ಬೆಂಗಳೂರು : ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಜೋ ಸೈಮನ್ ಅವರು ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ನಗರದ ಫಿಲ್ಮ್ ಚೇಂಬರ್‌ನಲ್ಲಿ ನಡೆಯುತ್ತಿದ್ದ ಕಾರ್ಯಕಾರಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ದರು. ಬಳಿಕ ಶೌಚಾಲಯಕ್ಕೆ ತೆರಳಿದ್ದ ಅವರು ಅಲ್ಲೇ ಕುಸಿದು ಬಿದ್ದಿದ್ದರು.

ತಕ್ಷಣ ಅವರನ್ನು ಹತ್ತಿರದ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿಯೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಇನ್ನೂ ಜೋ ಸೈಮನ್ ಪೂರ್ಣ ಹೆಸರು ಎಸ್.ಎಂ. ಜೋಸೈಮನ್ ಕನ್ನಡ ಚಿತ್ರರಂಗದ ಹಿರಿಯ ಮತ್ತು ಯಶಸ್ವಿ ನಿರ್ದೇಶಕರಲ್ಲಿ ಒಬ್ಬರಾಗಿದ್ದರು.
ಇದನ್ನೂ ಓದಿ : 60 ಕೋಟಿ ರೂಪಾಯಿ ಆಫರ್ ತಿರಸ್ಕರಿಸಿದ ರಶ್ಮಿಕಾ-ವಿಜಯ್ ದೇವರಕೊಂಡ: ಯಾಕೆ..?
ಮೂಲತಃ ಮಂಡ್ಯ ಭಾಗದಿಂದ ಸ್ಯಾಂಡಲ್‌ವುಡ್‌ಗೆ ಬಂದಿದ್ದ ಇವರು ನಿರ್ದೇಶನ, ಚಿತ್ರಕಥೆ-ಕಥೆ-ಸಂಭಾಷಣೆ ಬರಹಗಾರ, ಹಾಡುಗಾರ (ಲಿರಿಕ್ಸ್) ಕೆಲವೊಮ್ಮೆ ನಟರಾಗಿಯೂ ಬಣ್ಣ ಹಚ್ಚಿದ್ದರು. ವಿಶೇಷವಾಗಿ ಆ್ಯಕ್ಷನ್ ಮತ್ತು ಮಾಸ್ ಚಿತ್ರಗಳಿಗೆ ಹೆಸರುವಾಸಿಯಾಗಿದ್ದರು.
ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರಿಗೆ “ಸಾಹಸ ಸಿಂಹ” ಎಂಬ ಬಿರುದನ್ನು ತಂದುಕೊಟ್ಟ ಸಾಹಸಸಿಂಹ 1982ರ ಚಿತ್ರವು ಅವರ ಅತ್ಯಂತ ಖ್ಯಾತಿ ಪಡೆದಿರುವ ಚಿತ್ರಗಳಲ್ಲಿ ಒಂದಾಗಿದೆ. ದಿ. ಮಂಡ್ಯದ ಗಂಡು ಖ್ಯಾತಿಯ ನಟ ಅಂಬರೀಶ್ ಅವರೊಂದಿಗೂ ಹಲವು ಯಶಸ್ವಿ ಚಿತ್ರಗಳನ್ನು ಜೋ ಸೈಮನ್ ಮಾಡಿದ್ದರು. ಜೋ ಸೈಮನ್ ಅವರ ಪ್ರಮುಖ ಚಿತ್ರಗಳು ಇಲ್ಲಿವೆ.
- ಸಹೋದರರ ಸವಾಲ್ (1977)
- ಒಂದು ಪ್ರೇಮದ ಕಥೆ (1977)
- ಬಂಗಾರದ ಗುಡಿ (1976)
- ಸಾಹಸಸಿಂಹ
- ನ್ಯಾಯ ಗೆದ್ದಿತು
- ಪ್ರೇಮ ಜಾಲ
- ರವಿ ವರ್ಮ
- ಊರಿಗೆ ಉಪಕಾರಿ
- ನನ್ನ ರೋಷ ನೂರು ವರುಷ
- ಏಜೆಂಟ್ ಅಮರ್
ಇನ್ನೂ ಜೋ ಸೈಮನ್ ಕನ್ನಡ ಚಲನಚಿತ್ರ ಸಂಘ ಮತ್ತು ಇತರ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು . ಅವರಿಗೆ ಸುಮಾರು 80 ವರ್ಷ ವಯಸ್ಸಾಗಿತ್ತು. ಹಿರಿಯ ನಿರ್ದೇಶಕನನ್ನು ಕಳೆದುಕೊಂಡು ಸ್ಯಾಂಡಲ್‌ವುಡ್ ಶೋಕದಲ್ಲಿದೆ.






