• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, November 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕೆಪಿಎಸ್‌ಸಿ ಪರೀಕ್ಷೆಗೆ ಬೆಳಗಾವಿಯಲ್ಲಿ ಭರ್ಜರಿ ಸಿದ್ಧತೆ; 34 ಕೇಂದ್ರಗಳಲ್ಲಿ 250ಕ್ಕೂ ಹೆಚ್ಚು ಪೊಲೀಸರ ಕಾವಲು!

Shivakumar by Shivakumar
November 15, 2026
in ಕರ್ನಾಟಕ
0
ಕೆಪಿಎಸ್‌ಸಿ ಪರೀಕ್ಷೆಗೆ ಬೆಳಗಾವಿಯಲ್ಲಿ ಭರ್ಜರಿ ಸಿದ್ಧತೆ; 34 ಕೇಂದ್ರಗಳಲ್ಲಿ 250ಕ್ಕೂ ಹೆಚ್ಚು ಪೊಲೀಸರ ಕಾವಲು!
Share on WhatsAppShare on FacebookShare on Telegram
ADVERTISEMENT
ಬೆಳಗಾವಿ: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಗೆಜೆಟೆಡ್ ಪ್ರೊಬೆಷನರಿ ಪರೀಕ್ಷೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯ 34 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 12,244 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಜಿಲ್ಲಾಡಳಿತ ಹೈ ಅಲರ್ಟ್ ಘೋಷಿಸಿದ್ದು, 250ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಿದೆ.

ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗುತ್ತಿದೆ. ವಿಶೇಷವಾಗಿ ಖಾಸಗಿ ಕಾಲೇಜುಗಳಲ್ಲಿರುವ ಪರೀಕ್ಷಾ ಕೇಂದ್ರಗಳಲ್ಲಿ ಇಬ್ಬರು ವೀಕ್ಷಕರನ್ನು ನಿಯೋಜಿಸಿ ಹೆಚ್ಚುವರಿ ನಿಗಾ ವಹಿಸಲಾಗಿದೆ. ಪರೀಕ್ಷಾ ಸಿಬ್ಬಂದಿಗೆ ಜಿಲ್ಲಾಡಳಿತ ಈಗಾಗಲೇ ಎರಡು ಹಂತಗಳಲ್ಲಿ ತರಬೇತಿ ನೀಡಿದೆ.

C.S. Patil  : 🌧️☔ಚಳಿಗಾಲದಲ್ಲಿ ರಾತ್ರಿ ಸಮಯದಲ್ಲಿ ಉಷ್ಣತೆ ಕಡಿಮೆಯಾಗೋದು ಏಕೆ..?

ಈ ಬಾರಿಯ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಕೆಲವು ಧಾರ್ಮಿಕ ಗುರುತುಗಳನ್ನು ಧರಿಸಲು ವಿನಾಯಿತಿ ನೀಡಲಾಗಿದೆ. ಪುರುಷ ಅಭ್ಯರ್ಥಿಗಳು ಜನಿವಾರ ಹಾಗೂ ಉಡುದಾರ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಮಹಿಳಾ ಅಭ್ಯರ್ಥಿಗಳು ಮಂಗಳಸೂತ್ರ, ಬಳೆ ಮತ್ತು ಮೂಗುತಿ ಧರಿಸಬಹುದು. ಆದರೆ ಮೊಬೈಲ್ ಫೋನ್, ಬ್ಲೂಟೂತ್, ಸ್ಮಾರ್ಟ್ ವಾಚ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಪರೀಕ್ಷಾ ಕೇಂದ್ರದೊಳಗೆ ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಪರೀಕ್ಷಾ ಕೇಂದ್ರದ ಪ್ರವೇಶ ದ್ವಾರದಲ್ಲೇ ಅಭ್ಯರ್ಥಿಗಳನ್ನು ತಪಾಸಣೆ ನಡೆಸಿದ ಬಳಿಕ ಒಳಗೆ ಬಿಡಲಾಗುತ್ತದೆ. ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಮೊದಲ ಅವಧಿಯ ಪರೀಕ್ಷೆ ನಡೆಯಲಿದ್ದು, ಮಧ್ಯಾಹ್ನ 2ರಿಂದ ಸಂಜೆ 4ರವರೆಗೆ ಎರಡನೇ ಅವಧಿಯ ಪರೀಕ್ಷೆ ನಡೆಯಲಿದೆ.

