• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, February 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕರ್ನಾಟಕದ ಹೃದಯ ಬೆಂಗಳೂರು ಎಲ್ಲರಿಗೂ ಸೇರಿದ್ದು: ಡಿಸಿಎಂ ಡಿ.ಕೆ‌.ಶಿವಕುಮಾರ್

ಪ್ರತಿಧ್ವನಿ by ಪ್ರತಿಧ್ವನಿ
July 27, 2025
in Top Story, ಕರ್ನಾಟಕ, ರಾಜಕೀಯ, ಶೋಧ
0
ಕರ್ನಾಟಕದ ಹೃದಯ ಬೆಂಗಳೂರು ಎಲ್ಲರಿಗೂ ಸೇರಿದ್ದು: ಡಿಸಿಎಂ ಡಿ.ಕೆ‌.ಶಿವಕುಮಾರ್
Share on WhatsAppShare on FacebookShare on Telegram

ಕರಾವಳಿ ಭಾಗದಲ್ಲಿ‌ ಪ್ರವಾಸೋದ್ಯಮದ ಮೂಲಕ ಉದ್ಯೋಗ ಸೃಷ್ಟಿಗೆ ಕ್ರಮ

ADVERTISEMENT

ಬೆಂಗಳೂರು, ಜು.27:

“ಕರ್ನಾಟಕದ ಎಲ್ಲಾ ಭಾಗಗಳ ಜನರ ಹೃದಯವೇ ಬೆಂಗಳೂರು. ಬೆಂಗಳೂರು ನಗರ ‌ಇಲ್ಲಿನ ಸುತ್ತಮುತ್ತಲ ಜನರಿಗೆ ಸೇರಿದ್ದಲ್ಲ, ದಕ್ಷಿಣ ಕನ್ನಡ, ಗುಲ್ಬರ್ಗ, ರಾಯಚೂರು, ಉಡುಪಿ ಹೀಗೆ ಎಲ್ಲರಿಗೂ ಸೇರಿದ್ದು. ನೀವೆಲ್ಲರೂ ಸೇರಿ ಬೆಂಗಳೂರನ್ನು ಉಳಿಸಿ ಬೆಳೆಸಬೇಕು” ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ನಗರದ ನಂದಿ ಲಿಂಕ್ ಗ್ರೌಂಡ್ ನಲ್ಲಿ ಭಾನುವಾರ ನಡೆದ ಕುಂದಾಪ್ರ ಕನ್ನಡ ಹಬ್ಬ- 2025ರಲ್ಲಿ ಭಾಗವಹಿಸಿ ಮಾತನಾಡಿದರು.

“ಕರಾವಳಿ ಭಾಗದವರೇ ಹೆಚ್ಚಿನ ವಿದ್ಯಾಸಂಸ್ಥೆಗಳು, ಹೋಟೆಲ್, ಬ್ಯಾಂಕ್ ಗಳನ್ನು ಸ್ಥಾಪನೆ ಮಾಡಿರುವುದು. ಈ ಭಾಗ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಿದೆ. ಈ ಕಾರಣಕ್ಕೆ ಈಗಾಗಲೇ ಸದನದಲ್ಲಿ ಪ್ರತ್ಯೇಕ ಪ್ರವಾಸೋದ್ಯಮ ನೀತಿಯನ್ನ ಮಾಡುವುದಾಗಿ ಘೋಷಣೆ ಮಾಡಲಾಗಿದೆ” ಎಂದರು.

dkshivakumar : ನಾವೆಲ್ಲ ಒಂದೇ ಅಂಥ ಇರಬೇಕು #pratidhvani #dkshivakumar #VishvaKundaapraHabba

“ನಿಮ್ಮ ಭಾಗಕ್ಕೆ ವಿಮಾನ ನಿಲ್ದಾಣದ‌ ಬಗ್ಗೆ ಆನಂತರ ಚರ್ಚೆ ಮಾಡೋಣ. ನೀವು ಹೊರಗೆ ವಲಸೆ ಹೋಗುವುದನ್ನು ತಪ್ಪಿಸಿ ನೀವಿದ್ದಲಿಯೇ ಉದ್ಯೋಗ ಸೃಷ್ಟಿ ‌ಮಾಡುವುದು ಮೊದಲ ಆದ್ಯತೆ. ನಿಮ್ಮ ಊರಿನಲ್ಲಿಯೇ ನಿಮ್ಮ ಪರಂಪರೆಯನ್ನು ಜಗತ್ತಿಗೆ ಪರಿಚಯ ಮಾಡಬೇಕು. ಈ ಡಿ.ಕೆ.ಶಿವಕುಮಾರ್ ಉಡುಪಿ ಹಾಗೂ ಕುಂದಾಪುರದ ಜನತೆಯ ಜೊತೆಯಲ್ಲಿ ಸದಾ ಇರುತ್ತಾನೆ‌ ಎನ್ನುವ ಸಂದೇಶ ನೀಡುತ್ತೇನೆ. ನಿಮ್ಮ ಆಶೀರ್ವಾದ ಇದ್ದರೆ ನಮ್ಮ ಸಹಕಾರ ಇರುತ್ತದೆ” ಎಂದು ಹೇಳಿದರು.

“ಗ್ರೇಟರ್ ಬೆಂಗಳೂರು ಮಾಡುವುದರಿಂದ ಕನ್ನಡಿಗರಿಗೆ ಅವಕಾಶಗಳನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದು ಟೀಕೆ ಮಾಡಿದರು‌. ನಾನು ಅವರಿಗೆ ಹೇಳಿದೆ, ನೀವೆಲ್ಲರೂ ಮೂರ್ಖರು ಬೆಂಗಳೂರು ಕರ್ನಾಟಕದ ಎಲ್ಲಾ ಜನತೆಯ ಹೃದಯ ಭಾಗ ಇದ್ದಂತೆ. ಇಲ್ಲಿರುವ ಹೊರಗಿನವರಿಗೆ ನೀವು ಪರಕೀಯರು ಎನ್ನುವ ಭಾವನೆ ಬೇಡ” ಎಂದರು.

“ಈ ಊರಿಗೆ ಜಡ್ಜ್, ಲಾಯರ್, ಉದ್ಯಮಿ – ಹೀಗೆ ಯಾರೇ ಬಂದರೂ ಹೊರಗೆ ಹೋಗುವುದಿಲ್ಲ. ಈ ಹಿಂದೆ ಅನುಕೂಲಸ್ಥರು ಮುಂಬೈ, ಸೌದಿಗೆ ತೆರಳಿದ್ದಾರೆ. ಈಗಿನ ಯುವ ಜನತೆ ಬೆಂಗಳೂರಿಗೆ ಬರುತ್ತಿದ್ದಾರೆ” ಎಂದರು.

“ಮೂಲವನ್ನು ಮರೆತರೆ ಫಲವನ್ನು ಮರೆತಂತೆ ಎಂದು ಹಿರಿಯರು ಹೇಳಿದ್ದಾರೆ. ದೇವರು ವರ ಮತ್ತು ಶಾಪ ಎರಡನ್ನೂ ನೀಡುವುದಿಲ್ಲ ಆದರೆ ಅವಕಾಶವನ್ನು ಮಾತ್ರ ನೀಡುತ್ತಾನೆ. ನೆಲ,‌ ಜಲ, ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಕುಂದಾಪುರ ಕನ್ನಡಿಗರು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇರಿರುವುದೇ ಕರ್ನಾಟಕದ ಸೌಭಾಗ್ಯ. ನಿಮ್ಮ ಸಂಘದ ಹಿರಿಯರು ಎಲ್ಲರನ್ನು ಒಟ್ಟಿಗೆ ಸೇರಿಸಿ ಕರ್ನಾಟಕದ ಹೃದಯ ಭಾಗದಲ್ಲಿ ನೀವು ಇದ್ದೀರಾ ಎಂದು ಸಂದೇಶ ನೀಡಿದ್ದೀರಿ ನಿಮಗೆ ಸಾಷ್ಟಾಂಗ ನಮಸ್ಕಾರಗಳು” ಎಂದು ಶ್ಲಾಘಿಸಿದರು.

“ನಿಮಗೆ ಪಾರಂಪರಿಕವಾಗಿ ಕಲೆ ಮೈಗೂಡಿಕೊಂಡು ಬಂದಿದೆ. ಈ ಮೊದಲು ಕೇವಲ ಮಂಗಳೂರು ಎಂದು ಹೇಳುತ್ತಿದ್ದರು. ಆದರೆ ಇಡೀ ಕರಾವಳಿಗೆ ಪ್ರಾಮುಖ್ಯತೆಯಿದೆ. ಉಡುಪಿಯ ಪಂಚಾಯ್ತಿಯೊಂದರಲ್ಲಿಯೇ ಮೂರು ಮೆಡಿಕಲ್ ಕಾಲೇಜಿದೆ. ಇದು ನಿಮ್ಮ ಹೆಗ್ಗಳಿಕೆ” ಎಂದರು.

“ಮೈಸೂರು ದಸರಾದಲ್ಲಿ ಕಂಬಳ ಮಾಡುವ ಆಲೋಚನೆಯಿತ್ತು. ಅದಕ್ಕೆ ಮುಖ್ಯಮಂತ್ರಿಗಳು ಆ ಗಡಿಬಿಡಿಯಲ್ಲಿ ಮಾಡುವುದು ಬೇಡ ಮಧ್ಯದಲ್ಲಿ ಯಾವಾಗಾದರೂ ಮಾಡೋಣ ಎಂದಿದ್ದಾರೆ. ನಿಮ್ಮ ಕಲೆಯಾದ ಯಕ್ಷಗಾನ ಸೇರಿದಂತೆ ನಾಟಕ, ಸಾಹಿತ್ಯ ಯಾವುದೂ ಸಹ ಅಳಿಸಿ ಹೋಗಬಾರದು ಎಂಬುದು ನಮ್ಮ‌‌‌ ಕಾಳಜಿ. ನಿಮ್ಮ ಬೇಡಿಕೆಗಳನ್ನು ಈಡೇರಿಸುವ ಕೆಲಸ ಆದಷ್ಟು ಬೇಗ ಮಾಡಲಾಗುವುದು. ಸಂಘದವರು ಮತ್ತೊಮ್ಮೆ ನನ್ನ ಭೇಟಿ ಮಾಡಿ” ಎಂದರು.‌

Tags: DCM DK ShivakumarDK Shivakumardk shivakumar accidentdk shivakumar campdk shivakumar convoydk shivakumar kodi muttdk shivakumar latestdk shivakumar latest newsdk shivakumar mandyadk shivakumar newsdk shivakumar on probedk shivakumar on rcbdk shivakumar reactiondk shivakumar speechdk shivakumar statementdk shivakumar today newsdk shivakumar todays newsdk shivakumar unhurtdk shivakumar visit delhiyatnal on dk shivakumar
Previous Post

ಕೃತಕ ಬುದ್ಧಿಮತ್ತೆ (AI ) ಎರಡು ಅಲಗಿನ ಕತ್ತಿ

Next Post

ಒಕ್ಕಲಿಗ ಯುವ ಬ್ರಿಗೇಡ್ ನ ಉತ್ತಮ ಕಾರ್ಯಗಳ ಮೂಲಕ ನಂಜೇಗೌಡ ನಜುಂಡ ಸಮುದಾಯದ ಆಸ್ತಿಯಾಗಿದ್ದಾರೆ

Related Posts

ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ
Top Story

ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ

by ಪ್ರತಿಧ್ವನಿ
February 10, 2026
0

  ಬೆಂಗಳೂರು, ಫೆ. 10, 2026: ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಕೆ.ಜಿ. ಹಳ್ಳಿಯ ಕೇಳಚಂದ್ರ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ವಿವಿಧ ಕೌಶಲಗಳ ತರಬೇತಿ ಪೂರ್ಣಗೊಳಿಸಿದ ಮಹಿಳೆಯರಿಗೆ ಕೇಳಚಂದ್ರ...

Read moreDetails
ಪಂಜಾಬ್ ನ ಕಾನೂನು ಕಾಲೇಜಿನಲ್ಲಿ ಭಯಂಕರ ದುರ್ಘಟನೆ

ಪಂಜಾಬ್ ನ ಕಾನೂನು ಕಾಲೇಜಿನಲ್ಲಿ ಭಯಂಕರ ದುರ್ಘಟನೆ

February 10, 2026
RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

February 8, 2026
ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

February 8, 2026
ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

February 8, 2026
Next Post
ಒಕ್ಕಲಿಗ ಯುವ ಬ್ರಿಗೇಡ್ ನ ಉತ್ತಮ ಕಾರ್ಯಗಳ ಮೂಲಕ ನಂಜೇಗೌಡ ನಜುಂಡ ಸಮುದಾಯದ ಆಸ್ತಿಯಾಗಿದ್ದಾರೆ

ಒಕ್ಕಲಿಗ ಯುವ ಬ್ರಿಗೇಡ್ ನ ಉತ್ತಮ ಕಾರ್ಯಗಳ ಮೂಲಕ ನಂಜೇಗೌಡ ನಜುಂಡ ಸಮುದಾಯದ ಆಸ್ತಿಯಾಗಿದ್ದಾರೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada