ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಗಳಲ್ಲಿ ಲಗೇಜ್ ದರವನ್ನು ಹೆಚ್ಚಿಸಲಾಗಿದೆ. ಶೇ 15ರಷ್ಟು ಹೆಚ್ಚಿಸಿದ್ದು, ಪರಿಷ್ಕೃತ ದರ ಫೆ.16 ರಿಂದ(ಇಂದಿನಿಂದ) ಜಾರಿಯಾಗಲಿದೆ.

ಒಬ್ಬ ಪ್ರಯಾಣಿಕ 30 ಕೆ.ಜಿ. ವರೆಗಿನ ಲಗೇಜುಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. 30 ಕೆ.ಜಿ.ಗಿಂತ ಹೆಚ್ಚು ಇರುವ ಒಂದು ಬ್ಯಾಗ್ ಅಥವಾ ಮೂಟೆಗೆ ದೂರಕ್ಕೆ ಅನ್ವಯವಾಗುವಂತೆ ಕನಿಷ್ಠ ₹1 ಗರಿಷ್ಠ ₹23 ಹೆಚ್ಚಳವಾಗಲಿದೆ. ಸದ್ಯ ಕನಿಷ್ಠ ದರ ₹ 5 ಹಾಗೂ ಗರಿಷ್ಠ ದರ ₹123 ಇದೆ.

ದರ ಪರಿಷ್ಕರಣೆಯು ಪ್ರಯಾಣಿಕರ ಜೊತೆಗಿರುವ ಹಾಗೂ ಪ್ರಯಾಣಿಕ ರಹಿತ ಲಗೇಜುಗಳಿಗೂ ಅನ್ವಯವಾಗಲಿದೆ ಎಂದು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ತಿಳಿಸಿದ್ದಾರೆ.ಸಾರಿಗೆ ಸಂಸ್ಥೆಯ ಡೀಸೆಲ್ ವೆಚ್ಚ, ಸಿಬ್ಬಂದಿ ವೆಚ್ಚ ಜಾಸ್ತಿಯಾಗಿದೆ. ಆರ್ಥಿಕ ಹೊರೆ ತಗ್ಗಿಸಲು ಮತ್ತು ಹೆಚ್ಚುತ್ತಿರುವ ಇಂಧನ ವೆಚ್ಚವನ್ನು ಸರಿದೂಗಿಸಲು ಈ ನಿರ್ಧಾರ ಎನ್ನಲಾಗುತ್ತಿದೆ.

2021ರಲ್ಲಿ ಕೊನೇ ಬಾರಿ ಲಗೇಜ್ ದರ ಪರಿಷ್ಕರಣೆಯಾಗಿತ್ತು. 2025ರ ಜನವರಿ 5ರಂದು ಟಿಕೆಟ್ ದರವನ್ನು ಶೇ 15ರಷ್ಟು ಹೆಚ್ಚಳ ಮಾಡಿದ್ದರೂ, ಲಗೇಜ್ ದರವನ್ನು ಏರಿಕೆ ಮಾಡಿರಲಿಲ್ಲ.
ಹೊಸ ಪರಿಷ್ಕೃತ ದರಪಟ್ಟಿಯ ಪ್ರಕಾರ ಎಷ್ಟು ಹೆಚ್ಚಳ?
* 1 ರಿಂದ 5 ಸ್ಟೇಜ್ವರೆಗೆ ಶುಲ್ಕ ₹6 (ಹಿಂದೆ ₹5)
* 6 ರಿಂದ 12 ಸ್ಟೇಜ್ವರೆಗೆ ₹12 (ಹಿಂದೆ ₹10)
* 156 ರಿಂದ 160 ಸ್ಟೇಜ್ವರೆಗೆ ₹145 (ಹಿಂದೆ ₹123)






