ಅಕ್ಕಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ಕೋವಿಡ್-19ನಿಯಂತ್ರಣದಲ್ಲಿ ಕರ್ನಾಟಕ ಉತ್ತಮ ಸಾಧನೆ ತೋರಿದೆ. ಅಷ್ಟೇ ಅಲ್ಲ, ಕರೋನಾ ಸೋಂಕು ದೃಢಸೂಚ್ಯಂಕ ಶೇ.2.30ಯಷ್ಟಿದ್ದು, ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಇದು ಉತ್ತಮ ಸಾಧನೆಯೇ ಹೌದು.ಏಕೆಂದರೆ, ರಾಷ್ಟ್ರದ ಸರಾಸರಿ ಸೂಚ್ಯಂಕ 4.3ರಷ್ಟಿದೆ. ಇದುವರೆಗೆ 13,413 ಕ್ಕೂ ಹೆಚ್ಚು ಮಂದಿಯರಕ್ತ ಹಾಗೂ ಗಂಟಲಿನ ದ್ರವದ ಮಾದರಿಗಳನ್ನು ಸಂಗ್ರಹಿಸಿಸಲಾಗಿದ್ದು, ಸೋಂಕು ದೃಢಪಟ್ಟಿರುವುದು 315 ಮಂದಿಗೆ. ಆದರೆ, ಇದರನಡುವೆಯೇ ಕಳೆದ ಎರಡು ದಿನಗಳಲ್ಲಿ ಶಂಕಿತರ ಸಂಖ್ಯೆ ಏರಿಕೆಯಾಗುತ್ತಿರುವುದು ಆತಂಕಕ್ಕೆಕಾರಣವಾಗಿದೆ.
ಹೌದು, ಕಳೆದ ಎರಡು ದಿನಗಳಲ್ಲಿ ಶಂಕಿತರ ಸಂಖ್ಯೆ 355ಆಗಿದೆ. ಅದರಲ್ಲೂ ಬುಧವಾರ 203 ಮಂದಿಯಲ್ಲಿ ಕರೋನಾಸೋಂಕಿನ ಶಂಕೆ ಕಾಣಿಸಿಕೊಂಡಿದ್ದು, ಇತ್ತೀಚಿನದಿನಗಳಲ್ಲಿ ಈ ಎರಡು ದಿನಗಳಲ್ಲಿ ಶಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಹೊಸದಾಗಿ ಸೋಂಕುಕಾಣಿಸಿಕೊಂಡವರಿಗಿಂತಲೂ ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಹೇಳಲಾಗುತ್ತಿದೆ. ಏಕೆಂದರೆ, ಈರೀತಿ ಶಂಕಿತರ ಸಂಖ್ಯೆ ಹೆಚ್ಚುತ್ತಿರುವುದು, ಅದರ ಜತೆಗೆ ಸೋಂಕಿತರ ಸಂಖ್ಯೆಯೂ ಏರುಮುಖದಲ್ಲಿಸಾಗುತ್ತಿರುವುದು ರಾಜ್ಯದಲ್ಲಿ ಲಾಕ್ಡೌನ್ ನಿರ್ಬಂಧ ಸಮರ್ಪಕವಾಗಿ ಜಾರಿಯಾಗುತ್ತಿಲ್ಲ, ಸೋಂಕುಹರಡದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಜನರು ಆಸಕ್ತಿ ತೋರುತ್ತಿಲ್ಲ ಎಂಬುದಕ್ಕೆಉದಾಹರಣೆಯಾಗಿದೆ. ಹೀಗಿರುವಾಗ ಸರ್ಕಾರ ಕಠಿಣ ನಿಲುವು ತಳೆಯದೇ ಇದ್ದರೆ ಸೋಂಕು ಇನ್ನಷ್ಟುತೀವ್ರಗತಿಯಲ್ಲಿ ಹಬ್ಬುವ ಭೀತಿ ಕಾಣಿಸಿಕೊಳ್ಳಲಾರಂಭಿಸಿದೆ.
ರಾಜ್ಯ ಸರ್ಕಾರ ಗುರುವಾರ ಸಂಜೆ 5 ಗಂಟೆವರೆಗಿನ ಕರೋನಾಸೋಂಕಿತರ ವರದಿ ಬಿಡುಗಡೆ ಮಾಡಿದ್ದು, ಬುಧವಾರ ಸಂಜೆ 5 ಗಂಟೆಯಿಂದ ಹೊಸದಾಗಿ 36 ಮಂದಿಯಲ್ಲಿ ಕರೋನಾಸೋಂಕುಕಾಣಿಸಿಕೊಂಡಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 315ಕ್ಕೆ ಏರಿದೆ. 13 ಮಂದಿಮೃತಪಟ್ಟಿದ್ದರೆ, 82 ಮಂದಿ ಸೋಂಕುಮುಕ್ತರಾಗಿ ಮನೆಗೆ ಮರಳಿದ್ದಾರೆ. ಬುಧವಾರದವರೆಗೆ ಪ್ರತಿನಿತ್ಯಪತ್ತೆಯಾಗುತ್ತಿದ್ದ ಸೋಂಕಿನ ಪ್ರಮಾಣ 20ರ ಒಳಗೇ ಇತ್ತು. ಇತ್ತೀಚೆಗೆ ಸೋಂಕು ಹರಡುವ ಪ್ರಮಾಣಹೆಚ್ಚಾದ ಬಳಿಕ ಅಂದರೆ ಏ. 12ರಂದು 17 ಮಂದಿಯಲ್ಲಿ, ಏ. 13ರಂದು 15 ಮಂದಿಯಲ್ಲಿ, ಏ.14ರಂದು 13 ಮಂದಿಯಲ್ಲಿ, ಏ. 15ರಂದು 19 ಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿತ್ತು.ಆದರೆ, ಗುರುವಾರ (ಏ. 16) 36 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.ಒಟ್ಟಾರೆ ಹೇಳುವುದಿದ್ದರೆ ಏ. 11ರಿಂದ ಇದುವರೆಗೆ100 ಮಂದಿಯಲ್ಲಿ ಹೊಸದಾಗಿ ಕರೋನಾ ಸೋಂಕು ಕಾಣಿಸಿಕೊಂಡಿದೆ. ಏ. 11ರಂದು 215 ಮಂದಿಯಲ್ಲಿ ಕರೋನಾ ಸೋಂಕಿದ್ದರೆ,ಏ. 16ರಂದು ಆ ಸಂಖ್ಯೆ 315ಕ್ಕೇರಿದೆ. ಅದೇ ರೀತಿ ಸಾವಿನ ಸಂಖ್ಯೆಯೂ ಏರಿಕೆಯಾಗಿದ್ದು, ಏ.11ರವರೆರೆ ಈ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 6 ಇತ್ತು. ಏ. 13ರವರೆಗೆ ಇದೇ ಸಂಖ್ಯೆಮುಂದುವರಿದಿತ್ತು.
ಆದರೆ, ಏ. 13ರಿಂದ ಮೃತರ ಸಂಖ್ಯೆಯಲ್ಲಿ ದಿಡೀರ್ ಏರಿಕೆ ಕಂಡಿದ್ದು,ಪ್ರಸ್ತುತ 13 ಮಂದಿ ಮೃತಪಟ್ಟಿದ್ದಾರೆ.ಎಚ್ಚೆತ್ತುಕೊಳ್ಳಬೇಕಾಗಿದೆ ಸರ್ಕಾರಕರೋನಾ ನಿಯಂತ್ರಣ ವಿಚಾರದಲ್ಲಿ ಕೇರಳ ರಾಜ್ಯವನ್ನುನಾವು ನೆನಪಿಸಿಕೊಳ್ಳಲೇ ಬೇಕು. ಏಕೆಂದರೆ, ದೇಶದಲ್ಲಿ ಮೊಟ್ಟ ಮೊದಲು ಕರೋನಾ ವೈರಸ್ ಕಾಣಿಸಿಕೊಂಡಿದ್ದೇಕೇರಳದಲ್ಲಿ. ಕರೋನಾ ಸೃಷ್ಟಿಯಾದ ಚೀನಾದ ವುಹಾನ್ನಿಂದ ಆಗಮಿಸಿದ್ದ ಮೂವರಲ್ಲಿ ಮೊದಲಿಗೆ ಸೋಂಕುಕಾಣಿಸಿಕೊಂಡಿತ್ತು. ನಂತರ ಏರುಮುಖವಾಗಿ ಸಾಗುತ್ತಿಲ್ಲ ಅದರ ನಿಯಂತ್ರಣಕ್ಕೆ ಅಲ್ಲಿನ ಸರ್ಕಾರ,ಅದರಲ್ಲೂ ಮುಖ್ಯವಾಗಿ ಆರೋಗ್ಯ ಇಲಾಖೆ ಕೈಗೊಂಡ ಕಠಿಣ ಕ್ರಮಗಳಿಂದಾಗಿ ಸೋಂಕು ಹತೋಟಿಗೆ ಬಂದಿದೆ.ದೇಶದೆಲ್ಲಡೆ ಸೋಂಕು ಹೆಚ್ಚುತ್ತಲೇ ಇದ್ದರೆ ಕೇರಳದಲ್ಲಿ ಕಡಿಮೆಯಾಗುತ್ತಿದೆ. ಗುರುವಾರ ಏಳುಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, ಇದರಲ್ಲಿ ಐವರು ವಿದೇಶ ಪ್ರಯಾಣದ ಇತಿಹಾಸಹೊಂದಿದ್ದರೆ, ಸೋಂಕಿತರ ಸಂಪರ್ಕರದಲ್ಲಿದ್ದವರು ಇಬ್ಬರು ಮಾತ್ರ.

ಅಂದರೆ, ಇಡೀ ದೇಶದಲ್ಲಿ ಕರೋನಾ ಸೋಂಕಿತರಸಂಖ್ಯೆ ಹೆಚ್ಚಲು ಸೋಂಕಿತರ ಸಂಪರ್ಕದಲ್ಲಿದ್ದವರಲ್ಲಿ ಹೆಚ್ಚಾಗಿ ಸೋಂಕು ಕಾಣಿಸಿಕೊಂಡಿರುವುದುಕಾರಣವಾದರೆ, ಕೇರಳದಲ್ಲಿ ಕರೋನಾ ಸೋಂಕಿತರ ಸಂಪರ್ಕ ಹೊಂದಿದವರಿಗೆ ಸೋಂಕು ಕಾಣಿಸಿಕೊಳ್ಳುವುದುವಿರಳವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಅಲ್ಲಿ ಜನ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿರುವುದುಮತ್ತು ಲಾಕ್ಡೌನ್ ನಿರ್ಬಂಧವನ್ನು ಕಠಿಣವಾಗಿ ಜಾರಿಗೊಳಿಸುತ್ತಿರುವುದು.ರಾಜ್ಯದಲ್ಲಿ ಹೆಚ್ಚುತ್ತಿರುವ ಕರೋನಾ ಸೋಂಕಿತರು ಮತ್ತುಶಂಕಿತರ ಸಂಖ್ಯೆ ನಿಯಂತ್ರಿಸಲು ಕರ್ನಾಟಕ ನೆರೆಯ ಕೇರಳ ರಾಜ್ಯವನ್ನು ಉದಾಹರಣೆಯಾಗಿತೆಗೆದುಕೊಳ್ಳಬೇಕಾಗಿದೆ.
ಏಕೆಂದರೆ, ಕರೋನಾ ಸೋಂಕು ಕಾಣಿಸಿಕೊಂಡ ಆರಂಭದಲ್ಲಿ ಕರ್ನಾಟಕ ಸರ್ಕಾರಕೈಗೊಂಡ ಕೆಲವೊಂದು ನಿರ್ಧಾರಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದವು. ರಾಜ್ಯದ ಮಾದರಿಯನ್ನುಕೇಂದ್ರ ಸರ್ಕಾರ ಮಾತ್ರವಲ್ಲದೆ, ಹಲವು ರಾಜ್ಯಗಳು ಕೂಡ ಅನುಸರಿಸಿದ್ದವು. ಆದರೆ, ನಂತರದಲ್ಲಿಅವೆಲ್ಲವೂ ಆರಂಭ ಶೂರತ್ವದಂತೆ ಬದಿಗೆ ಸರಿಯಿತು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಚಾರದಲ್ಲಿಮತ್ತು ಲಾಕ್ಡೌನ್ ನಿರ್ಬಂಧವನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಆಸಕ್ತಿ ತೋರುತ್ತಿಲ್ಲ.ಇದು ಕೇಂದ್ರ ಸರ್ಕಾರದ ಗಮನಕ್ಕೂ ಬಂದಿತ್ತು. ಉದಾಹರಣೆಗೆ, ಕೇಂದ್ರ ಸರ್ಕಾರ ಏ. 15ರಿಂದ 20ರವರೆಗೆಲಾಕ್ಡೌನ್ ನಿರ್ಬಂಧವನ್ನು ಯಥಾಸ್ಥಿತಿ ಮುಂದುವರಿಸಲು ನಿರ್ಧರಿಸದೇ ಇದ್ದಲ್ಲಿ ರಾಜ್ಯದಲ್ಲಿಎಂಎಸ್ಐಎಲ್ ಸೇರಿದಂತೆ ಎಂಆರ್ ಪಿ ದರದಲ್ಲಿ ಮದ್ಯ ಮಾರಾಟ ಮಾಡುವ ಮಳಿಗೆಗಳು ಇಷ್ಟರ ವೇಳೆಗೆಆರಂಭವಾಗುತ್ತಿದ್ದವು.
ಅಂದರೆ, ಇಂತಹ ಕಠಿಣ ಸಂದರ್ಭಗಳಲ್ಲಿ ಸರ್ಕಾರ ಮುಂದಿನಕ್ರಮಗಳ ಬಗ್ಗೆ ಯೋಚಿಸುವಾಗ ಲಾಕ್ಡೌನ್ ನಿರ್ಬಂಧವನ್ನು ಕಟ್ಟುನಿಟ್ಟಾಗಿ ಪಾಲಿಸಗ ಮತ್ತುಸಾಮಾಜಿಕ ಅಂತರ ಕಾಯ್ದುಕೊಳ್ಳದ ನೆರೆಯ ಮಹಾರಾಷ್ಟ್ರ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣರಾಜ್ಯಗಳ ಪರಿಸ್ಥಿತಿ ಏನಾಗಿದೆ ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಗುಜರಾತ್ ಸ್ಥಿತಿಗತಿಏನಿದೆ ಸೋಂಕು ಹರಡುವ ಪ್ರಮಾಣ ಯಾವ ಮಟ್ಟದಲ್ಲಿ ಏರಿಕೆಯಾಗುತ್ತಿದೆ ಎಂಬುದನ್ನು ಯೋಚಿಸಬೇಕು.ಒಂದುರಾಜ್ಯಕ್ಕೆ ಆರ್ಥಿಕ ವಿಷಯವೂ ಪ್ರಮುಖವೇ ಆಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ,ಕೇಂದ್ರದಿಂದ ನಿರೀಕ್ಷಿತ ನೆರವು ಸಿಗುತ್ತಿಲ್ಲ ಎಂದಾಗ ಆದಾಯ ಸಂಗ್ರಹಕ್ಕೆ ಅಗತ್ಯ ಕ್ರಮಕೈಗೊಳ್ಳಲೇ ಬೇಕು. ಆದರೆ, ಅಂತಹ ಕ್ರಮಗಳು ಕರೋನಾ ಸೋಂಕು ಹರಡಲು ಕಾರಣವಾಗಬಹುದು ಎಂದಾದರೆನಿರ್ಧಾರ ಕೈಗೊಳ್ಳುವ ಮುನ್ನ ಸರ್ಕಾರ ಎಚ್ಚರಿಕೆಯಿಂದ ಯೋಚಿಸಬೇಕಾಗುತ್ತದೆ. ಆದಾಯ ಸಂಗ್ರಹ ಮಾಡಲೇಬೇಕು ಎಂದಾದರೆ ಸೋಂಕು ಹರಡುವ ವಿಚಾರದಲ್ಲಿ ಜಾತಿ, ಧರ್ಮ, ಪಕ್ಷದ ವಿಚಾರದಲ್ಲಿ ರಾಜಿಯಾಗದೆ ಕಠಿಣಕ್ರಮಗಳನ್ನು ಅಂದರೆ ಕಟ್ಟುನಿಟ್ಟಿನ ನಿರ್ಬಂಧ ಜಾರಿಯಲ್ಲಿರುವಂತೆ ನೋಡಿಕೊಳ್ಳಲೇ ಬೇಕು.ಇನ್ನಾದರೂ ಅಧಿಕಾರದಲ್ಲಿರುವವರು ಈ ಬಗ್ಗೆ ಗಮನಹರಿಸಬೇಕಾಗಿದೆ






