• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, July 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಖಾಮಿನೈ ಅಂತ್ಯಸಂಸ್ಕಾರದಲ್ಲೇ ಇರಾನ್ ಸೇನಾ ಮುಖ್ಯಸ್ಥ ಅಮೀರ್ ಹಟಾಮಿ ಪ್ರತಿಜ್ಞೆ! ಜಗತ್ತಿಗೆ ಇರಾನ್‌ನಿಂದ ಮತ್ತೊಂದು ಎಚ್ಚರಿಕೆ!

ಪ್ರತಿಧ್ವನಿ by ಪ್ರತಿಧ್ವನಿ
July 4, 2026
in Top Story
0
ಖಾಮಿನೈ ಅಂತ್ಯಸಂಸ್ಕಾರದಲ್ಲೇ ಇರಾನ್ ಸೇನಾ ಮುಖ್ಯಸ್ಥ ಅಮೀರ್ ಹಟಾಮಿ ಪ್ರತಿಜ್ಞೆ! ಜಗತ್ತಿಗೆ ಇರಾನ್‌ನಿಂದ ಮತ್ತೊಂದು ಎಚ್ಚರಿಕೆ!
Share on WhatsAppShare on FacebookShare on Telegram

ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈ ಅವರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಸೇನಾ ಮುಖ್ಯಸ್ಥ ಅಮೀರ್ ಹಟಾಮಿ ಮತ್ತೊಮ್ಮೆ ಘೋಷಣೆ ಮಾಡಿದ್ದಾರೆ. ಟೆಹರಾನ್‌ನ ಮೊಸಲ್ಲಾ ಸಂಕೀರ್ಣದಲ್ಲಿ ಆರಂಭವಾದ ಖಾಮಿನೈ ಹಾಗೂ ಅವರ ಕುಟುಂಬ ಸದಸ್ಯರ ಅಂತ್ಯಸಂಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಈ ಹತ್ಯೆಯ ಸೇಡನ್ನು ತೀರಿಸಿಕೊಳ್ಳುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ” ಎಂದು ಎಚ್ಚರಿಕೆ ನೀಡಿದರು.

ADVERTISEMENT
Mummadi Nirvana Mahaswamiji Punya Samsmaranotsava: ಸೋಮಣ್ಣ ನನ್ನ ಆತ್ಮೀಯರು ಎಂದ ಡಿಕೆಶಿ #pratidhvani

ಅಮೀರ್ ಹಟಾಮಿ ಅವರ ಈ ಹೇಳಿಕೆ, ಕೆಲವೇ ದಿನಗಳ ಹಿಂದೆ ಇರಾನ್‌ನ ಸರ್ವೋಚ್ಚ ರಾಷ್ಟ್ರೀಯ ಭದ್ರತಾ ಮಂಡಳಿ (Supreme National Security Council) ನೀಡಿದ್ದ ಅಧಿಕೃತ ಹೇಳಿಕೆಯನ್ನು ಮತ್ತೊಮ್ಮೆ ಪುಷ್ಟೀಕರಿಸಿದೆ. ಮಂಡಳಿಯು, “ಖಾಮಿನೈ ಹಾಗೂ ಇತರ ಹುತಾತ್ಮರ ರಕ್ತಕ್ಕೆ ನ್ಯಾಯ ದೊರಕಿಸುವ ಕಡತ ಇನ್ನೂ ಮುಚ್ಚಿಲ್ಲ. ಪ್ರತೀಕಾರದ ನಿರ್ಧಾರದಿಂದ ಇರಾನ್ ಹಿಂದೆ ಸರಿದಿಲ್ಲ” ಎಂದು ಸ್ಪಷ್ಟಪಡಿಸಿತ್ತು.ಅಂತ್ಯಸಂಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಹಟಾಮಿ, “ಈ ಅಪರಾಧದ ಹಿಂದೆ ಇರುವ ಸೂತ್ರಧಾರಿಗಳು ಮತ್ತು ಅದನ್ನು ಕಾರ್ಯಗತಗೊಳಿಸಿದವರು ಸೂಕ್ತ ಸಮಯದಲ್ಲಿ ತಮ್ಮ ಕೃತ್ಯಕ್ಕೆ ತಕ್ಕ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. ನ್ಯಾಯದ ಕೈಗಳಿಂದ ಅವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆ ದಿನವೂ ದೂರದಲ್ಲಿಲ್ಲ” ಎಂದು ಕಠಿಣ ಸಂದೇಶ ರವಾನಿಸಿದರು.

CM Dks Meets Siddaramaiah: ಪತ್ನಿ ಉಷಾ, ತಮ್ಮ ಡಿಕೆ ಸುರೇಶ್ ಜೊತೆಗೆ ಸಿದ್ದರಾಮಯ್ಯ ಭೇಟಿಯಾದ CM ಡಿಕೆಶಿ!

ಖಾಮಿನೈ ಅವರ ಅಂತಿಮ ಯಾತ್ರೆ ಜುಲೈ 4ರಿಂದ ಆರಂಭವಾಗಿದ್ದು, ಜುಲೈ 9ರವರೆಗೆ ವಿವಿಧ ನಗರಗಳಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆ. ಟೆಹರಾನ್‌ನಲ್ಲಿ ಸಾರ್ವಜನಿಕ ದರ್ಶನದ ಬಳಿಕ ಪಾರ್ಥಿವ ಶರೀರವನ್ನು ಕೋಮ್, ನಜಾಫ್, ಕರ್ಬಲಾ ಸೇರಿದಂತೆ ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ಕೊಂಡೊಯ್ಯಲಾಗುತ್ತದೆ. ಅಂತಿಮವಾಗಿ ಮಶ್ಹಾದ್‌ನ ಇಮಾಮ್ ರೆಜಾ ದರ್ಗಾ ಸಮೀಪ ಅವರ ಅಂತ್ಯಸಂಸ್ಕಾರ ನೆರವೇರಲಿದೆ.

ಇದೇ ವೇಳೆ, ಮಧ್ಯಪ್ರಾಚ್ಯದಲ್ಲಿ ಈಗಾಗಲೇ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿರುವ ಹಿನ್ನೆಲೆಯಲ್ಲಿ, ಇರಾನ್‌ನ ಈ ಪ್ರತೀಕಾರದ ಘೋಷಣೆ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಬೆಳವಣಿಗೆಗಳ ಮೇಲೆ ವಿಶ್ವದ ಗಮನ ಕೇಂದ್ರೀಕೃತವಾಗಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಯಾವ ದಿಕ್ಕಿಗೆ ಸಾಗಲಿದೆ ಎಂಬ ಕುತೂಹಲ ಹೆಚ್ಚಿದೆ.

Tags: #AmirHatami#AyatollahKhamenei#IranIsraelConflict#IranNews#KannadaNews#RevengebreakingnewsIranMiddleEastWorldNews
Previous Post

ದುಷ್ಟ ಪ್ರವೃತ್ತಿಯಲ್ಲೇ ಹುಟ್ಟಿರುವ ಕ್ರೂರ ವಿಧಾನಗಳು : ಎತ್ತಂಗಡಿ, ಬುಲ್ಡೋಜರ್‌ ಎಂಬ ಆಡಳಿತ ಕ್ರಮಗಳು..

Next Post

ಚಿತ್ರ ವಿಮರ್ಶೆ: ಇದೊಳ್ಳೆ ಗ್ರಾಮಾಯಣ!

Related Posts

ಬೆಳಗಾವಿಯಲ್ಲಿ RSS ಶಕ್ತಿ ಪ್ರದರ್ಶನ: ಪ್ರಿಯಾಂಕ್ ಖರ್ಗೆಗೆ ಪರೋಕ್ಷ ಟಾಂಟ್‌..?
Top Story

ಬೆಳಗಾವಿಯಲ್ಲಿ RSS ಶಕ್ತಿ ಪ್ರದರ್ಶನ: ಪ್ರಿಯಾಂಕ್ ಖರ್ಗೆಗೆ ಪರೋಕ್ಷ ಟಾಂಟ್‌..?

by ಪ್ರತಿಧ್ವನಿ
July 5, 2026
0

ಬೆಳಗಾವಿ: ಆರ್‌ಎಸ್‌ಎಸ್‌ ನೋಂದಣಿ ವಿವಾದಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬರೆದಿರುವ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ನೀಡದಿರಲು ಸಂಘದ ಮುಖಂಡರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದರೆ ಪರೋಕ್ಷವಾಗಿ...

Read moreDetails
Rain Damage

ಮಳೆಯ ಅವಾಂತರಕ್ಕೆ ಮನೆಯ ಮೇಲೆ ಬಿದ್ದ ಉರುಳಿಬಿದ್ದ ಬೃಹತ್‌ ಮರ : ಅಪಾರ ಹಾನಿ..!

July 5, 2026
ಪರಪ್ಪನ ಅಗ್ರಹಾರದಿಂದ 24 ಕೈದಿಗಳಿಗೆ ಬಿಡುಗಡೆ ಭಾಗ್ಯ..!

ಪರಪ್ಪನ ಅಗ್ರಹಾರದಿಂದ 24 ಕೈದಿಗಳಿಗೆ ಬಿಡುಗಡೆ ಭಾಗ್ಯ..!

July 5, 2026
Karnataka SIR: ಕಾಂಗ್ರೆಸ್‌ ಅಕ್ರಮ ಮತಗಳನ್ನು ಉಳಿಸಿಕೊಳ್ಳಲು ಹರಸಹಾಸ ಮಾಡ್ತಿದೆ: ಕುಮಾರಸ್ವಾಮಿ

Karnataka SIR: ಕಾಂಗ್ರೆಸ್‌ ಅಕ್ರಮ ಮತಗಳನ್ನು ಉಳಿಸಿಕೊಳ್ಳಲು ಹರಸಹಾಸ ಮಾಡ್ತಿದೆ: ಕುಮಾರಸ್ವಾಮಿ

July 5, 2026
ಪೊಲೀಸ್ ಇಲಾಖೆ-ಮಾಧ್ಯಮಗಳಿಗೆ ಹೊಸ ನಿಯಮ: ಅನುಮತಿ ಇಲ್ಲದೆ ಮಾಹಿತಿ ಹಂಚಿದರೆ ಕ್ರಮ

ಪೊಲೀಸ್ ಇಲಾಖೆ-ಮಾಧ್ಯಮಗಳಿಗೆ ಹೊಸ ನಿಯಮ: ಅನುಮತಿ ಇಲ್ಲದೆ ಮಾಹಿತಿ ಹಂಚಿದರೆ ಕ್ರಮ

July 4, 2026
Next Post
ಚಿತ್ರ ವಿಮರ್ಶೆ: ಇದೊಳ್ಳೆ ಗ್ರಾಮಾಯಣ!

ಚಿತ್ರ ವಿಮರ್ಶೆ: ಇದೊಳ್ಳೆ ಗ್ರಾಮಾಯಣ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada