ಬೆಂಗಳೂರು: ಐಪಿಎಸ್ ಅಧಿಕಾರಿ, ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಮಚೀಂದ್ರ ಹೆಸರಲ್ಲಿ ಸೈಬರ್ ವಂಚನೆ ಯತ್ನ ನಡೆದಿದೆ.
ವಾಟ್ಸಾಪ್ ಅಲ್ಲಿ ಅಕ್ಷಯ್ ಫೋಟೋ, ಹೆಸರು ಬಳಸಿ ಅವರ ಮೂರ್ನಾಲ್ಕು ಸ್ನೇಹಿತರಿಗೆ ಹಣ ಕೇಳಿ ಸಂದೇಶ ಕಳಿಸಲಾಗಿದೆ. ಬೇರೆ ಮೊಬೈಲ್ ನಂಬರಲ್ಲಿ ವಾಟ್ಸಾಪ್ ಅಕೌಂಟ್ ಕ್ರಿಯೇಟ್ ಮಾಡಿ ಅಕ್ಷಯ್ ಹೆಸರು ಹೇಳಿಕೊಂಡು ಹಣ ವಂಚಿಸಲು ಯತ್ನ ನಡೆದಿದೆ. ಈ ಬಗ್ಗೆ ಸ್ನೇಹಿತರು ಅಕ್ಷಯ್ ಗಮನಕ್ಕೆ ತಂದಿದ್ದಾರೆ.

ಸದ್ಯ ಈ ಸಂದೇಶಗಳಿಗೆ ಪ್ರತಿಕ್ರಿಯೆ ನೀಡಬೇಡಿ ಎಂದು ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಎಂ ಹಾಕೆ ಮನವಿ ಮಾಡಿದ್ದಾರೆ.












