• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!

ಪ್ರತಿಧ್ವನಿ by ಪ್ರತಿಧ್ವನಿ
May 23, 2026
in Top Story
0
ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!
Share on WhatsAppShare on FacebookShare on Telegram

ಬಾಂಗ್ಲಾದೇಶದಲ್ಲಿ ಅಪರೂಪದ ಅಲ್ಬಿನೋ ಎಮ್ಮೆೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರಂತೆಯೇ ಕಾಣುತ್ತದೆ ಎಂದು ನೆಟ್ಟಿಗರು ಹೇಳುತ್ತಿರುವ ಈ ಎಮ್ಮೆ, ಈದ್ ಉಲ್ ಅಧಾ ಹಬ್ಬದ ಮುನ್ನ ದೇಶಾದ್ಯಂತ ಕುತೂಹಲಕ್ಕೆ ಕಾರಣವಾಗಿದೆ.ನರಾಯಣಗಂಜ್ ಪ್ರದೇಶದ ರಬೇಯಾ ಆಗ್ರೋ ಫಾರ್ಮ್‌ನಲ್ಲಿ ಸಾಕಲಾಗಿದ್ದ ಈ ಅಪರೂಪದ ಎಮ್ಮೆ, ಅದರ ಬಂಗಾರದ ಬಣ್ಣದ ಉದ್ದ ಕೂದಲು ಮತ್ತು ವಿಶಿಷ್ಟ ರೂಪದಿಂದಲೇ “ಡೊನಾಲ್ಡ್ ಟ್ರಂಪ್” ಎಂಬ ಹೆಸರನ್ನು ಪಡೆದಿದೆ. ಸುಮಾರು 700 ಕಿಲೋಗ್ರಾಂ ತೂಕ ಹೊಂದಿರುವ ಈ ಎಮ್ಮೆ ಈಗಾಗಲೇ ಈದ್ ಬಲಿಗಾಗಿ ಮಾರಾಟವಾಗಿದೆ ಎಂದು ಫಾರ್ಮ್ ಮಾಲೀಕರು ತಿಳಿಸಿದ್ದಾರೆ.

ADVERTISEMENT
Norway Journalist on Modi: ಪ್ರಶ್ನೆ ಸ್ವೀಕರಿಸದೇ ತೆರಳಿದ ಮೋದಿ: ನಾವೇಕೆ ನಿಮ್ಮನ್ನು ನಂಬಬೇಕು ಎಂದ ಪತ್ರಕರ್ತೆ..!

ಫಾರ್ಮ್ ಮಾಲೀಕ ಜಿಯಾ ಉದ್ಧಿನ್ ಮೃಧಾ ಅವರ ಪ್ರಕಾರ, ಎಮ್ಮೆಯ ತಲೆಯ ಮುಂದಿರುವ ಹಳದಿ-ಬಂಗಾರದ ಬಣ್ಣದ ಕೂದಲು ಟ್ರಂಪ್ ಅವರ ಹೆರ್‌ಸ್ಟೈಲ್ ಅನ್ನು ಹೋಲುತ್ತದೆ ಎಂದು ಕುಟುಂಬದವರು ತಮಾಷೆಯಾಗಿ ಈ ಹೆಸರು ಇಟ್ಟಿದ್ದರು. ಬಳಿಕ ಎಮ್ಮೆಯ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಸಾವಿರಾರು ಜನರ ಗಮನ ಸೆಳೆದವು. ಪ್ರತಿದಿನ ದೂರದ ಜಿಲ್ಲೆಗಳಿಂದಲೂ ಜನರು ಫಾರ್ಮ್‌ಗೆ ಬಂದು ಸೆಲ್ಫಿ ಹಾಗೂ ವಿಡಿಯೋಗಳನ್ನು ತೆಗೆಯುತ್ತಿದ್ದರು ಎನ್ನಲಾಗಿದೆ.

ಈ ಎಮ್ಮೆ ಸಾಮಾನ್ಯ ಕಪ್ಪು ಬಣ್ಣದ ಜಾತಿಯದ್ದಲ್ಲ. ಇದು ಅಪರೂಪದ ಅಲ್ಬಿನೋ ಜಾತಿಗೆ ಸೇರಿದ್ದು, ದೇಹದಲ್ಲಿ ಮೆಲಾನಿನ್ ಅಂಶ ಕಡಿಮೆ ಇರುವುದರಿಂದ ಚರ್ಮವು ಹಗುರವಾದ ಗುಲಾಬಿ ಛಾಯೆ ಹೊಂದಿದೆ.