DK Shivakumar : ಮಾಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಸಿಎಂ ಡಿಕೆಶಿ ಹೀಗ್ಯಾಕಂದ್ರು..! #siddaramaiah

ಪರೀಕ್ಷೆಯ ಹಿನ್ನೆಲೆಯಲ್ಲಿ ಬೆಳಗಾವಿ ನಗರದ ವಿಶ್ವೇಶ್ವರಯ್ಯ ನಗರದಲ್ಲಿರುವ ಜಿಲ್ಲಾ ಖಜಾನೆಯಲ್ಲಿ ಇರಿಸಲಾಗಿದ್ದ ಪ್ರಶ್ನೆಪತ್ರಿಕೆಗಳ ಬಂಡಲ್‌ಗಳನ್ನು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ಸಮ್ಮುಖದಲ್ಲಿ ಭಾನುವಾರ ಬೆಳಗ್ಗೆ ತೆರೆಯಲಾಯಿತು. ಬಳಿಕ ಪೊಲೀಸ್ ಭದ್ರತೆ ಹಾಗೂ ಎಸ್ಕಾರ್ಟ್ ವ್ಯವಸ್ಥೆಯೊಂದಿಗೆ ಪ್ರಶ್ನೆಪತ್ರಿಕೆಗಳನ್ನು ವಿವಿಧ ಪರೀಕ್ಷಾ ಕೇಂದ್ರಗಳಿಗೆ ರವಾನಿಸಲಾಯಿತು.

ಪರೀಕ್ಷೆಯ ಕೊನೆಯ ಹಂತದ ಸಿದ್ಧತೆಗಳನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಪದವಿ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದರು. ಕೇಂದ್ರದಲ್ಲಿನ ವ್ಯವಸ್ಥೆ, ಭದ್ರತೆ ಹಾಗೂ ಅಭ್ಯರ್ಥಿಗಳಿಗೆ ಕಲ್ಪಿಸಿರುವ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.

12,244 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಡಳಿತ ಪರೀಕ್ಷಾ ಅಕ್ರಮ ತಡೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಪೊಲೀಸ್ ಭದ್ರತೆ ಮತ್ತು ತಪಾಸಣೆಯೊಂದಿಗೆ ಪರೀಕ್ಷೆ ನಡೆಸಲು ಸಿದ್ಧತೆ ಪೂರ್ಣಗೊಳಿಸಿದೆ.

Tags: Belagavi newsCompetitive Examsdistrict administrationExam SecurityGazetted Probationers Examkarnataka newskarnataka public service commissionKPSC 2026kpsc examMohammad Roshan
Previous Post

ಇಂದಿನ ರಾಶಿಭವಿಷ್ಯ: ನವೆಂಬರ್ 15ರಂದು ಈ ರಾಶಿಯವರಿಗೆ ಹೊಸ ಅವಕಾಶಗಳ ಸುರಿಮಳೆ! ಪ್ರೀತಿ, ಉದ್ಯೋಗದಲ್ಲಿ ಮಹತ್ವದ ಬದಲಾವಣೆ

Next Post

‘ನಿಖಿಲ್ ಬರಬಾರದು, ಕೈಮುಗಿಯಬಾರದು’ ಎಂದು ದೇವಸ್ಥಾನಕ್ಕೆ ಬೀಗ? ದೊಡ್ಡ ಕುರುಬರಹಳ್ಳಿಯಲ್ಲಿ ವಿವಾದ

Related Posts

‘ನಿಖಿಲ್ ಬರಬಾರದು, ಕೈಮುಗಿಯಬಾರದು’ ಎಂದು ದೇವಸ್ಥಾನಕ್ಕೆ ಬೀಗ? ದೊಡ್ಡ ಕುರುಬರಹಳ್ಳಿಯಲ್ಲಿ ವಿವಾದ
ಕರ್ನಾಟಕ

‘ನಿಖಿಲ್ ಬರಬಾರದು, ಕೈಮುಗಿಯಬಾರದು’ ಎಂದು ದೇವಸ್ಥಾನಕ್ಕೆ ಬೀಗ? ದೊಡ್ಡ ಕುರುಬರಹಳ್ಳಿಯಲ್ಲಿ ವಿವಾದ

by Shivakumar
November 15, 2026
0

ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿ ತಾಲ್ಲೂಕಿನ ದೊಡ್ಡ ಕುರುಬರಹಳ್ಳಿ ಗ್ರಾಮದಲ್ಲಿ ದೇವಸ್ಥಾನ ಪ್ರವೇಶ ವಿಚಾರವಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ತಡೆ ಒಡ್ಡಲಾಗಿದೆ...

