• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ನೀಟ್ ಪೇಪರ್ ಲೀಕ್‌ಗೆ ಹೊಸ ಟ್ವಿಸ್ಟ್ : ಒಂದೇ ಕುಟುಂಬದ 5 ಮಂದಿ ಸತತ ಎರಡು ವರ್ಷ ಪಾಸ್!

ಪ್ರತಿಧ್ವನಿ by ಪ್ರತಿಧ್ವನಿ
May 16, 2026
in Top Story
0
ನೀಟ್ ಪೇಪರ್ ಲೀಕ್‌ಗೆ ಹೊಸ ಟ್ವಿಸ್ಟ್ : ಒಂದೇ ಕುಟುಂಬದ 5 ಮಂದಿ ಸತತ ಎರಡು ವರ್ಷ ಪಾಸ್!
Share on WhatsAppShare on FacebookShare on Telegram

ನವದೆಹಲಿ : ಮೆಡಿಕಲ್ ಪ್ರವೇಶಾತಿ ಪರೀಕ್ಷೆಯಾದ NEET–2026 ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಮತ್ತೊಂದು ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ತನಿಖೆಯ ಕೇಂದ್ರಬಿಂದುವಾಗಿರುವ ರಾಜಸ್ಥಾನದ ಒಂದೇ ಕುಟುಂಬದ ಐವರು ಸದಸ್ಯರು ಕಳೆದ 2025ರ ನೀಟ್ ಪರೀಕ್ಷೆಯಲ್ಲೂ ಉತ್ತೀರ್ಣರಾಗಿದ್ದರು ಎಂಬುದು ಇದೀಗ ತನಿಖಾಧಿಕಾರಿಗಳ ಗಮನ ಸೆಳೆದಿದೆ.

ADVERTISEMENT
satish Jarkiholi : ಬಿಜೆಪಿಯವರಿಗೆ ಅಭಿವೃದ್ಧಿ ಬಗ್ಗೆ ಮಾತನಾಡೋದು ಗೊತ್ತಿಲ್ಲ..! #siddaramaiah #dkshivakumar

ಈ ಬೆಳವಣಿಗೆ ನೀಟ್ ಪೇಪರ್ ಲೀಕ್ ದಂಧೆ ಕೇವಲ ಈ ವರ್ಷದಷ್ಟೇ ಅಲ್ಲ, ಕಳೆದ ವರ್ಷದಿಂದಲೇ ವ್ಯವಸ್ಥಿತವಾಗಿ ನಡೆಯುತ್ತಿತ್ತೇ ಎಂಬ ಅನುಮಾನಗಳಿಗೆ ಕಾರಣವಾಗಿದೆ.ಪ್ರಶ್ನೆ ಪತ್ರಿಕೆ ಸೋರಿಕೆ ಜಾಲದೊಂದಿಗೆ ಸಂಪರ್ಕ ಹೊಂದಿರುವ ಆರೋಪದಡಿ ಈ ಕುಟುಂಬದ ಸದಸ್ಯರ ಮೇಲೆ ಈಗಾಗಲೇ ತನಿಖಾ ಸಂಸ್ಥೆಗಳು ನಿಗಾ ಇಟ್ಟಿದ್ದವು. ಇದೀಗ 2025ರ ಪರೀಕ್ಷೆಯಲ್ಲೂ ಇವರ ಸಾಧನೆ ಕುರಿತ ದಾಖಲೆಗಳು ಸಿಕ್ಕಿದ್ದು, ತನಿಖೆಗೆ ಹೊಸ ತಿರುವು ಸಿಕ್ಕಿದೆ.

H.D.Devegowda on DkShivakumar: DCM ಡಿಕೆಶಿವಕುಮಾರ್ ವಿರುದ್ಧ ಮಾಜಿ ಪ್ರಧಾನಿ ದೇವೇಗೌಡ್ರ ವಾಗ್ದಾಳಿ

ದೇಶದ ಅತ್ಯಂತ ಕಠಿಣ ಪ್ರವೇಶ ಪರೀಕ್ಷೆಗಳಲ್ಲಿ ಒಂದಾದ ನೀಟ್‌ನಲ್ಲಿ ಒಂದೇ ಕುಟುಂಬದ ಐವರು ಸದಸ್ಯರು ಸತತ ಎರಡು ವರ್ಷ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿರುವುದು ತನಿಖಾಧಿಕಾರಿಗಳಲ್ಲಿ ಗಂಭೀರ ಅನುಮಾನ ಹುಟ್ಟಿಸಿದೆ.

ತನಿಖಾಧಿಕಾರಿಗಳ ಪ್ರಕಾರ, ಈ ಕುಟುಂಬವು ಪೇಪರ್ ಲೀಕ್ ನಡೆಸುತ್ತಿದ್ದ ದೊಡ್ಡ ಜಾಲದೊಂದಿಗೆ ದೀರ್ಘಕಾಲದ ಸಂಪರ್ಕ ಹೊಂದಿರಬಹುದು. ಕಳೆದ ವರ್ಷದಿಂದಲೇ ಪ್ರಶ್ನೆ ಪತ್ರಿಕೆ ಸೋರಿಕೆಯ ಲಾಭ ಪಡೆದಿರಬಹುದೆಂಬ ಶಂಕೆಯೂ ವ್ಯಕ್ತವಾಗಿದೆ.

H.D.Devegowda on DkShivakumar: DCM ಡಿಕೆಶಿವಕುಮಾರ್ ವಿರುದ್ಧ ಮಾಜಿ ಪ್ರಧಾನಿ ದೇವೇಗೌಡ್ರ ವಾಗ್ದಾಳಿ

ಇದರೊಂದಿಗೆ 2025ರ ನೀಟ್ ಪರೀಕ್ಷೆಯ ಪಾರದರ್ಶಕತೆಯ ಮೇಲೂ ಪ್ರಶ್ನೆಗಳು ಎದ್ದಿವೆ.ಕೇಂದ್ರ ತನಿಖಾ ಸಂಸ್ಥೆಗಳು ಹಾಗೂ ಸ್ಥಳೀಯ ಪೊಲೀಸರು ಕುಟುಂಬದ ಬ್ಯಾಂಕ್ ಖಾತೆಗಳು, ಕೋಚಿಂಗ್ ಸೆಂಟರ್‌ಗಳ ಸಂಪರ್ಕ ಹಾಗೂ ಆರ್ಥಿಕ ವಹಿವಾಟುಗಳ ಪರಿಶೀಲನೆ ನಡೆಸುತ್ತಿದ್ದಾರೆ. ಪೇಪರ್ ಲೀಕ್ ದಂಧೆಯ ಕಿಂಗ್‌ಪಿನ್‌ಗಳ ಜೊತೆಗಿನ ಸಂಪರ್ಕದ ಮೇಲೂ ತನಿಖೆ ನಡೆಯುತ್ತಿದೆ.

ಕುಟುಂಬದ ಐವರು ಸದಸ್ಯರನ್ನೂ ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಇವರಿಂದ ದೊರೆಯುವ ಮಾಹಿತಿ ದೇಶವನ್ನೇ ಬೆಚ್ಚಿಬೀಳಿಸಿರುವ ನೀಟ್ ಹಗರಣಕ್ಕೆ ಮಹತ್ವದ ತಿರುವು ನೀಡುವ ಸಾಧ್ಯತೆ ಇದೆ.

Tags: #ExamScam#NEET2026#NEETInvestigation#NEETPaperLeak#NEETScam#PaperLeakCasebreakingnewsEducationNewsMedicalentranceexamRajasthan
Previous Post

ಲಂಚವಿಲ್ಲದೆ ‘B’ ಯಿಂದ ‘A’ ಖಾತಾ ಪರಿವರ್ತನೆ : ಪಾರದರ್ಶಕ ಆಡಳಿತಕ್ಕೆ ಡಿ.ಕೆ. ಶಿವಕುಮಾರ್ ಒತ್ತು..

Next Post

ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

Related Posts

ಅಸ್ಮಿತೆಯ ಸಂಕೋಲೆಯಲಿ ಶಿಕ್ಷಣ-ಶಿಕ್ಷಣಾರ್ಥಿಗಳು
Top Story

ಅಸ್ಮಿತೆಯ ಸಂಕೋಲೆಯಲಿ ಶಿಕ್ಷಣ-ಶಿಕ್ಷಣಾರ್ಥಿಗಳು

by ಪ್ರತಿಧ್ವನಿ
May 16, 2026
0

ನಾ ದಿವಾಕರ ಆಗತಾನೇ ಲೌಕಿಕ ಜಗತ್ತಿಗೆ ಕಣ್ತೆರೆಯುವ ಮಕ್ಕಳಿಗೆ ಏನನ್ನು ತೆರೆದಿಡಬೇಕು ? ಬಹುಶಃ ಈ ಪ್ರಶ್ನೆಗೆ ಭಾರತದ ರಾಜಕೀಯ ವಲಯದಲ್ಲಿ ಉತ್ತರವೇ ಸಿಗುವುದಿಲ್ಲ. ಏಕೆಂದರೆ ನೆಲದ...

Read moreDetails
ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

May 16, 2026
ಲಂಚವಿಲ್ಲದೆ ‘B’ ಯಿಂದ ‘A’ ಖಾತಾ ಪರಿವರ್ತನೆ : ಪಾರದರ್ಶಕ ಆಡಳಿತಕ್ಕೆ ಡಿ.ಕೆ. ಶಿವಕುಮಾರ್ ಒತ್ತು..

ಲಂಚವಿಲ್ಲದೆ ‘B’ ಯಿಂದ ‘A’ ಖಾತಾ ಪರಿವರ್ತನೆ : ಪಾರದರ್ಶಕ ಆಡಳಿತಕ್ಕೆ ಡಿ.ಕೆ. ಶಿವಕುಮಾರ್ ಒತ್ತು..

May 16, 2026
“ಕೇವಲ 7 ನಿಮಿಷದಲ್ಲಿ ಕ್ಯಾನ್ಸರ್ ಚಿಕಿತ್ಸೆ : ಭಾರತದಲ್ಲಿ ಹೊಸ ಇಂಜೆಕ್ಷನ್ ಬಿಡುಗಡೆ”

“ಕೇವಲ 7 ನಿಮಿಷದಲ್ಲಿ ಕ್ಯಾನ್ಸರ್ ಚಿಕಿತ್ಸೆ : ಭಾರತದಲ್ಲಿ ಹೊಸ ಇಂಜೆಕ್ಷನ್ ಬಿಡುಗಡೆ”

May 16, 2026
ವಿಜಯ್ ಗೆಲುವಿನ ಪ್ರಭಾವ ಉತ್ತರ ಪ್ರದೇಶಕ್ಕೂ? ‘ಸತ್ತಾ ಪರಿವರ್ತನ್ ಯಾತ್ರೆ’ಗೆ ಸಜ್ಜಾದ ಚಂದ್ರಶೇಖರ್ ಆಜಾದ್

ವಿಜಯ್ ಗೆಲುವಿನ ಪ್ರಭಾವ ಉತ್ತರ ಪ್ರದೇಶಕ್ಕೂ? ‘ಸತ್ತಾ ಪರಿವರ್ತನ್ ಯಾತ್ರೆ’ಗೆ ಸಜ್ಜಾದ ಚಂದ್ರಶೇಖರ್ ಆಜಾದ್

May 16, 2026
Next Post
ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!