• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಆರೋಗ್ಯ ಇಲಾಖೆ ಮಹಾ ಎಡವಟ್ಟು..! ಎಷ್ಟು ಜನರಿಗೆ ಹೀಗಾಯ್ತೋ..!?

by
May 7, 2020
in ಕರ್ನಾಟಕ
0
ಆರೋಗ್ಯ ಇಲಾಖೆ ಮಹಾ ಎಡವಟ್ಟು..! ಎಷ್ಟು ಜನರಿಗೆ ಹೀಗಾಯ್ತೋ..!?
Share on WhatsAppShare on FacebookShare on Telegram

ಕರೋನಾ ಸೋಂಕು ದೇಶ ವಿದೇಶಗಳಲ್ಲಿ ನರ್ತನ ಮಾಡುತ್ತಿದೆ. ರಾಜ್ಯದಲ್ಲೂ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಲೇ ಸಾಗಿದೆ. ಈ ನಡುವೆ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರ ಮೇಲೆ ಅಲ್ಲಲ್ಲಿ ಹಲ್ಲೆ ನಡೆದಿರುವ ಘಟನೆಗಳು ವರದಿಯಾಗುತ್ತಿವೆ. ಬೆಂಗಳೂರಿನ ಸರಾಯಿ ಪಾಳ್ಯ ಹಾಗೂ ಪಾದರಾಯನಪುರ ವಾರ್ಡ್‌ ಗಳಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಪೊಲೀಸರ ಮೇಲಿನ ದಾಳಿ ಬಳಿಕ ಕರ್ನಾಟಕ ರಾಜ್ಯ ಸರ್ಕಾರ ಕಾನೂನುನನ್ನೇ ರೂಪಿಸಿತು. ಕರೋನಾ ಸೋಂಕಿನ ನಡುವೆ ಕೆಲಸ ಮಾಡುತ್ತಿರುವ ಆರೋಗ್ಯ ಸಿಬ್ಬಂದಿ ಸೇರಿದಂತೆ ಕರೋನಾ ವಾರಿಯರ್ಸ್ ಮೇಲೆ ದಾಳಿ ಮಾಡಿದರೆ ಜೈಲು ಹಾಗೂ ದಂಡ ಎರಡನ್ನೂ ವಿಧಿಸಬಹುದಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿಗಳ ವಿರುದ್ಧ ಹಲ್ಲೆ ಮಾಡಿದವರಿಗೆ ಶಿಕ್ಷೆ ಕೊಡಬೇಕು ಸರಿಯಾದ ನಿರ್ಧಾರ ಸರಿ. ಆದರೆ ಆರೋಗ್ಯ ಇಲಾಖೆ ತಪ್ಪು ಮಾಡಿದಾಗ ಶಿಕ್ಷೆ ಕೊಡುವುದು ಯಾರಿಗೆ ಅಲ್ಲವೇ..?

ADVERTISEMENT

ಮೊದಲೇ ಹೇಳಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಮಹಾನ್ ಎಡವಟ್ಟು ಮಾಡಿದ್ದಾರೆ. ಬೇಗೂರು ಠಾಣೆ ಪೋಲೀಸ್ ಪೇದೆಗೆ ಕರೋನಾ ಪಾಸಿಟಿವ್ ಬಂದಿದೆ ಎಂದು ದೊಡ್ಡ ಸುದ್ದಿಯಾಗಿತ್ತು. ಅದಕ್ಕೆ ಕಾರಣ ಪೊಲೀಸ್ ಪೇದೆ ಟ್ರಾವೆಲ್ ಹಿಸ್ಟರಿ. ಪೊಲೀಸ್ ಪೇದೆ ಟೆಸ್ಟ್ ಗೆ ಕೊಟ್ಟು ಚಾಮರಾಜನಗರಕ್ಕೆ ಬಂದಿದ್ದು. ಚಾಮರಾಜನಗರ ಹಸಿರು ವಲಯವಾಗಿತ್ತು ಪೇದೆ ಬಂದಿದ್ದರಿಂದ 24 ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು, ಆತಂಕದ ಪರಿಸ್ಥಿತಿ ಎದುರಾಗಿತ್ತು. ಆದರೆ ರಿಸಲ್ಟ್ ನೆಗೆಟಿವ್ ಬಂದಿದೆ. ಹಾಗಾಗಿ ಆಸ್ಪತ್ರೆಯಿಂದ ಪೊಲೀಸ್ ಪೇದೆಯನ್ನು ಹೋಟೆಲ್ ನಿಂದ ಕ್ವಾರಂಟೈನ್ ಗೆ ಶಿಫ್ಟ್ ಮಾಡಲಾಗಿದೆ. ಯಾರದ್ದೋ ಬದಲಿಗೆ ಮತ್ಯಾರನ್ನೋ ಪಾಸಿಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆ ಘೋಷಿಸಿ ಎಡವಟ್ಟು ಮಾಡಿದೆ ಎನ್ನುವುದು ಗೊತ್ತಾಗಿದೆ. ಎರಡನೇ ಬಾರಿ ರಕ್ತ ಪರೀಕ್ಷೆ ರಿಸಲ್ಟ್ ನಲ್ಲಿ ನೆಗೆಟಿವ್ ಎಂದು ಬಂದಿದೆ. ಸೋಂಕು ಇಲ್ಲದಿದ್ರೂ ಬೇಗೂರು ಪೋಲಿಸ್ ಕಾನ್‌ಸ್ಟೇಬಲ್ ಒಂದು ರಾತ್ರಿ ಕರೋನಾ ಸೋಂಕಿತರ ಜೊತೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಳೆಯುವಂತಾಗಿದೆ. ಪೇಷೆಂಟ್ ನಂಬರ್ 650 ಎಂದು ಸೋಂಕಿತ ಪೇದೆಯನ್ನು ಗುರುತಿಸಲಾಗಿತ್ತು. ಆದರೆ ಈಗ ಬೇರೆ ಪೇದೆಗಳ ರಿಸಲ್ಟ್ ಕೂಡಾ ನೆಗೆಟಿವ್. ಆದರೂ ಆರೋಗ್ಯ ಇಲಾಖೆ ಪಾಸಿಟಿವ್ ಎಂದು ವರದಿ ಕೊಟ್ಟಿದ್ದಾದರೂ ಹೇಗೆ ಎನ್ನುವ ಪ್ರಶ್ನೆ ಮೂಡಿಸಿದೆ.

ಪೊಲೀಸ್ ಪೇದೆ ವಿಚಾರ ಮಾತ್ರವಲ್ಲ. ತುಂಬು ಗರ್ಭಿಣಿ ರಿಸಲ್ಟ್ ಕೂಡಾ ನೆಗೆಟಿವ್ ಎಂದು ಬಂದಿದೆ. ಖಾಸಗಿ ಲ್ಯಾಬ್‌ ನಲ್ಲಿ ಮಾಡಿದ್ದ ಪರೀಕ್ಷೆ ಸಂಪೂರ್ಣ ತಪ್ಪು ಎಂದು ಗೊತ್ತಾಗಿದೆ. ಎಲ್ಲಾ ಪ್ಯಾರಾಮೀಟರ್ಸ್‌ ನನ್ನೂ ಕರೋನಾ ಸೋಂಕು ಫುಲ್ ನೆಗೆಟಿವ್ ಬಂದಿದೆ. ಮತ್ತೊಮ್ಮೆ ಪರೀಕ್ಷಿಸಿ ದೃಢಪಡಿಸಿ ಎಂದರೂ ರಿಸಲ್ಟ್ ಬರುವ ಮುನ್ನವೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಬಹು ದೊಡ್ಡ ತಪ್ಪು ಮಾಡಿದ್ದಾರೆ. ರಿಸಲ್ಟ್ ಬರುವವರಗೆ ಬೇರೆ ಕಡೆ ಐಸೊಲೇಶನ್ ಮಾಡಬೇಕಿತ್ತು. ಆದರೆ ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ತಾಳ್ಮೆಯಿಂದ ವರ್ತಿಸದೆ ಎಡವಟ್ಟು ಮಾಡಿದೆ. ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ತುಂಬು ಗರ್ಭಿಣಿ ಒಂದು ರಾತ್ರಿ ಆತಂಕದಲ್ಲೇ ಕಳೆಯುವಂತಾಗಿದೆ.

