ಸಿಸಿಎಲ್ ಪಂದ್ಯದ ವೇಳೆ ಕಿಚ್ಚ ಸುದೀಪ್ ಬಳಸಿದ್ದ ಅವಾಚ್ಯ ಪದ ವೈರಲ್ ಆಗಿತ್ತು. ಈ ಕುರಿತು ಸಿಸಿಎಲ್ ಗೆಲುವಿನ ಸುದ್ದಿಗೋಷ್ಠಿಯಲ್ಲಿ ಸುದೀಪ್ ಮಾತನಾಡಿದ್ದಾರೆ.

ಅದು ಕೋಪದಲ್ಲಿ ಬಂದ ಮಾತಲ್ಲ. ಫ್ಲೋನಲ್ಲಿ ಬಂದಿದ್ದು. ಅದನ್ನು ತಂಡದವರೆಲ್ಲಾ ಬಹಳ ಮಜಾ ತಗೊತ್ತಾರೆ. ಆ ಸಮಯದಲ್ಲಿ ಮಂಜುಗೆ ನೋಡಪ್ಪಾ ಇದೇ ರೀತಿ ಬೌಲಿಂಗ್ ಮಾಡ್ತಿದ್ರೆ, ನಮ್ಮ ಜೀವನ ಹಾಳಾಗುತ್ತೆ ಅನ್ನೋಕ್ಕಾಗುತ್ತಾ. ಅವ್ರಿಗೆ ಅರ್ಥ ಆಗುವಂತೆ ಹೇಳಿದೆ. ಬಳಿಕ 2 ವಿಕೆಟ್ ತೆಗೆದ್ರು ಎಂದು ಸುದೀಪ್ ನಕ್ಕಿದ್ದಾರೆ.

ಮ್ಯಾಚ್ ವೇಳೆ ಅದೆಲ್ಲಾ ಸಹಜ. ಅಂತರಾಷ್ಟ್ರೀಯ ಪಂದ್ಯಗಳ ವೇಳೆ ಕೂಡ ಇಂತಹ ಮಾತುಗಳು ಬರ್ತಾವೆ. ಅದನ್ನೆಲ್ಲಾ ಕೇಳಿಕೊಳ್ಳಬಾರದು. ಅಲ್ಲಿಗೆ ಬಿಟ್ಟು ಬಿಡಬೇಕು ಎಂದರು.

ಸಿಸಿಎಲ್ ಗೆಲುವಿನ ಸುದ್ದಿಗೋಷ್ಠಿಯಲ್ಲಿ ಪುನೀತ್ ರಾಜ್ಕುಮಾರ್, ದರ್ಶನ್, ಪ್ರೇಮ್ ಬಗ್ಗೆ ಕನಕಪುರ ಶ್ರೀನಿವಾಸ್ ನಾಲಿಗೆ ಹರಿಬಿಟ್ಟ ಬಗ್ಗೆ ಕೇಳಿದ ಪ್ರಶ್ನೆಗೆ ಕಿಚ್ಚ ಸುದೀಪ್ ಈ ಕುರಿತು ಪ್ರಶ್ನೆ ಕೇಳಿದ್ದು ಕಿಚ್ಚ ಪ್ರತಿಕ್ರಿಯೆ ಕೊಟ್ಟಿದ್ದಾರೆ.ಸಿಹಿ ತಿನ್ನುವ ಈ ವೇಳೆ ಮೆಣಸಿನಕಾಯಿ ಯಾಕೆ? ನಾವು ಕಪ್ ಗೆಲ್ಲಲು 12 ವರ್ಷ ಕಾದಿದ್ದೇವೆ. ನಮ್ಮ ಉತ್ತರಕ್ಕಾಗಿ ನೀವು ಕೂಡ ಸ್ವಲ್ಪ ಕಾಯಿರಿ.ಇನ್ನೊಂದು ವೇದಿಕೆ ಹತ್ತುತ್ತೇನೆ. ಆಗ ಮಾತನಾಡುತ್ತೇನೆ. ಈಗ ಲಾಡು ತಿನ್ನುವ ಸಮಯ, ಮೆಣಸಿನಕಾಯಿ ಅಲ್ಲ. ಇದು 30 ವರ್ಷದ ಅನುಭವದ ಮಾತು’ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.






