• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ವಿಪಕ್ಷ ನಾಯಕರ, ಜಾಲತಾಣಿಗರ ವ್ಯಂಗ್ಯಗಳಿಗೆಲ್ಲ ಉತ್ತರ ನೀಡುವರೇ ನಿರ್ಮಲಾ ಸೀತರಾಮನ್!?

by
May 13, 2020
in ದೇಶ
0
ವಿಪಕ್ಷ ನಾಯಕರ
Share on WhatsAppShare on FacebookShare on Telegram

ಮಂಗಳವಾರ ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೆಜ್‌ ಒಂದೊಮ್ಮೆ ಇಡೀ ದೇಶವನ್ನೇ ಹುಬ್ಬೇರುವಂತೆ ಮಾಡಿತ್ತು. ಅದಾಗಲೇ ಟ್ವಿಟ್ಟರ್‌ನಲ್ಲಿ ಕಾಲೆಳೆಯಲು ಆರಂಭಿಸಿದ ಜಾಲತಾಣಿಗರು 20ಲಕ್ಷ ಕೋಟಿ ರೂಪಾಯಿಯಿಂದ ದೇಶದ 135 ಕೋಟಿ ಜನಸಂಖ್ಯೆಯನ್ನ ಭಾಗಿಸಿದರೆ ಪ್ರತಿ ತಲೆಗೆ ಎಷ್ಟು ಹಣ ಸಿಗಬಹುದು ಅನ್ನೋ ಲೆಕ್ಕಾಚಾರಕ್ಕೆ ಇಳಿದಿದ್ದರು. ಇನ್ನೂ ಕೆಲವರು One More Jumla ಎಂದು ಹ್ಯಾಷ್‌ಟ್ಯಾಗ್‌ ಬಳಸಿ ಟ್ವಿಟ್ಟರ್‌ ತುಂಬಾ ಟ್ರೆಂಡಿಂಗ್‌ ಕ್ರಿಯೇಟ್‌ ಮಾಡಿದ್ದರು. ಇನ್ನೂ ಕೆಲವರು 15 ಲಕ್ಷ ಹಾಕದೇ ಇದ್ದರೂ ಪರ್ವಾಗಿಲ್ಲ, 15 ಸಾವಿರ ರೂಪಾಯಿ ಸಿಕ್ಕರೆ ಸಾಕು ಅಂತಾ ವ್ಯಂಗ್ಯವಾಡೋದಕ್ಕೆ ಶುರುಮಾಡಿದ್ದರು. ತಮಾಷೆ ಅಂದ್ರೆ ಖುದ್ದು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್‌ ಅವರೇ ಪ್ರಧಾನಿ ಭಾಷಣದ ಬಳಿಕ ಮಾಡಿದ ಟ್ವೀಟ್‌ ಕೂಡಾ ಎಡವಟ್ಟು ಪ್ರದರ್ಶಿಸಿತ್ತು. 20 ಲಕ್ಷ ಕೋಟಿ ಬದಲು 20 ಲಕ್ಷ ಎಂದು ಬರೆಯುವ ಮೂಲಕ ಟ್ವೀಟ್‌ ಮಾಡಿ ಆ ಬಳಿಕ ಕ್ಷಮೆಯಾಚಿಸಿ 20 ಲಕ್ಷ ಕೋಟಿ ಓದುವಂತೆ ತಿಳಿಸಿದ್ದರು.

Sorry everybody for the typo: please read as Rs 20 lakh crore. https://t.co/w3x6p59ifl

— Nirmala Sitharaman (@nsitharaman) May 12, 2020


ಇನ್ನು ಪ್ರಧಾನಿ ಮೋದಿ ಭಾಷಣ ಮುಗಿಯುತ್ತಲೇ 20 ಲಕ್ಷ ಕೋಟಿ ಪ್ಯಾಕೇಜ್‌ ಅಸಲಿಯತ್ತು ಏನೆಂದು ʼಪ್ರತಿಧ್ವನಿʼ ಸವಿವರವಾಗಿ ವಿವರಿಸಿತ್ತು. ದೇಶದ ಆರ್ಥಿಕ ಪರಿಸ್ಥಿತಿ ಗೊತ್ತಿದ್ದವರು ಯಾರೊಬ್ಬರೂ ಇದು ಸುಲಭ ಎಂದು ಹೇಳಲು ಸಾಧ್ಯವೇ ಇಲ್ಲ. ಕಾರಣ, ಹದಗೆಟ್ಟಿರುವ ದೇಶದ ಆರ್ಥಿಕ ಪರಿಸ್ಥಿತಿ ಇದೆಲ್ಲವನ್ನೂ ಬಹಿರಂಗವಾಗಿಯೇ ನಮ್ಮ ಮುಂದಿಟ್ಟಿದೆ. ಆದರೂ ಬಿಜೆಪಿ ಬೆಂಬಲಿಗರು ಮಾತ್ರ ʼಸ್ವಾವಲಂಬನೆ ಭಾರತʼಕ್ಕಾಗಿ ಇತಿಹಾಸದಲ್ಲಿಯೇ ತೆಗೆದುಕೊಂಡ ಬಹುದೊಡ್ಡ ನಿರ್ಧಾರ ಅಂತಾ ಗುಲ್ಲೆಬ್ಬಿಸತೊಡಗಿದ್ದಾರೆ.

Also Read: ₹20 ಲಕ್ಷ ಕೋಟಿ ಪ್ಯಾಕೇಜ್: ಎಷ್ಟು ಸುಳ್ಳು? ಎಷ್ಟು ಸತ್ಯ?

ಈ ಮಧ್ಯೆ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಟ್ವೀಟ್‌ವೊಂದು ಮಾಡಿದ್ದು ನಿರ್ಮಲಾ ಸೀತರಾಮನ್‌ ಇಂದಿನ ಪತ್ರಿಕಾಗೋಷ್ಟಿ ಬಗ್ಗೆ ಕುತೂಹಲ ಹುಟ್ಟಿಸಿದೆ. ಕಾರಣ, 20 ಲಕ್ಷ ಕೋಟಿ ರೂಪಾಯಿ ಪ್ಯಾಕೆಜ್‌ ಘೋಷಿಸಿರುವ ನರೇಂದ್ರೆ ಮೋದಿ ಅದರ ಮುಂದುವರಿದ ಭಾಗದ ಕತೆಯನ್ನ ವಿವರಿಸಲು ನಿರ್ಮಲಾ ಸೀತರಾಮನ್‌ ಅವರಿಗೆ ಒಪ್ಪಿಸಿದ್ದಾರೆ. ಇದನ್ನೇ ವ್ಯಂಗ್ಯ ಮಾಡಿರುವ ಪಿ.ಚಿದಂಬರಂ ತನ್ನ ಟ್ವೀಟ್‌ ನಲ್ಲಿ , ““ನಿನ್ನೆ ಖಾಲಿ ಪೇಪರ್‌ನಲ್ಲಿ ಹೆಡ್‌ಲೈನ್‌ ಕೊಟ್ಟಿದ್ದಾರೆ. ಇವತ್ತು ಅದನ್ನ ಹಣಕಾಸು ಸಚಿವರು fill ಮಾಡಲಿದ್ದಾರೆ. ಆದರೆ ನಾವು ಪ್ರತಿ ಹೆಚ್ಚುವರಿ ರೂಪಾಯಿಗೂ ಜಾಗರೂಕರಾಗಿ ಲೆಕ್ಕ ಹಾಕಲಿದ್ದೇವೆ” ಎಂದು ತನ್ನ ಸರಣಿ ಟ್ವೀಟ್‌ ಮೂಲಕ ತಿಳಿಸಿದ್ದಾರೆ. ಈ ಮೂಲಕ ಪ್ರಧಾನಿ 20 ಲಕ್ಷ ಕೋಟಿ ಪ್ಯಾಕೇಜ್‌ ಅನ್ನು ʼಹೆಡ್‌ಲೈನ್‌ ಹೊಂದಿರುವ ಖಾಲಿ ಪೇಪರ್‌ʼ ಗೆ ಹೋಲಿಸಿದ್ದಾರೆ. ಅಲ್ಲದೇ ಸಹಜವಾಗಿ ಇದೊಂದು ಖಾಲಿ ಪೇಪರ್‌ ಆಗಿಯೇ ಇರಲಿದೆ ಎಂದಿದ್ದಾರೆ.

Yesterday, PM gave us a headline and a blank page. Naturally, my reaction was a blank!

Today, we look forward to the FM filling the blank page. We will carefully count every ADDITIONAL rupee that the government will actually infuse into the economy.

— P. Chidambaram (@PChidambaram_IN) May 13, 2020


ಇನ್ನು ಕಾಂಗ್ರೆಸ್‌ ನಾಯಕರು ಮೋದಿಯವರ 20 ಲಕ್ಷ ಕೋಟಿ ಪ್ಯಾಕೆಜ್‌ ಸ್ವಾಗತಿಸುವುದಾಗಿ ತಿಳಿಸಿದ್ದಾರೆ. ಆದರೆ ಇದರ ಪೂರ್ಣ ವಿವರಕ್ಕಾಗಿ ಕಾಯುವುದಾಗಿಯೂ ತಿಳಿಸಿದೆ. ಆ ಮೂಲಕ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್‌ ಬುಧವಾರ ಸಂಜೆ 4 ಗಂಟೆಗೆ ನಡೆಸಲಿರುವ ಭಾಷಣದ ಬಗ್ಗೆ ಹೆಚ್ಚು ಕುತೂಹಲ ಮೂಡುವಂತೆ ಮಾಡಿದೆ.

