• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, March 4, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಮನರೇಗಾ ರದ್ದುಗೊಳಿಸಿ ಕೇಂದ್ರ ಸರ್ಕಾರ ಉದ್ಯಮಿಗಳಿಗೆ ಲಾಭ ಮಾಡಿದೆ

ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌ ಆರೋಪ

ಪ್ರತಿಧ್ವನಿ by ಪ್ರತಿಧ್ವನಿ
January 3, 2026
in Top Story, ಕರ್ನಾಟಕ, ರಾಜಕೀಯ, ಶೋಧ
0
ಮನರೇಗಾ ರದ್ದುಗೊಳಿಸಿ ಕೇಂದ್ರ ಸರ್ಕಾರ ಉದ್ಯಮಿಗಳಿಗೆ ಲಾಭ ಮಾಡಿದೆ
Share on WhatsAppShare on FacebookShare on Telegram

ಮನರೇಗಾ ರದ್ದುಗೊಳಿಸಿ ಕೇಂದ್ರ ಸರ್ಕಾರ ಉದ್ಯಮಿಗಳಿಗೆ ಲಾಭ ಮಾಡಿದೆ

ADVERTISEMENT

ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌ ಆರೋಪ

ಎಐ ಬಳಸಿ ರಸ್ತೆ ಮಾಡುವುದೇ ಹಾಸ್ಯಾಸ್ಪದ: ಲಾಡ್‌

ಬೆಂಗಳೂರು, ಜನವರಿ 3: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಬದಲಿಗೆ ʼ ವಿಕಸಿತ ಭಾರತ್‌ -ಗ್ಯಾರಂಟಿ ಫಾರ್‌ ರೋಜ್‌ ಗಾರ್‌ ಅಂಡ್‌ ಅಜೀವಿಕ ಮಿಷನ್‌ ಯೋಜನೆ (ಜಿ ರಾಮ್‌ ಜಿ) ಜಾರಿ ಮಾಡಿರುವುದು ಕೇಂದ್ರ ಸರ್ಕಾರ ಉದ್ಯಮಿಗಳಿಗೆ ಮತ್ತು ಗುತ್ತಿಗೆದಾರರಿಗೆ ಲಾಭ ಮಾಡಿಕೊಡಲು ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಎಸ್‌ ಲಾಡ್‌ ಅವರು ಹೇಳಿದರು.

ಬೆಂಗಳೂರಿನಲ್ಲಿ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮನರೇಗಾ ಬದಲಿಗೆ ಜಿ ರಾಮ್‌ ಜಿ ಜಾರಿ ಮಾಡಿ ದೇಶದ ಹಳ್ಳಿಯ ಬಡಜನರಿಗೆ ತೊಂದರೆ ಮಾಡಿದೆ. ಅವರಿಗೆ ಅನಾನುಕೂಲ ಮಾಡಿದೆ. ದೊಡ್ಡ ಉದ್ದಿಮೆದಾರರಿಗೆ
ಕಾಂಟ್ರಾಕ್ಡರ್‌ಗಳಿಗೆ ಅನುಕೂಲ ಮಾಡಿಕೊಡಲು ಮಾಡಿರುವ ಪ್ಲಾನ್‌ ಆಗಿದೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಪಿಡಿಒ ಗಳು ಮಾಡುವ ಕೆಲಸವನ್ನು ಎಐ ಬಳಸಿ ಕೇಂದ್ರ ಸರ್ಕಾರ ಮಾಡುವುದೆಂದರೆ ಗ್ರಾಮ ಪಂಚಾಯಿತಿ ಅಧಿಕಾರ ಕಸಿದಂತೆ. ಸೆಟಲೈಟ್‌ ಬಳಸಿ ರಸ್ತೆ ಮಾಡ್ತೀವಿ ಅನ್ನೋದು ಹಾಸ್ಯಸ್ಪದ. ತರಾತುರಿಯಲ್ಲಿ ಯೋಜನೆ ಹೆಸರು ಬದಲಾಯಿಸಿದರು. ಗಾಂಧಿ ಅವರ ಹೆಸರು ಬದಲಾಯಿಸಿ ಪಿಚ್ಚರ್‌ ಓಡಿಸುತ್ತಾ ಇದ್ದಾರೆ ಎಂದರು.

ಮನರೇಗಾ ಬದಲಾಯಿಸಿರುವುದನ್ನು ದೇಶದಾದ್ಯಂತ ಪಕ್ಷಾತೀತವಾಗಿ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಜಾಬ್‌ ಕಾರ್ಡ್‌ ದಾರರು ವಿರೋಧಿಸಿ ಆಕ್ರೋಶವ್ಯಕ್ತಪಡಿಸಬೇಕು. ಪ್ರತಿಭಟನೆ ನಡೆಸಬೇಕು ಎಂದು ಆಗ್ರಹಿಸಿದರು.

ಗಾಂಧಿ ಕುರಿತು ಬಿಜೆಪಿಯವರಿಗೆ ಗೌರವ ಮತ್ತು ಪ್ರೀತಿ ಇಲ್ಲ. ಕಾಟಾಚಾರಕ್ಕೆ ಮೊಸಳೆ ಕಣ್ಣೀರು ಹಾಕುತ್ತಾರೆ. ಬಾಪು ಹಾಗೂ ಚರಕದ ಫೋಟೊ ಹಿಡಿದು ಪೋಸ್‌ ಕೊಡೊದು ಆರ್‌ಎಸ್‌ಎಸ್‌ ಅಜೆಂಡಾ. ದೇಶದ ಜಾತ್ಯತೀತತೆ ಕುರಿತು ಅವರು ನಂಬೋದಿಲ್ಲ ಎಂದರು.

ಮನರೇಗಾ ಬದಲಾಯಿಸಿರುವುದರಿಂದ ದೇಶದ ೨೬ ಕೋಟಿಗೂ ಹೆಚ್ಚು ನರೇಗಾ ಕಾರ್ಮಿಕರಿಗೆ ದೊಡ್ಡ ಪ್ರಮಾಣದಲ್ಲಿ ಅನಾನುಕೂಲ ಆಗಲಿದೆ. ಇದರಲ್ಲಿ ಕನಿಷ್ಠ ವೇತನದ ಬಗ್ಗೆ ಮಾಹಿತಿ ಇಲ್ಲ. ಎಲ್ಲವನ್ನೂ ಗೊಂದಲ ಮಾಡಲಾಗಿದೆ. ಮನರೇಗಾ ಯೋಜನೆ ಉಳಿಸಲು ಸರ್ಕಾರ ಚಿಂತನೆ ಮಾಡ್ತ ಇದೆ. ಜಿ ರಾಮ್‌ ಜಿ ಬಗ್ಗೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಿಗೂ ಸ್ಪಷ್ಟತೆ ಇಲ್ಲ ಎಂದರು.

ಎಐ ಬಗ್ಗೆ ಬಿಜೆಪಿಯವರಿಗೆ ಗೊತ್ತಿಲ್ಲ

ಮಾತೆತ್ತಿದರೆ ಕೃತಕ ಬುದ್ಧಿಮತ್ತೆ ಬಗ್ಗೆ ಮಾತನಾಡೋ ಬಿಜೆಪಿಯವರಿಗೆ ಎಐ ಬಗ್ಗೆಯೇ ತಿಳಿವಳಿಕೆ ಇಲ್ಲ. ಕಳೆದ ಹನ್ನೊಂದು ವರ್ಷಗಳಲ್ಲಿ ಕೆಂದ್ರದ ಒಬ್ಬ ಸಚಿವರೂ ಯಾವುದೇ ಯೋಜನೆ ಬಗ್ಗೆ ಮಾಧ್ಯಮ ಗೋಷ್ಠಿ ಮಾಡಿಲ್ಲ. ಇನ್ನು ಪ್ರಧಾನಿ ಮೋದಿ ಅವರನ್ನು ಬಿಡಿ. ಜಿ ರಾಮ್‌ ಜಿ ಬಗ್ಗೆ ವಿವರವಾಗಿ ದೇಶದ ಜನಕ್ಕೆ ತಿಳಿಸಿಲ್ಲ. ಬುದ್ಧಿವಂತರ ರೀತಿ ಮಾತನಾಡುತ್ತಾರೆ. ಇವರು ಎಂದೂ ಪಾಲಿಸಿ, ಅಭಿವೃದ್ಧಿ ಬಗ್ಗೆ ಮಾತನಾಡುವುದಿಲ್ಲ ಎಂದು ವ್ಯಂಗ್ಯವಾಡಿದರು.

DkShivakumar ;   ಜನಾರ್ದನ ರೆಡ್ಡಿ ಡ್ರಾಮಾ ಮಾಸ್ಟರ್,  ಭರತ್ ರೆಡ್ಡಿ ಬೆನ್ನಿಗೆ ನಿಲ್ಲುತ್ತೇವೆ-ಡಿ.ಕೆ ಶಿವಕುಮಾರ್

ದೇಶದಾದ್ಯಂತ ಆಂದೋಲನ

ಮನರೇಗಾ ರದ್ದು ವಿರುದ್ಧ ದೇಶದಾದ್ಯಂತ ಕಾಂಗ್ರೆಸ್‌ ಪಕ್ಷ ಆಂದೋಲನ ನಡೆಸಲಿದೆ. ಅಸಂಘಟಿತ ವಲಯದ ಕಾರ್ಮಿಕರಿಗೆ ತಿಳಿವಳಿಕೆ ನೀಡುತ್ತೇವೆ. ಸರ್ಕಾರ ಮತ್ತು ಪಕ್ಷ ಸಾರ್ವಜನಿಕವಾಗಿ ಅರಿವು ಮೂಡಿಸಲು ಯೋಜನೆ ರೂಪಿಸುತ್ತೆ ಎಂದರು.

ಸ್ಕಿಲ್‌ ಇಂಡಿಯಾದಲ್ಲೂ ಅಕ್ರಮ

ಸ್ಕಿಲ್‌ ಇಂಡಿಯಾದಲ್ಲಿ ಶೇ ೯೩ ಅಕೌಂಟ್‌ ನಕಲಿ ಇವೆ. ಈ ಬಗೆಗೆ ಸಚಿವರು ಮಾತನಾಡಲ್ಲ. ಯಾರನ್ನು ಕೇಳಬೇಕು ಎಂಬುದೇ ಇಲ್ಲ. ಪ್ರಶ್ನೆ ಕೇಳಲು ಯಾರು ಇಲ್ಲ. ಅವರೇ ಪ್ರಶ್ನೆ ಅವರೇ ಉತ್ತರ. ಮಾಧ್ಯಮದವರನ್ನೂ ಕೇಳಲು ಬಿಡಲ್ಲ ಎಂದರು.

ಬಳ್ಳಾರಿ ಗಲಭೆ ದುಃಖದ ಸಂಗತಿ

ಬಳ್ಳಾರಿ ಘರ್ಷಣೆ: ಭದ್ರತೆಗೆ ಪಕ್ಕದ ಜಿಲ್ಲೆಗಳಿಂದ ಪೊಲೀಸರ ಆಗಮನ, ಬಿಗಿ ಬಂದೋಬಸ್ತ್

ಬಳ್ಳಾರಿಯಲ್ಲಿ ಇತ್ತೀಚೆಗೆ ಗಲಭೆ ನಡೆದಿರುವುದು ದುಃಖದ ಸಂಗತಿ. ಎಸ್‌ಪಿ ಅಮಾನತು ಸಂಬಂಧ ಸರ್ಕಾರ ಸರಿಯಾದ ಕ್ರಮ ಕೈಗೊಂಡಿದೆ. ಅವರು ಮುಂಜಾಗ್ರತೆ ವಹಿಸಬೇಕಿತ್ತು. ನಿರ್ಲಕ್ಷ್ಯ ವಹಿಸಿದ್ದರೆ ಸರಿ ಅಲ್ಲ ಎಂದರು.

Tags: minister santosh ladsanthosh lad on mgnrega disputesanthosh lad on mgnrega renaming rowSantosh Ladsantosh lad biographysantosh lad dharwadsantosh lad foundationsantosh lad in suvarna newssantosh lad interviewsantosh lad latest newssantosh lad mlasantosh lad newssantosh lad on billsantosh lad on modisantosh lad pressmeetsantosh lad speechsantosh lad statementsantosh lad statussantosh lad today newssantosh lad videosantosh lad vs moddisantosh lad with ajit
Previous Post

ಜನಾರ್ದನ ರೆಡ್ಡಿ ಡ್ರಾಮಾ ಮಾಸ್ಟರ್, ಕೋಟೆ ನಿರ್ಮಿಸಿಕೊಂಡವರನ್ನು ಯಾರು ಕೊಲ್ಲಲು ಹೋಗುತ್ತಾರೆ?

Next Post

ಪ್ರವಾಸೋದ್ಯಮ-ಬಂಡವಾಳ ಮತ್ತು ಪ್ರಕೃತಿ

Related Posts

ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!
Top Story

ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಗುಡ್‌ ನ್ಯೂಸ್..!

by ಪ್ರತಿಧ್ವನಿ
March 4, 2026
0

ಬೆಂಗಳೂರು : ರೈತರು ತಮ್ಮ ಗಂಗಾ ಕಲ್ಯಾಣ ಯೋಜನೆ ಕುರಿತ ಅರ್ಜಿಯ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಲು ಗಂಗಾ ಕಲ್ಯಾಣ ಪೋರ್ಟಲ್‌ನಲ್ಲಿ ಬೆಸ್ಕಾಂ ವತಿಯಿಂದ ಹೊಸ ಆಯ್ಕೆ...

Read moreDetails
ಹಣದ ಬದಲಿಗೆ ಪತ್ರಿಕೋದ್ಯಕ್ಕೆ ಸತ್ಯದ ಬಡತನ ಕಾಡುತ್ತಿದೆ : ಕೆ.ವಿ. ಪ್ರಭಾಕರ್‌ ಬೇಸರ..!

ಹಣದ ಬದಲಿಗೆ ಪತ್ರಿಕೋದ್ಯಕ್ಕೆ ಸತ್ಯದ ಬಡತನ ಕಾಡುತ್ತಿದೆ : ಕೆ.ವಿ. ಪ್ರಭಾಕರ್‌ ಬೇಸರ..!

March 4, 2026
ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

ಇಸ್ರೇಲ್-ಇರಾನ್ ಯುದ್ಧ: ವಿನಾಶದ ಹಾದಿ ; ಗಗನಕ್ಕೆ ಡೀಸೆಲ್ ಬೆಲೆ, ಕಾಡುತ್ತೆ ಅಡುಗೆ ಅನಿಲದ ಅಭಾವ..!

March 4, 2026
ಸಾಮ್ರಾಜ್ಯಶಾಹಿ ಕ್ರೌರ್ಯವೂ ಯುದ್ಧಕೋರ ಮನಸ್ಥಿತಿಯೂ..

ಸಾಮ್ರಾಜ್ಯಶಾಹಿ ಕ್ರೌರ್ಯವೂ ಯುದ್ಧಕೋರ ಮನಸ್ಥಿತಿಯೂ..

March 4, 2026
ಕೇಂದ್ರದ ಅಸಮಾನತೆ ನೀತಿ ನಮ್ಮ ಸಂವಿಧಾನ ರಚನಕಾರರ ಹೊಂದಾಣಿಕೆ ನೀತಿಗೆ ಅಡ್ಡಿ : ಸ್ಟಾಲಿನ್‌ಗೆ ಸಿದ್ದರಾಮಯ್ಯ ಪತ್ರ..

ಕೇಂದ್ರದ ಅಸಮಾನತೆ ನೀತಿ ನಮ್ಮ ಸಂವಿಧಾನ ರಚನಕಾರರ ಹೊಂದಾಣಿಕೆ ನೀತಿಗೆ ಅಡ್ಡಿ : ಸ್ಟಾಲಿನ್‌ಗೆ ಸಿದ್ದರಾಮಯ್ಯ ಪತ್ರ..

March 4, 2026
Next Post
ಪ್ರವಾಸೋದ್ಯಮ-ಬಂಡವಾಳ ಮತ್ತು ಪ್ರಕೃತಿ

ಪ್ರವಾಸೋದ್ಯಮ-ಬಂಡವಾಳ ಮತ್ತು ಪ್ರಕೃತಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada