ಭಾರತ ತಂಡ, ಎ ಗುಂಪಿನ ಕೊನೆಯ ಪಂದ್ಯದಲ್ಲಿಯೂ ನೆದರ್ಲೆಂಡ್ಸ್ ವಿರುದ್ಧ 17 ರನ್‌ಗಳಿಂದ ಗೆಲುವು ಕಂಡಿದೆ.ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಎ ಗ್ರೂಪ್‌ನ ಕೊನೆಯ ಪಂದ್ಯದಲ್ಲಿ ಭಾರತ ಗೆದ್ದು ಜಯಶಾಲಿಯಾಗಿದೆ.ನಾಲ್ಕೂ ಪಂದ್ಯಗಳನ್ನು ಜಯಿಸಿದೆ ಭಾರತ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು ಭಾರತ. ಆರಂಭದಲ್ಲಿ ಸ್ವಲ್ಪ ಹಿನ್ನಡೆಯಾದರೂ ಕೊನೆಗೆ ಭಾರತ ಗೆದ್ದಿದೆ.ಶಿವಂ ದುಬೆ ಪಂದ್ಯದಲ್ಲಿ ಉತ್ತಮ ಆಟ ಆಡಿದರು. ಕೇವಲ 31 ಎಸೆತಗಳಲ್ಲಿ 66 ರನ್ ಬಾರಿಸಿದ ದುಬೆ, 4 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್‌ಗಳೊಂದಿಗೆ ಉತ್ತಮ ಆಟ ಆಡಿದರು.ಹಾರ್ದಿಕ್ ಪಾಂಡ್ಯ 30 ರನ್‌ಗಳ ಚುರುಕು ಇನ್ನಿಂಗ್ಸ್ ಆಡಿದರು.

ಭಾರತ ತಂಡ ನಿಗಧಿತ 20 ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 193 ರನ್ ಪೇರಿಸಿದ್ದು, ನೆದರ್ಲೆಂಡ್ ಗೆ 194 ರನ್ ಗಳ ಸವಾಲಿನ ಗುರಿ ನೀಡಿತ್ತು. ಕೊನೆಗೆ 17 ರನ್ ನಲ್ಲಿ ಭರತ ಗೆಲುವು ಕಂಡಿದೆ.






