ಬೆಂಗಳೂರು: ಮೂರು ಮದುವೆಯಾಗಿ ಮೂರನೇ ಗಂಡನ ಮೇಲೆ ದೌರ್ಜನ್ಯದ ಆರೋಪ ಮಾಡಿದ್ದ ಮೇಘಶ್ರೀ ವಿರುದ್ದ FIR ದಾಖಲಾಗಿದೆ.
ಪತಿ ಮಂಜುನಾಥ್ ದೂರಿನ ಹಿನ್ನಲೆ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಬ್ಲಾಕ್ ಮೇಲ್, ವಂಚನೆ, ಹನಿಟ್ರ್ಯಾಪ್ ಆರೋದಡಿ ದೂರು ನೀಡಿದ ಹಿನ್ನೆಲೆ ಮೇಘಶ್ರೀ ತಾಯಿ ಭಾರತಿ, ತಂದೆ ಜಯಣ್ಣ ವಿರುದ್ದ ಪ್ರಕರಣ ದಾಖಲಾಗಿದೆ.

ಪತಿ ಬೆತ್ತಲಾಗಿ ವಿಚಿತ್ರ ವರ್ತನೆ ಎಂದು ಆರೋಪಿಸಿ ಈ ಹಿಂದೆ ಪತ್ನಿ ಮೇಘಶ್ರೀ ಮಂಜುನಾಥ್ ಮೇಲೆ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಳು. ಆದರೆ ಪತ್ನಿಯೇ ತನ್ನ ಬಳಿ 25 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿರುವುದಾಗಿ ಮಂಜುನಾಥ್ ಆರೋಪ ಮಾಡಿದ ದೂರು ನೀಡಿದ್ದಾರೆ
ಸದ್ಯ ಪೊಲೀಸರು ಇಬ್ಬರ ದೂರುನ್ನ ಸ್ವೀಕರಿಸಿ ಇಬ್ಬರನ್ಮೂ ವಿಚಾರಣೆ ನಡೆಸುತ್ತಿದ್ದಾರೆ. ಇಬ್ಬರ ಹೇಳಿಕೆ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.












