ಚೀನಾದಲ್ಲಿ ಮರಣ ಮೃದಂಗ ಬಾರಿಸ್ತಿರುವ ಕರೊನಾ ವೈರಸ್ ಭಾರತಕ್ಕೂ ಕಾಲಿಟಿದೆ. ಮೊದಲ ಪ್ರಕರಣ ಕೇರಳದಲ್ಲಿ ಪತ್ತೆಯಾಗಿದೆ. ಕೇರಳದಿಂದ ಚೀನಾದ ವುಹಾನ್ಗೆ ತೆರಳಿದ್ದ ವಿದ್ಯಾರ್ಥಿ, ಅನಾರೋಗ್ಯಕ್ಕೆ ತುತ್ತಾಗಿದ್ದ. ಕೂಡಲೇ ತಾಯ್ನಾಡಿಗೆ ಮರಳಿದ್ದ. ಇಲ್ಲಿಗೆ ಬಂದ ಕೂಡಲೆ ಅನಾರೋಗ್ಯ ಪೀಡಿತರಾದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಲ್ಲಾ ರೀತಿಯ ತಪಾಸಣೆಗಳನ್ನು ನಡೆಸಿದಾಗ ಕರೊನಾ ವೈರಸ್ ಪತ್ತೆಯಾಗಿರುವುದು ಖಚಿತವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ರೋಗ ಪೀಡಿತ ವಿದ್ಯಾರ್ಥಿಯನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ರೋಗಿಯ ಸ್ಥಿತಿ ಸ್ಥಿರವಾಗಿದೆ. ಆರೋಗ್ಯದ ಬಗ್ಗೆ ತೀವ್ರ ನಿಗಾ ವಹಿಸಲಾಗುತ್ತಿದೆ. ಕೇರಳದಲ್ಲಿ ಈ ಪ್ರಕರಣ ಪತ್ತೆಯಾಗಿರುವುದರಿಂದ ಕರ್ನಾಟಕದ ಗಡಿ ಭಾಗಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಕೇರಳ ಹಾಗೂ ಕರ್ನಾಟಕದ ನಡುವೆ ಸಂಚರಿಸುವ ಬಸ್ಗಳು ಹಾಗೂ ವಿಮಾನಗಳಲ್ಲಿ ತೀವ್ರ ಎಚ್ಚರಿಕೆ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇನ್ನು ಚೀನಾದಲ್ಲಿ ಇದುವರೆಗೂ 170 ಮಂದಿ ಮೃತಪಟ್ಟಿದ್ದು, 7711 ಮಂದಿಗೆ ಸೋಂಕು ತಗುಲಿ ಆಸ್ಪತ್ರೆ ಸೇರಿದ್ದಾರೆ.6
ಕರೋನಾ ವೈರಸ್ ವಿಶ್ವದೆಲ್ಲೆಡೆ ಮರಣ ಮೃದಂಗ ಬಾರಿಸುತ್ತಾ ಇದೆ. ಮಹಾಮಾರಿ ಕರೋನಾಗೆ ಚೀನಾ ಅಕ್ಷರಶಃ ತತ್ತರಿಸಿ ಹೋಗಿದೆ. ಮಕ್ಕಳು, ವಯಸ್ಕರು, ವೃದ್ಧರು ಎನ್ನದೆ 18ಕ್ಕೂ ಹೆಚ್ಚು ನಗರಗಳು ಹಾಸಿಗೆ ಮೇಲೆ ಮಲಗಿವೆ. ಎಲ್ಲಾ ಆಸ್ಪತ್ರೆಗಳಲ್ಲೂ ಮುಖಕ್ಕೆ ಮಾಸ್ಕ್ ಹಾಕಿದ ಕೊರೋನಾ ಸೋಂಕಿತರು ಕಣ್ಣಿಗೆ ಕಾಣಿಸುತ್ತಾರೆ. ಕೊರೋನಾ ವೈರಸ್ ವಿಶ್ವವನ್ನೇ ಅಲುಗಾಡಿಸುತ್ತಿದ್ದರೂ ಭಾರತ ಮಾತ್ರ ಹೋಮಿಯೋಪತಿ ಹಾಗೂ ಯುನಾನಿ ಔಷಧಿ ಬಳಸಿ, ಕೊರೋನಾದಿಂದಲೇ ದೂರ ಇರಿ ಎಂದು ಸರ್ಕಾರವೇ ಸುತ್ತೋಲೆ ಹೊರಡಿಸಿದೆ.
ಅಲೋಪಥಿ ಮೆಡಿಸಿನ್ಗಿಂತ ಆಯುರ್ವೇದ ಮದ್ದು ಬಹಳಷ್ಟು ಪರಿಣಾಮಕಾರಿ ಎನ್ನುವುದು ಖಚಿತ. ಕೇಂದ್ರ ಸರ್ಕಾರ ಕೂಡ ಹೋಮಿಯೋಪತಿ ಮತ್ತು ಯುನಾನಿ ಔಷಧಿ ಮೊರೆ ಹೋಗಿದ್ದು, ಕಾಯಿಲೆ ಬರುವ ಮುಂಚೆಯೇ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದೆ. ವೈರಸ್ ಸೋಂಕು ನಿಮ್ಮ ಮೇಲೆ ದಾಳಿ ಮಾಡದಂತೆ ಹೇಗೆ ಮುಂಜಾಗ್ರತೆ ವಹಿಸಬಹುದು ಎನ್ನುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ.
ಕರೋನಾ ಮಾರಿಗೆ ಮದ್ದು ಏನು?
* 2 ದಿನಕ್ಕೊಮ್ಮೆ ಉಗುರು ಬೆಚ್ಚನೆ ನೀರಲ್ಲಿ 5 ಗ್ರಾಂ ಅಗಸ್ತ್ಯ ಹರಿತ್ಯಾಕಿ ಕುಡಿಯಿರಿ
* ಎರಡು ದಿನಕ್ಕೊಮ್ಮೆ ಸಂಶಮನಿ ವಾಟಿ 500 ಮಿ.ಗ್ರಾಂ ಬಳಸಿ
* ಕಾಳುಮೆಣಸು, ಶುಂಠಿ ಜೊತೆ ನೀರಲ್ಲಿ 5 ತುಳಸಿ ಎಲೆ ಕುದಿಸಿ ಸೇವಿಸಿ
* 1 ಲೀ. ನೀರನ್ನ ಅರ್ಧ ಲೀಟರ್ಗೆ ಬರುವಂತೆ ಕುದಿಸಿ ಕುಡಿಯಬೇಕು
* ಬೇರು ಹಣ್ಣನ್ನ ಹೆಚ್ಚಾಗಿ ತಿನ್ನೋದ್ರಿಂದ ವೈರಸ್ ತಡೆಗಟ್ಟಬಹುದು
* ನಿತ್ಯ 3 ಗ್ರಾಂ ದಾಲ್ಚಿನ್ನಿ, 12 ಗ್ರಾಂ ಗಸಗಸೆ ಸೇವಿಸುವುದು ಸೂಕ್ತ
ಪ್ರತಿಯೊಬ್ಬರು ಶುಚಿತ್ವಕ್ಕೆ ತುಂಬಾ ಮಹತ್ವ ಕೊಡಬೇಕು. ಕರೋನಾ ಒಬ್ಬರಿಂದ ಒಬ್ಬರಿಗೆ ಹರಡೋ ಅಂಟು ರೋಗ. ಕೈಗಳನ್ನ ಆಗಿಂದಾಗೆ ಸೋಪ್ನಿಂದ ತೊಳೆಯಬೇಕು. ಕೈ ತೊಳೆಯದೆ ಯಾವುದೇ ಕಾರಣಕ್ಕೂ ಮೂಗು, ಕಣ್ಣು, ಬಾಯಿಯನ್ನ ಮುಟ್ಟಿಕೊಳ್ಳಬಾರದು. ಅಲ್ಲದೆ ಸೋಂಕಿತರು ಎಂದು ಕಂಡು ಬಂದರೆ ಅವರಿಂದ ಆದಷ್ಟು ದೂರ ಇರುವುದು ಒಳ್ಳೆಯದ್ದು. ಜೊತೆಗೆ ಅನಾರೋಗ್ಯಕ್ಕೀಡಾದವರು ಹೊರಗಡೆ ಅಡ್ಡಾಡುವ ಬದಲು ಮನೆಯಲ್ಲೇ ಇದ್ದು ಚಿಕಿತ್ಸೆ ತೆಗೆದುಕೊಳ್ಳುವುದು ಒಳ್ಳೆಯದ್ದು. ಕೆಮ್ಮು ಇದ್ದವರು ಮುಖಕ್ಕೆ ಕರ್ಚೀಫ್ ಇಟ್ಟುಕೊಳ್ಳಬೇಕು. ಒಂದು ವೇಳೆ ಪ್ರವಾಸ ಹೋಗುವ ಅನಿವಾರ್ಯತೆ ಇದ್ದರೆ N95 ಮಾಸ್ಕನ್ನೇ ಬಳಸಬೇಕು ಎಂದು ಸ್ವತಃ ಕೇಂದ್ರ ಸರ್ಕಾರ ಸಲಹೆ ನೀಡಿದೆ. ಈಗಾಗಲೇ ಭಾರತದಲ್ಲಿ ಕರೋನಾ ವೈರಸ್ ಪತ್ತೆಯಾಗಿರುವ ಕಾರಣ ಹರುಡುವಿಕೆ ದಿನದಿಂದ ದಿನಕ್ಕೆ ಏರಿಕೆಯಾಗಿವುದು ಕಟ್ಟಿಟ್ಟ ಬುತ್ತಿ. ಅದರಲ್ಲೂ ಕರ್ನಾಟಕದ ಪಕ್ಕದ ಕೇರಳದಲ್ಲೇ ಪತ್ತೆಯಾಗಿರೋದು ಕರ್ನಾಟಕದಲ್ಲಿ ಮತ್ತಷ್ಟು ಭಯದ ವಾತಾವರಣ ಸೃಷ್ಟಿ ಮಾಡಿದೆ. ಇಂತಹ ಸಂಧರ್ಭದಲ್ಲಿ ನಾವು ಎಚ್ಚರಿಕೆ ವಹಿಸದಿದ್ದಲ್ಲಿ, ಮುಂದೆ ಅತೀ ದೊಡ್ಡ ಸಂಕಷ್ಟ ಎದುರಿಸಬೇಕಾಗುವ ಸಾಧ್ಯತೆಗಳಿವೆ.