Read moreDetails
RashiPhala

ಇಂದಿನ ರಾಶಿಭವಿಷ್ಯ: ನವೆಂಬರ್ 15ರಂದು ಈ ರಾಶಿಯವರಿಗೆ ಹೊಸ ಅವಕಾಶಗಳ ಸುರಿಮಳೆ! ಪ್ರೀತಿ, ಉದ್ಯೋಗದಲ್ಲಿ ಮಹತ್ವದ ಬದಲಾವಣೆ

November 15, 2026
ಮಕ್ಕಳ ದಿನಾಚರಣೆ: ಸರ್ವಜ್ಞನಗರದಲ್ಲಿ ನವೀಕೃತ 3 ಅಂಗನವಾಡಿ ಉದ್ಘಾಟಿಸಿದ ಸುಜಾ ಜಾರ್ಜ್

ಮಕ್ಕಳ ದಿನಾಚರಣೆ: ಸರ್ವಜ್ಞನಗರದಲ್ಲಿ ನವೀಕೃತ 3 ಅಂಗನವಾಡಿ ಉದ್ಘಾಟಿಸಿದ ಸುಜಾ ಜಾರ್ಜ್

November 14, 2026
ಚಪ್ಪಾಳೆ ತಟ್ಟಿದರೆ ಸೇವಕರು ಓಡಿಬರುತ್ತಾರೆಯೇ? ಅರಮನೆಯ ಜೀವನದ ಬಗ್ಗೆ ಪ್ರಮೋದಾ ದೇವಿ ಒಡೆಯರ್ ಬಿಚ್ಚಿಟ್ಟ ಕುತೂಹಲಕಾರಿ ಸಂಗತಿಗಳೇನು?

ಚಪ್ಪಾಳೆ ತಟ್ಟಿದರೆ ಸೇವಕರು ಓಡಿಬರುತ್ತಾರೆಯೇ? ಅರಮನೆಯ ಜೀವನದ ಬಗ್ಗೆ ಪ್ರಮೋದಾ ದೇವಿ ಒಡೆಯರ್ ಬಿಚ್ಚಿಟ್ಟ ಕುತೂಹಲಕಾರಿ ಸಂಗತಿಗಳೇನು?

November 14, 2026
ದರ್ಶನ್–ಪವಿತ್ರಾ ಗೌಡ ಮಾತುಕತೆ ಸೋರಿಕೆ ವಿವಾದ; ಮೌನ ಮುರಿದರೇ ವಿಜಯಲಕ್ಷ್ಮಿ? ಇನ್‌ಸ್ಟಾ ಸ್ಟೋರಿ ವೈರಲ್!

ದರ್ಶನ್–ಪವಿತ್ರಾ ಗೌಡ ಮಾತುಕತೆ ಸೋರಿಕೆ ವಿವಾದ; ಮೌನ ಮುರಿದರೇ ವಿಜಯಲಕ್ಷ್ಮಿ? ಇನ್‌ಸ್ಟಾ ಸ್ಟೋರಿ ವೈರಲ್!

November 14, 2026
Next Post
‘ನಿಖಿಲ್ ಬರಬಾರದು, ಕೈಮುಗಿಯಬಾರದು’ ಎಂದು ದೇವಸ್ಥಾನಕ್ಕೆ ಬೀಗ? ದೊಡ್ಡ ಕುರುಬರಹಳ್ಳಿಯಲ್ಲಿ ವಿವಾದ

'ನಿಖಿಲ್ ಬರಬಾರದು, ಕೈಮುಗಿಯಬಾರದು' ಎಂದು ದೇವಸ್ಥಾನಕ್ಕೆ ಬೀಗ? ದೊಡ್ಡ ಕುರುಬರಹಳ್ಳಿಯಲ್ಲಿ ವಿವಾದ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!