• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಸ್ಟೂಡೆಂಟ್‌ ಕಾರ್ನರ್

SSLC, PUC ಪಾಸಾಗಲು ಎಷ್ಟು ಅಂಕ ಪಡೆಯಬೇಕು? ಇಲ್ಲಿದೆ ಅಧಿಕೃತ ಮಾಹಿತಿ

ಪ್ರತಿಧ್ವನಿ by ಪ್ರತಿಧ್ವನಿ
March 6, 2026
in ಸ್ಟೂಡೆಂಟ್‌ ಕಾರ್ನರ್
0
SSLC, PUC ಪಾಸಾಗಲು ಎಷ್ಟು ಅಂಕ ಪಡೆಯಬೇಕು? ಇಲ್ಲಿದೆ ಅಧಿಕೃತ ಮಾಹಿತಿ
Share on WhatsAppShare on FacebookShare on Telegram

ರಾಜ್ಯದ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಎಸ್‌ಎಸ್‌ಎಲ್‌ಸಿ (SSLC) ಮತ್ತು ದ್ವಿತೀಯ ಪಿಯುಸಿ (2nd PUC) ಪರೀಕ್ಷೆಗಳಿಗೆ ಸಂಬಂಧಿಸಿದಂತೆ ತೇರ್ಗಡೆಯಾಗಲು ಅಗತ್ಯವಿರುವ ಕನಿಷ್ಠ ಅಂಕಗಳನ್ನು ತಿಳಿಸಿದೆ. ರಾಜ್ಯ ಸರಕಾರ ಎಸ್ಸೆಸ್ಸೆಲ್ಸಿ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆಗಾಗಿ ಕರುಡು ನಿಯಮಾವಳಿ ಪ್ರಕಟಿಸಿದ್ದು, ಶೇ.35ರಷ್ಟಿದ್ದ ಉತ್ತೀರ್ಣ ಅಂಕವನ್ನು ಶೇ.33ಕ್ಕೆ ಇಳಿಕೆ ಮಾಡಿದೆ. ಇದರಿಂದಾಗಿ ಕೇಂದ್ರ ಪಠ್ಯಕ್ರಮದ ಮಾದರಿಯನ್ನೇ ರಾಜ್ಯ ಪಠ್ಯಕ್ರಮದಲ್ಲೂಅನುಸರಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

ADVERTISEMENT
CM Siddaramaiah First Reaction On Darshan Case :ನಟ ದರ್ಶನ್ ಗೆ ಖಡಕ್ ಎಚ್ಚರಿಕೆ ಕೊಟ್ಟCM ಸಿದ್ದರಾಮಯ್ಯ..!

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ: ಒಟ್ಟು 625 ಅಂಕಗಳ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ವಿದ್ಯಾರ್ಥಿಗಳು ಕನಿಷ್ಠ 206 ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿದೆ.

ದ್ವಿತೀಯಪಿಯುಸಿ ವಿದ್ಯಾರ್ಥಿಗಳಿಗೆ: ಒಟ್ಟು 600 ಅಂಕಗಳ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕನಿಷ್ಠ 198 ಅಂಕಗಳನ್ನು ಗಳಿಸುವುದು ಅನಿವಾರ್ಯವಾಗಿದೆ. ಈ ಕನಿಷ್ಠ ಅಂಕಗಳು ಕೇವಲ ತೇರ್ಗಡೆಯ ಮಾನದಂಡವಾಗಿದ್ದು, ಉನ್ನತ ಶಿಕ್ಷಣದ ಪ್ರವೇಶಾತಿಗಾಗಿ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಗಳಿಸುವುದು ಅತ್ಯಗತ್ಯವಾಗಿದೆ.

CM Siddaramaiah on BJP MLA : ಲೋಕಾಯುಕ್ತ ಬಲೆಗೆ BJP ಶಾಸಕ - ಏನೂ ಮಾತಾಡಲ್ಲ ಎಂದ ಸಿಎಂ #pratidhvani

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣವಾಗಲು ಪ್ರಸ್ತುತ 625 ಅಂಕಗಳಿಗೆ ಕನಿಷ್ಠ ಶೇ. 35ರಷ್ಟು (219 ಅಂಕಗಳು) ಗಳಿಸುವುದು ಕಡ್ಡಾಯವಿತ್ತು. ಹೊಸ ನಿಯಮದ ಪ್ರಕಾರ, 625 ಅಂಕಗಳಿಗೆ ಕನಿಷ್ಠ 206 ಅಂಕ (ಶೇ. 33) ಗಳಿಸಿದರೆ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ. ಪ್ರತಿ ವಿಷಯದಲ್ಲಿ ಕಡ್ಡಾಯವಾಗಿ ಕನಿಷ್ಠ 30 ಅಂಕ ಪಡೆಯಲೇಬೇಕು.

 

ದ್ವಿತೀಯ ಪಿಯುಸಿ ಪರೀಕ್ಷೆ ಉತ್ತೀರ್ಣವಾಗಲು 600 ಅಂಕಗಳಿಗೆ ಕನಿಷ್ಠ ಶೇ. 35ರಷ್ಟು (210 ಅಂಕಗಳು) ಪಡೆಯಬೇಕಿತ್ತು. ಹೊಸ ನಿಯಮದಂತೆ, 600 ಅಂಕಗಳಿಗೆ ಕನಿಷ್ಠ 198 ಅಂಕ (ಶೇ. 33) ಪಡೆದರೆ ಪಾಸ್ ಆಗುತ್ತಾರೆ. ಪ್ರತಿ ವಿಷಯದಲ್ಲಿ ಲಿಖಿತ ಮತ್ತು ಆಂತರಿಕ ಅಂಕ ಸೇರಿ 30 ಅಂಕ ಬರುವುದು ಕಡ್ಡಾಯ.

 

ಕನ್ನಡ ಸೇರಿದಂತೆ ಪ್ರಥಮ ಭಾಷಾ ವಿಷಯಕ್ಕೆ 125 ಅಂಕಗಳಿಗೆ (100 ಅಂಕಗಳಿಗೆ ಲಿಖಿತ ಪರೀಕ್ಷೆ-25 ಅಂಕಗಳಿಗೆ ಆಂತರಿಕ ಮೌಲ್ಯಮಾಪನ) ಪರೀಕ್ಷೆ ಬರೆಯಬೇಕಿತ್ತು. ಉಳಿದ ದ್ವಿತೀಯ ಹಾಗೂ ತೃತೀಯ ಭಾಷೆ ಹಾಗೂ ಕೋರ್‌ ಸಬ್ಜೆಕ್ಟ್ಗಳಾದ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಿಗೆ ತಲಾ 100 ಅಂಕಗಳಿಗೆ (80 ಅಂಕಗಳಿಗೆ ಲಿಖಿತ ಪರೀಕ್ಷೆ-20 ಅಂಕಗಳಿಗೆ ಆಂತರಿಕ ಮೌಲ್ಯಮಾಪನ) ಪರೀಕ್ಷೆ ಬರೆಯಬೇಕಿತ್ತು. ಈಗಲೂ ವಿಷಯವಾರು ಪರೀಕ್ಷೆಗೆ ಇದೇ ಅಂಕಗಳೇ ಮುಂದುವರೆಯಲಿವೆ. ಆದರೆ, ಪಾಸಾಗಲು ಬೇಕಿರುವ ಅಂಕ ಮಾತ್ರ ಬದಲಾವಣೆ ಆಗಲಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

Tags: passing markspratidavanipucresultSSLC
Previous Post

ಕನ್ನಡ ಗೆಳೆಯರ ಬಳಗದ ಸಂಚಾಲಕ ಬ.ಹ.ಉಪೇಂದ್ರ ನಿಧನ

Next Post

ಬೆಂಗಳೂರಿನ ಕೊಳಚೆ ನೀರನ್ನು ಕೋಲಾರ–ಚಿಕ್ಕಬಳ್ಳಾಪುರಕ್ಕೆ ಹರಿಸಿದರು: ಸಿಎಂ ವಿರುದ್ಧ ದೇವೇಗೌಡರ ವಾಗ್ದಾಳಿ

Related Posts

ಕರ್ನಾಟಕದ 2026 ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಕೆಇಎ..
Top Story

ಕರ್ನಾಟಕದ 2026 ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದ ಕೆಇಎ..

by ಪ್ರತಿಧ್ವನಿ
April 9, 2026
0

2025-2026 ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿರುವ ಲಕ್ಷಾಂತರ ವಿದ್ಯಾರ್ಥಿಗಳ ಫಲಿತಾಂಶ ಆನ್​​ಲೈನ್​​ನಲ್ಲಿ ಪ್ರಕಟವಾಗಿದೆ. ಈ ಮೊದಲು ಸುದ್ದಿಗೋಷ್ಠಿ ನಡೆಸಿ ಬಳಿಕ ಫಲಿತಾಂಶ ಪ್ರಕಟವಾಗುತ್ತಿತ್ತು. ಆದರೆ ಈ...

Read moreDetails
ಟೆರಿಟೋರಿಯಲ್ ಆರ್ಮಿಯಲ್ಲಿ ಉದ್ಯೋಗ:ಯುವಕರಿಗೆ ಸುವರ್ಣಾವಕಾಶ

ಟೆರಿಟೋರಿಯಲ್ ಆರ್ಮಿಯಲ್ಲಿ ಉದ್ಯೋಗ:ಯುವಕರಿಗೆ ಸುವರ್ಣಾವಕಾಶ

April 1, 2026
ಇವಳು-ಅವಳು ನಮ್ಮವಳೆನಿಸುವುದು ಯಾವಾಗ ?

ಇವಳು-ಅವಳು ನಮ್ಮವಳೆನಿಸುವುದು ಯಾವಾಗ ?

March 26, 2026
ಶಾಲಾ ಶಿಕ್ಷಣದಲ್ಲಿ ಮಹತ್ವದ ಬದಲಾವಣೆ: ಎನ್‌ಸಿಇಆರ್‌ಟಿ ಯಿಂದ  ಹೊಸ ಪುಸ್ತಕ

ಶಾಲಾ ಶಿಕ್ಷಣದಲ್ಲಿ ಮಹತ್ವದ ಬದಲಾವಣೆ: ಎನ್‌ಸಿಇಆರ್‌ಟಿ ಯಿಂದ  ಹೊಸ ಪುಸ್ತಕ

March 19, 2026
ಭ್ರಮಾಧೀನ ಸಮಾಜ- ಯುವಜನಾಂಗದ ಕನಸು

ಭ್ರಮಾಧೀನ ಸಮಾಜ- ಯುವಜನಾಂಗದ ಕನಸು

March 14, 2026
Next Post
ಹೂಡಿ ವಿಜಯ್ ಕುಮಾರ್ ಸೇರ್ಪಡೆಯಿಂದ ಜೆಡಿಎಸ್‌ಗೆ ಬಲ : ನಿಖಿಲ್ ಕುಮಾರಸ್ವಾಮಿ

ಬೆಂಗಳೂರಿನ ಕೊಳಚೆ ನೀರನ್ನು ಕೋಲಾರ–ಚಿಕ್ಕಬಳ್ಳಾಪುರಕ್ಕೆ ಹರಿಸಿದರು: ಸಿಎಂ ವಿರುದ್ಧ ದೇವೇಗೌಡರ ವಾಗ್ದಾಳಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada