• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 21, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಾಣಿಜ್ಯ

ಷೇರು ಮಾರುಕಟ್ಟೆಯ ಕೆಟ್ಟ ಸುದ್ದಿ: ಇಲ್ಲಿದೆ ಭಾರತೀಯ ಷೇರು ಮಾರುಕಟ್ಟೆಗೆ ಎಚ್ಚರಿಕೆ

ಪ್ರತಿಧ್ವನಿ by ಪ್ರತಿಧ್ವನಿ
March 16, 2026
in ವಾಣಿಜ್ಯ
0
ಷೇರು ಮಾರುಕಟ್ಟೆಯ ಕೆಟ್ಟ ಸುದ್ದಿ: ಇಲ್ಲಿದೆ ಭಾರತೀಯ ಷೇರು ಮಾರುಕಟ್ಟೆಗೆ ಎಚ್ಚರಿಕೆ
Share on WhatsAppShare on FacebookShare on Telegram

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಗಲಾಟೆಗಳು ಮತ್ತು ಹೆಚ್ಚುತ್ತಿರುವ ಉದ್ವಿಗ್ನತೆಗಳು ಭಾರತೀಯ ಷೇರು ಮಾರುಕಟ್ಟೆಗೆ ಹೊಸ ಆತಂಕವನ್ನುಂಟು ಮಾಡಿವೆ. ಅಲ್ಲಿ ಪರಿಸ್ಥಿತಿ ತೀವ್ರವಾದರೆ ಅದರ ನೇರ ಪರಿಣಾಮ ಕಚ್ಚಾ ತೈಲದ ಬೆಲೆಗಳ ಮೇಲೆ ಬೀಳುತ್ತದೆ. ಭಾರತ ತನ್ನ ಅಗತ್ಯದ ಬಹುಪಾಲು ತೈಲವನ್ನು ಆಮದು ಮಾಡಿಕೊಳ್ಳುವುದರಿಂದ, ಈ ಬೆಳವಣಿಗೆ ದೇಶದ ಆರ್ಥಿಕತೆಗೆ ಸವಾಲಾಗಿ ಪರಿಣಮಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಾಗತಿಕ ಬ್ರೋಕರೇಜ್ ಸಂಸ್ಥೆಗಳು ಹೂಡಿಕೆದಾರರಿಗೆ ಎಚ್ಚರಿಕೆಯಿಂದ ಹೂಡಿಕೆ ಮಾಡಲು ಸಲಹೆ ನೀಡಿವೆ.

ADVERTISEMENT
CM Siddaramaiah :ಲಂಕೇಶ್​ ನನ್ನನ್ನ ತೆಗಳದೆ ಇದ್ದಿದ್ರೆ 17ನೇ ಬಜೆಟ್​​ ಮಂಡಿಸುತ್ತ ಇರಲಿಲ್ಲ #pratidhvani

 

ಜಪಾನ್ ಮೂಲದ ಪ್ರಮುಖ ಬ್ರೋಕರೇಜ್ ಸಂಸ್ಥೆ ನೊಮುರಾ ಡಿಸೆಂಬರ್ 2026ರ ನಿಫ್ಟಿ ಗುರಿಯನ್ನು ಶೇ.15ರಷ್ಟು ಕಡಿತಗೊಳಿಸಿದೆ. ಇದುವರೆಗೆ 29,300ಕ್ಕೆ ಏರಬಹುದು ಎಂದು ನಿರೀಕ್ಷಿಸಿದ್ದ ನಿಫ್ಟಿ ಗುರಿಯನ್ನು ಈಗ 24,900ಕ್ಕೆ ಇಳಿಸಲಾಗಿದೆ. ಮಾರ್ಚ್ 16ರಂದು ಬಿಡುಗಡೆಗೊಂಡ ವರದಿಯ ಪ್ರಕಾರ, ಕಚ್ಚಾ ತೈಲದ ಬೆಲೆಗಳು ಇದೇ ರೀತಿ ಏರಿಕೆಯಲ್ಲಿ ಮುಂದುವರಿದರೆ 2027ರ ಆರ್ಥಿಕ ವರ್ಷದಲ್ಲಿ ಕಂಪನಿಗಳ ಲಾಭದಲ್ಲಿ ಶೇ.10ರಿಂದ 15ರಷ್ಟು ಕುಸಿತವಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

Nirmala Sitharaman : ಲೋಕಸಭೆಯಲ್ಲಿ MSME ಕ್ಷೇತ್ರದ ಬಗ್ಗೆ ಧ್ವನಿ ಎತ್ತಿದ ತರೂರ್..! #pratidhvani

 

ಇತ್ತ ಸಿಟಿ ರಿಸರ್ಚ್ ಸಂಸ್ಥೆಯೂ ತನ್ನ ಅಂದಾಜುಗಳನ್ನು ಪರಿಷ್ಕರಿಸಿದ್ದು, ನಿಫ್ಟಿ ಗುರಿಯನ್ನು 28,500ರಿಂದ 27,000ಕ್ಕೆ ಇಳಿಸಿದೆ. ತಜ್ಞರ ಪ್ರಕಾರ, ಇದು ಕೇವಲ ತೈಲದ ಬೆಲೆ ಏರಿಕೆಯ ಸಮಸ್ಯೆಯಷ್ಟೇ ಅಲ್ಲ; ಗಲ್ಫ್ ದೇಶಗಳಿಂದ ಬರುವ ಹಡಗುಗಳ ಸಂಚಾರದಲ್ಲಿ ಅಡಚಣೆ ಉಂಟಾದರೆ ಪೂರೈಕೆ ಸರಪಳಿಗೂ ದೊಡ್ಡ ಸಮಸ್ಯೆ ಎದುರಾಗಬಹುದು. ಇದರಿಂದ ಕೃಷಿ ಕ್ಷೇತ್ರದಲ್ಲಿ ರಸಗೊಬ್ಬರ, ಔಷಧೋದ್ಯಮ ಮತ್ತು ಪೇಂಟ್ ಉದ್ಯಮಗಳಿಗೆ ನೇರ ಪರಿಣಾಮ ಬೀಳುವ ಸಾಧ್ಯತೆ ಇದೆ.

Budget Session: ಜಮೀರ್ ಸಾಹೇಬ್ರು ಎಷ್ಟು ಹುಷಾರು ಅಂದ್ರೆ ಒಳಗೆ ಬನ್ನಿ ಅಂತ ಕರೀತಾರೆ ಎಂದ ಮುನಿರತ್ನ #pratidhvani

ಸಿಟಿ ವರದಿಯ ಪ್ರಕಾರ, ಪೂರೈಕೆ ಸಮಸ್ಯೆಗಳು ಎರಡು-ಮೂರು ತಿಂಗಳು ಮುಂದುವರಿದರೆ ಭಾರತದ ಜಿಡಿಪಿ ಬೆಳವಣಿಗೆ ಶೇ.0.20ರಿಂದ 0.30ರಷ್ಟು ಕುಸಿಯಬಹುದು. ಜೊತೆಗೆ ಹಣದುಬ್ಬರವೂ ಹೆಚ್ಚಾಗುವ ಸಾಧ್ಯತೆ ಇದೆ. ಈ ಆತಂಕದ ನಡುವೆ ಮಾರುಕಟ್ಟೆಯಲ್ಲೂ ಈಗಾಗಲೇ ತಿದ್ದುಪಡಿ ಪ್ರಾರಂಭವಾಗಿದ್ದು, ನಿಫ್ಟಿ ಮತ್ತು ಸೆನ್ಸೆಕ್ಸ್ ತಮ್ಮ ಗರಿಷ್ಠ ಮಟ್ಟದಿಂದ ಸುಮಾರು ಶೇ.10ರಷ್ಟು ಕುಸಿದಿವೆ.

Asaduddin Owaisi : ಸಂಸತ್ತಿನಲ್ಲಿ ಏನಾಗುತ್ತಿದೆ ಅಂತ ನಮಗೆ ಗೊತ್ತಿಲ್ಲಾ, ಆ ಪರಿಸ್ಥಿತಿ ಇದೆ..! #pratidhvani

ಈ ಪರಿಸ್ಥಿತಿಯಲ್ಲಿ ಹೂಡಿಕೆದಾರರು ಹೆಚ್ಚು ಎಚ್ಚರಿಕೆಯಿಂದ ನಡೆದುಕೊಳ್ಳಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ. ಹಣದುಬ್ಬರದ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಕಣ್ಣಿಟ್ಟಿರುವುದರಿಂದ ಬಡ್ಡಿದರ ಕಡಿತದ ಸಾಧ್ಯತೆ ತಕ್ಷಣ ಕಾಣುತ್ತಿಲ್ಲ. ಜೊತೆಗೆ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದು ವಿದೇಶಿ ಹೂಡಿಕೆದಾರರ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಆದ್ದರಿಂದ ಮಾರುಕಟ್ಟೆ ಅಸ್ಥಿರವಾಗಿರುವ ಈ ಸಮಯದಲ್ಲಿ ಆತುರದ ನಿರ್ಧಾರಗಳಿಗಿಂತ ಸುರಕ್ಷಿತ ಹೂಡಿಕೆಗಳ ಕಡೆ ಹೆಚ್ಚು ಗಮನ ಹರಿಸುವುದು ಉತ್ತಮ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Tags: Bad news for the stock marketIndian stock marketMoneypdatidavani
Previous Post

‘ಬಾಸ್’ ಸಿನಿಮಾ ವಿವಾದ: ಸೆನ್ಸಾರ್ ಮಂಡಳಿಗೆ ನೋಟಿಸ್ ನೀಡಿದ ದರ್ಶನ್ ಪರ ವಕೀಲರು

Next Post

ಬೇಸಿಗೆಯಲ್ಲಿ ದೇಹಕ್ಕೆ ನೀರಿನ ಅವಶ್ಯಕತೆ: ಇರಲಿ ಈ ಅಪಾಯದ ಬಗ್ಗೆ ಎಚ್ಚರಿಕೆ

Related Posts

ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ
Top Story

ಮೋದಿ ಎಚ್ಚರಿಕೆಯ ಬೆನ್ನಲ್ಲೆ ದಿಢೀರ್‌ ಪೆಟ್ರೋಲ್‌, ಡಿಸೇಲ್‌ ಬೆಲೆ ಏರಿಕೆ

by ಪ್ರತಿಧ್ವನಿ
May 15, 2026
0

ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ಯುದ್ಧದ ಸ್ಥಿತಿ ಹಾಗೂ ಉದ್ವಿಗ್ನ ಪರಿಸ್ಥಿತಿ ಪರಿಣಾಮ ಇದೀಗ ಭಾರತಕ್ಕೂ ತಟ್ಟಿದೆ, ಇದರ ಮುನ್ನೇಚ್ಚರಿಕೆ ಕ್ರಮವಾಗಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ...

Read moreDetails
ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೆಚ್ಚು ಉದ್ಯೋಗಾವಕಾಶ: ಕ್ರೆಡಲ್ ಎಂ.ಡಿ. ಕೆ.ಪಿ. ರುದ್ರಪ್ಪಯ್ಯ

ನವೀಕರಿಸಬಹುದಾದ ಇಂಧನ ವಲಯದಲ್ಲಿ ಹೆಚ್ಚು ಉದ್ಯೋಗಾವಕಾಶ: ಕ್ರೆಡಲ್ ಎಂ.ಡಿ. ಕೆ.ಪಿ. ರುದ್ರಪ್ಪಯ್ಯ

May 14, 2026
ಶನಿವಾರ ಚಿನ್ನ-ಬೆಳ್ಳಿ ದರದಲ್ಲಿ ಬದಲಾವಣೆ: ಬೆಂಗಳೂರು, ದೆಹಲಿ ಸೇರಿ ಪ್ರಮುಖ ನಗರಗಳ ಹೊಸ ಬೆಲೆ ಪ್ರಕಟ

ಶನಿವಾರ ಚಿನ್ನ-ಬೆಳ್ಳಿ ದರದಲ್ಲಿ ಬದಲಾವಣೆ: ಬೆಂಗಳೂರು, ದೆಹಲಿ ಸೇರಿ ಪ್ರಮುಖ ನಗರಗಳ ಹೊಸ ಬೆಲೆ ಪ್ರಕಟ

May 9, 2026
ನಾನು ಚುನಾವಣೆಯಲ್ಲಿ ಸೋತಿಲ್ಲ, ರಾಜೀನಾಮೆ ನೀಡಲ್ಲ: ಕಿಡಿಕಾರಿದ ಮಮತಾ ಬ್ಯಾನರ್ಜಿ

ನಾನು ಚುನಾವಣೆಯಲ್ಲಿ ಸೋತಿಲ್ಲ, ರಾಜೀನಾಮೆ ನೀಡಲ್ಲ: ಕಿಡಿಕಾರಿದ ಮಮತಾ ಬ್ಯಾನರ್ಜಿ

May 5, 2026
“ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ, ಆದಾಯ ಪಾತಳಕ್ಕೆ ಕುಸಿದಿದೆ, ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?”

“ಎಲ್ಲಾ ಪದಾರ್ಥಗಳ ಬೆಲೆ ಆಕಾಶಕ್ಕೇರಿದೆ, ಆದಾಯ ಪಾತಳಕ್ಕೆ ಕುಸಿದಿದೆ, ಬೆಲೆ ಹೆಚ್ಚಳಕ್ಕೆ ಹೊಣೆ ಯಾರು?”

May 1, 2026
Next Post
ಬೇಸಿಗೆಯಲ್ಲಿ ದೇಹಕ್ಕೆ ನೀರಿನ ಅವಶ್ಯಕತೆ: ಇರಲಿ ಈ ಅಪಾಯದ ಬಗ್ಗೆ ಎಚ್ಚರಿಕೆ

ಬೇಸಿಗೆಯಲ್ಲಿ ದೇಹಕ್ಕೆ ನೀರಿನ ಅವಶ್ಯಕತೆ: ಇರಲಿ ಈ ಅಪಾಯದ ಬಗ್ಗೆ ಎಚ್ಚರಿಕೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada