• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, April 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಯುದ್ಧದ ಎಫೆಕ್ಟ್‌ : ಗಲ್ಫ್‌ನಲ್ಲಿರುವ ಕುಟುಂಬಸ್ಥರನ್ನೇ ನಂಬಿರುವ ಭಾರತೀಯರಿಗೆ ಆರ್ಥಿಕ ಹೊಡೆತ..!

ಈ ಹಣವು ಕೇರಳದಿಂದ ಬಿಹಾರ ಮತ್ತು ಪಶ್ಚಿಮ ಬಂಗಾಳದವರೆಗಿನ ಲಕ್ಷಾಂತರ ಕುಟುಂಬಗಳಿಗೆ ಜೀವನಾಡಿಯಾಗಿ ಬಳಕೆಯಾಗುತ್ತದೆ...

ಪ್ರತಿಧ್ವನಿ by ಪ್ರತಿಧ್ವನಿ
March 14, 2026
in Top Story, ಇದೀಗ, ದೇಶ, ರಾಜಕೀಯ, ವಿದೇಶ
0
ಯುದ್ಧದ ಎಫೆಕ್ಟ್‌ : ಗಲ್ಫ್‌ನಲ್ಲಿರುವ ಕುಟುಂಬಸ್ಥರನ್ನೇ ನಂಬಿರುವ ಭಾರತೀಯರಿಗೆ ಆರ್ಥಿಕ ಹೊಡೆತ..!
Share on WhatsAppShare on FacebookShare on Telegram

ಬೆಂಗಳೂರು : ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವು ಭಾರತದ ಆರ್ಥಿಕತೆಯ ಮೇಲೆ ಭಾರಿ ಪೆಟ್ಟು ನೀಡಿದೆ.  ಇಂಧನ ಪೂರೈಕೆಯ ಭಾರಿ ವ್ಯತ್ಯವ ಉಂಟಾಗಿದೆ. ಅಲ್ಲದೆ ವಿದೇಶಿ ವಿನಿಮಯದ ಮೇಲೂ ಕರಾಳ ಛಾಯಯೂ ಮೂಡಿದಂತಾಗಿದೆ .ಗಲ್ಫ್‌ ರಾಷ್ಟ್ರಗಳಿಂದ ಹಣ ರವಾನೆಯಲ್ಲಿನ ಇಳಿಕೆಯು ಭಾರತದ ಚಾಲ್ತಿ ಖಾತೆ ಕೊರತೆಯನ್ನು ಹೆಚ್ಚಿಸಬಹುದಾಗಿದೆ.

ADVERTISEMENT
Podcast with Kurubur Shanthakumar : ವೀಕ್ಷಿಸಿ ಇಂದು ಸಂಜೆ 4 : 30 ಕ್ಕೆ #pratidhvani

ಈಗಾಗಲೇ ಡಾಲರ್‌ ಎದುರು ರೂಪಾಯಿ ಮಟ್ಟ ಕುಸಿತ ಕಾಣುತ್ತಿದೆ. ಅಲ್ಲದೆ ಮುಖ್ಯವಾಗಿ ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಸುಮಾರು ಒಂದು ಕೋಟಿ ಭಾರತೀಯ ನಾಗರಿಕರು ವಲಸೆ ಹೋಗಿದ್ದಾರೆ. ಹೊಟ್ಟೆ ಪಾಡಿನ ಜೀವನಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್, (UAE) ಕತಾರ್, ಬಹ್ರೇನ್ ಮತ್ತು ಕುವೈತ್‌ನಂತಹ ಕೆಲವು ಗಲ್ಫ್ ದೇಶಗಳಲ್ಲಿ, ಭಾರತೀಯ ವಲಸಿಗರು ಸ್ಥಳೀಯ ಜನಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎನ್ನುವುದು ಗಮನಾರ್ಹ ಸಂಗತಿಯಾಗಿದೆ.

ಗಲ್ಫ್‌ ದೇಶಗಳಲ್ಲಿರುವ ಹೆಚ್ಚಿನ ಭಾರತೀಯ ವಲಸಿಗರು ಕಟ್ಟಡಗಳ ನಿರ್ಮಾಣ, ಗಾರೆ ಕೆಲಸ, ಎಲೆಕ್ಟ್ರಿಕ್‌ ಕ್ಷೇತ್ರ ಸೇರಿದಂತೆ ಕೆಳ ಹಂತದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ ಮತ್ತು ಸಿಂಗಾಪುರದಂತಹ ಮುಂದುವರಿದ ಆರ್ಥಿಕತೆಯ ದೇಶಗಳಿಗೆ ವಲಸೆ ಹೋಗುವುದು ಉತ್ತಮ ಜೀವನಮಟ್ಟದ ಉದ್ದೇಶದಿಂದ.

ಇದನ್ನೂ ಓದಿ : ಒಡಿಶಾದಲ್ಲಿ ಕಾಂಗ್ರೆಸ್‌ಗೆ ಕಾಡ್ತಿರುವ ಭೀತಿ ಏನು..? : ಬಿಜೆಪಿಗೆ ಇರುವ ಸದಸ್ಯ ಬಲವೆಷ್ಟು..?

ಆದರೆ ಹೆಚ್ಚಾಗಿ  ಗಲ್ಫ್‌ನಲ್ಲಿರುವ ಭಾರತೀಯ ವಲಸಿಗರು ತಮ್ಮ ತೆರಿಗೆ-ಇಲ್ಲದೆ ಆದಾಯವನ್ನು ಗಳಿಸಿ ಅದನ್ನು ತಮ್ಮ ದೇಶಕ್ಕೆ ರವಾನಿಸಿ ಜೀವನ ಕಟ್ಟಿಕೊಳ್ಳುವ ಆಸಕ್ತಿ ತೋರುತ್ತಾರೆ. ಈ ಮೂಲಕ ತಮ್ಮನ್ನು ನಂಬಿದ್ದ ಕುಟುಂಬಗಳಿಗೆ ಬೆಂಬಲವಾಗಿ ನಿಲ್ಲುವ ಭಾಗವಾಗಿಯೂ ಹಣ ಸಹಕಾರಿಯಾಗುತ್ತದೆ. ಆದರೆ ಯುದ್ಧದ ಪರಿಣಾಮ ಇದೀಗ ಈ ಕುಟುಂಬಗಳಿಗೆ ಹಣ ಬಾರದೇ ಸಂಕಷ್ಟ ಎದುರಾಗಿದೆ.

ಈ ಹಣವು ಕೇರಳದಿಂದ ಬಿಹಾರ ಮತ್ತು ಪಶ್ಚಿಮ ಬಂಗಾಳದವರೆಗಿನ ಲಕ್ಷಾಂತರ ಕುಟುಂಬಗಳಿಗೆ ಜೀವನಾಡಿಯಾಗಿ ಬಳಕೆಯಾಗುತ್ತದೆ. ಅಲ್ಲದೆ ದೇಶದ ಆರ್ಥಿಕತೆಯಲ್ಲಿ ನಿರ್ಣಾಯಕ ಪಾತ್ರವನ್ನೂ ವಹಿಸುತ್ತದೆ. ಪ್ರಮುಖವಾಗಿ ವಿದೇಶಗಳಲ್ಲಿ ಉದ್ಯೋಗದಲ್ಲಿರುವ ಭಾರತೀಯರು ಕಳುಹಿಸುವ ಹಣವು 2010-11ರಲ್ಲಿ 55.6 ಬಿಲಿಯನ್‌ ಡಾಲರ್‌ನಿಂದ ಹಿಡಿದು, 2024-25ರಲ್ಲಿ 135.4 ಬಿಲಿಯನ್‌ ಡಾಲರ್‌ಗೆ ಏರಿಕೆಯಾಗಿದೆ.

ಕಳೆದ ಮಾರ್ಚ್ 2025 ರಲ್ಲಿ ಕೊನೆಗೊಂಡ ಹಣಕಾಸು ವರ್ಷದಲ್ಲಿ, ಹಣ ರವಾನೆಯು ದೇಶದ ಒಟ್ಟು ದೇಶೀಯ ಉತ್ಪನ್ನದ (GDP)ಯ ಸುಮಾರು ಶೇ.3.5 ರಷ್ಟಿದೆ. ಇತ್ತೀಚಿನ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದ (RBI) ದತ್ತಾಂಶದ ಪ್ರಕಾರ, ಪ್ರಸ್ತುತ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ಹಣ ರವಾನೆಯು 73 ಬಿಲಿಯನ್‌ ಡಾಲರ್‌ಗೆ ಏರಿದೆ.

Karnataka Legislative Council : ಮಹಿಳಾ ದೌರ್ಜನ್ಯದ ವಿರುದ್ಧ ಸದನದಲ್ಲಿ ಧ್ವನಿ ಎತ್ತಿದ ಉಮಾಶ್ರೀ.! #pratidhvani

ಇಂಧನ ಅವಶ್ಯಕತೆಗಳನ್ನು ಪೂರೈಸಲು ಆಮದುಗಳ ಮೇಲಿನ ಅವಲಂಬಿತವಾಗಿರುವ ಭಾರತವು ಹೆಚ್ಚಿನ ಸರಕು ವ್ಯಾಪಾರ ಕೊರತೆಯನ್ನು ಎದುರಿಸುತ್ತಿದೆ. ಅಲ್ಲದೆ ಭಾರತೀಯ ಆರ್ಥಿಕತೆಗೆ ಹಣ ರವಾನೆಯು ಹೊರ ವಲಯದಿಂದ ಬರುವ ಇನ್ನೊಂದು ಆದಾಯದ ಮೂಲವಾಗಿದೆ.

ಆದರೆ ಇತ್ತೀಚಿನ ವರ್ಷಗಳಲ್ಲಿ ಹಣ ರವಾನೆಯು ಒಟ್ಟು ಎಫ್‌ಡಿಐ ಹರಿವನ್ನು ಮೀರಿದೆ. ಹೊರಗಿನ ಅಂದರೆ ವಿದೇಶಿ ಹಣದ, ಆರ್ಥಿಕತೆಯ ಪ್ರಮುಖ ಮೂಲವಾಗಿದೆ.  ಅಲ್ಲದೆ ಈ ವರ್ಷದ ಆರಂಭದಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗಿರುವ ಆರ್ಥಿಕ ಸಮೀಕ್ಷೆಯಲ್ಲಿಯೂ ಈ ಬಗ್ಗೆ ಉಲ್ಲೇಖಿಸಲಾಗಿದೆ.

ಭಾರತದ ಒಳಬರುವ ಹಣ ರವಾನೆಯಲ್ಲಿ ಗಲ್ಫ್ ರಾಷ್ಟ್ರಗಳು ಅತ್ಯಂತ ಅಧಿಕ ಮುಂಚೂಣಿಯಲ್ಲಿವೆ. ಕಳೆದ 2024-25ರಲ್ಲಿ, ಅಮೆರಿಕವು ಶೇ. 27.7 ರಷ್ಟು ಕೊಡುಗೆ ನೀಡುವ ಮೂಲಕ ಅಗ್ರಸ್ಥಾನದಲ್ಲಿತ್ತು. ನಂತರ ಯುಎಇ ಶೇ,19.2 ರಷ್ಟು, ಬ್ರಿಟನ್ ಶೇ. 10.8 ರಷ್ಟು ಮತ್ತು ಸಿಂಗಾಪುರ ಶೇ. 6.6 ರಷ್ಟು ಭಾರತಕ್ಕೆ ರವಾನೆಯ ಪಾಲುದಾರರಾಗಿದ್ದವು.

ಆದರೆ ಸದ್ಯದ ಯುದ್ಧದ ತೀವ್ರತೆಯ ಪರಿಸ್ಥಿತಿಯ ಪರಿಣಾಮ ಭಾರತಕ್ಕೆ ಗಲ್ಫ್‌ ರಾಷ್ಟ್ರಗಳಿಂದ ರವಾನೆಯಾಗುತ್ತಿದ್ದ ಹಣದ ಪ್ರಮಾಣವೂ ಬಹುತೇಕ ವಿರಳವಾಗಿದೆ. ಗಲ್ಫ್‌ ರಾಷ್ಟ್ರಗಳಲ್ಲಿ ಗಳಿಸಿರುವ ಆದಾಯವನ್ನು ತಾಯ್ನಾಡಿಗೆ ಕಳುಹಿಸಿ, ಕುಟುಂಬಕ್ಕೆ ಆಸರೆಯಾಗಬೇಕಿದ್ದ ಅದೆಷ್ಟೋ ಜನರು ಕಂಗಾಲಾಗಿದ್ದಾರೆ. ಯಾವ ಕ್ಷಣದಲ್ಲಿ ಎಲ್ಲಿ ಮಿಸೈಲ್‌ ಬೀಳುತ್ತೋ, ಬಾಂಬ್‌ ದಾಳಿಯಾಗುತ್ತೋ ಎಂಬ ಆತಂಕದಲ್ಲಿದ್ದಾರೆ. ಈ ಪರಿಸ್ಥಿತಿಯು ದೇಶದ ವಿಚಾರದಲ್ಲಿ ಗಲ್ಫ್‌ ದೇಶಗಳಿಂದ ರವಾನಿಸಲಾಗುತ್ತಿದ್ದ ಹಣಕ್ಕೆ ಭಾರಿ ಏಟು ಬಿದ್ದಂತಾಗಿದೆ.

Tags: AmericaBritaindollarfinancial crisisFinancila Supportsgulf countriesIndian FamiliesIndian MigrantsIndians In Gulfsinternational newsiran israel warKuwaitMiddle East Tentionsnational newsOil PurchasingOmanPratidhvaniQatar.Reserve Bank of IndiaRupeesSingaporeUAEuk
Previous Post

ಒಡಿಶಾದಲ್ಲಿ ಕಾಂಗ್ರೆಸ್‌ಗೆ ಕಾಡ್ತಿರುವ ಭೀತಿ ಏನು..? : ಬಿಜೆಪಿಗೆ ಇರುವ ಸದಸ್ಯ ಬಲವೆಷ್ಟು..?

Next Post

ಕೇಂದ್ರದ ಮೇಲೆ ಒತ್ತಡ ಹಾಕಲು ಮಂಗಳವಾರ ದೆಹಲಿಗೆ ಹೋಗ್ತೀವಿ : ಡಿಕೆ ಶಿವಕುಮಾರ್ ಮಹತ್ವದ ಮಾಹಿತಿ..

Related Posts

ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ
Top Story

ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

by ಪ್ರತಿಧ್ವನಿ
April 11, 2026
0

ಭೂಮಿಯ ಮೇಲೆ ಹೆಚ್ಚುತ್ತಿರುವ ಮಾನವ ಜನಸಂಖ್ಯೆ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂಬುದು ಇತ್ತೀಚಿನ ಅಧ್ಯಯನವೊಂದರಿಂದ ಬೆಳಕಿಗೆ ಬಂದಿದೆ. ಪ್ರತಿ ವ್ಯವಸ್ಥೆಗೆ ಒಂದು ಮಿತಿ ಇರುವಂತೆ,...

Read moreDetails
ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

ಪ್ರತಿಧ್ವನಿ: ಸತ್ಯದ ಧ್ವನಿಯಾಗಿ ಏಳು ವರ್ಷದ ಯಶಸ್ವಿ ಪಯಣ

April 11, 2026
ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

ಎಸ್‌ಎಸ್‌ಎಲ್‌ಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಉತ್ತೀರ್ಣತೆಗೆ ಹೊಸ ಅಂಕಗಳ ನಿಯಮ ಜಾರಿ

April 11, 2026
₹10,000 ಮೇಲ್ಪಟ್ಟ ಯುಪಿಐ ವಹಿವಾಟಿಗೆ ‘ಒಂದು ಗಂಟೆ’ ವಿಳಂಬ? ವಂಚನೆ ತಡೆಗೆ RBI ಹೊಸ ಯೋಜನೆ

ಪ್ಲೂಟೋಗೆ ಮತ್ತೆ ಗ್ರಹ ಸ್ಥಾನಮಾನ? ಬಾಲಕಿಯ ಪತ್ರದಿಂದ ವಿಜ್ಞಾನ ಲೋಕದಲ್ಲಿ ಚರ್ಚೆ

April 10, 2026
ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

ಮೋದಿಗೆ ಹತ್ಯೆ ಸಂಚು ಆರೋಪ: ಬಿಹಾರದಲ್ಲಿ ಮೂವರು ಬಂಧನ, ಸಿಐಎ ಇಮೇಲ್‌  ಬಹಿರಂಗ

April 10, 2026
Next Post
ಕೇಂದ್ರದ ಮೇಲೆ ಒತ್ತಡ ಹಾಕಲು ಮಂಗಳವಾರ ದೆಹಲಿಗೆ ಹೋಗ್ತೀವಿ : ಡಿಕೆ ಶಿವಕುಮಾರ್ ಮಹತ್ವದ ಮಾಹಿತಿ..

ಕೇಂದ್ರದ ಮೇಲೆ ಒತ್ತಡ ಹಾಕಲು ಮಂಗಳವಾರ ದೆಹಲಿಗೆ ಹೋಗ್ತೀವಿ : ಡಿಕೆ ಶಿವಕುಮಾರ್ ಮಹತ್ವದ ಮಾಹಿತಿ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada