ಬೆಂಗಳೂರು : ಧರ್ಮಶಾಲಾದಲ್ಲಿ ನಡೆದ ಐಪಿಎಲ್ ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಇಂದು ಗುಜರಾತ್ ತಂಡದ ವಿರುದ್ಧ 92 ರನ್ ಗಳ ಭರ್ಜರಿಯಾಗಿ ಗೆಲ್ಲುವ ಮೂಲಕ ರಾಯಲ್ ಚಾಲೆಂಜರ್ಸ್ ತಂಡ ಫೈನಲ್ಸ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ.

ಆರಂಭದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ ಸಿಬಿ ನಿಗದಿತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿದ್ದು, ಗುಜರಾತ್ ಗೆ ಗೆಲ್ಲಲು 255 ರನ್ ಗಳ ಬೃಹತ್ ಗುರಿ ನೀಡಿತ್ತು.
ಆರ್ ಸಿಬಿ ಪರ ಸ್ಫೋಟಕ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ (43), ರಜತ್ ಪಟಿದಾರ್ (93), ಕೃನಾಲ್ ಪಾಂಡ್ಯಾ (43) ಮತ್ತು ದೇವದತ್ ಪಡಿಕ್ಕಲ್ (30) ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಉಳಿದಂತೆ ವೆಂಕಟೇಶ್ ಅಯ್ಯರ್ 19, ಟಿಮ್ ಡೇವಿಡ್ 4 ಮತ್ತು ಜಿತೇಶ್ ಶರ್ಮಾ 15 ರನ್ ಕಲೆಹಾಕಿದ್ದರು.
ಇದನ್ನೂ ಓದಿ : ಸಿದ್ದರಾಮಯ್ಯ ರಾಜೀನಾಮೆಗೆ ಸಿದ್ಧವಾಯ್ತಾ ವೇದಿಕೆ..? : ದೆಹಲಿಯ ಸಭೆಯಲ್ಲಿ ಏನೇನಾಯ್ತು? ಇನ್ಸೈಡ್ ಡೀಟೆಲ್ಸ್ ಇಲ್ಲಿದೆ..
ಆರ್ಸಿಬಿ ತಂಡದ ನಾಯಕ ರಜತ್ ಪಾಟಿದಾರ್ (Rajat Patidar) ಸ್ಫೋಟಕ ಬ್ಯಾಟಿಂಗ್ನಿಂದ ಐಪಿಎಲ್ನ ಕ್ವಾಲಿಫೈಯರ್ 1 (Qualifier 1) ಪಂದ್ಯದಲ್ಲಿ ಆರ್ಸಿಬಿ (RCB) ತಂಡ 254 ರನ್ ಮೊತ್ತ ಕಲೆ ಹಾಕಿದ್ದು, ಗುಜರಾತ್ ಟೈಟನ್ಸ್ಗೆ (GT) 255 ರನ್ಗಳ ಬೃಹತ್ ಗುರಿ ನೀಡಿತ್ತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಉತ್ತಮ ಆರಂಭ ಪಡೆದುಕೊಂಡಿತು. ಬ್ಯಾಟಿಂಗ್ನಲ್ಲಿ ಅಬ್ಬರಿಸಿ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 254 ರನ್ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. 255 ರನ್ಗಳ ಗುರಿ ಬೆನ್ನತ್ತಿದ ಜಿಟಿ ಬ್ಯಾಟಿಂಗ್ನಲ್ಲಿ ಮಕಾಡೆ ಮಲಿಗಿತು. 162 ರನ್ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿದೆ.






