ಐಪಿಎಲ್ 2026ರ ವೇಳಾಪಟ್ಟಿ ಪ್ರಕಟವಾಗಿದೆ. ವಿಶ್ವಕಪ್ ಟೂರ್ನಿ ಮುಗಿದ ತಕ್ಷಣವೇ ಐಪಿಎಲ್ ಶುರುವಾಗಲಿದೆ.ಐಪಿಎಲ್ ಈ ಬಾರಿ ಮಾರ್ಚ್ 28ರಂದು ಆರಂಭವಾಗಲಿದ್ದು, ಮೇ 31ರಂದು ಫೈನಲ್ ಪಂದ್ಯದೊಂದಿಗೆ ಮುಕ್ತಾಯಗೊಳ್ಳಲಿದೆ.
ಪ್ರಸ್ತುತ ವೇಳಾಪಟ್ಟಿಯಲ್ಲಿ ಪಂದ್ಯಗಳ ವಿವರಗಳು ಇನ್ನೂ ಲಭ್ಯವಾಗಿಲ್ಲ. ಅಧಿಕೃತ ದಿನಾಂಕಗಳು ಮತ್ತು ಪಂದ್ಯ ವಿವರಗಳು ಶೀಘ್ರದಲ್ಲೇ ಪ್ರಕಟವಾಗುವ ಸಾಧ್ಯತೆ ಇದೆ.

ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಮುಂದಿನ ವಾರ ಸಭೆ ನಡೆಸಲಿದ್ದು, ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ಉದ್ಘಾಟನಾ ಪಂದ್ಯದ ಸ್ಥಳದ ಬಗ್ಗೆಯೂ ಚರ್ಚೆ ನಡೆಯಲಿದ್ದು,ಉದ್ಘಾಟನಾ ಪಂದ್ಯ ಸಹ ಬೆಂಗಳೂರಿನಲ್ಲಿ ನಡೆಯುವ ಸಾಧ್ಯತೆ ಇದೆ. ಅಲ್ಲದೇ RCB ಹಾಲಿ ಚಾಂಪಿಯನ್ ಆಗಿರುವ ಕಾರಣ ಉದ್ಘಾಟನಾ ಪಂದ್ಯ ಸಹ ಇಲ್ಲಿಯೇ ನಡೆಯುವ ಸಾಧ್ಯತೆ ಇದೆ.

ಈ ವರ್ಷ ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿದ್ದು,ತಂಡಗಳ ಪಂದ್ಯಗಳ ಮೇಲೆ ಚುನಾವಣೆಗಳು ಪರಿಣಾಮ ಬೀರುವ ಸಾಧ್ಯತೆ ಇದೆ. ಚುನಾವಣೆಯ ದಿನಾಂಕಗಳನ್ನು ಘೋಷಿಸಿದ ಬಳಿಕವೇ ಐಪಿಎಲ್ ವೇಳಾಪಟ್ಟಿಯನ್ನು ಘೋಷಿಸುವ ಚಿಂತನೆಯನ್ನು ಬಿಸಿಸಿಐ ನಡೆಸಿದೆ ಎಂದು ತಿಳಿದು ಬಂದಿದೆ. ಬಿಸಿಸಿಐ ಈ ಬಾರಿ ವೇಳಾಪಟ್ಟಿಯನ್ನು ಎರಡು ಭಾಗಗಳಲ್ಲಿ ಘೋಷಿಸುವ ಸಾಧ್ಯತೆ ಇದೆ. ಮಾರ್ಚ್ ಮೊದಲ ವಾರದಲ್ಲಿ ಮೊದಲ ವೇಳಾಪಟ್ಟಿ ಘೋಷಣೆ ಆಗುವ ಸಂಭವವಿದೆ. ಚುನಾವಣೆ ದಿನಾಂಕಗಳು ಘೋಷಣೆ ಆದ ಬಳಿಕ ಇನ್ನುಳಿದ ವೇಳಾಪಟ್ಟಿಯನ್ನು ಘೋಷಿಸುವ ಸಾಧ್ಯತೆ ಇದೆ.