CM Siddaramaiah : ಭಾಷಣ ವೇಳೆ ಸಚಿವ ಸ್ಥಾನ ನೀಡಿ ಅಂತ ಗಲಾಟೆ.. ರೊಚ್ಚಿಗೆದ್ದ ಸಿಎಂ ಸಿದ್ದರಾಮಯ್ಯ..! #pratidhvani

ತಜ್ಞರ ಪ್ರಕಾರ, ಬಾಂಗ್ಲಾದೇಶದಲ್ಲಿ ಇಂತಹ ಅಲ್ಬಿನೋ ಎಮ್ಮೆಗಳು ತುಂಬಾ ವಿರಳ. ಉದ್ದವಾದ ಬಂಗಾರದ ಕೂದಲು, ಗುಲಾಬಿ ಮೂಗು ಮತ್ತು ವಿಶಿಷ್ಟ ದೇಹಾಕೃತಿಯೇ ಇದನ್ನು ಜನಪ್ರಿಯಗೊಳಿಸಿದೆ.

ಫಾರ್ಮ್ ಮಾಲೀಕರ ಮಾಹಿತಿ ಪ್ರಕಾರ, ಈ ಎಮ್ಮೆಗೆ ವಿಶೇಷ ಆರೈಕೆ ನೀಡಲಾಗುತ್ತಿತ್ತು. ದಿನಕ್ಕೆ ನಾಲ್ಕು ಬಾರಿ ಸ್ನಾನ ಮಾಡಿಸುವುದು, ವಿಶೇಷ ಆಹಾರ ನೀಡುವುದು ಹಾಗೂ ಆರೋಗ್ಯದ ಮೇಲೂ ಹೆಚ್ಚುವರಿ ಕಾಳಜಿ ವಹಿಸಲಾಗುತ್ತಿತ್ತು. “ಇದು ತುಂಬಾ ಶಾಂತ ಸ್ವಭಾವದ ಪ್ರಾಣಿ. ಅಲ್ಬಿನೋ ಎಮ್ಮೆಗಳು ಸಾಮಾನ್ಯವಾಗಿ ಆಕ್ರಮಣಕಾರಿ ಆಗುವುದಿಲ್ಲ” ಎಂದು ಅವರು ಹೇಳಿದ್ದಾರೆ.

ಈದ್ ಉಲ್ ಅಧಾ ಹಬ್ಬದ ಅಂಗವಾಗಿ ಪ್ರಾಣಿಬಲಿ ನೀಡುವ ಸಂಪ್ರದಾಯದ ಹಿನ್ನೆಲೆ, ಈ ಎಮ್ಮೆಯನ್ನು ಖರೀದಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರತಿ ಕಿಲೋಗ್ರಾಂಗೆ 550 ಟಾಕಾ ದರದಲ್ಲಿ, ಸುಮಾರು ಮೂರು ಲಕ್ಷ ರೂಪಾಯಿಗೆ ಎಮ್ಮೆ ಮಾರಾಟವಾಗಿದೆ ಎಂದು ಫಾರ್ಮ್ ಮಾಲೀಕರು ಮಾಹಿತಿ ನೀಡಿದ್ದಾರೆ.

ಈ ಎಮ್ಮೆ ಕುರಿತ ಫೋಟೋಗಳು ಮತ್ತು ವಿಡಿಯೋಗಳು ಫೇಸ್‌ಬುಕ್, ಎಕ್ಸ್ ಹಾಗೂ ಇನ್‌ಸ್ಟಾಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಕೆಲವರು ಇದನ್ನು “ಟ್ರಂಪ್ ಎಮ್ಮೆ” ಎಂದು ಕರೆಯುತ್ತಾ ಹಾಸ್ಯಮಯ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದರೆ, ಇನ್ನೂ ಕೆಲವರು ಅಪರೂಪದ ಪ್ರಾಣಿಯನ್ನು ನೋಡಿ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಬಾಂಗ್ಲಾದೇಶದಲ್ಲಿ ಈದ್ ಸಮಯದಲ್ಲಿ ವಿಚಿತ್ರ ರೂಪದ ಅಥವಾ ಅತಿದೊಡ್ಡ ಪ್ರಾಣಿಗಳು ವೈರಲ್ ಆಗುವುದು ಸಾಮಾನ್ಯವಾದರೂ, ಈ ಬಾರಿ “ಡೊನಾಲ್ಡ್ ಟ್ರಂಪ್” ಎಮ್ಮೆ ಜಾಗತಿಕ ಮಟ್ಟದಲ್ಲೇ ಸುದ್ದಿಯಾಗಿದೆ.

Tags: #AlbinoBuffalo#AnimalViral#BangladeshNews#EidSpecial#EidUlAdha#Narayanganj#trendingnews#TrumpBuffalo#TrumpStyle#UniqueBuffalo#ViralBuffaloBangladeshdonaldtrumpSocialMediaBuzzviralnews
Previous Post

80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..

Next Post

ಮುಂಗಾರು ಅಬ್ಬರ: ರಾಜ್ಯಾದ್ಯಂತ ಭಾರೀ ಮಳೆ, ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಎಚ್ಚರಿಕೆ

Related Posts

ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!
Top Story

‘ಸಿಜೆಪಿ’ ಪೇಜ್ ಹ್ಯಾಕ್‌? ‘ಕಾಕ್ರೋಚ್ ಜನತಾ ಪಕ್ಷ’ ಅಭಿಜಿತ್ ದಿಪ್ಕೆ ಹೇಳಿದ್ದೇನು? 

by ಪ್ರತಿಧ್ವನಿ
May 23, 2026
0

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ‘ಕಾಕ್ರೋಚ್ ಜನತಾ ಪಕ್ಷ’ (ಸಿಜೆಪಿ) ಪೇಜ್‌ಗೆ ಸಂಬಂಧಿಸಿದಂತೆ ಅದರ ಅಡ್ಮಿನ್ ಅಭಿಜಿತ್ ದಿಪ್ಕೆ ಮಹತ್ವದ ಹೇಳಿಕೆ ನೀಡಿದ್ದಾರೆ. “ಸಿಜೆಪಿ ಹೆಸರಿನಲ್ಲಿ...

Read moreDetails
ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!

ಮುಂಗಾರು ಅಬ್ಬರ: ರಾಜ್ಯಾದ್ಯಂತ ಭಾರೀ ಮಳೆ, ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಎಚ್ಚರಿಕೆ

May 23, 2026
80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..

80 ಸಾವಿರ ಆಸನದ ಕ್ರೀಡಾಂಗಣ ನಿರ್ಮಾಣ ಪ್ರಗತಿಯ ದೂರದೃಷ್ಟಿ : ಸಿಎಂ ಸಿದ್ದರಾಮಯ್ಯ ಬಣ್ಣನೆ..

May 23, 2026
ದೇಶ ಕಟ್ಟುವ ಕಾರ್ಮಿಕರ ಬದುಕಿಗೆ ಸಹಾಯ ಮಾಡಿದ ಸಮಾಧಾನ ನಮ್ಮ ಸರ್ಕಾರದ್ದು :‌ ಸಚಿವ ಸಂತೋಷ್‌ ಲಾಡ್..

ದೇಶ ಕಟ್ಟುವ ಕಾರ್ಮಿಕರ ಬದುಕಿಗೆ ಸಹಾಯ ಮಾಡಿದ ಸಮಾಧಾನ ನಮ್ಮ ಸರ್ಕಾರದ್ದು :‌ ಸಚಿವ ಸಂತೋಷ್‌ ಲಾಡ್..

May 23, 2026
ಸಾಮಾಜಿಕ ಜಾಲತಾಣದಲ್ಲಿ ಕಾಕ್ರೋಚ್‌ ಓಟಕ್ಕೆ ಬ್ರೇಕ್..?‌ : ಯುವಕರ ಹೋರಾಟ ತುಳಿಯುವ ಷಡ್ಯಂತ್ರವಾ..?

ಸಾಮಾಜಿಕ ಜಾಲತಾಣದಲ್ಲಿ ಕಾಕ್ರೋಚ್‌ ಓಟಕ್ಕೆ ಬ್ರೇಕ್..?‌ : ಯುವಕರ ಹೋರಾಟ ತುಳಿಯುವ ಷಡ್ಯಂತ್ರವಾ..?

May 23, 2026
Next Post
ಟ್ರಂಪ್‌ ಹೆರ್‌ಸ್ಟೈಲ್‌ನಂತೆ ಕಾಣುವ ಅಪರೂಪದ ಎಮ್ಮೆ ವೈರಲ್‌; ಬಾಂಗ್ಲಾದೇಶದಲ್ಲಿ ‘ಡೊನಾಲ್ಡ್ ಟ್ರಂಪ್’ಗೆ ಭಾರೀ ಕ್ರೇಜ್!

ಮುಂಗಾರು ಅಬ್ಬರ: ರಾಜ್ಯಾದ್ಯಂತ ಭಾರೀ ಮಳೆ, ಉತ್ತರ ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಎಚ್ಚರಿಕೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!