ಒಂದು ಕಡೆ ಖಾಸಗಿ ಲ್ಯಾಬ್‌ ನಲ್ಲಿ ಟೆಸ್ಟ್ ಮಾಡಿಸಿಕೊಳ್ಳಬಹುದು ಎಂದು ಭಾರತ ಸರ್ಕಾರವೇ ಅನುಮತಿ ಕೊಟ್ಟಿದೆ. ಆದರೆ ಮಾಡುತ್ತಿರುವ ಟೆಸ್ಟ್ ಮೇಲೆ ಜನರು ನಂಬಿಕೆ ಇಟ್ಟುಕೊಳ್ಳಬಹುದಾ..? ಎನ್ನುವ ಸಾಮಾನ್ಯ ಪ್ರಶ್ನೆ ಉದ್ಭವ ಆಗುವಂತೆ ಮಾಡಿದೆ. ಕರೋನಾ ರೋಗಿ ಎಂದು ನಿರ್ಧರಿಸುವ ಮುನ್ನ ಎರಡೆರಡು ಬಾರಿ ಪರೀಕ್ಷಿಸಬೇಕು ಆರೋಗ್ಯ ಇಲಾಖೆ ಸಿಬ್ಬಂದಿಯೇ ಹೇಳುತ್ತಾರೆ. ಆದರೆ ಪೋಲೀಸ್ ಪೇದೆ ಮತ್ತು ಗರ್ಭಿಣಿ ಇಬ್ಬರ ವಿಚಾರದಲ್ಲೂ ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳು ಮಹಾನ್ ಎಡವಟ್ಟು ಮಾಡಿದ್ದಾರೆ. ಈ ಅಧಿಕಾರಿಗಳ ಮಹಾ ಎಡವಟ್ಟಿನಿಂದ ಇಬ್ಬರು ರೋಗಿಗಳು ಅಲ್ಲದವರು ಪರಿತಪಿಸುತ್ತಿದ್ದಾರೆ. ಮಡಿವಾಳದ ಗರ್ಭಿಣಿ ಪೇಷೆಂಟ್ ನಂಬರ್ 652 ಎಂದು ಗುರುತಿಸಲಾಗಿದೆ. ಆದರೆ ಈ ಇಬ್ಬರು ರೋಗಿಗಳಿಗೂ ಈಗ ಸೋಂಕು ಬರುವ ಸಾಧ್ಯತೆ ಹೆಚ್ಚಾಗಿದೆ.

ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಂದೇ ದೂರವಾಣಿ ಸಂಖ್ಯೆ ನೀಡಿ ಎರಡು ಅರ್ಜಿಗಳಿದ್ದವು. ಇದರಿಂದ ಗೊಂದಲ ಉಂಟಾಯಿತು. ಈಗ ಇಬ್ಬರೂ ಪೇದೆಗಳನ್ನು ಐಸೊಲೇಶನ್ ನಲ್ಲಿ ಇಡಲಾಗಿದೆ. ತಪ್ಪು ಎಸಗಿದ ಅಧಿಕಾರಿಗಳನ್ನು ಗುರುತಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಸಮರ್ಥನೆ ಜೊತೆಗೆ ಶಿಕ್ಷೆ ಮಾತನಾಡಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಮಾಡಿರುವ ತಪ್ಪಿಗೆ ಶಿಕ್ಷೆಯೂ ಆಗಬಹುದು. ಆದರೆ ಒಂದು ದಿನಗಳ ಕಾಲ ಆ ತುಂಬು ಗರ್ಭಿಣಿ ಅನುಭವಿಸಿರುವ ಯಾತನೆಯನ್ನು ಊಹೆ ಮಾಡಲಾದಿತೇ..? ಆ ಪೊಲೀಸ್ ಪೇದೆ ಸಂಪರ್ಕಕ್ಕೆ ಬಂದಿದ್ದರು ಎಂದು ಕ್ವಾರಂಟೈನ್ಗೆ ಒಳಗಾಗಿದ್ದ ಅಮಾಯಕ ಜನರು ಯಾವ ತಪ್ಪು ಮಾಡಿದ್ದರು..? ಒಂದು ವೇಳೆ ಪಾಸಿಟೀವ್ ರೋಗಿಗಳ ಜೊತೆಗೆ ಒಂದು ದಿನ ಕಾಲ ಕಳೆದ ಕಾರಣ ಪೊಲೀಸ್ ಪೇದೆ ಹಾಗೂ ಗರ್ಭಿಣಿಗೆ ಒಂದೊಮ್ಮೆ ಇದೀಗ ಸೋಂಕು ಬಂದರೆ ಯಾರು ಜವಾಬ್ದಾರಿ..? ಶಿಕ್ಷೆ ಕೊಟ್ಟ ಮಾತ್ರಕ್ಕೆ ಇದೆಲ್ಲಾ ಸರಿಯಾಗುತ್ತಾ..? ಇದಕ್ಕೆಲ್ಲಾ ಸಂಬಂಧಪಟ್ಟವರೇ ಉತ್ತರ ಕೊಡಬೇಕಿದೆ.

Tags: ‌ covid-19 test‌ ಕರ್ನಾಟಕ ರಾಜ್ಯ ಪೊಲೀಸ್‌ ವಿಕ್ಟೋರಿಯಾ ಆಸ್ಪತ್ರೆBBMPCovid 19govt of karnatakaKarnataka State Policevictoria hospitalಕರ್ನಾಟಕ ಸರಕಾರಕೋವಿಡ್‌ ಟೆಸ್ಟ್ಕೋವಿಡ್-19ಬಿಬಿಎಂಪಿ
Previous Post

ಬುದ್ಧ ನಮ್ಮೊಳಗೆ ಚಿಗುರೊಡೆಯುತ್ತಲಿರುವವರೆಗೂ ಇವನ ಅಸ್ತಿತ್ವ ಎಂದಿಗೂ ಪ್ರಸ್ತುತ!

Next Post

ಸುರಕ್ಷತಾ ಕಿಟ್ ಇಲ್ಲದೆ ಕೋವಿಡ್-19 ಮೃತದೇಹವನ್ನು ʼಪ್ಯಾಕ್ʼ ಮಾಡಿದ ಪೌರ ಕಾರ್ಮಿಕೆ

Related Posts

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?
Top Story

ಮೇ 28ರಂದೇ ಸಿಎಂ ಸ್ಥಾನ ತ್ಯಜಿಸುತ್ತಾರಾ ಸಿದ್ದರಾಮಯ್ಯ..? : ನೂತನ ಸಂಪುಟ ಹೇಗಿರಲಿದೆ..?

by ಪ್ರತಿಧ್ವನಿ
May 27, 2026
0

ಬೆಂಗಳೂರು : ಕಾಂಗ್ರೆಸ್ ನಾಯಕತ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ನಡುವಿನ ದೀರ್ಘಕಾಲದ ಶೀತಲ ಸಮರ ಪರಿಹರಿಸುವಲ್ಲಿ ಯಶಸ್ವಿಯಾದಂತೆ ಕಂಡು ಬರುತ್ತಿದೆ. ಈ ಮೂಲಕ ಸಿದ್ದರಾಮಯ್ಯ ವಿದಾಯಕ್ಕೆ...

Read moreDetails
ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್‌ಸೈಡ್‌ ಡೀಟೆಲ್ಸ್‌ ಇಲ್ಲಿದೆ..

May 26, 2026
“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”

“ಸರ್ಕಾರದಲ್ಲಿ ‘ಕುರ್ಚಿ’ಗಾಗಿ ಕಚ್ಚಾಟ, ದೆಹಲಿ ‘ಹೈಕಮಾಂಡ್’ ಮುಂದೆ ಸಾಷ್ಟಾಂಗ ನಮಸ್ಕಾರ!”

May 26, 2026
ಬೆಂಗಳೂರಿನಲ್ಲಿ ‘ಪೆದ್ದಿ’ ಪ್ರಮೋಷನ್..ರಾಮ್ ಚರಣ್ ಗೆ ರಾಷ್ಟ್ರಪ್ರಶಸ್ತಿ ಕೊಡ್ಬೇಕು ಎಂದ ಶಿವಣ್ಣ

ಬೆಂಗಳೂರಿನಲ್ಲಿ ‘ಪೆದ್ದಿ’ ಪ್ರಮೋಷನ್..ರಾಮ್ ಚರಣ್ ಗೆ ರಾಷ್ಟ್ರಪ್ರಶಸ್ತಿ ಕೊಡ್ಬೇಕು ಎಂದ ಶಿವಣ್ಣ

May 26, 2026
ದೆಹಲಿಯಲ್ಲಿ ಹೈ ವೋಲ್ಟೇಜ್‌ ಸಭೆಯಲ್ಲಿ ಡಿಕೆ, ಸಿದ್ದು ಚರ್ಚಿಸಿದ್ದೇನು..?

ದೆಹಲಿಯಲ್ಲಿ ಹೈ ವೋಲ್ಟೇಜ್‌ ಸಭೆಯಲ್ಲಿ ಡಿಕೆ, ಸಿದ್ದು ಚರ್ಚಿಸಿದ್ದೇನು..?

May 26, 2026
Next Post
ಸುರಕ್ಷತಾ ಕಿಟ್ ಇಲ್ಲದೆ ಕೋವಿಡ್-19 ಮೃತದೇಹವನ್ನು ʼಪ್ಯಾಕ್ʼ ಮಾಡಿದ ಪೌರ ಕಾರ್ಮಿಕೆ

ಸುರಕ್ಷತಾ ಕಿಟ್ ಇಲ್ಲದೆ ಕೋವಿಡ್-19 ಮೃತದೇಹವನ್ನು ʼಪ್ಯಾಕ್ʼ ಮಾಡಿದ ಪೌರ ಕಾರ್ಮಿಕೆ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada