ಬೆಂಗಳೂರು : ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಭಾರತೀಯ ವೇಗಿ ಎಂಬ ಹೆಗ್ಗಳಿಕೆಗೆ ನಂದಿನಿ ಶರ್ಮಾ ಇತಿಹಾಸ ಸೃಷ್ಟಿಸಿದ್ದಾರೆ. ಮುಂಬೈನಲ್ಲಿ ನಡೆದ ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 24 ವರ್ಷದ ಡೆಲ್ಲಿ ಕ್ಯಾಪಿಟಲ್ಸ್ ಆಟಗಾರ್ತಿ ಈ ಅದ್ಭುತ ಸಾಧನೆಗೆ ಕಾರಣರಾಗಿದ್ದಾರೆ.
33 ರನ್ ಗಳಿಸಿ 5 ವಿಕೆಟ್ ಪಡೆದ ನಂದನಿ, ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಇಸ್ಸಿ ವಾಂಗ್, ಯುಪಿ ವಾರಿಯರ್ಸ್‌ನ ಗ್ರೇಸ್ ಹ್ಯಾರಿಸ್ ಮತ್ತು ದೀಪ್ತಿ ಶರ್ಮಾ ಅವರ ಸಾಲಿಗೆ ಸೇರಿಕೊಂಡರು. ಇನ್ನಿಂಗ್ಸ್‌ನ 20 ನೇ ಓವರ್‌ನಲ್ಲಿ, ನಂದನಿ ಶರ್ಮಾ ಕನಿಕಾ ಅಹುಜಾ , ರಾಜೇಶ್ವರಿ ಗಾಯಕ್ವಾಡ್ ಮತ್ತು ರೇಣುಕಾ ಸಿಂಗ್ ಅವರ ವಿಕೆಟ್ ಪಡೆದರು.
ಇನ್ನೂ 4ನೇ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಎಲ್ಲರ ಗಮನ ಸೆಳೆದ ಆಟಗಾರ್ತಿ ಈ ನಂದನಿ ಶರ್ಮಾ ಯಾರು? ಎಂಬುವುದು ಸಾಕಷ್ಟು ಜನರು ತಿಳಿದುಕೊಳ್ಳುವ ಯತ್ನದಲ್ಲಿದ್ದಾರೆ. ದೆಹಲಿ ತಂಡದ ಪರ ಆಟ ಆಡಿದ ಬಳಿಕ ಶರ್ಮಾ ಹಿನ್ನೆಲೆಯನ್ನು ಕೆದಕಲಾಗುತ್ತಿದೆ. ಆದರೆ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿರುವ ನಂದನಿ ಚಂಡೀಗಢದ ಪ್ರತಿಭಾನ್ವಿತ ಕ್ರಿಕೆಟ್ ಆಟಗಾರ್ತಿಯಾಗಿದ್ದಾರೆ. ಅಲ್ಲದೆ ವೇಗದ ಬೌಲಿಂಗ್‌ಗೆ ಹೆಸರುವಾಸಿಯಾಗಿ ದೇಶೀಯ ಟಿ20 ಕ್ರಿಕೆಟ್‌ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. 2001 ರಲ್ಲಿ ಜನಿಸಿರುವ ನಂದನಿ ದೇಶೀಯ ಸ್ಪರ್ಧೆಗಳಲ್ಲಿ ಚಂಡೀಗಢವನ್ನು ಪ್ರತಿನಿಧಿಸಿದ್ದರು.
2026ರ ಮಹಿಳಾ ಪ್ರೀಮಿಯರ್ ಲೀಗ್‌ನ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಂದನಿ ಅವರನ್ನು 20 ಲಕ್ಷ ರೂಪಾಯಿ ನೀಡುವ ಮೂಲಕ ಖರೀದಿಸಿತ್ತು. ಇನ್ನೂ ನಾಯಕಿ ಜೆಮಿಮಾ ರೊಡ್ರಿಗಸ್ ಮತ್ತು ತಂಡದ ಸಹ ಆಟಗಾರ್ತಿ ಶಫಾಲಿ ವರ್ಮಾ ಅವರ ನಿರಂತರವಾಗಿ ಪ್ರೋತ್ಸಾಹಕ್ಕೆ ನಂದನಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಮೊದಲ ಓವರ್ ನಂತರ ತನ್ನ ಆಟದ ಬಗ್ಗೆ ಹೊಂದಿದ್ದ ಸ್ಪಷ್ಟತೆಯು ಹ್ಯಾಟ್ರಿಕ್ ಸೇರಿದಂತೆ ಐದು ವಿಕೆಟ್‌ಗೆ ಸಾಧ್ಯವಾಯಿತು.
ನಾನು ನನ್ನ ಗುರಿಯತ್ತ ಬೌಲಿಂಗ್ ಮಾಡುವುದರ ಮೇಲೆ ಮಾತ್ರ ಗಮನಹರಿಸಿದ್ದೆ. ಶಫಾಲಿ ಮತ್ತು ಜೆಮಿಮಾ ಪ್ರತಿ ಎಸೆತಕ್ಕೂ ಮೊದಲು ನನ್ನೊಂದಿಗೆ ಮಾತನಾಡುತ್ತಿದ್ದರು. ನಮ್ಮ ತಂಡದ ಗೆಲುವಿನ ಪ್ಲ್ಯಾನ್ ಸರಳವಾಗಿತ್ತು ಹೀಗಾಗಿ ಸ್ಟಂಪ್‌ಗಳ ಮೇಲೆ ದಾಳಿ ಮಾಡಲು ಸಾಧ್ಯವಾಯಿತು. ನಾನು ಹ್ಯಾಟ್ರಿಕ್ ನಿರೀಕ್ಷಿಸಿರಲಿಲ್ಲ, ಆದರೆ ತಂಡವು ವಿಕೆಟ್‌ಗಳು ಬರುತ್ತವೆ ಎಂದು ನನಗೆ ಹೇಳುತ್ತಲೇ ಇತ್ತು, ಎಂದು ನಂದನಿ ತಮ್ಮ ಸಾಧನೆಯ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ.
ನನ್ನ ಮೊದಲ ಓವರ್ ನಂತರ, ಬ್ಯಾಟ್ಸ್‌ಮನ್‌ಗಳು ನನ್ನ ಸ್ಟಾಕ್ ಬಾಲ್ ಅನ್ನು ಆಯ್ಕೆ ಮಾಡಿಕೊಂಡು ಆಡುತ್ತಿದ್ದಾರೆ ಎಂದು ತಿಳಿದಿದ್ದೆ. ಆದ್ದರಿಂದ ನಾನು ಬೌಲಿಂಗ್‌ನಲ್ಲಿ ವ್ಯತ್ಯಾಸ ಮಾಡಿಕೊಂಡಿದ್ದೆ. ಅದೃಷ್ಟವಶಾತ್ ಅದು ನನ್ನ ಕೈ ಹಿಡಿಯಿತು ಎಂದು ನಂದನಿ ತಿಳಿಸಿದ್ದಾರೆ.
ಆದರೆ ಈ ಪಂದ್ಯದಲ್ಲಿ ನಂದನಿ ಶರ್ಮಾ ಅವರ ಚೊಚ್ಚಲ ಹ್ಯಾಟ್ರಿಕ್ ಫಲ ನೀಡಲಿಲ್ಲ. ಸೋಫಿ ಡಿವೈನ್ 95 ರನ್ ಜೊತೆಗೆ ಒತ್ತಡದ ನಡುವೆಯೂ ಅತ್ಯುತ್ತಮ ಅಂತಿಮ ಓವರ್ ಎಸೆದು ಕೊನೆಯ ಎಸೆತದಲ್ಲಿ ಗುಜರಾತ್ ಜೈಂಟ್ಸ್ ತಂಡದ ನಾಲ್ಕು ರನ್‌ಗಳ ರೋಮಾಂಚಕ ಗೆಲುವಿಗೆ ಕಾರಣರಾದರು.












