ಮೇಷ ರಾಶಿಯ ಇಂದಿನ ಭವಿಷ್ಯ

ಮೇಷ ರಾಶಿಯವರ ಇಂದಿನ ಕೆಲಸಗಳಲ್ಲಿ ಚುರುಕು ಕಾಣಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ಅಭಿಪ್ರಾಯಗಳಿಗೆ ಮಾನ್ಯತೆ ಸಿಗುತ್ತದೆ. ಆದರೆ ಆತುರದ ನಿರ್ಧಾರಗಳು ಹಣಕಾಸಿನಲ್ಲಿ ಗೊಂದಲ ಉಂಟುಮಾಡುವ ಸಾಧ್ಯತೆ ಇರುವುದರಿಂದ ತಾಳ್ಮೆ ಅಗತ್ಯ. ಮಾತಿನಲ್ಲಿ ಎಚ್ಚರಿಕೆ ಇರಲಿ.
ವೃಷಭ ರಾಶಿಯ ಇಂದಿನ ಭವಿಷ್ಯ

ವೃಷಭ ರಾಶಿಯವರ ಕುಟುಂಬದ ವಾತಾವರಣ ಇಂದು ಶಾಂತವಾಗಿರುತ್ತದೆ. ಮನೆಯಲ್ಲಿ ಶುಭ ಕಾರ್ಯದ ಬಗ್ಗೆ ಮಾತುಕತೆ ನಡೆಯುತ್ತದೆ. ಆದರೆ ಆರೋಗ್ಯದ ಕಡೆ ಸ್ವಲ್ಪ ನಿರ್ಲಕ್ಷ್ಯ ಮಾಡಿದರೆ ಸಣ್ಣ ತೊಂದರೆ ಎದುರಾಗಬಹುದು ಎಚ್ಚರ.
ಮಿಥುನ ರಾಶಿಯ ಇಂದಿನ ಭವಿಷ್ಯ

ಮಿಥುನ ರಾಶಿಯವರಿಗೆ ಇಂದು ಹೊಸ ವ್ಯಕ್ತಿಗಳ ಸಂಭಾಷಣೆ ಮತ್ತು ಸಂಪರ್ಕಗಳಿಂದ ಲಾಭವಾಗುವ ದಿನ. ಹೊಸ ಹೆಜ್ಜೆಗೆ ಸ್ನೇಹಿತರಿಂದ ಸಹಕಾರ ದೊರೆಯುತ್ತದೆ. ಮಾತಿನಲ್ಲಿ ಹಿಡಿತ ಇರಲಿ. ಆರೋಗ್ಯ ಸುಧಾರಿಸಲಿದೆ.
ಕರ್ಕಾಟಕ ರಾಶಿಯ ಇಂದಿನ ಭವಿಷ್ಯ

ಕಟಕ ರಾಶಿಯವರು ಇಂದು ಮನೆಯವರೊಂದಿಗೆ ಅಧಿಕ ಸಮಯ ಕಳೆಯಲಿದ್ದೀರಿ. ಮಾನಸಿಕ ನೆಮ್ಮದಿ ಹೆಚ್ಚಾಗಲಿದೆ. ಹಳೆಯ ವಿಷಯವೊಂದು ಮನೆಯಲ್ಲಿ ಮತ್ತೆ ಚರ್ಚೆಗೆ ಬರುವ ಸಾಧ್ಯತೆ ಇದೆ. ನಿಮ್ಮ ನಿಲುವನ್ನು ಬದಲಾಯಿಸಬೇಡಿ.
ಸಿಂಹ ರಾಶಿಯ ಇಂದಿನ ಭವಿಷ್ಯ

ಸಿಂಹ ರಾಶಿಯವರಿಗೆ ಇಂದು ಕಾರ್ಯ ಕ್ಷೇತ್ರದಲ್ಲಿ ನಿಮ್ಮ ಸಾಮರ್ಥ್ಯಕ್ಕೆ ತಕ್ಕ ಗೌರವ ಗುರುತು ಸಿಗಲಿದೆ. ನಿಮ್ಮಲ್ಲಿನ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಖರ್ಚು ಹೆಚ್ಚಾಗುವ ಸೂಚನೆ ಇರುವುದರಿಂದ ಹಣಕಾಸು ನಿಯಂತ್ರಣ ಅಗತ್ಯ.
ಕನ್ಯಾ ರಾಶಿಯ ಇಂದಿನ ಭವಿಷ್ಯ

ಕನ್ಯಾ ರಾಶಿಯವರಿಗೆ ಇಂದು ದಿನ ನಿಧಾನವಾಗಿ ಸಾಗಿದರೂ ಕೆಲಸಗಳಲ್ಲಿ ಸ್ಪಷ್ಟತೆ ಕಾಣುತ್ತದೆ. ಆದರೆ ನಿರೀಕ್ಷಿತ ಫಲ ತಕ್ಷಣ ಸಿಗದೆ ತಾಳ್ಮೆ ಪರೀಕ್ಷೆಯಾಗಬಹುದು. ತಾಳ್ಮೆ ಇರಲಿ ಯಶಸ್ಸು ನಿಮ್ಮದಾಗುತ್ತದೆ.
ತುಲಾ ರಾಶಿಯ ಇಂದಿನ ಭವಿಷ್ಯ

ತುಲಾ ರಾಶಿಯವರಿಗೆ ಇಂದು ಸಾಮಾಜಿಕ ಸಂಪರ್ಕಗಳು ಹೆಚ್ಚಾಗುತ್ತವೆ. ಮಾತಿನ ಮೂಲಕ ಕೆಲಸ ಸಾಧಿಸಿಕೊಳ್ಳುವ ಅವಕಾಶ ಸಿಗುತ್ತದೆ. ಹಣಕಾಸಿನ ವಿಚಾರದಲ್ಲಿ ಜಾಗ್ರತೆ ಅಗತ್ಯ. ಆರೋಗ್ಯದ ಬಗ್ಗೆ ಗಮನ ಇರಲಿ.
ವೃಶ್ಚಿಕ ರಾಶಿಯ ಇಂದಿನ ಭವಿಷ್ಯ

ವೃಶ್ಚಿಕ ರಾಶಿಯವರ ಯೋಜನೆಗಳು ಸರಿಯಾದ ದಿಕ್ಕಿನಲ್ಲಿ ಸಾಗುತ್ತವೆ ಮತ್ತು ಹಣಕಾಸಿನಲ್ಲಿ ಸ್ವಲ್ಪ ಲಾಭ ಕಾಣಬಹುದು. ನಿಮ್ಮಲ್ಲಿರುವ ಅತಿಯಾದ ಅನುಮಾನ ಮನಶಾಂತಿಯನ್ನು ಕೆಡಿಸಬಹುದು. ಕೌಟುಂಬಿಕ ನೆಮ್ಮದಿ ಕೆಡಲು ನಿಮ್ಮದೊಂದು ಮಾತು ಕಾರಣವಾಗಬಹುದು ಎಚ್ಚರಿಕೆ ಇರಲಿ.
ಧನು ರಾಶಿಯ ಇಂದಿನ ಭವಿಷ್ಯ

ಧನು ರಾಶಿಯವರಿಗೆ ಇಂದು ಹೊಸ ವಿಚಾರಗಳ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ ಮತ್ತು ಹೊರಗಿನ ಸಂಪರ್ಕಗಳಿಂದ ಸಾಧನೆಗೆ ಪ್ರೇರಣೆ ಸಿಗುತ್ತದೆ. ಅತಿಯಾದ ನಿರೀಕ್ಷೆಯಿಂದ ನಿರಾಸೆ ಉಂಟಾಗುವ ಸಾಧ್ಯತೆ ಇದೆ. ತಾಳ್ಮೆ ಇರಲಿ.
ಮಕರ ರಾಶಿಯ ಇಂದಿನ ಭವಿಷ್ಯ

ಮಕರ ರಾಶಿಯವರ ಹಳೆಯ ಸಮಸ್ಯೆಗಳಿಗೆ ಇಂದು ಪರಿಹಾರ ಕಂಡುಬರುವ ಲಕ್ಷಣಗಳಿವೆ. ಕೆಲಸದಲ್ಲಿ ಸ್ಥಿರತೆ ಕಾಣುತ್ತದೆ. ಕೆಲಸದ ಒತ್ತಡದಿಂದ ದಣಿವು ಅನುಭವಿಸಬಹುದು ವಿಶ್ರಾಂತಿ ಪಡೆಯಿರಿ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚೆಚ್ಚು ಭಾಗವಹಿಸಿ.
ಕುಂಭ ರಾಶಿಯ ಇಂದಿನ ಭವಿಷ್ಯ

ಕುಂಭ ರಾಶಿಯವರಿಗೆ ಇಂದು ಹೊಸ ಯೋಚನೆಗಳು ಮೂಡುತ್ತವೆ. ಇಂದು ಸ್ನೇಹಿತರ ಸಲಹೆಗಳು ನಿಮಗೆ ಉಪಯುಕ್ತವಾಗುತ್ತವೆ. ನಿರ್ಧಾರಗಳಲ್ಲಿ ಅಸ್ಥಿರತೆ ಕಂಡುಬಂದರೆ ಅಂದುಕೊಂಡ ಕಾರ್ಯ ನೆರವೇರಲು ತಡವಾಗಬಹುದು.
ಮೀನ ರಾಶಿಯ ಇಂದಿನ ಭವಿಷ್ಯ

ಮೀನ ರಾಶಿಯವರು ಇಂದು ಹಣಕಾಸಿನ ವಿಷಯಗಳಲ್ಲಿ ಸ್ವಲ್ಪ ಚೇತರಿಕೆ ಕಾಣುತ್ತಾರೆ. ಹೊಸ ಕೆಲಸಕ್ಕೆ ಮನೆಯವರ ಬೆಂಬಲ ದೊರೆಯುತ್ತದೆ. ಭಾವನಾತ್ಮಕವಾಗಿ ಹೆಚ್ಚು ಸಮಯ ಕಳೆದರೆ ಮನಸ್ಸಿಗೆ ಒತ್ತಡ ಉಂಟಾಗಬಹುದು. ಸಂಗಾತಿ ಜೊತೆಗಿನ ಮಾತಿನಲ್ಲಿ ಎಚ್ಚರಿಕೆ ಇರಲಿ. ಆರೋಗ್ಯ ಸುಧಾರಿಸಲಿದೆ.












