ಬಾಲಿವುಡ್‌ನ (Bollywood) ಖ್ಯಾತ ನಟಿ ಶೆಫಾಲಿ ಜರಿವಾಲಾ (shefali jariwala) ನಿನ್ನೆ ತಡ ರಾತ್ರಿ (ಜೂನ್.27) ಗುಜರಾತ್‌ನ (Gujarat) ಅಹಮದಾಬಾದ್‌ನಲ್ಲಿ ವಿಧಿವಶರಾಗಿದ್ದಾರೆ..ನಟಿ ಶೆಫಾಲಿ ಅವರಿಗೆ ನಿನ್ನೆ ರಾತ್ರಿ ಕಾರ್ಡಿಯಾಕ್ ಅರೆಸ್ಟ್ (Cardiac arrest) ಆಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಚಿಕಿತ್ಸೆ ಫಲಿಸದೇ 42 ವರ್ಷದ ಶೆಫಾಲಿ ಜರಿವಾಲಾ ನಿಧನರಾಗಿದ್ದಾರೆ.

2002ರಲ್ಲಿ ‘ಕಾಂಟಾ ಲಗಾ’ ಸಾಂಗ್ ಮೂಲಕ ಹೆಸರಾಗಿದ್ದ ನಟಿ, ರಾತ್ರೋರಾತ್ರಿ ಸೆನ್ಸೆಷನ್ ಕ್ರಿಯೇಟ್ ಮಾಡಿದ್ದರು. ಕೆಲ ವರ್ಷದ ಹಿಂದೆ ಹಿಂದಿ ಬಿಗ್‌ಬಾಸ್ ಸೀಸನ್13ರಲ್ಲಿಯೂ ಕಾಣಿಸಿಕೊಂಡಿದ್ದರು. 1982ರ ಡಿಸೆಂಬರ್ 15ರಂದು ಜನಿಸಿದ್ದ ಶೆಫಾಲಿ 2014ರಲ್ಲಿ ಸೀರಿಯಲ್ ನಟ ಪ್ರಾಗ್ ತ್ಯಾಗಿಯವರನ್ನು ಮದುವೆಯಾಗಿದ್ದರು.

ಇನ್ನು ಕನ್ನಡದಲ್ಲಿ ಹುಡುಗರು ಚಿತ್ರದ ‘ತೊಂದ್ರೆ ಇಲ್ಲ ಪಂಕಜ’ ಹಾಡಿನಲ್ಲಿ ಸೊಂಟ ಬಳುಕಿಸಿದ್ದ ಶೆಫಾಲಿ ಪಡ್ಡೆಹುಡುಗರ ಹೃದಯ ಗೆದ್ದಿದ್ರು.42 ನೇ ವಯಸಿಗೆ ಈ ರೀತಿ ಅವರು ಕಾರ್ಡಿಯಾಕ್ ಅರೆಸ್ಟ್ ನಿಂದ ಸಾವು ಸಂಭವಿಸಿರುವುದು ಕುಟುಂಬಸ್ಥರನ್ನು ಆಘಾತಕ್ಕೆ ತಳ್ಳಿದೆ.






