಭಾರಿ ಯೋಜನೆಗಳ ಘೋಷಣೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada