• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, February 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬಿಜೆಪಿ ಅವರ ಆಂತರಿಕ ರಾಜಕಾರಣದಿಂದ ‘ಷಡ್ಯಂತ್ರ’: ಡಿಸಿಎಂ ಡಿ.ಕೆ‌.ಶಿವಕುಮಾರ್

ಪ್ರತಿಧ್ವನಿ by ಪ್ರತಿಧ್ವನಿ
August 26, 2025
in Top Story, ಕರ್ನಾಟಕ, ರಾಜಕೀಯ
0
ಬಿಜೆಪಿ ಅವರ ಆಂತರಿಕ ರಾಜಕಾರಣದಿಂದ ‘ಷಡ್ಯಂತ್ರ’: ಡಿಸಿಎಂ ಡಿ.ಕೆ‌.ಶಿವಕುಮಾರ್
Share on WhatsAppShare on FacebookShare on Telegram

ADVERTISEMENT

ಬಿಜೆಪಿ – ಜೆಡಿಎಸ್ ನಿಂದ ಪ್ರೀತಿ ನಿರೀಕ್ಷೆ ಅಸಾಧ್ಯ

ಬೆಂಗಳೂರು,‌ ಆ.26:

“ಧರ್ಮಸ್ಥಳ ಪ್ರಕರಣದ ಬಗ್ಗೆ ಬಾಯಿ ಮುಚ್ಚಿಕೊಂಡಿದ್ದ ಬಿಜೆಪಿಯವರು ಈಗ ರಾಜಕೀಯ ಮಾಡುತ್ತಾ ಧರ್ಮಸ್ಥಳವನ್ನು ಅಶುದ್ಧ ಮಾಡಲು ಹೊರಟಿದ್ದಾರೆ. ಭಕ್ತಾದಿಗಳನ್ನು ಇಟ್ಟುಕೊಂಡು ರಾಜಕೀಯ ಮಾಡಲಾಗುತ್ತಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ವಿಧಾ‌ನಸೌಧದಲ್ಲಿ ಮಂಗಳವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಈ ವಿಚಾರ ಮಾತನಾಡಿದರು.

DK Shivakumar : ಕೆಲ ಮಾದ್ಯಮ ರಿಪೋರ್ಟರ್ ಏನ್ ಮಾಡ್ತೀರಾ ಗೊತ್ತಾ..!  #pratidhvani #watch #dkshivakumar

“ಬಿಜೆಪಿಯ ಎರಡು ಗುಂಪುಗಳ ಆಂತರಿಕ ರಾಜಕಾರಣದಿಂದ ಈ ‘ಷಡ್ಯಂತ್ರ’, ‘ಕುತಂತ್ರ’ ನಡೆಯುತ್ತಿದೆ. ಯಾರ್ಯಾರ ಬಂಧವಾಗಿದೆ, ಯಾರ್ಯಾರ ಹೇಳಿಕೆ ಯಾರ್ಯಾರ ಮೇಲೆ ಇದೆ ಎನ್ನುವುದನ್ನು ನೋಡಿದರೆ ತಿಳಿಯುತ್ತದೆ. ಬಂಧನವಾಗಿರುವವನು ಯಾವ ಪಕ್ಷದವನು. ಆತ ‘ನಮ್ಮ ಶಾಸಕ’ ಎಂದು ಹೇಳುತ್ತಾನೆ. ಅವರ ಶಾಸಕ ಏನು ಹೇಳಿದ್ದಾನೆ” ಎಂದರು.

ಷಡ್ಯಂತ್ರ ಮಾಡಿರುವುದೇ ಬಿಜೆಪಿ

“ಬಿಜೆಪಿಯವರೇ ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯಲು ತೊಡಗಿದ್ದಾರೆ. ‘ಷಡ್ಯಂತ್ರ’ ಮಾಡಿರುವುದೇ ಬಿಜೆಪಿ ಮತ್ತು ಅಂಗ ಸಂಸ್ಥೆಗಳು. ಈಗ ಎಲ್ಲಿ ಹೆಸರುಗಳು ಬಯಲಾಗುತ್ತದೆಯೋ ಎಂದು ಮುಚ್ಚಲು ಪ್ರಯತ್ನ ಪಡುತ್ತಿದ್ದಾರೆ. ಸೆಪ್ಟೆಂಬರ್ 1 ರಂದು ಅಲ್ಲಿ ಸಭೆ ಮಾಡುವ ಬದಲು ಇಲ್ಲೇ ಬೆಂಗಳೂರಿನಲ್ಲಿ ಮಾಡಲಿ. ದಕ್ಷಿಣ ಕನ್ನಡ ಜಿಲ್ಲೆಗೆ ಎಷ್ಟು ಅವಮಾನ ಆಗಬೇಕೋ ಅಷ್ಟು ಆಗಿದೆ. ಭಕ್ತಾಧಿಗಳು ನಿಮ್ಮನ್ನು ಕೇಳಿ ಬಸ್ ನಲ್ಲಿ ಹೋಗುತ್ತಾರೆಯೇ? ನಾವು ಮಹಿಳೆಯರಿಗೆ ಉಚಿತ ಬಸ್ ನೀಡಿದ್ದೇವೆ” ಎಂದರು.

“ಯಾರೋ ಒಬ್ಬ ಬೈದನಲ್ಲ (ಮಹೇಶ್ ಶೆಟ್ಟಿ ತಿಮರೋಡಿ) ಆತ ಬೈದಿದ್ದು ಕಾಂಗ್ರೆಸ್ ನಾಯಕರನ್ನಲ್ಲ. ಆತ ಬೈದಿದ್ದು ಬಿಜೆಪಿ ಹಿರಿಯ ನಾಯಕನನ್ನು. ಇದು ಆಂತರಿಕ ರಾಜಕೀಯವಲ್ಲವೇ? ಆತ ಸಂಘದಲ್ಲಿ ಇದ್ದವನು, ಹಿಂದೂ ಸಂಘಟನೆಯವನು ತಾನೇ? ಕಾಂಗ್ರೆಸ್ ನವರು ಬಿ.ಎಲ್.ಸಂತೋಷ್ ಅವರನ್ನು ಬೈದಿದ್ದೇವಾ? ನಮ್ಮದು ಸಂವಿಧಾನ, ಜಾತ್ಯಾತೀತ ತತ್ವವೇ ಹೊರತು ಧರ್ಮದಲ್ಲಿ ರಾಜಕೀಯ ಮಾಡುವವರಲ್ಲ” ಎಂದು ತಿಳಿಸಿದರು.

“ಇಂತಹ ರಾಜಕೀಯ ಕುತಂತ್ರಗಳಿಗೆ ತಾವು ತಮ್ಮ‌ ಕ್ಷೇತ್ರ ಬಲಿಯಾಗಬೇಡಿ. ಧರ್ಮಸ್ಥಳ ರಾಜಕೀಯ ವೇದಿಕೆಯಲ್ಲ. ಇದನ್ನು ದುರ್ಬಳಕೆ ಮಾಡಿಕೊಳ್ಳಲು ತಾವು ಅವಕಾಶ ಕೊಡಬಾರದು ಎಂದು ಧರ್ಮಸ್ಥಳದ ಧರ್ಮಾಧಿಕಾರಿಗಳ ಬಳಿ ನಾನು ಮನವಿ ಮಾಡಿಕೊಳ್ಳುತ್ತೇನೆ” ಎಂದರು.

“ಎಸ್ ಐಟಿ ರಚನೆಯನ್ನು ವಿಪಕ್ಷಗಳು, ವೀರೇಂದ್ರ ಹೆಗ್ಗಡೆಯವರು ಒಪ್ಪಿದ್ದರು. ಈ ಮೊದಲೇ ಏಕೆ ಇವರ ರಕ್ಷಣೆಗೆ ಬಿಜೆಪಿಯವರು ನಿಲ್ಲಲಿಲ್ಲ. ಕ್ಷೇತ್ರದ ಮೇಲಿನ ನಂಬಿಕೆಗೆ ಲೋಪ ಬರದಂತೆ ನಾವು ನೋಡಿಕೊಳ್ಳಬೇಕಿದೆ.‌ ಧರ್ಮದ ಹೆಸರಿನಲ್ಲಿ ಅಶಾಂತಿ ಮೂಡಿಸುವ ಕೆಲಸ ಬಿಜೆಪಿ ಮಾಡುತ್ತಿದೆ.‌ ಎ‌ನ್ ಐಎ ತನಿಖೆ ಬೇಕು ಎಂದು ಅಂದೇ ಏಕೆ ಸೂಚನೆ ನಿಡಲಿಲ್ಲ” ಎಂದರು.

ಅವರಿಂದ ಪ್ರೀತಿ ನಿರೀಕ್ಷೆ ಅಸಾಧ್ಯ

ಆರ್‌‌‌ ಎಸ್ ಎಸ್ ಗೀತೆ ಕ್ಷಮೆ ವಿಚಾರವಾಗಿ ಜೆಡಿಎಸ್- ಬಿಜೆಪಿ ಟೀಕೆಯ ಬಗ್ಗೆ ಕೇಳಿದಾಗ, “ಅವರುಗಳು ಇರುವುದು ನನ್ನ ಪ್ರೀತಿ ಮಾಡಲೇ? ಅವರುಗಳು ಇರುವದೇ ನನ್ನ ಟೀಕೆ ಮಾಡಲು. ಅವರಿಂದ ಪ್ರೀತಿ ನಿರೀಕ್ಷೆ ಮಾಡಲು ಸಾಧ್ಯವೇ? ನಾನು ಅವರಿಂದ ನಿರೀಕ್ಷೆ ಮಾಡುವುದು ಕೇವಲ ದ್ವೇಷ ಮಾತ್ರ” ಎಂದು ಕುಹಕವಾಡಿದರು.

“ಯಾರೂ ಸಹ ನನ್ನ ಬಗ್ಗೆ ಅನುಕಂಪ,‌ ಪ್ರೀತಿ ತೋರಿಸುವುದಿಲ್ಲ” ಎಂದು ಮಾರ್ಮಿಕವಾಗಿ ನುಡಿದರು.

ಸತೀಶ್‌ ಜಾರಕಿಹೊಳಿ ಅವರ ಹೇಳಿಕೆ‌ ಬಗ್ಗೆ ಕೇಳಿದಾಗ, “ನಾನು ಅವರ ವಕ್ತಾರನಲ್ಲ. ಅವರು ನನಗಿಂತ ಹಿರಿಯ ನಾಯಕರು ಅವರ ಬಳಿಯೇ ಪ್ರತಿಕ್ರಿಯೆ ಕೇಳಿ” ಎಂದರು.

Tags: BJPCongress PartyDCM DK ShivakumarDK Shivakumardk shivakumar accidentdk shivakumar campdk shivakumar convoydk shivakumar kodi muttdk shivakumar latestdk shivakumar latest newsdk shivakumar mandyadk shivakumar newsdk shivakumar on probedk shivakumar on rcbdk shivakumar reactiondk shivakumar speechdk shivakumar statementdk shivakumar today newsdk shivakumar todays newsdk shivakumar unhurtdk shivakumar visit delhiyatnal on dk shivakumarಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಭೂ ಪರಿಹಾರ ವ್ಯಾಜ್ಯಗಳು ಇತ್ಯರ್ಥವಾಗದೇ ಯುಕೆಪಿ (3) ಪೂರ್ಣ ಅಸಾಧ್ಯ: ಡಿಸಿಎಂ ಡಿ.ಕೆ.ಶಿವಕುಮಾರ್

Next Post

ಧರ್ಮಸ್ಥಳ ‌ಅಶುದ್ಧ ಮಾಡಲು ಬಿಜೆಪಿ ಯತ್ನ..!! ಡಿಸಿಎಂ ಡಿ.ಕೆ‌.ಶಿವಕುಮಾರ್

Related Posts

ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ
Top Story

ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ

by ಪ್ರತಿಧ್ವನಿ
February 10, 2026
0

  ಬೆಂಗಳೂರು, ಫೆ. 10, 2026: ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಕೆ.ಜಿ. ಹಳ್ಳಿಯ ಕೇಳಚಂದ್ರ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ವಿವಿಧ ಕೌಶಲಗಳ ತರಬೇತಿ ಪೂರ್ಣಗೊಳಿಸಿದ ಮಹಿಳೆಯರಿಗೆ ಕೇಳಚಂದ್ರ...

Read moreDetails
RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

February 8, 2026
ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

February 8, 2026
ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

February 8, 2026
KOPPALA: ಸಾರಾಯಿ ಎಂದು ಸ್ಪಿರಿಟ್ ಸೇವನೆ: ಇಬ್ಬರು ಯುವಕರ ಸಾ**

KOPPALA: ಸಾರಾಯಿ ಎಂದು ಸ್ಪಿರಿಟ್ ಸೇವನೆ: ಇಬ್ಬರು ಯುವಕರ ಸಾ**

February 8, 2026
Next Post

ಧರ್ಮಸ್ಥಳ ‌ಅಶುದ್ಧ ಮಾಡಲು ಬಿಜೆಪಿ ಯತ್ನ..!! ಡಿಸಿಎಂ ಡಿ.ಕೆ‌.ಶಿವಕುಮಾರ್

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada