• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಅನುಕಂಪದ ನೇಮಕಾತಿಗೆ ವಿವಾಹಿತ ಮಗಳೂ ಅರ್ಹ: ಕರ್ನಾಟಕ ಹೈ ಕೋರ್ಟ್

by
December 19, 2020
in ಕರ್ನಾಟಕ
0
ಅನುಕಂಪದ ನೇಮಕಾತಿಗೆ ವಿವಾಹಿತ ಮಗಳೂ ಅರ್ಹ: ಕರ್ನಾಟಕ ಹೈ ಕೋರ್ಟ್
Share on WhatsAppShare on FacebookShare on Telegram

ವಿವಾಹಿತ ಹೆಣ್ಣುಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡದಿರುವುದನ್ನು ಕರ್ನಾಟಕ ಹೈಕೋರ್ಟ್ ಸಂವಿಧಾನ ಬಾಹಿರ ಮತ್ತು ತಾರತಮ್ಯ ನೀತಿ ಎಂದು ತೀರ್ಪು ನೀಡಿದೆ.

ADVERTISEMENT

ಕೃಷಿ ಮಾರುಕಟ್ಟೆ ಇಲಾಖೆಯು ‘ವಿವಾಹಿತ ಮಗಳಿ’ಗೆ ತಂದೆ ನಿರ್ವಹಿಸುತ್ತಿದ್ದ ಕೆಲಸವನ್ನು ಅನುಕಂಪದ ಆಧಾರದ ಮೇಲೆ ನೀಡಲಾಗುವುದಿಲ್ಲ ಎಂದು ಹೇಳಿರುವುದರ ವಿರುದ್ಧ ಭುವನೇಶ್ವರಿ ವಿ ಪುರಾಣಿಕ್ ಎಂಬವರು ಹೈಕೋರ್ಟಿಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ನಿಯಮ 2 (1)(a)(i), ನಿಯಮ 2(1)(b) ಮತ್ತು ನಿಯಮ 3 (2)(i)(c) ನ್ನು ಅಸಂವಿಧಾನಿಕ ಎಂದು ಘೋಷಿಸಿದ ಕೋರ್ಟ್, ಕರ್ನಾಟಕ ನಾಗರಿಕ ಸೇವೆಗಳು (ಅನುಕಂಪದ ನೇಮಕಾತಿ) 1996 ನಿಂದ ‘ಅವಿವಾಹಿತ’ ಪದವನ್ನು ತೆಗೆದು ಹಾಕಿದೆ.

ಹೆಚ್ಚುವರಿ ವಕೀಲರು “ಅನುಕಂಪದ ನೇಮಕಾತಿ ಹಕ್ಕು‌ ಅಲ್ಲ, ಅದು ರಿಯಾಯಿತಿ ಮಾತ್ರ” ಎಂದು ವಾದ ಮಾಡಿದ್ದರು. ತೀರ್ಪು ನೀಡುವಾಗ ನ್ಯಾಯಾಧೀಶರಾದ ಎಮ್ ನಾಗಪ್ರಸನ್ನ ಅವರು “ಮದುವೆ ಎನ್ನುವುದು ಹೆತ್ತವರೊಂದಿಗಿನ ಸಂಬಂಧದ ಮುಂದುವರಿಕೆಯನ್ನು ನಿರ್ಧರಿಸುವುದಿಲ್ಲ” ಎಂದು ಹೇಳಿದ್ದಾರೆ. ಕಾನೂನಿನ ವ್ಯಾಖ್ಯೆ ಕಾಲಕ್ಕೆ ತಕ್ಕ ಹಾಗೆ ಬದಲಾಗುತ್ತದೆ. ಕಾನೂನಿನಲ್ಲಿರುವ ಆಕ್ಷೇಪಾರ್ಹ ನಿಬಂಧನೆಗಳು ಹಾಗೆಯೇ ಉಳಿಸಿದರೆ ಗಡಿಯಾರವನ್ನು ಹಿಂದಕ್ಕೆ ತಿರುಗಿಸಿದಂತೆ ಎಂದು ಅಭಿಪ್ರಾಯ ಪಟ್ಟ ಕೋರ್ಟ್ “ಯಾವುದೇ ನಿಯಮ ಒಂದೇ ವಿಚಾರಕ್ಕೆ ಸಂಬಂಧಿಸಿದಂತೆ ಮಗನಿಗೆ ಯಾವ ಅರ್ಹತೆಯೂ ಇಲ್ಲದೆ ನೇಮಕಾತಿ ಗೆ ಅವಕಾಶ ಕೊಟ್ಟು ಮಗಳಿಗೆ ‘ವಿವಾಹಿತೆ’ ಎನ್ನುವ ಕಾರಣಕ್ಕೆ ಅವಕಾಶ ನಿರಾಕರಿಸುತ್ತದೆ ಎಂದರೆ ಅದು ತಾರತಮ್ಯವಾಗುತ್ತದೆ” ಎಂದು ಹೇಳಿತು.

ನೇಮಕಾತಿಯೊಂದು ನಡೆಯುವಾಗ ವ್ಯಕ್ತಿಯ ಮೇಲೆ ಎಷ್ಟು ಅವಲಂಬಿತರಿದ್ದಾರೆ ಎನ್ನುವುದು ಪರಿಗಣನೆಗೆ ಬರಬೇಕೇ ಹೊರತು ವ್ಯಕ್ತಿಯ ಲಿಂಗವಲ್ಲ ಎಂದೂ ಹೇಳಿರುವ ಕೋರ್ಟ್ ಸರ್ಕಾರ ಮುಂದಿನ ಆದೇಶ ನೀಡುವಾಗ ನ್ಯಾಯಾಲಯದ ಈ ಆದೇಶವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದಿದೆ.

Tags: ಅನುಕಂಪದ ನೇಮಕಾತಿಕರ್ನಾಟಕ ಹೈಕೋರ್ಟ್
Previous Post

ಹಂಪಿ ಕನ್ನಡ ವಿವಿಗೆ ಅನುದಾನ ನೀಡಲು ಕೋರಿ ಕರವೇಯಿಂದ ಅಶ್ವತ್ಥ ನಾರಾಯಣ್‌ರಿಗೆ ಮನವಿ

Next Post

ಅನಾಥಾಶ್ರಮ ಸ್ಥಾಪನೆ ಮಾಡಿ ನಿರ್ಗತಿಕರ ಸೇವೆಗೆ ನಿಂತ ಮಂಗಳಮುಖಿಯರು

Related Posts

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಇಂಧನ ಪರಿವರ್ತನೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ: ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 19, 2026
0

ಬೆಂಗಳೂರು : ಇಂಧನ ಪರಿವರ್ತನೆಗೆ ನೀತಿ, ನಿಯಂತ್ರಣದ ಜತೆಗೆ ಸಂಘಟಿತ ಪ್ರಯತ್ನಗಳು ಅನಿವಾರ್ಯ. ನ್ಯಾಯಾಂಗ, ನೀತಿ ನಿರೂಪಕರು, ನಿಯಂತ್ರಕರು ಮತ್ತು ಉದ್ಯಮದ ನಡುವಿನ ಅರ್ಥಪೂರ್ಣ ಚರ್ಚೆಗಳಿಗೆ ಈ...

Read moreDetails
ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

ಮೇ5ರ ಉಪಚುನಾವಣೆ ಫಲಿತಾಂಶದ ಬಳಿಕ ಏನೇನು ಆಗುತ್ತೆ ನೋಡ್ತಾಯಿರಿ : ಕುಮಾರಸ್ವಾಮಿ ಸ್ಫೋಟಕ ಹೇಳಿಕೆ..

April 19, 2026
ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

ಪೋಪ್ ಫ್ರಾನ್ಸಿಸ್ ಪಾತ್ರ ಕೇವಲ ಧಾರ್ಮಿಕ ನಾಯಕರಲ್ಲ, ನೈತಿಕ ಶಕ್ತಿಯ ಪ್ರತಿನಿಧಿ, ಅಧಿಕಾರದ ವಿರುದ್ಧ ಸತ್ಯವನ್ನು ನಿಲ್ಲಿಸುವ ಧೈರ್ಯವಂತ ವ್ಯಕ್ತಿತ್ವ..

April 19, 2026
ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

ನಾವು ಮಹಿಳಾ ಮೀಸಲಾತಿಯ ವಿರೋಧಿಗಳಲ್ಲಾ : ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು..!

April 19, 2026
ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

ಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತದ ಮೇಲೆ ‘ರಾಜಕೀಯ ಸರ್ಜಿಕಲ್ ಸ್ಟ್ರೈಕ್’ಗೆ ಬಿಜೆಪಿ ಸಂಚು: ಡಿ.ಕೆ. ಶಿವಕುಮಾರ್

April 19, 2026
Next Post
ಅನಾಥಾಶ್ರಮ ಸ್ಥಾಪನೆ ಮಾಡಿ ನಿರ್ಗತಿಕರ ಸೇವೆಗೆ ನಿಂತ ಮಂಗಳಮುಖಿಯರು

ಅನಾಥಾಶ್ರಮ ಸ್ಥಾಪನೆ ಮಾಡಿ ನಿರ್ಗತಿಕರ ಸೇವೆಗೆ ನಿಂತ ಮಂಗಳಮುಖಿಯರು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!