Finance Minister Smt. @nsitharaman will address a Press Conference today, 13th May 2020, at 4 PM in New Delhi.#EconomicPackage#AatmanirbharBharat #AatmaNirbharBharatAbhiyan #IndiaFightsCorona pic.twitter.com/FmKcItA23C

— Ministry of Finance #StayHome #StaySafe (@FinMinIndia) May 13, 2020


ADVERTISEMENT

ಒಟ್ಟಿನಲ್ಲಿ ಪ್ರಧಾನಿ ಭಾಷಣದಲ್ಲಿ ಘೋಷಿಸಿರುವ 20 ಲಕ್ಷ ಕೋಟಿ ರೂಪಾಯಿ ಹಣದ ನಿಖರ ಮಾಹಿತಿ ನೀಡಲು ಹಣಕಾಸು ಸಚಿವೆಗೆ ಬಿಟ್ಟಿರೋದು ನೋಡಿದರೆ, ತನಗೆ ಪೂರಕವಾಗಿರುವ ಹಾಗೂ ಜನ ಮರುಳಾಗುವ ಮಾಹಿತಿಯನ್ನ ಮಾತ್ರ ತಾನೇ ಹೇಳಿ ಮುಗಿಸಿ, ಒಂದಿಷ್ಟು ಟ್ವಿಸ್ಟ್‌ ಇರುವ ವಿಚಾರಗಳನ್ನ ದೇಶದ ಹಣಕಾಸು ಸಚಿವೆಗೆ, ಆರ್‌ಬಿಐ ಗವರ್ನರ್‌ ಗೆ ಅಥವಾ ಐಸಿಎಂಆರ್‌ ಅಧಿಕಾರಿಗಳಿಗೆ ಬಿಟ್ಟು ಕೈ ತೊಳೆದುಕೊಳ್ಳುವುದರಲ್ಲಿ ಪ್ರಧಾನಿ ಮೋದಿ ತನ್ನ ನಿಸ್ಸೀಮತನವನ್ನ ಪ್ರದರ್ಶಿಸುವಂತಿದೆ.

Tags: ‌ covid-19‌ ಪ್ರಧಾನಿ ಮೋದಿniramala sitharamnP ChidambaramPM Modiಕೋವಿಡ್-19ನಿರ್ಮಲಾ ಸೀತರಾಮನ್ಪಿ ಚಿದಂಬರಂ
Previous Post

ಜುಲೈ ತಿಂಗಳ ಅಂತ್ಯಕ್ಕೆ CET ಪರೀಕ್ಷೆ ನಿಗದಿ

Next Post

ಗುಜರಾತ್‌ನಲ್ಲಿ ಸಚಿವನ ಶಾಸಕತ್ವಕ್ಕೆ ಕುತ್ತು! ಕರ್ನಾಟಕಕ್ಕೂ ಆಗುತ್ತಾ ಅನ್ವಯ..!?

Related Posts

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :
Top Story

ನುಡಿದಂತೆ ನಡೆದ ಹೆಮ್ಮೆ ನಮಗಿದೆ : ರಾಜೀನಾಮೆಯ ಸುಳಿವು ನೀಡಿತಾ ಸಿದ್ದರಾಮಯ್ಯ ಪೋಸ್ಟ್‌..? :

by ಪ್ರತಿಧ್ವನಿ
May 27, 2026
0

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಸಂಬಂಧಿಸಿದ ಪೂರಕ ಬೆಳವಣಿಗೆಗಳು ಮುಂದುವರೆದಿವೆ. ಹೈಕಮಾಂಡ್‌ ನಾಯಕರೊಂದಿಗಿನ ಸಭೆಯ ಬಳಿಕ ಬೆಂಗಳೂರಿಗೆ ಆಗಮಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ...

Read moreDetails
ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

May 27, 2026
BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

BREAKING NEWS : ಗುಜರಾತ್‌ ತಂಡವನ್ನು ಬಗ್ಗು ಬಡಿದ RCB : 5ನೇ ಬಾರಿಗೆ ಫೈನಲ್‌ ಪ್ರವೇಶ..

May 26, 2026
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

May 26, 2026
“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”

“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”

May 26, 2026
Next Post
ಗುಜರಾತ್‌ನಲ್ಲಿ ಸಚಿವನ ಶಾಸಕತ್ವಕ್ಕೆ ಕುತ್ತು! ಕರ್ನಾಟಕಕ್ಕೂ ಆಗುತ್ತಾ ಅನ್ವಯ..!?

ಗುಜರಾತ್‌ನಲ್ಲಿ ಸಚಿವನ ಶಾಸಕತ್ವಕ್ಕೆ ಕುತ್ತು! ಕರ್ನಾಟಕಕ್ಕೂ ಆಗುತ್ತಾ ಅನ್ವಯ..!?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada