ಮೇಷ ರಾಶಿಯ ಈ ದಿನದ ಭವಿಷ್ಯ

ಮೇಷ ರಾಶಿಯವರಿಗೆ ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಹೊಸ ಕೆಲಸಕ್ಕೆ ಚಾಲನೆ ನೀಡಲು ಸೂಕ್ತ ದಿನ. ಹೂಡಿಕೆ ಮಾಡಲು ಆಯ್ಕೆ ಮಾಡಿಕೊಳ್ಳುವ ಕ್ಷೇತ್ರದ ಬಗ್ಗೆ ಎಚ್ಚರಿಕೆ ಇರಲಿ. ಅಹಂಕಾರದಿಂದ ದೂರವಿರಿ. ಕೌಟುಂಬಿಕವಾಗಿ ಸಂಸತಸ ಸಮಯ ಕಳೆಯುವಿರಿ.
ವೃಷಭ ರಾಶಿಯ ಈ ದಿನದ ಭವಿಷ್ಯ

ಬಹು ದಿನಗಳಿಂದ ಕಷ್ಟದಲ್ಲಿ ಬಳಲಿದ್ದ ವೃಷಭ ರಾಶಿಯವರು ಹಣಕಾಸಿನ ವಿಚಾರದಲ್ಲಿ ಸುಧಾರಣೆ ಕಾಣುವಿರಿ. ಕುಟುಂಬದವರೊಂದಿಗೆ ಸಣ್ಣ ಖುಷಿಯ ಕ್ಷಣಗಳು ಕಳೆಯುತ್ತೀರಿ. ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಮಾನಸಿಕ ಒತ್ತಡ ಕಡಿಮೆಯಾಗಲಿದೆ.
ಮಿಥುನ ರಾಶಿಯ ಈ ದಿನದ ಭವಿಷ್ಯ

ಮಿಥುನ ರಾಶಿಯವರು ಇಂದು ಆರೋಗ್ಯದ ಕಡೆ ಗಮನ ಕೊಡಿ. ಹೊಸ ಕೆಲಸಗಳಲ್ಲಿ ತಡವಾಗಬಹುದು, ಹಾಗಂತ ನಿರಾಸೆಯಾಗಬೇಡಿ ಪ್ರಯತ್ನಕ್ಕೆ ತಕ್ಕ ಫಲವಿದೆ. ಸಂಯಮದಿಂದ ನಡೆದುಕೊಂಡರೆ ಮುಂದಿನ ದಿನಗಳಲ್ಲಿ ಲಾಭದ ಮಾರ್ಗ ತೆರೆಯಲಿದೆ.
ಕಟಕ ರಾಶಿಯ ಈ ದಿನದ ಭವಿಷ್ಯ

ಕಟಕ ರಾಶಿಯವರಿಗೆ ಇಂದು ಸ್ನೇಹಿತರಿಂದ ಸಹಕಾರ ದೊರೆಯುತ್ತದೆ. ಮನಸ್ಸಿಗೆ ಸಂತೋಷ ನೀಡುವ ಸುದ್ದಿ ಬರಬಹುದು. ಆದರೆ ಅತಿಯಾದ ಖರ್ಚು ತಪ್ಪಿಸಿ. ಕೌಟುಂಬದ ಜೊತೆ ಉತ್ತಮ ಸಮಯವನ್ನು ಕಳೆಯುವಿರಿ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಇರಲಿ.
ಸಿಂಹ ರಾಶಿಯ ಈ ದಿನದ ಭವಿಷ್ಯ

ಸಿಂಹ ರಾಶಿಯವರು ಇಂದು ತಮ್ಮ ಕಾರ್ಯಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಹೆಚ್ಚಿನ ಅವಕಾಶ. ನಿಮ್ಮ ನಡೆ ನುಡಿಯಿಂದ ಹಿರಿಯರ ಮೆಚ್ಚುಗೆ ಪಡೆಯುವಿರಿ. ಹಣಕಾಸಿನಲ್ಲಿ ಸಮತೋಲನ ಇರಲಿ. ಅನಗತ್ಯ ಖರ್ಚು ತಪ್ಪಿಸಿ.
ಕನ್ಯಾ ರಾಶಿಯ ಈ ದಿನದ ಭವಿಷ್ಯ

ಕನ್ಯಾ ರಾಶಿಯವರ ಹಳೆಯ ಯೋಜನೆಗಳಿಗೆ ಇಂದು ಹೊಸ ಪ್ರಾರಂಭ ಸಿಗಲಿದೆ. ಪ್ರಯಾಣದಿಂದ ಲಾಭವಾಗಲಿದೆ. ಕುಟುಂಬದಲ್ಲಿ ಶಾಂತಿ ವಾತಾವರಣ ಹೆಚ್ಚಲಿದೆ. ಆಪ್ತರ ಭೇಟಿಯಿಂದ ಮನೆಯಲ್ಲಿ ಖುಷಿ ಹೆಚ್ಚಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.
ತುಲಾ ರಾಶಿಯ ಈ ದಿನದ ಭವಿಷ್ಯ

ತುಲಾ ರಾಶಿಯವರು ಇಂದು ತಮ್ಮ ಮಾತಿನಲ್ಲಿ ಹಿತವಿಟ್ಟುಕೊಂಡಿರಬೇಕು. ನಿಮ್ಮ ಮಾತುಗಳು ಇತರರ ಮನ ಗೆಲ್ಲಬಹುದು. ಆದರೆ ಅನಗತ್ಯ ವಾದ–ವಿವಾದ ತಪ್ಪಿಸಿ. ಆರೋಗ್ಯದತ್ತ ಎಚ್ಚರವಹಿಸಿ. ದೂರ ಪ್ರವಾಸದ ಅವಕಾಶ ಸಿಗಲಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷೆಯ ಫಲಿತಾಂಶ ಸಿಗಲಿದೆ.
ವೃಶ್ಚಿಕ ರಾಶಿಯ ಈ ದಿನದ ಭವಿಷ್ಯ

ವೃಶ್ಚಿಕ ರಾಶಿಯವರ ಹಳೆಯ ಸಮಸ್ಯೆಗೆ ಇಂದು ಪರಿಹಾರ ದೊರೆಯುತ್ತದೆ. ಆತ್ಮೀಯರೊಂದಿಗೆ ಸುಖಕರ ಸಮಯ ಕಳೆಯುವಿರಿ. ವ್ಯವಹಾರದಲ್ಲಿ ಚಿಕ್ಕ ಲಾಭ ಸಿಗಲಿದ್ದು, ಹೊಸ ಹೂಡಿಕೆಗೆ ಅವಕಾಶ ಸಿಗಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.
ಧನು ರಾಶಿಯ ಈ ದಿನದ ಭವಿಷ್ಯ

ಧನು ರಾಶಿಯವರ ಹೊಸ ಯೋಜನೆಗಳು ಮುಂದುವರಿಯುವ ಸಾಧ್ಯತೆ ಹೆಚ್ಚಿದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ದೂರದ ಪ್ರಯಾಣ ಸಾಧ್ಯತೆ. ಆರೋಗ್ಯ ಸುಧಾರಿಸಲಿದೆ. ವ್ಯಾಪಾರದಲ್ಲಿ ಧನ ಲಾಭವಾಗಲಿದೆ.
ಮಕರ ರಾಶಿಯ ಈ ದಿನದ ಭವಿಷ್ಯ

ಮಕರ ರಾಶಿಯವರಿಗೆ ಹೊಸ ಅವಕಾಶ ಎದುರಾಗುತ್ತದೆ. ನಿಮ್ಮ ಕೆಲಸಕ್ಕೆ ಕುಟುಂಬದ ಪೂರ್ಣ ಬೆಂಬಲ ದೊರೆಯುತ್ತದೆ. ದೀರ್ಘಕಾಲದ ಕೆಲಸಗಳು ಪೂರ್ಣಗೊಳ್ಳುತ್ತವೆ. ಆರೋಗ್ಯ ಸುಧಾರಿಸಲಿದೆ.
ಕುಂಭ ರಾಶಿಯ ಈ ದಿನದ ಭವಿಷ್ಯ

ಕುಂಭ ರಾಶಿಯವರಿಗೆ ಇಂದು ಮನೋಭಾವದಲ್ಲಿ ಏರುಪೇರು ಇರಬಹುದು. ಮಾತು ನಡೆಯಲ್ಲಿ ಎಚ್ಚರಿಕೆ ಇರಲಿ. ಕೆಲಸದಲ್ಲಿ ಒತ್ತಡ ಹೆಚ್ಚಾಗಲಿದೆ. ಸಂಜೆ ವೇಳೆಗೆ ಸಂತೋಷದ ಸುದ್ದಿ ಕೇಳಲಿದ್ದೀರಿ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುತ್ತೀರಿ.
ಮೀನ ರಾಶಿಯ ಈ ದಿನದ ಭವಿಷ್ಯ

ಮೀನ ರಾಶಿಯವರಿಗೆ ಹಣಕಾಸಿನಲ್ಲಿ ಬೆಳವಣಿಗೆಯಾಗಲಿದ್ದು, ಸ್ನೇಹಿತರಿಂದ ಸಹಕಾರ ಸಿಗಲಿದೆ. ಅಲ್ಪ ವಿಷಯಕ್ಕೂ ಚಿಂತೆ ಬೇಡ. ನಿಮ್ಮ ದಾರಿ ಸರಿ ಇದ್ದರೆ ಗೆಲುವು ಖಚಿತ. ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಆರೋಗ್ಯದಲ್ಲಿ ಚೇತರಿಕೆ. ಕೌಟುಂಬಿಕವಾಗಿ ಸಂತೋಷದ ಕ್ಷಣಗಳನ್ನು ಕಳೆಯಲಿದ್ದೀರಿ.












