ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಕ್ಕೊಳಗಾಗಿರುವ ಮೂರನೇ ಆರೋಪಿ ಪುಟ್ಟಸ್ವಾಮಿ ಅಲಿಯಾಸ್ ಪವನ್ ಸೇರಿ ಇತರೆ ಆರೋಪಿಗಳಿಂದ ಮೊಬೈಲ್‌ಗಳನ್ನು ವಶಪಡಿಸಿಕೊಂಡಿರುವ ಸ್ಥಳದ ಬಗ್ಗೆ ಪೊಲೀಸರು ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಫೋಟೋದಲ್ಲಿ ಕಂಡುಬರುವ ಕಟ್ಟಡದ ರಚನೆಗೂ ಮತ್ತು ಅಸಲಿ ಪೊಲೀಸ್ ಠಾಣೆಯ ರಚನೆಗೂ ಯಾವುದೇ ಸಾಮ್ಯತೆ ಇಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಪೊಲೀಸರು ತನಿಖೆಯ ವರದಿಯನ್ನ ಸಲ್ಲಿಸುವಾಗಲೇ ಯಡವಟ್ಟು ಮಾಡಿದ್ದಾರೆಂದು ವಕೀಲರೊಬ್ಬರು ಕೋರ್ಟ್ ನಲ್ಲಿ ಅರ್ಜಿಯನ್ನು ಹಾಕಿದ್ದಾರೆ. ಈ ಸಂಬಂಧ ಗೃಹ ಸಚಿವ ಜಿ.ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಆರೋಪಿಗಳ ಪರ ವಕೀಲರು, ಮೊಬೈಲ್‌ಗಳ ಮಹಜರ್ ಅನ್ನು ಬೇರೆಡೆ ನಡೆಸಿ, ಅದನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಮಾಡಿದಂತೆ ದಾಖಲಿಸಲಾಗಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಗೃಹಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯಿಸಿ, “ಆರೋಪಿಗಳ ಪರ ವಕೀಲರು ತಕರಾರು ಮಾಡಲಿ. ನಮ್ಮ ಕೆಲಸ ನಾವು ಮಾಡುತ್ತೇವೆ. ಅವರು ಮಾಡುವ ಆಪಾದನೆಗಳಿಗೆ ಪೊಲೀಸ್ ಇಲಾಖೆ ಸರಿಯಾದ ಉತ್ತರ ನೀಡುತ್ತದೆ” ಎಂದು ಸ್ಪಷ್ಟನೆ ನೀಡಿದ್ದಾರೆ.






