ದೇಶಾದ್ಯಂತ ಕರೋನಾ ಸೋಂಕನ್ನು ಸಶಕ್ತವಾಗಿ ಎದುರಿಸಿ, ಸಂಪೂರ್ಣ ದೇಶಕ್ಕೇ ಮಾದರಿಯಾಗಿದ್ದ ಕೇರಳದಲ್ಲಿ ಕಳೆದ ಎರಡು ದಿನಗಳಿಂದ ಪ್ರತಿದಿನ 4000ಕ್ಕೂ ಹೆಚ್ಚು ಕರೋನಾ ಸೋಂಕಿನ ಪ್ರಕರಣಗಳು ದಾಖಲಾಗಿವೆ. ಗುರುವಾರದಂದು 4,351 ಪ್ರಕರಣಗಳು ದಾಖಲಾಗಿದ್ದರೆ, ಶುಕ್ರವಾರದಂದು 4,167 ಪ್ರಕರಣಗಳು ದಾಖಲಾಗಿವೆ.
Also Read: ಕೋವಿಡ್ 19 ವಿರುದ್ಧದ ಹೋರಾಟ: ವಿಶ್ವ ಮಾಧ್ಯಮಗಳಲ್ಲಿ ರಾರಾಜಿಸಿದ ಕೇರಳ.!
ಈ ಕುರಿತಾಗಿ ಮಾತನಾಡಿರುವ ಕೇರಳ ಆರೋಗ್ಯ ಮಂತ್ರಿ ಕೆ ಕೆ ಶೈಲಜಾ, ರಾಜ್ಯದಲ್ಲಿ 35,724 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಈ ವರೆಗೆ 90,089 ಸೋಂಕಿತರು ಗುಣಮುಖರಾಗಿದ್ದಾರೆ, ಎಂದು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ತಿರುವನಂತಪುರಂನಲ್ಲಿ ಅತೀ ಹೆಚ್ಚು ಕರೋನಾ ಪ್ರಕರಣಗಳು ದಾಖಲಾಗುತ್ತಿವೆ. ಶುಕ್ರವಾರ 926 ಹೊಸ ಕರೋನಾ ಸೋಂಕಿತರು ತಿರುವನಂತಪುರಂ ಒಂದರಲ್ಲೇ ಪತ್ತೆಯಾಗಿದ್ದರು.
Also Read: ಕೇರಳ: ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಚಿನ್ನದ ಹಗರಣ
ಪ್ರತಿಭಟನೆಗಳ ಕುರಿತು ಹೈಕೋರ್ಟ್ ಗರಂ
ಕೇರಳದಲ್ಲಿ ಕರೋನಾ ಸೋಂಕು ತೀವ್ರವಾಗಿ ಹಬ್ಬುತ್ತಿದ್ದರೂ ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ವಿರುದ್ದ ಕೇರಳ ಹೈಕೋರ್ಟ್ ಗರಂ ಆಗಿದೆ. ನ್ಯಾಯಾಲಯದ ಆದೇಶವಿದ್ದರೂ ಪ್ರತಿಭಟನೆಗಳಲ್ಲಿ ಕೋವಿಡ್ ಶಿಷ್ಟಾಚಾರದ ಪರಿಪಾಲನೆ ಆಗುತ್ತಿಲ್ಲ, ಎಂದು ಹೇಳಿದೆ.
Also Read: ಕೇರಳ ಚಿನ್ನ ಹಗರಣ ದಾಖಲೆಯಿದ್ದ ಕಛೇರಿ ಬೆಂಕಿಗೆ ಆಹುತಿ: ಸರ್ಕಾರದ ಪಿತೂರಿಯೆಂದ ಪ್ರತಿಪಕ್ಷಗಳು
ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ಕೋವಿಡ್ ಶಿಷ್ಟಾಚಾರ ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೋರ್ಟ್ ಹೇಳಿದೆ.
Also Read: ಕೇರಳ ಗೋಲ್ಡ್ ಸ್ಕ್ಯಾಮ್, KT ಜಲೀಲ್ ರಾಜಿನಾಮೆಗೆ ಆಗ್ರಹ: ಹಿಂಸಾರೂಪಕ್ಕೆ ತಿರುಗಿದ ಪ್ರತಿಭಟನೆ
ಕೇರಳದಲ್ಲಿ ಬೆಳಕಿಗೆ ಬಂದಿರುವ ಚಿನ್ನ ಕಳ್ಳ ಸಾಗಣೆ ಹಗರಣಕ್ಕೆ ಸಂಬಂಧಪಟ್ಟಂತೆ ರಾಜ್ಯಾದ್ಯಂತ ಹಲವಾರು ಪ್ರತಿಭಟನೆಗಳು ನಡೆಯುತ್ತಿವೆ.